ಒಂಟಾರಿಯೊ (ಕೆನಡಾ): ವೆಸ್ಟರ್ನ್ ಯೂನಿವರ್ಸಿಟಿಯ ಶುಲಿಚ್ ಸ್ಕೂಲ್ ಆಫ್ ಮೆಡಿಸಿನ್ & ಡೆಂಟಿಸ್ಟ್ರಿ ಮತ್ತು ಲಾಸನ್ ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ವ್ಯಾಪಿಂಗ್ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನವು ಇದು ಶ್ವಾಸಕೋಶದಲ್ಲಿನ ಪಲ್ಮನರಿ ಸರ್ಫ್ಯಾಕ್ಟಂಟ್ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಸೂಚಿಸುತ್ತದೆ.
ಶ್ವಾಸಕೋಶದಲ್ಲಿನ ಸರ್ಫ್ಯಾಕ್ಟಂಟ್ ಎಂಬ ಪ್ರಮುಖ ಪದರವು ಲಿಪಿಡ್‌ಗಳು ಮತ್ತು ಪ್ರೋಟೀನ್‌ಗಳಿಂದ ಕೂಡಿದೆ. ಇದು ಮಾನವರು ಸುಲಭವಾಗಿ ಉಸಿರಾಡಲು ಮತ್ತು ಮೇಲ್ಮೈ ಒತ್ತಡವನ್ನು ಕಡಿಮೆ ಮಾಡುತ್ತದೆ. ಸರ್ಫ್ಯಾಕ್ಟಂಟ್ಗಳಿಲ್ಲದೇ, ಉಸಿರಾಟವು ಹೆಚ್ಚು ಕಷ್ಟಕರವಾಗಿರುತ್ತದೆ ಮತ್ತು ಯಂತ್ರದ ಸಹಾಯದ ಅಗತ್ಯವಿರುತ್ತದೆ. ಈ ಅಧ್ಯಯನವನ್ನು PLOS ONE ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ವ್ಯಾಪಿಂಗ್ ಜನಪ್ರಿಯವಾಗಿದೆ. ಆದರೆ, ಶ್ವಾಸಕೋಶಕ್ಕೆ ಪ್ರವೇಶಿಸಿದಾಗ ಏರೋಸಾಲ್‌ನೊಂದಿಗೆ ಏನಾಗುತ್ತದೆ ಎಂಬುದರ ಕುರಿತು ಹೆಚ್ಚು ತಿಳಿದಿಲ್ಲ ಎಂದು ಲಾಸನ್ ವಿಜ್ಞಾನಿ ಮತ್ತು ಶುಲಿಚ್ ಮೆಡಿಸಿನ್ ಮತ್ತು ಡೆಂಟಿಸ್ಟ್ರಿಯ ಪ್ರೊಫೆಸರ್ ಡಾ ರುಡ್ ವೆಲ್ಧುಯಿಜೆನ್ ಹೇಳುತ್ತಾರೆ.
ಶ್ವಾಸಕೋಶದಲ್ಲಿ ಆವಿ ಏರೋಸಾಲ್ ಮೊದಲು ಪಲ್ಮನರಿ ಸರ್ಫ್ಯಾಕ್ಟಂಟ್‌ನೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಸಿರಿಂಜ್‌ನೊಳಗೆ ಸರ್ಫ್ಯಾಕ್ಟಂಟ್ ಫಿಲ್ಮ್ ಅನ್ನು ಇರಿಸುವ ಮೂಲಕ ಮತ್ತು ನಂತರ ಏರೋಸಾಲ್ ಅನ್ನು ಸಿರಿಂಜ್‌ಗೆ ತಳ್ಳಲು ವ್ಯಾಪಿಂಗ್ ಸಾಧನವನ್ನು ಬಳಸುವ ಮೂಲಕ ಸಂಶೋಧನಾ ತಂಡವು ಪರಿಣಾಮಗಳನ್ನು ಅಧ್ಯಯನ ಮಾಡಲು ಸಾಧ್ಯವಾಯಿತು.
ಇದು ಆವಿಯನ್ನು ನೇರವಾಗಿ ಸರ್ಫ್ಯಾಕ್ಟಂಟ್‌ನೊಂದಿಗೆ ಸಂವಹನ ಮಾಡಲು ಅವಕಾಶ ಮಾಡಿಕೊಟ್ಟಿತು. ಸಂಶೋಧಕರು ನಂತರ 30 ಬಾರಿ ಸಿರಿಂಜ್‌ನಲ್ಲಿ ಆವಿಯನ್ನು ಉಸಿರಾಡುವ ಮತ್ತು ಹೊರಹಾಕುವ ಮೂಲಕ ಪ್ರಮಾಣಿತ ವ್ಯಾಪಿಂಗ್ ಸೆಷನ್ ಬಗ್ಗೆ ತಿಳಿದುಕೊಂಡಿದ್ದಾರೆ.
ಇದನ್ನೂ ಓದಿ: ಜಾಗ್ರತೆ..! ಚಳಿಗಾಲದಲ್ಲಿ ಪಾರ್ಶ್ವವಾಯು - ಹೃದಯಾಘಾತದ ಪ್ರಮಾಣ ಹೆಚ್ಚಳ
ನಿರ್ದಿಷ್ಟವಾಗಿ ನಾವು ಸರ್ಫ್ಯಾಕ್ಟಂಟ್‌ನಲ್ಲಿನ ಮೇಲ್ಮೈ ಒತ್ತಡವನ್ನು ನೋಡುತ್ತಿದ್ದೆವು ಎಂದು ಸ್ಚುಲಿಚ್ ಮೆಡಿಸಿನ್ ಮತ್ತು ಡೆಂಟಿಸ್ಟ್ರಿಯ ಸ್ನಾತಕೋತ್ತರ ವಿದ್ಯಾರ್ಥಿ ಎಮ್ಮಾ ಗ್ರಹಾಂ ವಿವರಿಸುತ್ತಾರೆ. ವ್ಯಾಪಿಂಗ್ ನಂತರ, ಸರ್ಫ್ಯಾಕ್ಟಂಟ್ ಸರಿಯಾದ ಶ್ವಾಸಕೋಶದ ಕಾರ್ಯನಿರ್ವಹಣೆ ಬೆಂಬಲಿಸುವಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ. ಇದು ಹೆಚ್ಚಿನ ಮೇಲ್ಮೈ ಒತ್ತಡ ಉಂಟು ಮಾಡುತ್ತದೆ ಎಂದಿದ್ದಾರೆ.
ಪರಿಣಾಮಗಳಲ್ಲಿ ಯಾವ ರೀತಿ ವ್ಯತ್ಯಾಸಗಳಿವೆ ಎಂದು ನೋಡಲು ತಂಡವು ವಿವಿಧ ವ್ಯಾಪಿಂಗ್ ಸಾಧನಗಳು, ಸುವಾಸನೆಗಳು, ಸೇರ್ಪಡೆಗಳು ಮತ್ತು ನಿಕೋಟಿನ್ ಅನ್ನು ಸಹ ಪರಿಶೀಲಿಸಿತು. "ಇತರ ಇ-ದ್ರವಗಳಿಗೆ ಹೋಲಿಸಿದರೆ ನಿಕೋಟಿನ್ ಸರ್ಫ್ಯಾಕ್ಟಂಟ್‌ನ ಮೇಲ್ಮೈ ಒತ್ತಡದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳನ್ನು ಬೀರಲಿಲ್ಲ. ಆದರೆ, ಮೆಂಥಾಲ್ ಇ-ದ್ರವದಂತಹ ಕೆಲವು ಸುವಾಸನೆಯು ಪರಿಣಾಮ ಬೀರಿದೆ ಎಂದು ಗ್ರಹಾಂ ಹೇಳುತ್ತಾರೆ.
ಶ್ವಾಸಕೋಶದ ಮೇಲೆ ಆವಿ ಯಾವ ರೀತಿ ಪರಿಣಾಮ ಬೀರುತ್ತದೆ. ಹಾಗೂ ಇದರಿಂದ ಉಂಟಾಗುವ ಗಾಯಕ್ಕೆ ಹೇಗೆ ಚಿಕಿತ್ಸೆ ನೀಡಬಹುದು ಎಂಬುದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಶೋಧನೆ ಮಾಡುತ್ತೇವೆ ಎಂದು ವೆಲ್ಧುಯಿಜೆನ್ ಹೇಳುತ್ತಾರೆ.