ಲಂಡನ್: ಮಹಿಳೆಯು ಗರ್ಭಾವಸ್ಥೆಯಲ್ಲಿದ್ದಾಗ ಪ್ಲಾಸ್ಟಿಕ್ಗೆ ಬಳಸುವ ಬಿಸ್ಪೆನಾಲ್ ರಸಾಯನಿಕವು ಭಾರಿ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಬಿಸ್ಪೆನಾಲ್ ಎ (BPA)ಶಾಲಾ ವಯಸ್ಸಿನ ಹುಡುಗಿಯರಲ್ಲಿ ಉಸಿರಾಟ ತೊಂದರೆ ಹಾಗೂ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು ಎಂದು ಅಧ್ಯಯನವೊಂದು ಎಚ್ಚರಿಸಿದೆ. ಬಿಸ್ಪೆನಾಲ್ ಎಂದರೆ, ಆಹಾರ ವಸ್ತುಗಳನ್ನು ಇಡಲು ಬಳಸುವ ಪ್ಲಾಸ್ಟಿಕ್, ಮರುಬಳಕೆ ಮಾಡಬಹುದಾದ ಬಾಟಲಿಗಳು ಮತ್ತು ಆಟಿಕೆಗಳಂತಹ ಅನೇಕ ಗ್ರಾಹಕ ಉತ್ಪನ್ನಗಳಲ್ಲಿ ಕಂಡುಬರುವ ಪ್ಲಾಸ್ಟಿಕ್‌ಗಳು ಮತ್ತು ರಾಳಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಪದಾರ್ಥವಾಗಿದೆ.
ಏನಿದು ಬಿಸ್ಪೆನಾಲ್?: ಅತ್ಯಂತ ಪ್ರಸಿದ್ಧವಾದ BPA, ಆಹಾರದ ಪಾತ್ರೆಗಳ ತಯಾರಿಕೆಯಲ್ಲಿ ಮತ್ತು ಆಂತರಿಕ ಲೇಪನಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಒಂದು ಅಂತಃಸ್ರಾವಕ ಅಂದರೆ ರಸಾಯನಿಕವಾಗಿದೆ. ಇನ್ನೂ ಆತಂಕಕಾರಿ ವಿಷಯ ಎಂದರೆ ತಾಯಿಯ ಹಾಲಿನಲ್ಲಿ ಬಿಸ್ಫೆನಾಲ್‌ಗಳು ಇರುತ್ತವೆ. ಎನ್ವಿರಾನ್‌ಮೆಂಟ್ ಇಂಟರ್‌ನ್ಯಾಷನಲ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು, ಗರ್ಭಾವಸ್ಥೆಯಲ್ಲಿ ತಾಯಿಯ ಮೂತ್ರದಲ್ಲಿ BPAಯ ಸಾಂದ್ರತೆ ಮತ್ತು ಶಾಲಾ ವಯಸ್ಸಿನಲ್ಲಿ ಅಸ್ತಮಾ ಮತ್ತು ಉಬ್ಬಸದ ಅಪಾಯಗಳ ಬಗ್ಗೆ ಎಚ್ಚರಿಸಿದೆ.
ಬಿಸ್ಫೆನಾಲ್ ಎ ಬಾಲ್ಯದಲ್ಲಿ ಉಸಿರಾಟದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಮಾತ್ರ ಸತ್ಯ ಎಂದು ಸ್ಪೇನ್‌ನ ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ (ISGlobal) ನ ಅಲಿಸಿಯಾ ಅಬೆಲನ್ ಹೇಳಿದ್ದಾರೆ. ಬಿಸ್ಫೆನಾಲ್‌ಗಳು ಜರಾಯು ತಡೆಗೋಡೆಗಳನ್ನು ದಾಟಬಹುದು ಮತ್ತು ಬೆಳವಣಿಗೆಯ ಹಂತದಲ್ಲಿ ಮಗುವಿನ ಉಸಿರಾಟ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಭೇದಿಸಿ ಮಗುವಿನ ದೇಹ ಪ್ರವೇಶಿಸಬಹುದು, ಇದರಿಂದ ಮಗುವಿನ ಆರೋಗ್ಯದ ಮೇಲೆ ಬಿಸ್ಪೆನಾಲ್ ಪರಿಣಾಮ ಬೀರಬಹುದು ಎಂದು ನಾವು ನಂಬುತ್ತೇವೆ ಎಂದು ಅಬೆಲನ್ ವಿವರಿಸಿದ್ದಾರೆ.
ಸ್ಪೇನ್‌ನ ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ನ ತಂಡವು 1999 ಮತ್ತು 2010 ರ ನಡುವೆ ಈ ಅಧ್ಯಯನ ನಡೆಸಿದೆ. ಸ್ಪೇನ್, ಫ್ರಾನ್ಸ್, ಗ್ರೀಸ್, ನಾರ್ವೆ, ನೆದರ್ಲ್ಯಾಂಡ್ಸ್ ಮತ್ತು ಯುಕೆಯ 3,000 ಕ್ಕೂ ಹೆಚ್ಚು ತಾಯಿ ಹಾಗೂ ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿ ದತ್ತಾಂಶವನ್ನು ಕಲೆ ಹಾಕಿದೆ. ಪ್ರತಿಶತ 90 ಮಾದರಿಗಳಲ್ಲಿ BPA ಯ ಹರಡುವಿಕೆ ಕಂಡು ಬಂದಿದೆ.
ಬಿಸ್ಫೆನಾಲ್‌ಗಳು ಅಂತಃಸ್ರಾವಕ ವಿಘಟಕಗಳಾಗಿದ್ದು, ಲೈಂಗಿಕ ಹಾರ್ಮೋನುಗಳಿಗೆ ಅಡ್ಡಿಯನ್ನುಂಟು ಮಾಡಬಹುದು. ನಮ್ಮ ಸಂಶೋಧನೆಗಳು ಸೂಚಿಸುವಂತೆ, ಇದು ಬಹಿರಂಗಗೊಂಡ ವ್ಯಕ್ತಿಯ ಲಿಂಗವನ್ನು ಅವಲಂಬಿಸಿ ಅವು ಬೀರುವ ಪರಿಣಾಮಗಳಲ್ಲಿ ವ್ಯತ್ಯಾಸಗಳನ್ನು ಉಂಟುಮಾಡಬಹುದು ಎಂದು ISGlobal ಸಂಶೋಧಕ ಮಾರಿಬೆಲ್ ಕಾಸಾಸ್ ಹೇಳಿದ್ದಾರೆ.