ETV Bharat / sukhibhava

ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸ 2023: ಭಾರತದ ಮೂರನೇ ಸಾಮಾನ್ಯ ರೋಗಗಳ ನಿಯಂತ್ರಣಕ್ಕೆ ಬೇಕಿದೆ ಪ್ರಯತ್ನ

ಭಾರತದಲ್ಲಿ ಈ ರೋಗ ವರ್ಷವೀಡಿ ಪತ್ತೆಯಾದರೂ ಮಳೆಗಾಲದಲ್ಲಿ ಇದು ಹೆಚ್ಚು ಉಲ್ಬಣವಾಗುತ್ತದೆ. ಆಗ್ನೇಯ ಏಷ್ಯಾದಲ್ಲಿ ಪತ್ತೆಯಾಗುವ ಮಲೇರಿಯಾ ಪ್ರಕರಣದಲ್ಲಿ ಶೇ 77ರಷ್ಟು ಪ್ರತಿಶತ ಭಾರತದಲ್ಲಿ ವರದಿಯಾಗುತ್ತಿದೆ

author img

By

Published : May 31, 2023, 5:30 PM IST

Updated : May 31, 2023, 10:08 PM IST

National Anti-Malaria Month 2023: Efforts needed to control India's third most common disease

ಬೆಂಗಳೂರು: ಪ್ರತಿ ವರ್ಷ ಅನೇಕ ಜನರ ಸಾವಿಗೆ ಕಾರಣವಾಗುತ್ತಿರುವ ಅಂಶಗಳಲ್ಲಿ ಮಲೇರಿಯಾ ಒಂದಾಗಿದೆ. ಮಳೆಗಾಲದಲ್ಲಿ ಮಲೇರಿಯ ಮತ್ತು ಸೊಳ್ಳೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಈ ರೋಗ ಸಂಬಂಧ ಜಾಗೃತಿ ಮೂಡಿಸುವ ಜೊತೆಗೆ ವಿವಿಧ ರೀತಿಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸಿಕ ಮತ್ತು ವಾರದ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಅಂತಹ ಒಂದು ಕಾರ್ಯಕ್ರಮದಲ್ಲಿ ಒಂದು ರಾಷ್ಟ್ರೀಯ ಮಲೇರಿಯ ವಿರೋಧಿ ಮಾಸ ಕೂಡಾ ಒಂದು.

ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸವನ್ನು ಪ್ರತಿ ವರ್ಷ ಜೂನ್​ 1ರಿಂದ ಜೂನ್​ 30ರವರೆಗೆ ಆಚರಿಸಲಾಗುವುದು. ಸಾಧ್ಯವಾದ ರೀತಿಯಲ್ಲಿ ಮಲೇರಿಯ ರೋಗಿಗಳನ್ನು ಪತ್ತೆ ಮಾಡುವ ಮೂಲಕ ಅವರಿಂದ ರೋಗ ಹರಡುವುದನ್ನು ತಡೆಗಟ್ಟಲಾಗುವುದು. ಈ ಯೋಜನೆ ಅಡಿ, ಈ ತಿಂಗಳು ಪೂರ್ತಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ಕುರಿತು ಅನೇಕ ಪ್ರಚಾರ ಕಾರ್ಯಕ್ರಮ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುವುದು. ಇದೇ ಸಂದರ್ಭದಲ್ಲಿ ಸೊಳ್ಳೆ ಕೊಲ್ಲಲು ಪ್ರಚಾರ ಮತ್ತು ಅದರ ಲಾರ್ವಗಳ ತಡೆಗ, ರೋಗ ನಿಯಂತ್ರಣಕ್ಕೆ ಎಲ್ಲ ರೀತಿಯ ನಿರ್ವಹಣೆಯನ್ನು ಸರ್ಕಾರದ ಘಟಕಗಳು ನಿರ್ವಹಿಸುತ್ತದೆ.

ಭಾರತದಲ್ಲಿ ಹೆಚ್ಚಿದ ಮಲೇರಿಯ ಪ್ರಕರಣ: ಭಾರತದಲ್ಲಿ ಮೂರನೇ ಸಾಮಾನ್ಯ ರೋಗದಲ್ಲಿ ಮಲೇರಿಯಾ ಒಂದಾಗಿದೆ. ಭಾರತದಲ್ಲಿ ಈ ರೋಗ ವರ್ಷವೀಡಿ ಪತ್ತೆಯಾದರೂ ಮಳೆಗಾಲದಲ್ಲಿ ಇದು ಹೆಚ್ಚು ಉಲ್ಬಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅನುಸಾರ, ಆಗ್ನೇಯ ಏಷ್ಯಾದಲ್ಲಿ ಪತ್ತೆಯಾಗುವ ಮಲೇರಿಯಾ ಪ್ರಕರಣದಲ್ಲಿ ಶೇ 77ರಷ್ಟು ಪ್ರತಿಶತ ಭಾರತದಲ್ಲಿ ವರದಿಯಾಗುತ್ತಿದೆ.

2021ರ ಅಂಕಿ - ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 2 ಮಿಲಿಯನ್​ ಜನರಲ್ಲಿ ಮಲೇರಿಯಾ ರೋಗ ವರದಿಯಾಗುತ್ತಿದೆ. ಪ್ರಸ್ತುತ, ಪ್ರತಿ ವರ್ಷ 1000 ಜನರ ಸಾವಿಗೆ ಈ ರೋಗ ಕಾರಣವಾಗುತ್ತಿದೆ. ದೇಶದಲ್ಲಿ ಪತ್ತೆಯಾಗುತ್ತಿರುವ ಮಲೇರಿಯಾ ಪ್ರಕರಣದಲ್ಲಿ ಅತಿ ಹೆಚ್ಚು ಒಡಿಶಾ, ಛತ್ತೀಸ್​ಗಢ, ಪಶ್ಚಿಮ ಬಂಗಾಳ, ಕರ್ನಾಟಕ, ಜಾರ್ಖಂಡ್​​, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್​ ಮತ್ತು ರಾಜಸ್ಥಾನದಲ್ಲಿ ವರದಿಯಾಗುತ್ತಿದೆ.

ಮಲೇರಿಯಾ ರೋಗ ಹರಡುವುದನ್ನು ಪರಿಣಾಮಕಾರಿಯಾಗಿ ನಿಲ್ಲಿಸಬಹುದಾಗಿದೆ. ಆದರೆ, ವೈಯಕ್ತಿಕ, ಸಾಮಾಜಿಕ ಮತ್ತು ಸರ್ಕಾರದ ಪ್ರಯತ್ನಗಳ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿದೆ. ಸೌಲಭ್ಯಗಳ ಕೊರತೆ ಮತ್ತಿತ್ತರ ಕಾರಣಗಳು ಇದರಲ್ಲಿ ಮುಖ್ಯವಾಗಿದೆ. ಭಾರತದಲ್ಲಿ ಮಲೇರಿಯಾ ಗ್ರಾಮೀಣ ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ 2030ರಲ್ಲಿ ಮಲೇರಿಯ ಮುಕ್ತವಾಗುವ ನಿರ್ಣಯವನ್ನು ಕೈಗೊಂಡಿದೆ. ಸಂಘಟನೆಗಳು ಅನೇಕ ಕಾರ್ಯಕ್ರಮ ಮತ್ತು ಪ್ರಚಾರಗಳನ್ನು ನಡೆಸುತ್ತಿದೆ. ಈ ಪ್ರಚಾರದಲ್ಲಿ ಅನೇಕ ವಿಧದ ಜಾಗೃತಿ, ಶುಚಿತ್ವ ಮತ್ತು ನಿರ್ವಹಣೆ ಕಾರ್ಯಕ್ರಮವನ್ನು ರಾಜ್ಯ, ನಗರ ಮತ್ತು ಪಟ್ಟಣಗಳಲ್ಲಿ ಸರ್ಕಾರದ ಘಟಕ ಮತ್ತು ಸರ್ಕಾರೇತರ ಸಂಘಟನೆಗಳು ನಡೆಸುತ್ತಿದೆ.

ರೋಗ ನಿಯಂತ್ರಣಕ್ಕೆ ಸರ್ಕಾರದ ಯೋಜನೆ: 1953ರಲ್ಲಿ ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮ (ಎನ್​ಎಂಸಿಪಿ), ರಾಷ್ಟ್ರೀಯ ಮಲೇರಿಯಾ ನಿರ್ಮೂಲನೆ ಕಾರ್ಯಕ್ರಮ (ಎನ್​ಎಂಇಪಿ-1958), ರಾಷ್ಟ್ರೀಯ ವಾಹಕ ರೋಗ ನಿಯಂತ್ರಣ ಕಾರ್ಯಕ್ರಮ (ಎನ್​ವಿಬಿಡಿಸಿಪಿ) ಮತ್ತು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್​ ನಂತಹ ಕಾರ್ಯಕ್ರಮಗಳನ್ನು ಭಾರತ ಸರ್ಕಾರ ಚಾಲನೆ ನೀಡಿದೆ.

ಈ ಮೂಲಕ ಮಲೇರಿಯ ನಿಯಂತ್ರಣ ಮತ್ತು ವಾಹಕಗಳಿಂದ ಹರಡುವ ರೋಗಗಳನ್ನು ತಡೆಯಬಹುದು. ಈ ಕಾರ್ಯಕ್ರಮಗಳ ಅಡಿಯಲ್ಲಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸೊಳ್ಳೆಗಳ ಲಾರ್ವಾಗಳು ಬೆಳವಣಿಗೆಗೆ ಬರದಂತೆ ಶುಚಿಗೊಳಿಸುವುದು. ಸೊಳ್ಳೆಗಳು ಮತ್ತು ಅವುಗಳ ಲಾರ್ವಾಗಳನ್ನು ನಾಶಮಾಡಲು ರಾಸಾಯನಿಕ ಸಿಂಪಡಣೆ, ಈ ರೋಗಕ್ಕೆ ಹೆಚ್ಚು ಸೂಕ್ಷ್ಮವಾಗಿರುವ ಪ್ರದೇಶಗಳಲ್ಲಿ ರೋಗಿಗಳು ಮತ್ತು ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದು. ಸಮಯೋಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತದೆ

ಭಾರತದ ಬಹುತೇಕ ಭಾಗಗಳಲ್ಲಿ ಮಲೇರಿಯಾ ಪ್ರಕರಣಗಳು ಜುಲೈನಿಂದ ನವೆಂಬರ್​ವರೆಗೆ ಹೆಚ್ಚಿರುತ್ತದೆ. ಜೂನ್​ನಲ್ಲಿ ರಾಜ್ಯಕ್ಕೆ ಮಾನ್ಸೂನ್​ ಆಗಮಿಸುವ ಮೂಲಕ ಸೊಳ್ಳೆಗಳು ಮೊಟ್ಟೆಯಿಡುಲು ಆರಂಭಿಸುತ್ತದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಕ್ರಮಗಳನ್ನು ನಡೆಸುವ ಮೂಲಕ ಮಲೇರಿಯಾ ಮತ್ತಿತ್ತರ ವಾಹಕಗಳ ರೋಗಗಳಿಂದ ಜನರನ್ನು ರಕ್ಷಣೆ ಮಾಡಬಹುದಾಗಿದೆ.

ಮಲೇರಿಯಾ ಒಂದು ರೀತಿಯ ಸೋಂಕಿನ ರೋಗವಾಗಿದ್ದು, ಇದು ಅನಾಫಿಲಿಸ್​ ಎಂಬ ಹೆಣ್ಣು ಸೊಳ್ಳೆ ಕಡಿತದಿಂದ ಉಂಟಾಗುತ್ತದೆ. ಈ ಹೆಣ್ಣು ಸೊಳ್ಳೆಯಲ್ಲಿ ಪ್ರೊಟೊಜೊವಾ ಎಂಬ ಬ್ಯಾಕ್ಟೀರಿಯಾ ಇರುತ್ತದೆ. ಇದು ಸೊಳ್ಳೆಕಡಿತದಿಂದ ವ್ಯಕ್ತಿಯ ದೇಹ ಸೇರುತ್ತದೆ. ಈ ಬ್ಯಾಕ್ಟೀರಿಯಾ ಸೋಂಕು ಲಿವರ್​ ಮತ್ತು ರಕ್ತದ ಕೋಶಕ್ಕೆ ಸೇರಿ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ವ್ಯಕ್ತಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಇದು ಗಂಭೀರವಾಗುತ್ತದೆ. ಮಲೇರಿಯಾ ಪರಾವಲಂಬಿಗಳಲ್ಲಿ ಐದು ವಿಧಗಳಿವೆ.

  • ಪ್ಲಾಸ್ಮೋಡಿಯಮ್ ಫಾಲ್ಸಿಪ್ಯಾರಮ್
  • ಪ್ಲಾಸ್ಮೋಡಿಯಂ ವೈವಾಕ್ಸ್
  • ಪ್ಲಾಸ್ಮೋಡಿಯಂ ಅಂಡಾಕಾರ
  • ಪ್ಲಾಸ್ಮೋಡಿಯಂ ಮಲೇರಿಯಾ
  • ಪ್ಲಾಸ್ಮೋಡಿಯಂ ನೋಲೆಸಿ

ಭಾರತದಲ್ಲಿ ಪತ್ತೆಯಾಗುವ ಮಲೇರಿಯಾ ಪ್ರಕರಣದಲ್ಲಿ ಬಹುತೇಕ ಫ್ಲಾಸ್ಮೋಡಿಯಮ್​ ಫಾಲ್ಸಿಫ್ಯಾರಮ್​ಗಳಾಗಿವೆ. ಇದು ಮಲೇರಿಯಾದ ಸಂಕೀರ್ಣ ವಿಧ ಆಗಿದೆ. ಇದಕ್ಕೆ ಸರಿಯಾಗಿ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅನೇಕ ಗಂಭೀರ ಪರಿಣಾಮಕ್ಕೆ ಕಾರಣವಾಗುತ್ತದೆ. ಮಲೇರಿಯಾ ಪ್ರಕರಣಗಳು ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಹಾನಿಕಾರಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಹವಾಮಾನ ಬದಲಾವಣೆ.. ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯದ ಬಗ್ಗೆ ತಜ್ಞರ ಎಚ್ಚರಿಕೆ

Last Updated : May 31, 2023, 10:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.