ETV Bharat / sukhibhava

ನಿಮ್ಮ ಆರೋಗ್ಯಕ್ಕಾಗಿ ಬೊಜ್ಜು ಕರಗಿಸಿ: ಆರೋಗ್ಯವಂತರಾಗಿ ಬಾಳಿ

ಇಂದು ಜನರನ್ನು ಕಾಡುವ ದೊಡ್ಡ ಸಮಸ್ಯೆಯೆಂದರೆ ಬೊಜ್ಜು, ಇಂದಿನ ಆಹಾರ ಪದ್ಧತಿ ನಮ್ಮ ಬೊಜ್ಜಿಗೆ ಕಾರಣವಾಗಿದೆ. ಭಾರತೀಯರಲ್ಲಿ ಬೊಜ್ಜಿನ ಸಮಸ್ಯೆ ಅತ್ಯಧಿಕವಾಗಿದ್ದು, ಇದಕ್ಕೆ ಒತ್ತಡದ ಜೀವನಶೈಲಿಯೂ ಮುಖ್ಯವಾದದ್ದು. ಅನಾರೋಗ್ಯಕಾರಿ ಜೀವನಶೈಲಿಯ ಪರಿಣಾಮವಾಗಿ ಬೊಜ್ಜಿನ ತೊಂದರೆಯೂ ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ. ತೂಕ ಏರಿಸಿಕೊಳ್ಳೋದು ಇತ್ತೀಚಿಗೆ ಸುಲಭ. ಆದರೆ ತೂಕ ಕಡಿಮೆ ಮಾಡಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಬೊಜ್ಜು ಕರಗಿಸಲು ಆಹಾರದಲ್ಲಿ ನಿಯಂತ್ರಣದ ಜೊತೆ ಹಗಲು - ರಾತ್ರಿ ವ್ಯಾಯಾಮ, ಜಿಮ್, ಯೋಗ ಮಾಡಿದರು ತೂಕ ಮಾತ್ರ ಕಡಿಮೆಯಾಗೋದಿಲ್ಲ ಎನ್ನುತ್ತಾರೆ ಅನೇಕರು.

ನಿಮ್ಮ ಆರೋಗ್ಯಕ್ಕಾಗಿ ಬೊಜ್ಜನ್ನು ಕರಗಿಸಿ
ನಿಮ್ಮ ಆರೋಗ್ಯಕ್ಕಾಗಿ ಬೊಜ್ಜನ್ನು ಕರಗಿಸಿ
author img

By

Published : Sep 29, 2020, 9:00 PM IST

ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತೀಯರು ರೂಢಿಸಿಕೊಳ್ಳುತ್ತಿರುವ ಅನಾರೋಗ್ಯಕರ ಜೀವನಶೈಲಿಯೇ ಬಹುತೇಕ ಸಮಸ್ಯೆಗಳ ಮೂಲ. ಅಧ್ಯಯನವೊಂದರ ಪ್ರಕಾರ, 6- 7 ತಾಸು ನಿರಂತರವಾಗಿ ಕುಳಿತು ಕೆಲಸ ಮಾಡಿದರೆ ಹೃದಯಾಘಾತ, ಕ್ಯಾನ್ಸರ್‌ ಸಾಧ್ಯತೆ ಹೆಚ್ಚು. ಅತಿದೊಡ್ಡ ಸವಾಲು ಎಂದರೆ ಹೆಚ್ಚಿನ ಸಂಖ್ಯೆಯ ಜನರು ಶರೀರದ ತೂಕ ಹೆಚ್ಚಾಗಿ, ಅದರಿಂದ ರಕ್ತದೊತ್ತಡ, ಮಧುಮೇಹದಂತಹ ಜೀವನಶೈಲಿಗೆ ಸಂಬಂಧಿಸಿದ ಹತ್ತಾರು ಕಾಯಿಲೆಗಳು ಕಾಣಿಸಿಕೊಳ್ಳುವವರೆಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ.

ಇನ್ನು ಈ ಕೋವಿಡ್​-19 ಸಾಂಕ್ರಾಮಿಕವು ಜನರು ಮನೆಯಲ್ಲೇ ಇರುವಂತೆ ಮಾಡಿದೆ. ಲಾಕ್​ಡೌನ್​ನಿಂದ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಇತ್ತು. ಅಲ್ಲದೇ ಜನಸಂಖ್ಯೆಯ ಅರ್ಧದಷ್ಟು ಜನರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಇದು ಅವರ ಜೀವನಶೈಲಿಯನ್ನೇ ಬದಲಾಯಿಸಿದೆ. ಅತಿಯಾಗಿ ತಿನ್ನುವುದು, ಹೆಚ್ಚು ಓಡಾಡದಿರುವುದು ಮತ್ತು ಕೂತಲ್ಲೇ ಕೂರುವುದು ಜನರಲ್ಲಿ ತೂಕ ಹೆಚ್ಚಾಗಲು ಕಾರಣವಾಗಬಹುದು.

“ಬೊಜ್ಜು ಅಧಿಕ ತೂಕವನ್ನು ಸೂಚಿಸುತ್ತದೆ ಮತ್ತು ಅದನ್ನು ನಿರ್ಧರಿಸುವ ನಿಯತಾಂಕವೆಂದರೆ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ), ಇದು ಕಿಲೋಗ್ರಾಂಗಳಷ್ಟು ತೂಕವನ್ನು ಭಾಗಿಸುತ್ತದೆ ಮೀಟರ್ ಚೌಕದಲ್ಲಿ ಎತ್ತರ (ಕೆಜಿ / ಮೀ 2). ಈ ರೀತಿಯಾಗಿ, ಸ್ಥೂಲಕಾಯತೆಯ ವರ್ಗ ಅಥವಾ ದರ್ಜೆಯನ್ನು ನಾವು ಗುರುತಿಸುತ್ತೇವೆ. ಇದನ್ನು ಸಾಮಾನ್ಯವಾಗಿ 3 ಶ್ರೇಣಿಗಳಾಗಿ ವರ್ಗೀಕರಿಸಲಾಗುತ್ತದೆ” ಎಂದು ಇಂದೋರ್‌ನ ಆ್ಯಪಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಎಂಬಿಬಿಎಸ್, ಎಂಡಿ (ಮೆಡಿಸಿನ್) ಡಾ. ಸಂಜಯ್ ಕೆ. ಜೈನ್ ಹೇಳುತ್ತಾರೆ.

ನಿಮ್ಮ ಆರೋಗ್ಯಕ್ಕಾಗಿ ಬೊಜ್ಜನ್ನು ಕರಗಿಸಿ
ನಿಮ್ಮ ಆರೋಗ್ಯಕ್ಕಾಗಿ ಬೊಜ್ಜನ್ನು ಕರಗಿಸಿ

ಬೊಜ್ಜಿಗೆ ಕಾರಣಗಳು:

ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸದಿರುವುದು ಅಥವಾ ಅತಿಯಾಗಿ ತಿನ್ನುವುದು.

ದೇಹ ದಂಡಿಸದಿರುವುದು ಅಥವಾ ವ್ಯಾಯಾಮ ಮಾಡದಿರುವುದು.

ಇತರ ಅಂಶಗಳಾದ ಕುಟುಂಬದ ಆನುವಂಶಿಕತೆ, ಕೆಲವು ಇತರ ರೋಗಗಳು ಮತ್ತು ಔಷಧಗಳು ಅಥವಾ ಅನಾರೋಗ್ಯಕರ ಜೀವನಶೈಲಿ ಅಭ್ಯಾಸಗಳು ಬೊಜ್ಜಿಗೆ ಕಾರಣವಾಗಬಹುದು.

“ಇಂದು ನಮ್ಮಲ್ಲಿ ಹೆಚ್ಚಿನವರು ಮನೆಯಿಂದಲೇ ಕೆಲಸ ಮಾಡುತ್ತಿರುವ ಈ ಕಠಿಣ ಕಾಲದಲ್ಲಿ ನಾವು ಎಚ್ಚರಗೊಂಡು ನೇರವಾಗಿ ಕಂಪ್ಯೂಟರ್​​ ಮುಂದೆ ಕುಳಿತುಕೊಳ್ಳುತ್ತೇವೆ. ಅಲ್ಲದೇ ನಾವು ಮನೆಯಲ್ಲಿ ನಿರಂತರವಾಗಿ ಇರುವಾಗ, ಕಚೇರಿಗಳಿಗೆ ಹೋಲಿಸಿದರೆ ಯಾವುದೇ ನಿರ್ಬಂಧಗಳಿಲ್ಲದ ಕಾರಣ ನಾವು ಹೆಚ್ಚು ತಿನ್ನುವ ಸಾಧ್ಯತೆ ಇದೆ. ಇದಲ್ಲದೇ, ಒತ್ತಡರಹಿತ ಜೀವನವು ನಿಮಗೆ ಸಂಪೂರ್ಣವಾಗಿ ನಿರಾಳವಾಗುವಂತೆ ಮಾಡುತ್ತದೆ. ಇದೆಲ್ಲವೂ ಒಂದು ರೀತಿಯಲ್ಲಿ ಅಥವಾ ಇನ್ನೊಂದರಲ್ಲಿ ಬೊಜ್ಜುಗೆ ಕಾರಣವಾಗುತ್ತದೆ ” ಎಂದು ತಜ್ಞರು ಹೇಳುತ್ತಾರೆ.

ಬೊಜ್ಜು ಯಾವ ಯಾವ ರೋಗಗಳಿಗೆ ಕಾರಣವಾಗಬಹುದು?

  • ಅಧಿಕ ರಕ್ತದೊತ್ತಡ
  • ಮಧುಮೇಹ
  • ಅಧಿಕ ಕೊಲೆಸ್ಟ್ರಾಲ್
  • ಆಸ್ಟಿಯೊಪೊರೋಸಿಸ್
  • ಅಸ್ಥಿಸಂಧಿವಾತ
  • ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಅಥವಾ ಪಾರ್ಶ್ವವಾಯು
  • ಮೂತ್ರಪಿಂಡ ವೈಫಲ್ಯ
  • ಪಿತ್ತಜನಕಾಂಗದ ಕ್ಯಾನ್ಸರ್​ ನಂತಹ ಕೆಲವು ರೀತಿಯ ಕ್ಯಾನ್ಸರ್​ಗಳು

ಅತಿಯಾಗಿ ತಿನ್ನುವುದನ್ನು ತಪ್ಪಿಸಿ:

ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಡಾ. ಸಂಜಯ್ ಅವರು ದಿನಕ್ಕೆ ಸರಿಯಾದ ವೇಳಾಪಟ್ಟಿಯನ್ನು ಮಾಡಿಕೊಂಡು ಅದನ್ನು ಅನುಸರಿಸಿ ಎಂದು ಹೇಳುತ್ತಾರೆ. 24 ಗಂಟೆಯ ವೇಳಾಪಟ್ಟಿಯಲ್ಲಿ ಸರಿಯಾದ ಆಹಾರವನ್ನು ಸೇವಿಸಿ ಮತ್ತು ಎರಡು ತಿಂಡಿಗಳ ನಡುವೆ ಅನಾರೋಗ್ಯಕರ ತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸಬೇಕು. ನೀವು ದಿನ ಅಥವಾ ಇಡೀ ವಾರ ಸಂಪೂರ್ಣ ಆಹಾರ ಯೋಜನೆಯನ್ನು ಸಹ ಮಾಡಬಹುದು. ನೀವು ಈಗಾಗಲೇ ಅಧಿಕ ತೂಕ ಹೊಂದಿದ್ದರೆ ಮತ್ತು ನಿಮ್ಮ ದೈನಂದಿನ ಆಹಾರದಿಂದ ಅನಗತ್ಯ ಕ್ಯಾಲೊರಿಗಳನ್ನು ಕಡಿತಗೊಳಿಸಲು ಬಯಸಿದರೆ ನೀವು ಆಹಾರ ತಜ್ಞರನ್ನು ಸಹ ಸಂಪರ್ಕಿಸಬಹುದು. ಅವರು ನಿಮಗೆ ಸರಿಯಾದ ಆಹಾರದ ಚಾರ್ಟ್ ಅನ್ನು ಒದಗಿಸುತ್ತಾರೆ.

ರೋಗನಿರೋಧಕ ಶಕ್ತಿ ಹೆಸರಿನಲ್ಲಿ ಅತಿಯಾಗಿ ತಿನ್ನುವುದು:

ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಲುವಾಗಿ ಆರೋಗ್ಯ ತಜ್ಞರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸೂಚಿಸುತ್ತಾರೆ. ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಪ್ರೋಟೀನ್​ಗಳು,ಕೊಬ್ಬಿನ ಅಂಶ ಇರುವ ಆಹಾರವನ್ನು ತಿನ್ನುತ್ತಾರೆ. ಅದಕ್ಕಾಗಿ ತಜ್ಞರು ನಿಮ್ಮ ದೇಹಕ್ಕೆ ಬೇಕಾದಷ್ಟೇ ಆಹಾರವನ್ನು ಸೇವಿಸಿ, ಅತಿಯಾಗಿ ಸೇವಿಸಬೇಡಿ. ಇದರಿಂದ ದೇಹಕ್ಕೂ ಕೂಡ ಹಾನಿಕಾರಕವೆಂದು ತಜ್ಞರು ಹೇಳುತ್ತಾರೆ. ಆದ್ದರಿಂದ ನಿಮ್ಮ ದೇಹದ ಅವಶ್ಯಕತೆಗಳಿಗೆ ಅನುಗುಣವಾಗಿ ತಿನ್ನುವುದು ಅವಶ್ಯಕ. ಅಲ್ಲದೆ, ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಕೃತಕ ಆಹಾರಗಳ ಸೇವನೆಯನ್ನು ತಪ್ಪಿಸಿ. ಅವು ಕೆಲವು ಖಾಯಿಲೆಗಳಿಗೆ ಕಾರಣವಾಗಬಹುದು.

ಬೊಜ್ಜನ್ನು ಕರಗಿಸಲು ಕೆಲವು ಸಲಹೆಗಳು:

ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಕೊಬ್ಬಿನ ಅಂಶ ಇರುವ ಆಹಾರವನ್ನು ಸೇವಿಸಬೇಡಿ. ಅಂದರೆ ಪಿಜ್ಜಾ, ಬರ್ಗರ್ ಮುಂತಾದ ಸಂಸ್ಕರಿಸಿದ ಸಕ್ಕರೆಯನ್ನು ಹೊಂದಿರುವ ಆಹಾರಗಳು ಅಥವಾ ಹೆಚ್ಚು ಸಕ್ಕರೆ ಹೊಂದಿರುವ ಆಹಾರಗಳನ್ನು ತಿನ್ನುವುದನ್ನು ಕಡಿಮೆ ಮಾಡಿ.

ಶೇ.50-55ರಷ್ಟು ಕಾರ್ಬ್ಸ್, ಶೇ.30ರಷ್ಟು ಪ್ರೋಟೀನ್​ಗಳು, ಶೇ.15ರಷ್ಟು ಕೊಬ್ಬನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಅನುಸರಿಸಿ. ಈ ಸಮತೋಲನಕ್ಕೆ ತೊಂದರೆಯಾದರೆ, ಬೊಜ್ಜು ಬರುವ ಸಾಧ್ಯತೆಗಳು ಹೆಚ್ಚು.

ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ, ಏಕೆಂದರೆ ಅವುಗಳು ಫೈಬರ್​ನನ್ನು ಹೊಂದಿರುತ್ತವೆ ಮತ್ತು ಕಡಿಮೆ ಕ್ಯಾಲೊರಿ ಅಂಶವನ್ನು ಹೊಂದಿರುತ್ತವೆ.

ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಪ್ರತಿದಿನ 45 ನಿಮಿಷಗಳ ಚುರುಕಾದ ನಡಿಗೆಯನ್ನು ಮಾಡಿ. ನೀವು ಹೊರಹೋಗಲು ಸಾಧ್ಯವಾಗದಿದ್ದರೆ ಸ್ಪಾಟ್ ಜಾಗಿಂಗ್, ಸ್ಕಿಪ್ಪಿಂಗ್ ಇತ್ಯಾದಿಗಳನ್ನು ಮಾಡಬಹುದಾಗಿದೆ.

ಪ್ರತಿದಿನ ಕನಿಷ್ಠ 30-45 ನಿಮಿಷಗಳವರೆಗೆ ಯೋಗ, ಏರೋಬಿಕ್ಸ್ ಅಥವಾ ಇನ್ನಾವುದೇ ವ್ಯಾಯಾಮವನ್ನು ಸಹ ಅಭ್ಯಾಸ ಮಾಡಬಹುದು. ಕೆಟ್ಟ ಒತ್ತಡ ಮತ್ತು ಭಾವನಾತ್ಮಕ ಆಹಾರದಿಂದ ನಿಮ್ಮನ್ನು ದೂರವಿಡಿ.

ಆದ್ದರಿಂದ ಜನರು ತಮ್ಮ ಆಹಾರ ಪದ್ಧತಿ, ಜೀವನಶೈಲಿ ಮತ್ತು ಸ್ಥೂಲಕಾಯತೆಗೆ ಕಾರಣವಾಗುವ ಇತರ ಅಂಶಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಮೊದಲಿನಿಂದಲೂ ಅದನ್ನು ನಿಯಂತ್ರಿಸುವುದು ಮುಖ್ಯ. ವಿಶೇಷವಾಗಿ ಈಗ ನಾವು ನಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದೇವೆ. ಮಾನಸಿಕವಾಗಿ ಸದೃಢರಾಗಲು ನಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮುಖ್ಯವಾಗಿದೆ.

ವಾಕಿಂಗ್‌, ಬೆಳಗ್ಗೆ ಶುದ್ಧ ಗಾಳಿಯ ಸೇವನೆ, ಮೊಬೈಲ್‌ ಅನ್ನು ಸಿಚ್‌ ಆಫ್‌ ಮಾಡಿಡುವುದು, ಕ್ರಿಯಾಶೀಲವಾಗಿ ಇರುವುದು ಬೊಜ್ಜು ಬರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೆಲವು ಕ್ರಮಗಳು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಏಕೆಂದರೆ ಆರೋಗ್ಯವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.