ETV Bharat / sukhibhava

ಮಹಿಳೆಯರಷ್ಟೇ ಅಲ್ಲ, ಪುರುಷರು ಸಹ ಅರ್ಹರು ತ್ವಚೆಯ ಕಾಳಜಿಗೆ.. - ಚೆ ಆರೈಕೆ ಇಂದು ಕೇವಲ ಹರ್ಬಲ್​ ಸೋಪ್

ಇಂದಿನ ದಿನದಲ್ಲಿ ತ್ವಚೆಯ ಕಾಳಜಿ ಕೇವಲ ಮಹಿಳೆಯರಿಗೆ ಸೀಮಿತವಾದ ವಿಷಯವಾಗಿಲ್ಲ. ವಾಯುಮಾಲಿನ್ಯ, ಬಿಸಿಲಿನಿಂದ ತ್ವಚೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ.

Not only women, men deserve skin care
Not only women, men deserve skin care
author img

By

Published : May 20, 2023, 11:37 AM IST

ತ್ವಚೆ ಕಾಳಜಿ ಎಂಬುದು ಕೇವಲ ಹೆಣ್ಣು ಮಕ್ಕಳ ಆದ್ಯತೆ ವಿಷಯ ಮಾತ್ರವಲ್ಲ. ಇದಕ್ಕೆ ಪುರುಷರು ಅರ್ಹರಾಗಿದ್ದಾರೆ. ಅವರ ತ್ವಚೆ ಆರೈಕೆ ಇಂದು ಕೇವಲ ಹರ್ಬಲ್​ ಸೋಪ್​ ಮತ್ತು ಶೇವಿಂಗ್​ಗೆ ಮಾತ್ರ ಸೀಮಿತವಾಗಿಲ್ಲ. ಶಾಖ ಹೆಚ್ಚಳ ಮತ್ತು ಮಾಲಿನ್ಯದಿಂದಾಗಿ ಅವರ ತ್ವಚೆಯ ಸ್ವ ಆರೈಕೆ ವೇಗದ ಜೀವನ ಭಾಗವಾಗಿದ್ದು, ಅವರಲ್ಲಿ ಈ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸಿದೆ. ಇಂದಿನ ದಿನದಲ್ಲಿ ಪುರುಷರು ಸ್ವ ಆರೈಕೆ ಮತ್ತು ಅಲಂಕಾರದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಅಲ್ಲದೇ ತಮ್ಮ ತ್ವಚೆಯ ಬೇಡಿಕೆ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ.

ದೈನಂದಿನ ತ್ವಚೆಯ ದಿನಚರಿಯನ್ನು ವಿರಾಮಗೊಳಿಸಿ ಉತ್ತೇಜಿಸಿ, ಆನಂದಿಸಲು ಇದು ಸೂಕ್ತ ಸಮುಯವಾಗಿದೆ ಪುರುಷರ ತ್ವಚೆಯ ಆಡಳಿತವನ್ನು ಅಭ್ಯಾಸ ಮಾಡುವುದು ಸ್ವಯಂ-ಆರೈಕೆ ಮತ್ತು ಪ್ರೀತಿಗೆ ಅತ್ಯಗತ್ಯ. ನಿಮ್ಮ ದೈನಂದಿನ ತ್ವಚೆ ಕಾಳಜಿವಹಿಸಲು ಕೆಲವು ಸಲಹೆಗಳು ಇಲ್ಲಿದೆ.

ಶುದ್ದಿ
ಶುದ್ದಿ

ಶುದ್ಧಿ : ಬಿಡುವಿಲ್ಲದ ಜೀವನಶೈಲಿ, ಹೆಚ್ಚಿನ ಕೆಲಸದ ಒತ್ತಡ ಅಥವಾ ದೈನಂದಿನ ಒತ್ತಡಕ್ಕೆ ಸ್ನಾನ ಉತ್ತಮ ನಿವಾರಣೆ ನೀಡಬಲ್ಲದು. ದಿನದ ಆರಂಭದಲ್ಲಿ ಹೊಸ ಉತ್ಸಾಹ ಅಥವಾ ವಿಶ್ರಾಂತಿ ಪಡೆಯುವ ಮುನ್ನ ಉತ್ತಮ ಸ್ನಾನ ಮುದ ನೀಡುತ್ತದೆ.

ಸನ್​ಸ್ಕ್ರೀನ್​: ಮನೆಯಿಂದ ಹೊರ ಹೋಗಬೇಕಾದರೆ ಮಾತ್ರ ಸನ್​ಸ್ಕ್ರೀನ್​ ಬಳಕ ಮಾಡಬೇಕು ಎಂಬುದು ತಪ್ಪು ಕಲ್ಪನೆ. ಸನ್​ಸ್ಕ್ರೀನ್​ ಹಾನಿಕಾರಕ ಮಾಲಿನ್ಯದಿಂದ ರಕ್ಷಣೆ ನೀಡುವಲ್ಲಿ ಹೊಸ ಪದರವನ್ನು ತ್ವಚೆಗೆ ನೀಡುತ್ತದೆ. ಸರಿಯಾದ ಸನ್​ಸ್ಕ್ರೀನ್​ ಬಳಕೆ ಅಗತ್ಯ. ಧೂಳು, ಬೂದಿ ಮತ್ತು ಪರಾಗದಂತಹ ಮಾಲಿನ್ಯದ ಕಣಗಳು ಸರಾಸರಿ ಚರ್ಮದ ರಂಧ್ರಕ್ಕಿಂತ ಚಿಕ್ಕದಾಗಿದೆ ಮತ್ತು ಚರ್ಮದ ಮೇಲಿನ ಎಣ್ಣೆಗೆ ಅಂಟಿಕೊಳ್ಳುತ್ತವೆ. ಇದರಿಂದಾಗಿ ರಂಧ್ರಗಳು ಮತ್ತು ಬಿರುಕುಗಳು ನಿರ್ಬಂಧಿಸಲ್ಪಡುತ್ತವೆ. ನಿಮ್ಮ ಸನ್‌ಸ್ಕ್ರೀನ್ ಎಣ್ಣೆಯುಕ್ತವಲ್ಲ ಮತ್ತು ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸನ್​ಸ್ಕ್ರೀನ್
ಸನ್​ಸ್ಕ್ರೀನ್

ಸಮತೋಲಿತ ಆಹಾರ: ಉತ್ತಮವಾದ ಆಹಾರ ಆಯ್ಕೆ ಕೂಡ ತ್ವಚೆ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಮೃದ್ಧ ಮಿನರಲ್ಸ್​ ವಿಟಮಿನ್​ ಆಹಾರಗಳು ದೇಹದ ಒಳಗೆ ಮತ್ತು ಹೊರಗೆ ಆರೋಗ್ಯವನ್ನು ನೀಡುತ್ತವೆ. ತಾಜಾ ಜ್ಯೂಸ್​, ಹಣ್ಣು ಮತ್ತು ತರಕಾರಿಗಳಲ್ಲಿ ಆ್ಯಂಟಿಆಕ್ಸಿಡೆಂಟ್​ ಇದ್ದು, ಇವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.

ಸಮತೋಲಿತ ಆಹಾರ
ಸಮತೋಲಿತ ಆಹಾರ

ಹೈಡ್ರೇಟ್​​: ತ್ವಚೆ ಮತ್ತು ದೇಹಕ್ಕೆ ನೀರಿನ ಅಗತ್ಯ ಹೆಚ್ಚು. ಈ ಕಾರಣ ಸದಾ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಇದರಿಂದ ದೇಹ ನಿರ್ಜಲೀಕರಣಗೊಳ್ಳದಂತೆ ಕಾಪಾಡಬಹುದು. ಇದರಿಂದ ತ್ವಚೆಗೂ ಕೂಡ ಮುದುಡುವುದನ್ನು ತಪ್ಪಿಸಬಹುದು. ಇನ್ನು ತ್ವಚೆಗೆ ನೀರು ಸೇವನೆ ಜೊತೆಗೆ ಮಾಶ್ವರೈಸರ್​ ಹಚ್ಚುವ ಮೂಲಕ ಅದನ್ನು ಹೈಡ್ರೇಟ್​ ಮಾಡಬಹುದು. ಇದು ಚರ್ಮದಲ್ಲಿ ಉಂಟಾಗುವ ಬಿರುಕು ತಡೆಯುತ್ತದೆ.

ಹೈಡ್ರೇಟ್​​
ಹೈಡ್ರೇಟ್​​

ವರ್ಕ್​ಔಟ್​: ದೈನಂದಿನ ಜೀವನದಲ್ಲಿ ಕೊಂಚ ದೈಹಿಕ ಚಟುವಟಿಕೆಗಳನ್ನು ಸೇರಿಸುವುದರಿಂದ ಶಕ್ತಿ ಹೆಚ್ಚಿಸಬಹುದು. ಇದರಿಂದ ದೇಹ ಮತ್ತು ಚರ್ಮದ ಆರೋಗ್ಯ ಉತ್ತಮಗೊಳ್ಳುತ್ತದೆ. ದೈಹಿಕ ಚಟುವಟಿಕೆಗೆ ಜಿಮ್​ ಒಂದೇ ಮಾರ್ಗವಲ್ಲ, ಪ್ರತಿನಿತ್ಯ ನಡಿಗೆ, ಜಾಗಿಂಗ್​ ಅಥವಾ ಶಾರ್ಟ್​ ಹೈಕ್​ಗಳು ಉತ್ತಮವಾಗಿರುತ್ತದೆ.

ವರ್ಕ್​ಔಟ್
ವರ್ಕ್​ಔಟ್

ತ್ವಚೆಯ ಕಾಳಜಿ ಎಂಬುದು ಇಂದು ಎಲ್ಲಾ ಚರ್ಮ ಮಾದರಿ ಅವರಿಗೆ ಇಂದು ಅಗತ್ಯವಾಗಿದೆ. ವಯಸ್ಸಾಗುವಿಕೆ ಅಥವಾ ನಿಸ್ತೇಜತೆಯಿಂದ ಕಾಪಾಡಲು ದೈನಂದಿನ ತ್ವಚೆಯ ದಿನಚರಿ ರೂಪಿಸಿಕೊಳ್ಳುವುದು ಅವಶ್ಯವಾಗಿದೆ.

ಇದನ್ನೂ ಓದಿ: ಹದಿಹರೆಯದವರ ತ್ವಚೆ ಆರೈಕೆ ಹೀಗಿರಲಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.