ಜಗತ್ತಿನ ಬಹುತೇಕರು ಇಂದು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಾರೆ. 5 ಸಂಸ್ಥೆಗಳ ಅಧ್ಯಯನದ ಪ್ರಕಾರ ಬೇಳೆ ಕಾಳುಗಳ ನಿಯಮಿತ ಬಳಕೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದಂತೆ. ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದ್ದು, ಸಿರಿಧಾನ್ಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ದೂರ ಮಾಡಬಹುದಾಗಿದೆ.
ಫ್ರಾಂಟಿಯರ್ಸ್ನಲ್ಲಿ ಪ್ರಕಟವಾದ ಅಧ್ಯಯನದ ವರದಿಯಂತೆ, ಧಾನ್ಯ ಸೇವನೆಯು ಒಟ್ಟು ಕೊಲೆಸ್ಟ್ರಾಲ್ ಅನ್ನು ಶೇ. 8 ಪ್ರತಿಶತದಷ್ಟು ಕಡಿಮೆ ಮಾಡಿದೆ, ಪರೀಕ್ಷೆಗೆ ಒಳಗಾದ ಜನರಲ್ಲಿ ಅದನ್ನು ಅಧಿಕ ಮಟ್ಟದಿಂದ ಸಾಮಾನ್ಯ ಮಟ್ಟಕ್ಕೆ ತಗ್ಗಿಸುತ್ತದೆ. ರಕ್ತದಲ್ಲಿ ಕಡಿಮೆ ಮತ್ತು ಅತಿ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ (ಸಾಮಾನ್ಯವಾಗಿ 'ಕೆಟ್ಟ ಕೊಲೆಸ್ಟ್ರಾಲ್' ಎಂದು ಪರಿಗಣಿಸಲಾಗುತ್ತದೆ) ಮತ್ತು ಟ್ರಯಾಸಿಲ್ಲಿಸರಾಲ್ ಮಟ್ಟಗಳಲ್ಲಿ ಸುಮಾರು ಶೇ.10 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ. ಜೊತೆಗೆ ಧಾನ್ಯ ಸೇವನೆಯಿಂದ ಡಯಾಸ್ಟೊಲಿಕ್ ರಕ್ತದೊತ್ತಡ 5 ಪ್ರತಿಶತದಷ್ಟು ಕಡಿಮೆಯಾಗುತ್ತದೆ.
ಹತ್ತಾರು ಅಧ್ಯಯನ- ಡೇಟಾ ವಿಶ್ಲೇಷಣೆ
ಹೃದಯರಕ್ತನಾಳದ ಕಾಯಿಲೆಗಳ ಮೇಲೆ ಪರಿಣಾಮ ಬೀರುವ ಅಂಶಗಳ ಮೇಲೆ ಸಿರಿಧಾನ್ಯಗಳ ಪ್ರಭಾವ ಅರಿಯಲು ಹತ್ತಾರು ಅಧ್ಯಯನ ನಡೆಸಲಾಗಿದೆ. ಆದರೆ ಅಂತಹ ಡೇಟಾವನ್ನ ಸಂಪೂರ್ಣವಾಗಿ ಈದೀಗ ವಿಶ್ಲೇಷಿಸಲಾಗಿದೆ. ಈ ವೇಳೆ ಹೃದಯ ಸಬಂಧಿ ಕಾಯಿಲೆಯ ಅಪಾಯದ ಮೇಲೆ ಧನಾತ್ಮವಾಗಿ ಪ್ರಭಾವ ಉಂಟುಮಾಡುವ ಅಂಶಗಳು ತಿಳಿದುಬಂದಿದೆ ಎಂದು ಅಧ್ಯಯನದ ಭಾಗಿಯಾದ ಡಾ.ಎಸ್ ಅನಿತಾ ಹೇಳಿದ್ದಾರೆ.
ಅಧಿಕ ತೂಕ ಮತ್ತು ಬೊಜ್ಜು ಇರುವ ಜನರಲ್ಲಿ ಸಿರಿಧಾನ್ಯಗಳ ಸೇವನೆಯು ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಅನ್ನು ಶೇ.7 ರಷ್ಟು ಕಡಿಮೆ ಮಾಡಿದೆ ಎಂದು ಅಧ್ಯಯನವು ತೋರಿಸಿದೆ. ಅನಾರೋಗ್ಯಕರ ಆಹಾರಗಳು ಹೃದಯರಕ್ತನಾಳದ ಕಾಯಿಲೆ ಮತ್ತು ಮಧುಮೇಹದಂತಹ ರೋಗಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಈ ಅಧ್ಯಯನದ ಫಲಿತಾಂಶಗಳು ನಮ್ಮ ಇತ್ತೀಚಿನ ಅಧ್ಯಯನದ ಜೊತೆಗೆ ಸಿರಿಧಾನ್ಯಗಳ ಸೇವನೆಯು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಿದೆ ಮತ್ತು ಟೈಪ್ 2 ಅನ್ನು ನಿರ್ವಹಿಸಲು ಸಹಾಯ ಮಾಡಿದೆ.
ಭಾರತದಲ್ಲಿ ಸಿರಿಧಾನ್ಯಗಳನ್ನು ಹೇಗೆ ಸೂಕ್ತವಾಗಿ ಆಹಾರ ಕ್ರಮಕ್ಕೆ ತರಬೇಕು ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್) ನಿರ್ದೇಶಕಿ ಡಾ. ಹೇಮಲತಾ ಅಭಿಪ್ರಾಯಪಟ್ಟಿದ್ದಾರೆ.
ಸ್ಥೂಲಕಾಯತೆ ಮತ್ತು ಅಧಿಕ ತೂಕವು ಜಾಗತಿಕವಾಗಿ ಶ್ರೀಮಂತ ಮತ್ತು ಬಡ ರಾಷ್ಟ್ರಗಳಲ್ಲಿ ಹೆಚ್ಚುತ್ತಿದೆ, ಆದ್ದರಿಂದ ಆರೋಗ್ಯಕರ ಆಹಾರದ ಆಧಾರದ ಮೇಲೆ ಪರಿಹಾರಗಳ ಅಗತ್ಯವು ನಿರ್ಣಾಯಕವಾಗಿದೆ. ಸಿರಿಧಾನ್ಯದ ಆರೋಗ್ಯ ಪ್ರಯೋಜನಗಳ ಕುರಿತಾದ ಈ ಹೊಸ ಮಾಹಿತಿಯು ಧಾನ್ಯ ಬೆಳೆಯಲ್ಲಿ ಹೆಚ್ಚು ಹೂಡಿಕೆ ಮಾಡುವ ಅಗತ್ಯವನ್ನು ಬೆಂಬಲಿಸುತ್ತದೆ. ಕೃಷಿ ಉದ್ಯಮದ ಬೆಳವಣಿಗೆಗಳ ಮೂಲಕ ರೈತರಿಗೆ ಉತ್ತಮ ಪ್ರಭೇದಗಳ ಕೃಷಿಗೂ ಪೂರಕವಾಗಲಿದೆ ಎಂದು ಇಕ್ರಿಸ್ಯಾಟ್ ಮಹಾನಿರ್ದೇಶಕ ಡಾ. ಜಾಕ್ವೆಲಿನ್ ಹ್ಯೂಸ್ ಹೇಳಿದ್ದಾರೆ.