ETV Bharat / sukhibhava

ವಯಸ್ಸಲ್ಲ, ತಾಯಿಯ ಕಳಪೆ ಆರೋಗ್ಯದಿಂದ ಗರ್ಭಾವಸ್ಥೆಗೆ ಅಪಾಯ: ಅಧ್ಯಯನ ವರದಿ

ವಯಸ್ಸಾದಂತೆ ಗರ್ಭಧಾರಣೆ ಮತ್ತು ಗರ್ಭಾವಸ್ಥೆಗಳ ತೊಂದರೆ ಹೆಚ್ಚಳ ಎಂಬ ಮಾತಿದೆ. ಇದು ಒಂದು ಅಂಶವಾದರೂ ಇದಕ್ಕೆ ಪ್ರಮುಖ ಕಾರಣ ಕಳಪೆ ಆರೋಗ್ಯ.

Not age, pregnancy risk from poor maternal health; Study report

author img

By

Published : May 23, 2023, 10:36 AM IST

ಬೆಂಗಳೂರು: ಬಹುತೇಕರಲ್ಲಿ ಇರುವ ಭಾವನೆ ಎಂದರೆ ವಯಸ್ಸಾದಂತೆ ಗರ್ಭಾವಸ್ಥೆ ತೊಂದರೆಗಳು ಹೆಚ್ಚು ಎಂಬುದು. ಆದರೆ, ಸಂಶೋಧನೆ ಅನುಸಾರ ವಯಸ್ಸಾಗುವಿಕೆಗಿಂತ ಕಳಪೆ ಆರೋಗ್ಯವು ಗರ್ಭಾವಸ್ಥೆ ತೊಂದರೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ.

10 ವರ್ಷಗಳ ದತ್ತಾಂಶಕ್ಕೆ ಹೋಲಿಕೆ: ಅಮೆರಿಕದ ಚಿಕಾಗೋ ನಾರ್ಥ್​​ವೆಸ್ಟರ್ನ್​​ ಮೆಮೋರಿಯಲ್​ ಹಾಸ್ಪಿಟಲ್​ ತಂಡ ಅಧ್ಯಯನ ನಡೆಸಿದ್ದು, ಕಳೆದ ಹತ್ತು ವರ್ಷಗಳಿಗೆ ಹೋಲಿಕೆ ಮಾಡಿ ನೋಡಿದಾಗ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ, ಅವಧಿ ಪೂರ್ವ ಜನನ, ಕಡಿಮೆ ತೂಕದ ಮಗು ಜನನದಂತಹ ಸಮಸ್ಯೆಗಳಂತಹ ಗರ್ಭಾವಸ್ಥೆ ಸಮಸ್ಯೆಗಳು ಹೆಚ್ಚಳವಾಗಿದ್ದು, ಇದಕ್ಕೆ ವಯಸ್ಸಿಗಿಂತ ಹೆಚ್ಚಾಗಿ ಆರೋಗ್ಯ ಪ್ರಮುಖ ಕಾರಣ ಎಂದು ತಿಳಿಸಿದೆ.

2022 ರಲ್ಲಿ ಗರ್ಭಿಣಿಯರ ಸರಾಸರಿ ವಯಸ್ಸು 27.9 ವರ್ಷದಿಂದ 2019ಕ್ಕೆ 29.1ಕ್ಕೆ ಏರಿದೆ. ಗರ್ಭಾವಸ್ಥೆಯ ಸಮಸ್ಯೆಗಳಲ್ಲಿ ವಯಸ್ಸು ಕೂಡ ಸಣ್ಣ ಭಾಗವಾಗಿ ಪರಿಗಣನೆ ಮಾಡಲಾಗಿದೆ. ಗರ್ಭಾವಸ್ಥೆಯಲ್ಲಿನ ಅಧಿಕ ರಕ್ತದೊತ್ತಡ ಕಳೆದೊಂದು ದಶಕದಿಂದ ಶೇ 50 ರಷ್ಟು ಏರಿಕೆ ಕಂಡಿದೆ. ಮಗುವಿನ ಜನ್ಮ ನೀಡುವ ತಾಯಂದಿರ ವಯಸ್ಸಿನಲ್ಲಿ ಬದಲಾವಣೆ ಶೇಕಡಾ ಎರಡಕ್ಕಿಂತ ಕಡಿಮೆಯಾಗಿದೆ. ತಾಯಂದಿರ ವಯಸ್ಸು ಗರ್ಭಾವಸ್ಥೆಯಲ್ಲಿ ಹೆಚ್ಚಿದ್ದರೂ ಅದೂ ಮಗುವಿನ ಜನ್ಮದ ಫಲಿತಾಂಶಕ್ಕೆ ಕಾರಣವಾಗುವುದಿಲ್ಲ ಎಂದು ಅಧ್ಯಯನ ಪ್ರಮುಖ ಲೇಖಕ ಜಕಾರಿ ಹ್ಯೂಸ್​ ತಿಳಿಸಿದ್ದಾರೆ.

ತಾಯಂದಿರಲ್ಲಿ ನಿಜವಾಗಿಯೂ ಸವಾಲು ಆಗಿರುವುದು ವಯಸ್ಸಿಗಿಂತ ಹೆಚ್ಚಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಗರ್ಭಿಣಿಯರ ಪೂರ್ವ ಆರೋಗ್ಯ ಸಮಸ್ಯೆಗಳಾಗಿದ್ದು, ಈ ಅಂಶಗಳನ್ನು ಸಮರ್ಥವಾಗಿ ಸುಧಾರಣೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಇದನ್ನು ತಿಳಿಯುವುದು ಅವಶ್ಯಕವಾಗಿದೆ.

ದಶಕದಲ್ಲಿ ಹೆಚ್ಚಿದ ಸಮಸ್ಯೆ: ನ್ಯಾಷನಲ್ ಸೆಂಟರ್ ಫಾರ್ ಹೆಲ್ತ್ ಸ್ಟ್ಯಾಟಿಸ್ಟಿಕ್ಸ್ ನಟಾಲಿಟಿ ಫೈಲ್ಸ್‌ನ ದತ್ತಾಂಶವನ್ನು ಬಳಸಿಕೊಂಡು ಸಂಶೋಧಕರು ಪ್ರಿಕ್ಲಾಂಪ್ಸಿಯಾ ಮತ್ತು ಎಕ್ಲಾಂಪ್ಸಿಯಾ ಅವಧಿಪೂರ್ವ ಜನನ ಮತ್ತು 2011 ರಲ್ಲಿ 3.9 ಮಿಲಿಯನ್ ಜನನಗಳಲ್ಲಿ ಕಡಿಮೆ ಜನನ ತೂಕ ಮತ್ತು 2019 ರಲ್ಲಿ 3.7 ಮಿಲಿಯನ್ ಜನನ ದರಗಳನ್ನು ಹೋಲಿಸಿದ್ದಾರೆ. ಫಲಿತಾಂಶಗಳು ಅವಧಿಪೂರ್ವ ಜನನ ಮತ್ತು ಕಡಿಮೆ ಜನನ ತೂಕದಲ್ಲಿ ಮಧ್ಯಮ ಹೆಚ್ಚಳ ತೋರಿಸಿದೆ.

ಫಲಿತಾಂಶ ಅವಧಿ ಪೂರ್ವ ಮಗುವಿನ ಜನನ ಮತ್ತು ಕಡಿಮೆ ತೂಕದ ಮಗುವಿನ ಜನನ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚುತ್ತಿರುವುದನ್ನು ತೋರಿಸಿದೆ. ಪ್ರತಿಕೂಲ ಗರ್ಭಧಾರಣೆಯ ಫಲಿತಾಂಶಗಳು ಪ್ರಮುಖ ಆರೋಗ್ಯ ಪರಿಣಾಮಗಳನ್ನು ಹೊಂದಿವೆ. ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ನಂತರದ ಜೀವನದಲ್ಲಿ ಹೃದ್ರೋಗದ ಹೆಚ್ಚಿನ ಅಪಾಯವನ್ನು ಒಳಗೊಂಡಿದ್ದು, ತಾಯಿ ಜೊತೆಗೆ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಹೊಂದಿದೆ. ಈ ಅಧ್ಯಯನವೂ ಜೀವಿತಾವಧಿಯಲ್ಲಿನ ಹೃದಯ ರೋಗ ಸಮಸ್ಯೆಗಳ ಅಪಾಯ ತಡೆಯಲು ಸಹಾಯ ಮಾಡುತ್ತದೆ. ಇನ್ನು ಸ್ಥೂಲಕಾಲ, ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಇತರೆ ಅಂಶಗಳು ಯುವಜನರಲ್ಲಿ ಗರ್ಭಧಾರಣೆಗೆ ತೊಡಕನ್ನು ಮಾಡುತ್ತಿದೆ ಎಂಬುದರ ಕುರಿತು ಸಂಶೋಧನೆ ಅಗತ್ಯವಿದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿನ ಒತ್ತಡದ ಹಾರ್ಮೋನುಗಳಿಂದಲೇ ಮಕ್ಕಳ ಭಾಷಾ ಸಾಮರ್ಥ್ಯದ ಬೆಳವಣಿಗೆ: ಸಂಶೋಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.