ETV Bharat / sukhibhava

ವರ್ಲ್ಡ್​ ರೋಸ್​ ಡೇ: ಕ್ಯಾನ್ಸರ್​ ವಿರುದ್ಧ ಹೋರಾಡಿದ ಮಿಲಿಂಡಾ ರೋಸ್​ಗೆ ಈ ದಿನ ಅರ್ಪಣೆ - ಗೆದ್ದವರ ಯಶೋ ಸಂಭ್ರಮವನ್ನು

ಕ್ಯಾನ್ಸರ್ ವಿರುದ್ಧ ಗೆದ್ದವರ ಯಶೋಗಾಥೆಯನ್ನು ಸಂಭ್ರಮಿಸುವುದು ವಿಶ್ವ ಗುಲಾಬಿ ದಿನದ ಮಹತ್ವದ ಅಂಶ.

Milinda Rose who fought cancer spread positivity in victims

author img

By ETV Bharat Karnataka Team

Published : Sep 22, 2023, 2:19 PM IST

ಬೆಂಗಳೂರು: ಸೆಪ್ಟೆಂಬರ್​ 22 ಅನ್ನು ವಿಶ್ವ ರೋಸ್​ ದಿನವನ್ನಾಗಿ ಆಚರಿಸಲಾಗುವುದು. ಈ ದಿನದ ಉದ್ದೇಶ ಕ್ಯಾನ್ಸರ್​ ವಿರುದ್ದ ಹೋರಾಡುತ್ತಿರುವವರಲ್ಲಿ ಜೀವನೋತ್ಸಹ ತುಂಬುವುದಾಗಿದೆ. ಕ್ಯಾನ್ಸರ್​ ವಿರುದ್ದ ಹೋರಾಡುವವರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಜೊತೆಗೆ ಅವರಲ್ಲಿ ಹೊಸ ಭರವಸೆ ಮತ್ತು ಸಂತಸ ಮೂಡಿಸುವುದಾಗಿದೆ. ಈ ಮೂಲಕ ಅವರು ತಮ್ಮ ಕ್ಯಾನ್ಸರ್​ ವಿರುದ್ಧ ಹೋರಾಟದಲ್ಲಿ ಸಕಾರಾತ್ಮಕತೆ ಕಂಡು ಜಯಗಳಿಸಲಿ ಎಂಬುದಾಗಿದೆ.

ಇತಿಹಾಸ: ವಿಶ್ವ ಗುಲಾಬಿ ದಿನದ ಹಿಂದೆ ಮೆಲಿಂಡಾ ರೋಸ್​ ಎಂಬ ಕ್ಯಾನ್ಸರ್​ ಸಂತ್ರಸ್ತೆಯ ಯಶೋಗಾಥೆ ಇದೆ. 12 ವರ್ಷದ ಕೆನಾಡಾದ ಕ್ಯಾನ್ಸರ್​ ಪೀಡಿತ ಈ ಮಗು ಧೈರ್ಯಶಾಲಿಯಾಗಿದ್ದಳು. 1994ರಲ್ಲಿ ಆಕೆಯಲ್ಲಿ ಅಪರೂಪದ ರಕ್ತದ ಕ್ಯಾನ್ಸರ್​ ಆದ ಅಸ್ಕಿನ್​​ ಟ್ಯೂಮರ್​ ಪತ್ತೆಯಾಯಿತು. ಈ ವೇಳೆ ಆಕೆಗೆ ಜೀವನ ಕಳೆಯಲು ಉಳಿದಿರುವುದು ಕೇವಲ ಎಣಿಕೆಯಷ್ಟೇ ದಿನಗಳು ಎಂದು ವೈದ್ಯರು ತಿಳಿಸಿದ್ದರು.

ಆದರೆ ಇದರಿಂದ ಧೃತಿಗೆಡದ ಮಿಲಿಂಡಾ ತನ್ನೆಲ್ಲಾ ನೋವು ಮರೆತು ಆರು ತಿಂಗಳ ಕಾಲ ಸಂತಸ ಮತ್ತು ಸಂತೃಪ್ತಿಯಿಂದ ಕಾಲ ಕಳೆದಳು. ಆಕೆಯ ಈ ಉತ್ಸಾಹ ಮತ್ತು ನಿರ್ಣಯ ಕೇವಲ ಕ್ಯಾನ್ಸರ್​ ಪೀಡಿತರಿಗೆ ಮಾತ್ರವಲ್ಲ, ಆಕೆಯ ಸುತ್ತಲೂ ಇದ್ದ ಎಲ್ಲರಿಗೂ ಪ್ರಭಾವ ಬೀರಿತು.

ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಆಕೆ ಸಕಾರಾತ್ಮಕವಾಗಿದ್ದು, ಆಕೆಯ ಸುತ್ತಲಿನ ಕ್ಯಾನ್ಸರ್​ ಸಂತ್ರಸ್ತರ ಮುಖದಲ್ಲೂ ನಗು ಮತ್ತು ಸಕಾರಾತ್ಮತೆ ತಂದಳು. ತನ್ನ ವಿರಾಮದ ಸಮಯದಲ್ಲಿ ಸ್ಪೂರ್ತಿದಾಯಕ ಪತ್ರ, ಇಮೇಲ್​ ಮತ್ತು ಕವಿತೆಗಳನ್ನು ಬರೆಯುವ ಮೂಲಕ ತನ್ನಂತೆ ಹೋರಾಡುತ್ತಿರುವವರಲ್ಲಿ ಹೊಸ ಆಶಾಕಿರಣ ಮತ್ತು ನಗುವನ್ನು ತರಿಸಿದಳು. ಮಿಲಿಂಡಾ ಬದುಕಿನ ಕಡೇಯ ಆರು ತಿಂಗಳನ್ನು ಬೇರೆಯವರಿಗೆ ಸಹಾಯ ಮಾಡಲು ಮುಡಿಪಾಗಿಟ್ಟು, ಆದರ್ಶ ಮೆರೆದಳು. ಇತರೆ ಕ್ಯಾನ್ಸರ್​ ಸಂತ್ರಸ್ತರಲ್ಲಿ ಭರವಸೆಯ ಕಿರಣವಾದಳು

ಯಾಕೆ ರೋಸ್​?: ಗುಲಾಬಿ ಎಂಬುದು ಪ್ರೀತಿ, ಕರುಣೆ ಮತ್ತು ಶಕ್ತಿ, ಕ್ಯಾನ್ಸರ್ ಪೀಡಿತರಲ್ಲಿ ಬೆಂಬಲ ಮತ್ತು ಸಹಾನುಭೂತಿಯನ್ನು ಸೂಚಿಸುತ್ತದೆ. ವರ್ಲ್ಡ್​ ರೋಸ್​ ದಿನದಂದು ಕ್ಯಾನ್ಸರ್​ ಸಂತ್ರಸ್ತರು ಗುಲಾಬಿ ಹೂವಿನ ಮೂಲಕ ಪ್ರತಿನಿಧಿಸುವ ಮೂಲಕ ತಮ್ಮ ಹೋರಾಟದ ಹಾದಿಗಳನ್ನು ಪ್ರತಿ ಬಿಂಬಿಸುತ್ತಾರೆ.

ವಿಶ್ವ ರೋಸ್​ ದಿನದಂದು ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವವರಲ್ಲಿ ಒಂದು ಭರವಸೆ ಮತ್ತು ಬೆಂಬಲವನ್ನು ಮೂಡಿಸುವ ಪ್ರಯತ್ನ ನಡೆಸಲಾಗುವುದು. ಈ ದಿನವನ್ನು ಪ್ರೀತಿ ಮತ್ತು ಕಾಳಜಿಯ ಜೊತೆಗೆ ಸಹಾನುಭೂತಿ ಮತ್ತು ಪ್ರೇರಣೆಯೊಂದಿಗೆ ಆಚರಿಸಲಾಗುತ್ತದೆ.

ಬೇಕಿದೆ ಸಂತ್ರಸ್ತರಿಗೆ ಮತ್ತಷ್ಟು ಬೆಂಬಲ: ಕ್ಯಾನ್ಸರ್​ ವಿರುದ್ಧದ ಹೋರಾಟದಲ್ಲಿ ಭಾವಾನಾತ್ಮಕ ಬೆಂಬಲ ಪ್ರಮುಖ. ಈ ಸವಾಲಿನ ಸಮಯದಲ್ಲಿ ನಮ್ಮ ಪ್ರೀತಿಪಾತ್ರರಿಗೆ ಭಾವನಾತ್ಮಕ ಬೆಂಬಲ ಅತ್ಯವಶ್ಯಕವಾಗಿದ್ದು, ಇದು ಅವರ ಹೋರಾಟಕ್ಕೆ ಸಹಾಯ ಮಾಡುತ್ತದೆ.

ಅನೇಕ ಬಾರಿ ಕ್ಯಾನ್ಸರ್​ ಸಂತ್ರಸ್ತರ ದೈಹಿಕ ಚಿಕಿತ್ಸೆ ವಿಚಾರದಲ್ಲಿ ಯೋಚಿಸುವ ನಾವು ಮಾನಸಿಕ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತೇವೆ. ಈ ವೇಳೆ ಅವರಿಗೆ ಸಾಕಾರಾತ್ಮಕವಾದ ಬೆಂಬಲ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಕೂಡ ಮುಖ್ಯ.

ಇದನ್ನೂ ಓದಿ: ಆತಂಕ ಮೂಡಿಸುತ್ತಿರುವ ಹೃದಯಾಘಾತ ಪ್ರಕರಣ; ಒಂದೇ ದಿನದಲ್ಲಿ ನಾಲ್ವರು ಯುವಕರ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.