ಹೈದ್ರಾಬಾದ್: ಕಳೆದ ಎರಡು ವರ್ಷಗಳಿಂದ ಹೃದಯಾಘಾತ ಸಾವಿನ ಪ್ರಕರಣಗಳ ಏರಿಕೆ ಕಂಡು ಬಂದಿದೆ. ಕೋವಿಡ್ ಲಸಿಕೆಯ ಅಡ್ಡ ಪರಿಣಾಮವನ್ನು ಇದರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಜಿ ನಿರ್ದೇಶಕ ಡಾ ಬಲರಾಮ್ ಭಾರ್ಗವ್ ಈಟಿವಿ ಭಾರತ್ ದೊಂದಿಗೆ ಮಾತನಾಡಿದ್ದಾರೆ.
ಕೋವಿಡ್ 19 ಮಾನವನ ಹೃದಯದ ಮೇಲೆ ಬೀರುವ ಪರಿಣಾಮಗಳು, ಈ ಕುರಿತು ಹರಡಿರುವ ಮಿಥ್ಯಗಳ ಕುರಿತು ಏಮ್ಸ್ನ ಹೃದಯತಜ್ಞರು ಮಾತನಾಡಿದ್ದಾರೆ. ಇದೇ ವೇಳೆ ಸದ್ಯ ದೇಶದಲ್ಲಿ ವೇಗವಾಗಿ ಹರಡುತ್ತಿರುವ ಜೆಎನ್.1 ಸೋಂಕಿನ ಬಗ್ಗೆ ಆತಂಕ ಪಡುವ ಅಗತ್ಯ ಎಂದು ಕೂಡ ತಿಳಿಸಿದ್ದಾರೆ. ಈ ಸಂದರ್ಶನದ ಸಾರಾಂಶ ಇಲ್ಲಿದೆ.
ಈಟಿವಿ ಭಾರತ್: ಕೋವಿಡ್ ಸೋಂಕು ಮತ್ತೆ ಹರಡಿದ್ದು, ಇದರ ಮುಂದಿನ ಹಾದಿಯನ್ನು ಹೇಗೆ ನಿರ್ವಹಣೆ ಮಾಡಬೇಕು?
ಡಾ ಬಲರಾಮ್ ಭಾರ್ಗವ್: ಕೇರಳ ಮತ್ತು ಕರ್ನಾಟಕದಲ್ಲಿ ಹೊಸ ಸೋಂಕಿನ ತಳಿ ಪ್ರಕರಣದಲ್ಲಿ ಏರಿಕೆ ಕಂಡು ಬಂದಿದೆ. ಸರ್ಕಾರಗಳು ಈಗಾಗಲೇ ಸೋಂಕಿನ ಕಣ್ಗಾವಲನ್ನು ಹೆಚ್ಚಿಸಿದೆ. ಈಗಾಗಲೇ ಲಸಿಕೆ ಪಡೆದವರು ಮತ್ತೆ ಲಸಿಕೆ ಪಡೆಯುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಈಟಿವಿ ಭಾರತ್: ದೇಶದಲ್ಲಿ ಜೆಎನ್.1 ಟೈಪ್ ಕೊರೊನಾ ಹೆಚ್ಚಳ ಕಂಡು ಬಂದಿದ್ದು, ಸಾವು ಸಂಭವಿಸಿದೆ. ಯಾವ ಮುನ್ನೆಚ್ಚರಿಕೆ ವಹಿಸಬೇಕು?
ಡಾ ಬಲರಾಮ್ ಭಾರ್ಗವ್: ಪ್ರಕರಣಗಳ ಏರಿಕೆ ಹಿನ್ನೆಲೆ ಆತಂಕ ಪಡುವ ಅಗತ್ಯ ಇಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು. ಸರ್ಕಾರಗಳು ಕಾಲ ಕಾಲಕ್ಕೆ ಘೋಷಿಸುವ ಕೋವಿಡ್ ಮಾರ್ಗಸೂಚಿ ಪಾಲಿಸುವುದು ಅವಶ್ಯವಾಗಿದೆ.
ಈಟಿವಿ ಭಾರತ್ : ಸೋಂಕಿನ ಉಪತಳಿ ದಾಳಿ ತಪ್ಪಿಸಿಕೊಳ್ಳಲು ಮತ್ತೆ ಲಸಿಕೆ ಪಡೆಯಬೇಕಾ?
ಡಾ ಬಲರಾಮ್ ಭಾರ್ಗವ್: ಈಗಾಗಲೇ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆದವರೂ ಮತ್ತು ಬೂಸ್ಟರ್ ಡೋಸ್ ಪಡೆದವರೂ ಮತ್ತೆ ಲಸಿಕೆ ಪಡೆಯುವ ಅವಶ್ಯಕತೆ ಇಲ್ಲ. ಇನ್ನೂ ಲಸಿಕೆಯನ್ನು ತೆಗೆದುಕೊಳ್ಳದವರು ಲಸಿಕೆ ಪಡೆಯಬಹುದು. ಪುಣೆಯ ಸೆರಂ ಸಂಸ್ಥೆ ಜೆಎನ್.1 ತಡೆಗಟ್ಟುವಿಕೆಗೆ ಡಬ್ಲ್ಯೂಎಚ್ಒಗೆ ಅರ್ಜಿ ಸಲ್ಲಿಸಿದೆ. ಗಮನಿಸಬೇಕಾದ ಪ್ರಮುಖ ಅಂಶ ಎಂದರೆ, ಲಸಿಕೆಗಳು ಗಂಭೀರ ಸೋಂಕಿನ ವಿರುದ್ಧ ರಕ್ಷಣೆ ನೀಡುತ್ತದೆ. ಆದರೆ ಇದು ಪ್ರಸ್ತುತ ಸೋಂಕನ್ನು ತಡೆಯುವುದಿಲ್ಲ.
ಈಟಿವಿ ಭಾರತ್: ಕೋವಿಡ್ 19 ಬಳಿಕ ಹೃದಯ ಸಮಸ್ಯೆ ಸಾವಿನ ಸಂಖ್ಯೆ ಹೆಚ್ಚಾಯಿತು?
ಡಾ ಬಲರಾಮ್ ಭಾರ್ಗವ್: ಲಸಿಕೆ ಅಡ್ಡ ಪರಿಣಾಮ ಕುರಿತು ನಕಾರಾತ್ಮಕ ಪ್ರಚಾರ ನಡೆಸಲಾಗುತ್ತಿದೆ. ಡಬ್ಲ್ಯೂಎಚ್ಒ ಕೋವಿಡ್ 19 ಲಸಿಕೆಯ ಅನೇಕ ಹಂತ ಪರೀಕ್ಷೆ ಬಳಿಕವೇ ಅನುಮತಿ ನೀಡಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಕೋವಿಡ್ 19 ಆಗಮನಕ್ಕೂ ಮುನ್ನವೇ ದಕ್ಷಿಣ ಏಷ್ಯಾ ದೇಶದ ಯುವ ಜನತೆಯಲ್ಲಿ ಹೃದಯಘಾತದ ಸಾವಿನ ಬೆದರಿಕೆ ಕಂಡು ಬಂದಿತು. ಕಾರಣ ಇದಕ್ಕೆ ವಂಶವಾಹಿನಿ ಸಮಸ್ಯೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ. ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ
ಈಟಿವಿ ಭಾರತ್: ಲಸಿಕೆ ಪಡೆದವರಲ್ಲಿ ಆ್ಯಂಟಿಬಾಡಿಸ್ (ಪ್ರತಿನಿರೋಧಕತೆ) ಕಂಡು ಬರುವುದಿಲ್ಲ. ಅವರಿಗೆ ರಕ್ಷಣೆ ಸಿಗುತ್ತದೆಯಾ, ಇಲ್ಲವಾ?
ಡಾ ಬಲರಾಮ್ ಭಾರ್ಗವ್: ಕೆಲವು ವ್ಯಕ್ತಿಗಳಲ್ಲಿ ಲಸಿಕೆ ಪಡೆದಿದ್ದರೂ ಆ್ಯಂಟಿಬಾಡಿಸ್ ಕಂಡು ಬರುವುದಿಲ್ಲ. ಇದರಿಂದ ಆತಂಕ ಪಡುವ ಅಗತ್ಯವಿಲ್ಲ. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ಪರಿಣಾಮಕಾರಿ ಲಸಿಕೆ ಆಗಿದೆ.
ಇದನ್ನೂ ಓದಿ: ದೇಶದಲ್ಲಿ ಹರಡುತ್ತಿರುವ ಜೆಎನ್.1 ತಳಿ; ಬೂಸ್ಟರ್ ಲಸಿಕೆ ಅಗತ್ಯವಿಲ್ಲ ಎಂದ ತಜ್ಞರು