ಲಖನೌ( ಉತ್ತರಪ್ರದೇಶ): ವಾಯು ಮಾಲಿನ್ಯವೂ ಶ್ವಾಸಕೋಶದ ಮೇಲೆ ಹೆಚ್ಚಿನ ಪರಿಣಾಮವನ್ನು ಹೊಂದಿದೆ ಎಂಬ ಸಾಮಾನ್ಯ ಜ್ಞಾನವಾಗಿದ್ದು, ಬಹುತೇಕರಿಗೆ ತಿಳಿದ ವಿಚಾರವಾಗಿದೆ. ಈ ವಾಯು ಮಾಲಿನ್ಯವೂ ಕೇವಲ ಶ್ವಾಸಕೋಶ ಮಾತ್ರವಲ್ಲದೇ ದೇಹದ ಇತರ ಅಂಗಗಳ ಮೇಲೆ ಪರಿಣಾಮ ಹೊಂದಿದ್ದು, ಅಡಿಯಿಂದ ಮುಡಿವರೆಗೆ ಇದು ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಾಯು ಮಾಲಿನ್ಯ ಮತ್ತು ಆರೋಗ್ಯದ ತಜ್ಞರು ಎಚ್ಚರಿಸಿದ್ದಾರೆ.
ಮತ್ತೊಂದು ಅಚ್ಚರಿ ಅಂಶ ಎಂದರೆ, ಈ ವಾಯು ಮಾಲಿನ್ಯ ಮಾನವ ದೇಹದ ಮೇಲೆ ಎಷ್ಟೆಲ್ಲ ಪರಿಣಾಮಗಳನ್ನು ಬೀರುತ್ತದೆ ಎಂಬುದು ಶೇ 80ರಷ್ಟು ವೈದ್ಯಕೀಯ ತಜ್ಞರಿಗೆ ಅರಿವಿಲ್ಲ ಎಂಬುದಾಗಿ ತಿಳಿದು ಬಂದಿದೆ. ಲಂಗ್ ಕೇರ್ ಫೌಂಡೆಷನ್ನ ಸಂಸ್ಥಾಪಕ ಡಾ ರಾಜೀವ್ ಖುರಾನ ಮಾತನಾಡಿ, ವಾಯು ಮಾಲಿನ್ಯದಿದ ಕೂದಲಿಂದ ಚರ್ಮದವರೆಗೆ ಅಲರ್ಜಿ ಕಾಡುತ್ತದೆ. ಶ್ವಾಸಕೋಶದ ರೋಗ, ಮಧುಮೇಹ ಮತ್ತು ಬ್ರೈನ್ ಸ್ಟ್ರೋಕ್ನಂತಹ ಜೀವನಶೈಲಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಎಲ್ಲರೂ ಈ ವಾಯು ಮಾಲಿನ್ಯದಿಂದ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ವಾಯು ಮಾಲಿನ್ಯವು ಇತರ ಅಂಗಾಂಗಗಳ ಮೇಲೆ ಬೀರುವ ನಕಾರಾತ್ಮಕ ಪರಿಣಾಮ ಬಗ್ಗೆ ಕೇವಲ ಸಾಮಾನ್ಯ ಜನರಿಗೆ ಮಾತ್ರವಲ್ಲ, ವೈದ್ಯರಿಗೂ ತಿಳಿದಿಲ್ಲ. ಅಂತಹ ಒಂದು ವಿಶ್ಲೇಷಣೆಯನ್ನು ನಮ್ಮ ಸಂಘಟನೆ ಬಿಡುಗಡೆ ಮಾಡಿದೆ. ಶೇ 80ರಷ್ಟು ವೈದ್ಯಕೀಯ ವೃತ್ತಿಪರರರಿಗೆ ವಾಯು ಮಾಲಿನ್ಯ ಮಾನವ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದಿಲ್ಲ ಎಂದಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ ಮಾಜಿ ಪ್ರಧಾನ ನಿರ್ದೇಶಕರಾದ ಮಹೇಶ್ವರಿ ಮಾತನಾಡಿ, ಪ್ರತಿ ಬಾರಿ ಉಸಿರಾಡಿದಾಗಲೂ ಅನೇಕ ರೋಗಕಾರಗಳು ನಮ್ಮ ದೇಹ ಸೇರುತ್ತದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಮಾಯು ಮಾಲಿನ್ಯವೇ ಆಗಿದೆ. ವ್ಯಕ್ತಿ ಆಹಾರ, ನೀರು ಇಲ್ಲದೇ ಬದುಕಬಹುದು ಆದರೆ, ಮೂರು ನಿಮಿಷಕ್ಕಿಂತ ಹೆಚ್ಚು ಸಮಯ ಉಸಿರಾಡದೇ ಬದುಕಲು ಸಾಧ್ಯವಿಲ್ಲ. ಈ ಹಿನ್ನೆಲೆ ತಜ್ಫರು ಈ ವಿಚಾರಗಳ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಬೇಕಿದೆ ಎಂದಿದ್ದಾರೆ.
ಧೂಮಪಾನ ವಿರೋಧಿ ತಂತ್ರಗಳ ಬಗ್ಗೆಯು ಇಲ್ಲ ಅರಿವು: ಧೂಮಪಾನ ವಿರೋಧ ತಂತ್ರ ಅಭಿವೃದ್ಧಿ ಬಗ್ಗೆ ಕೂಡ ಇಲ್ಲ ಜ್ಞಾನ: ತಂಬಾಕು ಚಟದ ವಿರುದ್ಧ ಹೋರಾಡುವ ಭಾರತದ ಪ್ರಯತ್ನವೂ ಗಮನಾರ್ಹ ಸವಾಲಿನಿಂದ ಕೂಡಿದೆ. ಕಾರಣ ದೇಶದಲ್ಲಿ ಶೇ 7ರಷ್ಟು ವೈದ್ಯರು ಮಾತ್ರ ಧೂಮಪಾನ ವಿರೋಧಿ ಅಭಿವೃದ್ಧಿ ತಂತ್ರದ ಬಗ್ಗೆ ಅರಿವು ಹೊಂದಿದ್ದಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಇಂಡಿಯನ್ ಮೆಡಿಕಲ್ ಅಕಾಡೆಮಿ ಫಾರ್ ಪ್ರಿವೆಟಿವ್ ಹೆಲ್ತ್ (ಐಎಂಎಪಿಎಚ್) ನಡೆಸಿದ ಅಧ್ಯಯನದಲ್ಲಿ ಕನಿಷ್ಠ 3 ವರ್ಷ ಅನುಭವ ಹೊಂದಿರುವ 200 ಭಾರತೀಯ ವೈದ್ಯರ ಸಮೀಕ್ಷೆ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಧೂಮಪಾನ ಬಿಡುವಂತೆ ಪ್ರೇರೆಪಿಸುವಲ್ಲಿ ವೈದ್ಯರ ಪಾತ್ರ ಹೆಚ್ಚಿದೆ. ಈ ನಿಟ್ಟಿನಲ್ಲಿ ಧೂಮಪಾನ ವಿರೋಧಿ ಅಭಿವೃದ್ಧಿ ತಂತ್ರಗಳನ್ನು ಅಳವಡಿಸಿಕೊಂಡು ಸಂತ್ರಸ್ತರಿಗೆ ಜಾಗೃತಿ ಮತ್ತು ಉತ್ತೇಜನ ನೀಡಬೇಕಿದೆ. ಈ ನಿಟ್ಟಿನಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಫಲಿತಾಂಶ ಕಂಡು ಬಂದಿದ್ದು, ತಾಂಬಾಕಿನ ಹಾನಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ವೈದ್ಯರಲ್ಲಿರುವ ಜಾಗೃತಿ ಮೂಡಿಸುವ ವಿಚಾರವನ್ನು ಮಾಡಬೇಕಿದೆ ಎಂದು ದೆಹಲಿ ಏಮ್ಸ್ನ ಮಾಜಿ ಪ್ರೊಫೆಸರ್, ಚಂದ್ರಕಾಂತ್ ಎಸ್ ಪಂಡವ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಪೀಕ್ ಅವರ್ ಟ್ರಾಫಿಕ್ನಿಂದ ಬಿಪಿ ಹೆಚ್ಚಳ; ವಾಯು ಮಾಲಿನ್ಯದಿಂದ ಹಲವು ಆರೋಗ್ಯ ಸಮಸ್ಯೆ