ETV Bharat / sukhibhava

ಮಕ್ಕಳಲ್ಲಿ ಬೊಜ್ಜು ಸಮಸ್ಯೆ; ಇದಕ್ಕೆ ಪರಿಹಾರವೇನು?

ಆರೋಗ್ಯಕರ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಮತ್ತು ವ್ಯಾಯಾಮ ಮಾಡುವುದು ದೇಹಕ್ಕೆ ಬಹಳ ಮುಖ್ಯ. ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯವಾಗಿರಲು, ಸರಿಯಾದ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಅತ್ಯಗತ್ಯ ಎಂದು ಡಾ.ಸೋನಾಲಿ ವಿವರಿಸುತ್ತಾರೆ. ಇದಲ್ಲದೆ, ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ, ಮಕ್ಕಳನ್ನು ಸ್ಥೂಲಕಾಯದಿಂದ ದೂರವಿರಿಸಬಹುದು.

Obesity
ಬೊಜ್ಜು
author img

By

Published : Sep 17, 2020, 4:42 PM IST

ಕೋವಿಡ್​ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​ ಹೇರಲಾಗಿತ್ತು. ಈ ಲಾಕ್​ಡೌನ್​ನಿಂದಾಗಿ ಒಂದು ರೀತಿಯಲ್ಲಿ ತಮ್ಮ ಕುಟುಂಬದಿಂದ ದೂರವೇ ಉಳಿದಿದ್ದ ಹಲವರು ತಮ್ಮ ಮನೆಯಲ್ಲೇ ಉಳಿಯುವಂತಾಗಿ, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುವಂತಾಯಿತು. ಹೀಗಿದ್ದರೂ ಜನಸಾಮಾನ್ಯರು ಹಲವು ಸವಾಲುಗಳನ್ನೂ ಎದುರಿಸಬೇಕಾಯ್ತು.

ಈ ಲಾಕ್​ಡೌನ್​ ಹಲವರಿಗೆ ವರದಾನವಾಗಿದ್ದರೆ, ಇನ್ನು ಕೆಲವರ ಆರೋಗ್ಯದಲ್ಲಿ ಏರುಪೇರು ಉಂಟಾಯ್ತು. ಇದಕ್ಕೊಂದು ಸಣ್ಣ ನಿದರ್ಶನ ಇಲ್ಲಿದೆ.

14 ವರ್ಷದ ಸ್ವಯಂ ಶರ್ಮಾ ಎಂಬ ಬಾಲಕ, 9ನೇ ತರಗತಿಯ ವಿದ್ಯಾರ್ಥಿ. ಲಾಕ್​ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದಿದ್ದರಿಂದ ಈತ ಹೆಚ್ಚಿನ ಸಮಯವನ್ನು ಟಿವಿ ನೋಡುವುದು, ವಿಡಿಯೋ ಗೇಮ್ ಆಡುವುದು, ತಿಂಡಿ ತಿನ್ನುವುದರಲ್ಲೇ ಕಳೆಯುತ್ತಿದ್ದ. ಇಷ್ಟೇ ಅಲ್ಲ ಮೊದಲಿಗಿಂತ ಹೆಚ್ಚು ಸಮಯ ನಿದ್ದೆ ಮಾಡುತ್ತಿದ್ದ. ಇದರ ಪರಿಣಾಮವಾಗಿ ಆತನ ದೇಹದ ತೂಕ ಕ್ರಮೇಣವಾಗಿ ಹೆಚ್ಚಾಗತೊಡಗಿತು. ಆರಂಭದಲ್ಲಿ ಇದು ಅತನ ಪೋಷಕರಿಗೆ ಸಾಮಾನ್ಯವೆಂದು ಅನ್ನಿಸತೊಡಗಿತು. ಆದರೆ ವಿಷಯ ಅಷ್ಟಕ್ಕೇ ನಿಲ್ಲಲಿಲ್ಲ. ಸಣ್ಣಪುಟ್ಟ ಕೆಲಸ ಮಾಡಿದಾಗಲೂ ಆತ ಸುಸ್ತಾದಾಗ ಪೋಷಕರು ಕೊಂಚ ಕಾಳಜಿ ವಹಿಸಲು ಪ್ರಾರಂಭಿಸಿರು. ಬಳಿಕ ಉಸಿರಾಡಲು ಕೂಡಾ ಬಾಲಕನಿಗೆ ತೊಂದರೆಯಾದಾಗ ಗಾಬರಿಗೊಂಡ ಪೋಷಕರು, ವೈದ್ಯರ ಸಲಹೆ ಪಡೆದರು. ವೈದ್ಯರ ಸಲಹೆ ಮೇರೆಗೆ ಔಷಧಿಗಳ ಜೊತೆಗೆ, ಆತ ತನ್ನ ಜೀವನಶೈಲಿಯನ್ನು ಬದಲಾಯಿಸಿದ. ಇದರಿಂದಾಗಿ ಈಗ ಆತನಲ್ಲಿ ನಿಧಾನವಾದ ಮತ್ತು ಗಮನಾರ್ಹ ಸುಧಾರಣೆಯಾಗಿದೆ.

ಲಾಕ್​ಡೌನ್​ ಸಂದರ್ಭದಲ್ಲಿ ಬಾಲಕ ಸ್ವಯಂ ಒಬ್ಬನೇ ಅಲ್ಲ. ತನೀಶಾ (16), ರಾಘವ್ (16), ಕೋಯಲ್ (13) ಮತ್ತು ಕೌಸ್ತುಭ್ (10) ಎಂಬ ಸಣ್ಣ ವಯಸ್ಸಿನ ಬಾಲಕ ಬಾಲಕಿಯರು ಕೂಡಾ ಇದೇ ಸಮಸ್ಯೆಯನ್ನು ಎದುರಿಸಿದ್ದಾರೆ.

ಹೌದು, ಬೊಜ್ಜು ಅಥವಾ ಸ್ಥೂಲಕಾಯ ವಯಸ್ಕರಲ್ಲಿ ಮಾತ್ರವಲ್ಲ. ಮಕ್ಕಳಲ್ಲೂ ಈ ಸಮಸ್ಯೆ ಕಂಡುಬರುತ್ತದೆ. ದೇಹದ ತೂಕ ಹೆಚ್ಚಾಗುವುದು ಮಕ್ಕಳಲ್ಲಿ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ, ಈಟಿವಿ ಭಾರತವು ಮಕ್ಕಳ ತಜ್ಞರಾದ ಡಾ.ಸೋನಾಲಿ ನವಲೆ ಪೂರಾಂಡರೆ ಅವರೊಂದಿಗೆ ಮಾತನಾಡಿದ್ದು, ಈ ಸಮಸ್ಯೆ ಬಗ್ಗೆ ವೈದ್ಯರು ಈ ರೀತಿ ವಿವರಿಸಿದ್ದಾರೆ.

ಬೊಜ್ಜಿಗೆ ಸಂಬಂಧಿಸಿದ ಸಮಸ್ಯೆಗಳು...

ಸಾಮಾನ್ಯವಾಗಿ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಪರಿಣಾಮವಾಗಿ, ಯಾವುದೇ ವಯಸ್ಸಿನವರು ಬೊಜ್ಜು ಸಮಸ್ಯೆ ಎದುರಿಸುತ್ತಾರೆ. ಕೆಲವೊಮ್ಮೆ ಇದು ಅನುವಂಶಿಕವಾಗಿ ಅಥವಾ ಹಾರ್ಮೋನುಗಳ ಸಮಸ್ಯೆಯಿಂದ, ಅಥವಾ ಇನ್ನೂ ಕೆಲ ಸಂದರ್ಭದಲ್ಲಿ ಕೆಲವು ಕಾಯಿಲೆಗಳಿಂದಲೂ ಬರಬಹುದು. ಆದರೆ ಈಗ ಇರುವ ಸನ್ನಿವೇಶದಲ್ಲಿ ಪ್ರತಿಯೊಂದು ರೋಗವು ಸ್ವಲ್ಪ ಹೆಚ್ಚು ಆತಂಕ ಹಾಗೂ ಭಯದ ಜೊತೆಗೆ ಬರುತ್ತದೆ ಎಂದು ಡಾ.ಸೋನಾಲಿ ವಿವರಿಸುತ್ತಾರೆ.

ಮಕ್ಕಳಲ್ಲಿ ತೂಕ ಹೆಚ್ಚಾಗುವುದು ಆಯಾಸ, ನಿದ್ರಾಹೀನತೆ ಹಾಗೂ ಹೆಚ್ಚಿನ ಉದ್ವೇಗಕ್ಕೆ ಕಾರಣವಾಗುತ್ತದೆ. ಇದಲ್ಲದೆ ಬೊಜ್ಜು ಇರುವಾಗ ಉಸಿರಾಡಲು ಕೂಡಾ ತೊಂದರೆಯಾಗಬಹುದು. ಇದೇ ಬೊಜ್ಜಿನ ಸಮಸ್ಯೆ ಹೆಚ್ಚಾದರೆ, ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡ ಹಾಗೂ ನಿದ್ರಾಹೀನತೆ ಸೇರಿದಂತೆ ಪ್ರಮುಖ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಬೊಜ್ಜಿಗೆ ಪ್ರಮುಖ ಕಾರಣಗಳು

  • ಶಿಸ್ತುಬದ್ಧ ದಿನಚರಿಯ ಕೊರತೆ
  • ಅಧ್ಯಯನ ಅಥವಾ ಬೇರೆ ಕೆಲಸಗಳಿಂದಾಗಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು
  • ಹಸಿವಿಲ್ಲದೆ ತಿನ್ನುವುದು
  • ಅನಿಯಮಿತ ಆಹಾರ ಪದ್ಧತಿ
  • ಪೌಷ್ಟಿಕ ಆಹಾರದ ಬದಲು ಜಂಕ್ ಫುಡ್​, ಎಣ್ಣೆಯುಕ್ತ, ಮಸಾಲೆಯುಕ್ತ ಮತ್ತು ತುಂಬಾ ಸಿಹಿ ಆಹಾರಗಳನ್ನು ತಿನ್ನುವುದು

ಬೊಜ್ಜು ತಡೆಯುವುದು ಹೇಗೆ?

ಕೊರೊನಾ ಸಂದರ್ಭದಲ್ಲಿ ಮಾತ್ರವಲ್ಲ. ಆರೋಗ್ಯಕರ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಮತ್ತು ವ್ಯಾಯಾಮ ಮಾಡುವುದು ದೇಹಕ್ಕೆ ಬಹಳ ಮುಖ್ಯ. ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯವಾಗಿರಲು, ಸರಿಯಾದ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಅತ್ಯಗತ್ಯ ಎಂದು ಡಾ.ಸೋನಾಲಿ ವಿವರಿಸುತ್ತಾರೆ. ಇದಲ್ಲದೆ, ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ, ಮಕ್ಕಳನ್ನು ಸ್ಥೂಲಕಾಯದಿಂದ ದೂರವಿರಿಸಬಹುದು.

ಆಹಾರ ಕ್ರಮವನ್ನು ಅನುಸರಿಸುವುದು ಹೇಗೆ?

ಸ್ಥೂಲಕಾಯದಿಂದ ಬಳಲುತ್ತಿರುವ ಮಕ್ಕಳು, ದಿನವಿಡೀ ನಿಯಮಿತ ಸಮಯಗಳಲ್ಲಿ ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಸರಿಯಾದ ಆಹಾರಕ್ರಮವನ್ನು ಅನುಸರಿಸುವುದು ಬೊಜ್ಜು ನಿವಾರಣೆಗೆ ಹಾಗೂ ಬೊಜ್ಜು ಬರದಂತೆ ತಡೆಯಲು ಸಹಾಯಕ. ದಿನಕ್ಕೆ ನಾಲ್ಕು ಬಾರಿ ಆಹಾರ ಸೇವನೆಗೆ ಸಮಯ ನಿಗದಿಪಡಿಸಬಹುದು ಅಥವಾ ಇದಕ್ಕಾಗಿ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆಯನ್ನು ಪಾಲಿಸಬಹುದು.

ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಅವರ ಆಹಾರ ಪದ್ಧತಿಗೆ ಸರಿಯಾದ ನಿರ್ಬಂಧಗಳನ್ನು ರೂಪಿಸುವುದು ಬಹಳ ಮುಖ್ಯ. ಇದು ಪೋಷಕರ ಜವಾಬ್ದಾರಿ ಕೂಡ. ಒಂದು ವೇಳೆ ಸ್ಥೂಲಕಾಯದ ಸಮಸ್ಯೆಗೆ ಒಳಗಾದರೆ, ದೇಹದ ತೂಕದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಬಾಲ್ಯದ ಸ್ಥೂಲಕಾಯತೆಯು ಇತರ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇದು ಸಾಮಾನ್ಯ. ಆದರೆ ಮಕ್ಕಳ ವಿಷಯದಲ್ಲಿ ಎಚ್ಚರವಾಗಿದ್ದಷ್ಟು, ಭವಿಷ್ಯದಲ್ಲಾಗುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.