ಲಂಡನ್: ಮಾರ್ಕೆಟಿಂಗ್ನೊಂದಿಗೆ ಪುರುಷರಲ್ಲಿ ಸಸ್ಯಾಧಾರಿತ ಆಹಾರದ ಗ್ರಹಿಕೆ ಬಗ್ಗೆ ಬದಲಾವಣೆ ಮಾಡುವ ಪ್ರಸ್ತಾಪವನ್ನು ಸಂಶೋಧಕರು ಮುಂದಿಟ್ಟಿದ್ದು, ಈ ಮೂಲಕ ಅವರಲ್ಲಿ ಹೆಚ್ಚು ಸಸ್ಯ ಆಹಾರ ತಿನ್ನುವಂತೆ ನೆರವು ನೀಡಲಾಗಿದೆ.
ಹೆಚ್ಚಾಗಿ ಸಸ್ಯಾಧಾರಿತ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಮತ್ತು ಭೂ ಗ್ರಹ ಎರಡಕ್ಕೂ ಪ್ರಯೋಜನಕಾರಿ ಎಂದು ಅಧ್ಯಯನದ ವೇಳೆ ಕಂಡುಕೊಳ್ಳಲಾಗಿದೆ. ಆದರೆ, ಸಾಂಸ್ಕೃತಿಕ ಪ್ರಾಮುಖ್ಯತೆಗಳು ಗಮನಾರ್ಹವಾಗಿ ಮಾಂಸ ಸೇವನೆಯನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ವೆಗನ್ ಮತ್ತು ಸಸ್ಯಾಹಾರ ಸೇವನೆ ಪುರುಷರಲ್ಲಿ ಕಡಿಮೆ ಇದೆ.
ಆಹಾರದಲ್ಲಿನ ಲಿಂಗ ತಾರತಮ್ಯತೆ: ಜರ್ಮನಿಯ ವುರ್ಜುಬರ್ಗ್ ಮತ್ತು ಬ್ಯಬರ್ಗ್ ಯುನಿವರ್ಸಿಟಿಯ ತಂಡ ಹೇಳುವಂತೆ ಮಾಂಸಾಹಾರ ಸೇವನೆಯೂ ಪುರುಷರೊಂದಿಗೆ ಸಂಬಂಧ ಹೊಂದಿದೆ. ಹಾಗಿಯೇ ಲಿಂಗಾತಾರತಮ್ಯದ ಪಟ್ಟಿಯಲ್ಲಿ ಸಸ್ಯಾಧಾರಿತ ಆಹಾರ ಪದ್ಧತಿ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು, ಪುರುಷರಿಗಿಲ್ಲ ಎಂದಿದೆ. ಈ ಅಧ್ಯಯನವೂ ಸಸ್ಯಾಧಾರಿತ ಆಹಾರಗಳು ಮಹಿಳೆಯರಿಗೆ ಎಂದು ಪ್ರಭಾವಿಸಬಹುದಾದರೂ, ನೀವು ಆಹಾರದ ಆದ್ಯತೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅಧ್ಯಯನ ತೋರಿಸಿದೆ.
ಪುರುಷರು ಕೆಲ ಕಾರಣಗಳಿಂದ ವೆಗನ್ ಆಹಾರವನ್ನು ಕಡಿಮೆ ಸೇವನೆ ಮಾಡುತ್ತಾರೆ ಎಂದು ಅಧ್ಯಯನದ ಪ್ರಮುಖ ಲೇಖಕ ಅಲ್ಮ ಸ್ಕೋಲ್ಜ್ ತಿಳಿಸಿದ್ದಾರೆ. ಈ ಅಧ್ಯಯನವನ್ನು ಜರ್ನಲ್ ಪ್ರಂಟಿರಿಯರ್ಸ್ ಇನ್ ಕಮ್ಯೂನಿಕೇಷನ್ನಲ್ಲಿ ಪ್ರಕಟಿಸಲಾಗಿದೆ. ಆದಾಗ್ಯೂ, ವೆಗನ್ ಆಹಾರವನ್ನು ಪುರಷರ ಅನುಸರಿಸುವ ಮಾರ್ಗದ ಮೂಲಕವೇ ನಿರ್ಧರಿಸಲಾಗಿದೆ. ಇದನ್ನು ಸೇವಿಸಿದರೆ ಪುರುಷರು ಕಡಿಮೆ ಪ್ರತಿರೋಧ ಹೊಂದಿ, ಹೆಚ್ಚಾಗಿ ಸೇವನೆ ಮಾಡುವ ಸಾಧ್ಯತೆ ಇದೆ.
ಅಧ್ಯಯನಕ್ಕಾಗಿ ತಂಡವೂ ಆನ್ಲೈನ್ ಮೂಲಕ ಭಾಗಿದಾರರನ್ನು ನೇಮಕ ಮಾಡಿದೆ. ಅವರಿಗೆ ಅನೇಕ ಆಹಾರಗಳ ವಿವರಣೆಯೊಂದಿಗೆ ನೀಡಲಾಗಿದೆ. ಈ ವಿವರಣೆಯು ಸಾಂಪ್ರದಾಯಿಕ ಆಹಾರಗಳೊಂದಿಗೆ ಪದಗಳನ್ನು ಹೊಂದಿದ್ದು, ಅವುಗಳು ಪುರುಷರ ಆಹಾರದೊಂದಿಗೆ ಸಂಬಂಧ ಹೊಂದಿದೆ. ಸಂಶೋಧಕರು ಪುರುಷರು ಮತ್ತು ಮಹಿಳೆಯರಿಗೆ ಸೂಕ್ತವಾಗುವಂತೆ ಆಹಾರಗಳಿಗೆ ದರ ನಿಗದಿ ಮಾಡುವಂತೆ ಕೇಳಿದೆ.
ಸಂಶೋಧಕರು ಕೂಡ ಪುರುಷ ಭಾಗಿದಾರರನ್ನು ವಿಭಿನ್ನ ರೀತಿಯ ಪುಲ್ಲಿಂಗ ಸ್ವರೂಪದ ಗುರುತಿಸುವಿಕೆ ನಡೆಸಿದ್ದು, ಇದರ ಜೊತೆಗೆ ವೆಗನ್ ಆಹಾರದೆಡೆಗೆ ಭಾಗಿದಾರರ ವರ್ತನೆಯನ್ನು ಮಾಪನ ಮಾಡಿದೆ. ಅಲ್ಲದೇ, ಭಾಗಿದಾರರಿಗೆ ಮಾಂಸವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೀರಾ ಮತ್ತು ಯಾಕೆ ಸೇವಿಸುತ್ತೀರಿ ಎಂಬ ಬಗ್ಗೆ ವರದಿ ನೀಡುವಂತೆ ಕೇಳಿದೆ.
ಸಂಶೋಧನಾ ತಂಡವು, ಮಹಿಳೆಯರು ಸರಳವಾಗಿ ವೆಗನ್ ಆಹಾರ ಮಾದರಿ ಆಯ್ಕೆ ಮಾಡಿದ್ದು, ಪುರುಷರಿಗಿಂತ ಹೆಚ್ಚು ವೆಗನ್ ಆಹಾರಕ್ಕೆ ದರ ನೀಡಿದ್ದಾರೆ. ಇದರ ಹಿಂದಿನ ಸಾಮಾನ್ಯ ಕಾರಣ ಎಂದರೆ ಅದಿ ಆರೋಗ್ಯಕರ ಮತ್ತು ನೈತಿಕ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಜೊತೆಗೆ ಬಹುತೇಕ ಮಂದಿ ತಮ್ಮ ಮಾಂಸ ಆಹಾರ ಸೇವನೆಯನ್ನು ಕಡಿಮೆಗೊಳಿಸುವ ಕಾರಣವನ್ನು ಅಧ್ಯಯನದ ವೇಳೆ ನೀಡಿದ್ದಾರೆ.
ಗ್ರಹಿಕೆಯಲ್ಲಿ ಬದಲಾವಣೆ: ಮಾಂಸ- ಮೀನು ಹೊರತಾದ ವೆಗನ್ ಆಹಾರವೂ ಸಕಾರಾತ್ಮಕ ವರ್ತನೆಯನ್ನು ಹೊಂದಿರುವುದಾಗಿ ಭಾಗಿದಾರರು ನಂಬಿದ್ದಾರೆ. ಪುರುಷರು ವೆಗನ್ ಆಹಾರದ ಆಯ್ಕೆಯಲ್ಲಿ ವಿವರಣೆಗಳೊಂದಿಗೆ ಬದಲಾಗಲಿಲ್ಲ. ಆದರೆ ಅವರಲ್ಲಿ ಆಹಾರಗಳ ವಿವರಣೆಯು ಅವರ ಗ್ರಹಿಕೆಯನ್ನು ಬದಲಾಯಿಸಿದೆ. ಸಸ್ಯಾಹಾರವನ್ನು ಮಹಿಳೆಯರಿಗೆ ಸೀಮಿತ ಎಂಬುದನ್ನು ಕಡಿಮೆ ನಂಬಿದ್ದು, ಅವು ಇಬ್ಬರಿಗೂ ತಟಸ್ಥ ಎಂದು ಪರಿಗಣಿಸಿದ್ದಾರೆ.
ಸಾಂಪ್ರದಾಯಿಕ ಪುರುಷತ್ವದೊಂದಿಗೆ ಕಡಿಮೆ ಗುರುತಿಸಿದ ಪುರುಷರು ಭಕ್ಷ್ಯಗಳನ್ನು ರೇಟ್ ಮಾಡಿದಾಗ ಪುಲ್ಲಿಂಗ ಮಾರ್ಕೆಟಿಂಗ್‌ನಿಂದ ಹೆಚ್ಚು ಪ್ರಭಾವಿತರಾದರು. ಆದರೆ, ವಿಜ್ಞಾನಿಗಳು ಇದು ಅವರ ಪುರುಷ ಮಾದರಿಯ ಹೆಚ್ಚಿನದನ್ನು ಕಂಡುಕೊಂಡರು: ಹೆಚ್ಚು ವೈವಿಧ್ಯಮಯ ಮಾದರಿಯು ವಿಭಿನ್ನ ಫಲಿತಾಂಶಗಳನ್ನು ತೋರಿಸಬಹುದು.
ಪುರುಷರು ಪುಲ್ಲಿಂಗದೊಂದಿಗೆ ಕಡಿಮೆ ಗುರುತಿಸಿದ ಆಹಾರವನ್ನು ಪುರಷರಿಂದಲೇ ಮಾರ್ಕೆಟಿಂಗ್ ಮಾಡಿದಾಗ ಅವುಗಳ ದರ ನಿಗದಿ ಮಾಡುವಲ್ಲಿ ಹೆಚ್ಚು ಪ್ರಭಾವಿತರಾಗಿದ್ದಾರೆ. ಆದರೆ, ವಿಜ್ಞಾನಿಗಳು ಹೆಚ್ಚಿನ ಮಾದರಿಯನ್ನು ಪುರಷರಲ್ಲಿ ಪತ್ತೆ ಮಾಡಿದ್ದು, ವೈವಿಧ್ಯಮಯ ಮಾದರಿಗಳು, ವಿಭಿನ್ನ ಫಲಿತಾಂಶಗಳನ್ನು ತೋರಿಸುತ್ತದೆ. ಕಡಿಮೆ ಮಧ್ಯಂತರವು ಆಹಾರ ಪಟ್ಟಿ ಬದಲಾಯಿಸಲು ಸಾಕಷ್ಟು ನೆರವಾಗುತ್ತದೆ ಆಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ತಾಯಿಗೆ ಮಾತ್ರವಲ್ಲ.. ತಂದೆಗೂ ಕಾಡುತ್ತಾ ಪ್ರಸವಪೂರ್ವ ಖಿನ್ನತೆ?