ಹೈದರಾಬಾದ್: ಬೇಸಿಗೆ ಸಮಯದಲ್ಲಿ ಎಣ್ಣೆಯುಕ್ತ ಚರ್ಮದವರು ಸಮಸ್ಯೆ ಅನುಭವಿಸುವುದು ಸಾಮಾನ್ಯ. ಅಧಿಕ ತಾಪಮಾನದಿಂದಾಗಿ ಎಣ್ಣೆ ಚರ್ಮದವರ ಮೇಕಪ್ ನಿಮಿಷಗಳಲ್ಲೇ ಹಾಳಾಗುವುದು ಸಹಜ. ಇದರಿಂದ ಮುಖ ಡಲ್ ಆಗಿ, ಜಿಗುಟಾಗಿ ಗೋಚರಿಸುತ್ತದೆ. ಈ ಹಿನ್ನಲೆ ಬೇಸಿಗೆಯಲ್ಲಿ ಎಣ್ಣೆ ಚರ್ಮದವರು ಹೆಚ್ಚಿನ ಕಾಳಜಿವಹಿಸುವುದು ಅಗತ್ಯವಾಗಿದೆ. ಇನ್ನು ಬೇಸಿಗೆಯಲ್ಲಿ ಕಾಡುವ ಈ ಎಣ್ಣೆಯುಕ್ತ ಸಮಸ್ಯೆಗೆ ಪರಿಹಾರವೂ ಸರಳವಾಗಿದೆ.
ಮುಖಕ್ಕೆ ಇರಲಿ ಕ್ಲೆನ್ಸಿಕ್: ಸೂರ್ಯನ ಬಿಸಿಲಿಗೆ ಒಡ್ಡಿಕೊಂಡ ಬಳಿಕ ಎಲ್ಲ ಚರ್ಮ ಕಾಂತಿಯವರು ಮುಖವನ್ನು ಚೆನ್ನಾಗಿ ತೊಳೆಯುವುದು ಅವಶ್ಯ. ಅದರಲ್ಲೂ ಎಣ್ಣೆ ಚರ್ಮದವರು ಮುಖವನ್ನು ತಣ್ಣೀರಿನ ಬದಲಾಗಿ, ಕ್ಲೇನ್ಸಿಂಗ್ ಹಾಲಿನಿಂದ ಸ್ವಚ್ಛಗೊಳಿಸುವುದುರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ದೈನಂದಿನ ಸ್ಕಿನ್ ಕೇರ್ ದಿನಚರ ಕಡ್ಡಾಯವಾಗಿರಲಿ: ಚರ್ಮದ ಆರೈಕೆ ಸರಿಯಾಗಿ ನಡೆಸದ ಕಾರಣ ಮುಖ ಮಾಶ್ಚರೈಸರ್ ಅನ್ನು ಕಳೆದುಕೊಳ್ಳುತ್ತದೆ. ಈ ಕಾರಣ ಬಿಸಿಗೆ ಹೋಗುವ ಮುನ್ನ ತಪ್ಪದೇ ಮಾಶ್ವರೈಸರ್ ಮತ್ತು ಸನ್ ಸ್ಕ್ರೀನ್ ಅನ್ನು ಹಚ್ಚಬೇಕು. ಋತುಮಾನಗಳಿಗೆ ತಕ್ಕಂತೆ ಅಗತ್ಯವಾದ ಉತ್ಪನ್ನಗಳು ಬಳಕೆ ಮಾಡುವುದು ಅವಶ್ಯ. ಇಲ್ಲದೇ ಹೋದಲ್ಲಿ ಚರ್ಮ ಟಾನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಎಣ್ಣೆ ಹೀರುವ ಪೇಪರ್ ಬಳಕೆ: ಅಗತ್ಯ ಕಾಳಜಿ ಬಳಿಕವೂ ನಿಮ್ಮ ತ್ವಚೆ ಎಣ್ಣೆಯುಕ್ತವಾಗುತ್ತಿದೆ ಎಂದು ಅನಿಸಿದರೆ, ಅದಕ್ಕೆ ನೀವು ಆಯಿಲ್ ಬ್ಲಾಟಿಂಗ್ ಪೇಪರ್ (ಎಣ್ಣೆ ಹೀರುವ ಪೇಪರ್) ಬಳಕೆ ಮಾಡಬಹುದು. ಇದನ್ನು ಸುಲಭವಾಗಿ ಸಿಗುವಂತೆ ಯಾವಾಗಲೂ ಬಳಕೆ ಮಾಡುವಂತೆ ನೋಡಿಕೊಳ್ಳಿ. ಇದರಿಂದ ಮುಖ ಎಣ್ಣೆ ಮುಕ್ತವಾಗಿ ತಾಜಾತನದಿಂದ ಕೂಡಿರುವಂತೆ ಕಾಣುತ್ತದೆ. ಅತಿ ಹೆಚ್ಚು ಈ ಪೇಪರ್ಗಳ ಬಳಕೆ ಕೂಡ ಹಾನಿಕಾರಕ. ಇದು ಚರ್ಮದಲ್ಲಿನ ಎಲ್ಲ ಎಣ್ಣೆ ಅಂಶವನ್ನು ಹೀರಿಕೊಳ್ಳುವ ಸಾಧ್ಯತೆ ಇರುವುದರಿಂದ ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡುವುದು ಉತ್ತಮ.
ಆಯಿಲ್ ಆಧಾರಿತ ಮೇಕಪ್ ಮೊರೆ: ಚರ್ಮದ ಗುಣಕ್ಕೆ ಅನುಗುಣವಾಗಿ ಮೇಕಪ್ ವಸ್ತುಗಳನ್ನು ಆಯ್ಕೆ ಮಾಡುವುದು ಕೂಡ ಅಗತ್ಯ. ದೈನಂದಿನ ಮೇಕಪ್ ಬಳಕೆಯಲ್ಲಿ ಎಣ್ಣೆಮುಕ್ತ ಉತ್ಪನ್ನಗಳನ್ನು ಆಯ್ಕೆ ಮಾಡುವುದುರಿಂದ ದೀರ್ಘಕಾಲದವರೆಗೆ ಈ ಸಮಸ್ಯೆಯಿಂದ ದೂರವಿರಬಹುದು. ಅಲ್ಲದೇ, ಇದರಿಂದ ಮೇಕಪ್ ಕೂಡ ದೀರ್ಘವಾಗಿರುತ್ತದೆ
ಪೋಷಕಾಂಶ: ಬೇಸಿಗೆಯ ನಿಮ್ಮ ಡಯಟ್ನಲ್ಲಿ ಪೋಷಕಾಂಶಗಳು ಹೆಚ್ಚಾಗಿರುವಂತೆ ನೋಡಿಕೊಳ್ಳಿ. ಆರೋಗ್ಯದ ಜೊತೆಗೆ ಚರ್ಮದ ಕಾಂತಿಗೆ ಅನುಗುಣವಾದಂತಹ ಡಯಟ್ ನಿಮ್ಮ ಸೌಂದರ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಎಣ್ಣೆಯುಕ್ತ ಚರ್ಮದ ಸಮಸ್ಯೆಯಿಂದ ಪಾರಾಗಬಹುದು.
ಮನೆಯಲ್ಲೇ ಪೇಸ್ ಪ್ಯಾಕ್ ತಯಾರಿಸಿ: ಚರ್ಮದ ಆರೋಗ್ಯಕ್ಕೆ ಕೆಲವು ಆರೋಗ್ಯಯುತ ಪ್ಯಾಕ್ಗಳು ಅವಶ್ಯಕ. ಈ ಹಿನ್ನಲೆ ಮನೆಯಲ್ಲಿಯೇ ಇಂತಹ ಪ್ಯಾಕ್ಗಳನ್ನು ಸುಲಭವಾಗಿ ತಯಾರಿಸಿ. ಬಾಳೆ ಹಣ್ಣಿನ ಸಿಪ್ಪೆಯನ್ನು ಹಾಲು ಮತ್ತು ಓಟ್ಸ್ನೊಂದಿಗೆ ತಣ್ಣೀರಿನಲ್ಲಿ ಅರ್ಧ ಗಂಟೆಗಳ ಕಾಲ ನೆನೆಯಲು ಬಿಟ್ಟು ಬಳಿಕ ಇದನ್ನು ಅಚ್ಚಿ. ಇಲ್ಲ ಸೌತೆಕಾಯಿ, ನಿಂಬೆ ಮತ್ತು ಅದಕ್ಕೆ ಕೊಂಚ ಅರಿಶಿಣ ಸೇರಿಸಿ ಮುಖಕ್ಕೆ ಹಚ್ಚಿ 10- 15 ನಿಮಿಷ ಹಾಗೇ ಬಿಟ್ಟು ಬಳಿಕ ಮುಖ ತೊಳೆಯಿರಿ. ವಾರದಲ್ಲಿ ಎರಡೂ ರೀತಿ ಮಾಡುವುದರಿಂದ ತ್ವಚೆ ಕಾಂತಿ ಹೆಚ್ಚುತ್ತದೆ.
ಇದನ್ನೂ ಓದಿ: ಬೇಸಿಗೆಯ ಮುಂಜಾವಿನ ತಾಜಾ ಅನುಭವಕ್ಕೆ ಈ ಟೀಗಳನ್ನೊಮ್ಮೆ ಟ್ರೈ ಮಾಡಿ