ನವದೆಹಲಿ: ರಕ್ತದಲ್ಲಿ ವಿಟಮಿನ್ ಕೆ ಅಂಶವನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುವವರು ಶ್ವಾಸಕೋಶ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ. ಅಂತಹವು ಅಸ್ತಮಾ ಸೇರಿದಂತೆ ದೀರ್ಘ ಉಸಿರಾಟದ ಸಮಸ್ಯೆ (ಸಿಒಪಿಡಿ), ವೀಜಿಂಗ್ನಂತಹ ಸಮಸ್ಯೆಯಿಂದ ಬಳಲಬಹುದು ಎಂದು ಹೊಸ ಅಧ್ಯಯನವೊಂದ ವರದಿಯಲ್ಲಿ ತಿಳಿಸಲಾಗಿದೆ. ವಿಟಮಿನ್ ಕೆ ಹೆಚ್ಚಾಗಿ ಹಸಿರು ತರಕಾರಿ ಮತ್ತು ಧಾನ್ಯಗಳಲ್ಲಿ ದೊರಕುತ್ತದೆ.
ವಿಟಮಿನ್ ಕೆ ರಕ್ತವನ್ನು ಹೆಪ್ಪುಗಟ್ಟಿಸುವ ಗುಣ ಹೊಂದಿದ್ದು, ಯಾವುದಾದರೂ ಗಾಯವಾದಾಗ ಅಧಿಕ ರಕ್ತಸ್ರಾವ ಆಗುವುದನ್ನು ತಡೆಯುತ್ತದೆ. ಇದೀಗ ಈ ವಿಟಮಿನ್ ಕೆ ಶ್ವಾಸಕೋಶದ ಆರೋಗ್ಯದಲ್ಲಿ ಪಾತ್ರ ಹೊಂದಿರುವ ಕುರಿತು ಸಂಶೋಧಕರು ತಿಳಿಸಿದ್ದಾರೆ. ಇಆರ್ಜೆ ಒಪನ್ ರಿಸರ್ಚ್ ಜರ್ನಲ್ನಲ್ಲಿ ಈ ಕುರಿತು ವರದಿಯೊಂದನ್ನು ಪ್ರಕಟಿಸಲಾಗಿದೆ. ವಿಟಮಿನ್ ಕೆ ಸೇವನೆಯಲ್ಲಿ ಬದಲಾವಣೆ ಮಾಡುವ ಕುರಿತು ಸಂಶೋಧನೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಆದರೆ, ಕೆಲವು ಜನರು ಇದರ ಪೂರಕ ಅಂಶಗಳ ಸೇವನೆ ಮಾಡುವುದರಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಅಧ್ಯಯನಕಾರರು ವರದಿಯಲ್ಲಿ ತಿಳಿಸಿದ್ದಾರೆ.
ವಿಟಮಿನ್ ಕೆ ಮತ್ತು ದೊಡ್ಡ ಪ್ರಮಾಣದ ಜನಸಂಖ್ಯೆಯಲ್ಲಿ ನಡೆಸಿದ ಮೊದಲ ಅಧ್ಯಯನ ಇದಾಗಿದೆ. ನಮ್ಮ ಫಲಿತಾಂಶವೂ ವಿಟಮಿನ್ ಕೆಯು ನಮ್ಮ ಶ್ವಾಸಕೋಶ ಆರೋಗ್ಯದ ಮೇಲೆ ಅಲ್ಪ ಪ್ರಮಾಣದ ಪಾತ್ರವನ್ನು ಹೊಂದಿದೆ ಎಂದು ತೋರಿಸಿದೆ ಎಂದು ಸಂಶೋಧಕ ಡಾ ತೊರ್ಕಿಲ್ ಜೆಸ್ಪೆರ್ಸೆನ್ ತಿಳಿಸಿದ್ದಾರೆ.
ಈ ಅಧ್ಯಯನವನ್ನು ಕೂಪನ್ ಹೆಗನ್ ಯುನಿವರ್ಸಿಟಿ ಆಸ್ಪತ್ರೆಯ ಡ್ಯಾನಿಶ್ ಸಂಶೋಧಕರ ತಂಡ ಮತ್ತು ಕೂಪನ್ ಹೆಗನ್ ಯುನಿವರ್ಸಿಟಿ ನಡೆಸಿದೆ. ಈ ಅಧ್ಯಯನದಲ್ಲಿ ಕೂಪನ್ ಹೇಗನ್ನಲ್ಲಿ ವಾಸಿಸುವ 24ರಿಂದ 77 ವರ್ಷದ 4,092 ಜನರು ಭಾಗಿಯಾಗಿದ್ದರು. ಅಧ್ಯಯನದಲ್ಲಿ ಭಾಗಿಯಾದ ಅಭ್ಯರ್ಥಿಗಳ ಶ್ವಾಸಕೋಶ ಕಾರ್ಯಾಚರಣೆಯಾದ ಸ್ಪಿರೊಮೆಟ್ರಿ ಪರೀಕ್ಷೆ ನಡೆಸಲಾಗಿದೆ. ಜೊತೆಗೆ ರಕ್ತದ ಮಾದರಿಗಳನ್ನು ಪಡೆಯಲಾಗಿದ್ದು, ಆರೋಗ್ಯ ಮತ್ತು ಜೀವನಶೈಲಿಯ ಕುರಿತು ಪ್ರಶ್ನೋತ್ತರಗಳನ್ನು ಕೇಳಿ ಅವರಿಂದ ಉತ್ತರವನ್ನು ಪಡೆದು, ವಿಟಮಿನ್ ಕೆ ಬಗ್ಗೆ ಮಾಹಿತಿ ದಾಖಲಿಸಲಾಗಿದೆ.
ರಕ್ತದ ಮಾದರಿಯಲ್ಲಿ ಕಡಿಮೆ ವಿಟಮಿನ್ ಕೆ ಹೊಂದಿರುವವರನ್ನು ಗುರುತಿಸಲಾಗಿದೆ. ಸಂಶೋಧನೆಯಲ್ಲಿ ಕಡಿಮೆ ವಿಟಮಿನ್ ಕೆ ಹೊಂದಿರುವವರು ಮತ್ತು ಎಫ್ಇವಿ1 ಮತ್ತು ಕಡಿಮೆ ಎಫ್ವಿಸಿ ಹೊಂದಿರುವವರು ಸರಾಸರಿ ಪ್ರಮಾಣದಲ್ಲಿ ಇದ್ದಾರೆ. ಇನ್ನು ಕಡಿಮೆ ವಿಟಮಿನ್ ಕೆ ಹೊಂದಿರುವವರಲ್ಲಿ ಸಿಒಪೊಡಿ, ಅಸ್ತಮಾ ಅಥವಾ ವಿಜಿಂಗ್ ಸಾಮಾನ್ಯವಾಗಿ ಕಂಡು ಬಂದಿದೆ.
ನಮ್ಮ ಅಧ್ಯಯನದ ಫಲಿತಾಂಶವೂ ಪ್ರಸ್ತತ ವಿಟಮಿನ್ ಕೆ ಸೇವನೆ ಶಿಫಾರಸನು ಬದಲಾಯಿಸುವುದಿಲ್ಲ. ಆದರೆ, ಇದು ಮತ್ತೆ ಕೆಲವು ಜನರ ಮೇಲೆ ಅಧ್ಯಯನವನ್ನು ನಡೆಸಬೇಕಿದೆ. ಈ ಮೂಲಕ ಶ್ವಾಸಕೋಶ ಸಮಸ್ಯೆ ಹೊಂದಿರುವವರಲ್ಲಿ ವಿಟಮಿನ್ ಕೆ ಪೂರಕ ಪ್ರಯೋಜನ ನೀಡಲಿದೆಯಾ ಗಮನಿಸಬೇಕಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಇದನ್ನೂ ಓದಿ: Vitamin D: ವಿಟಮಿನ್ ಡಿ ಕೊರತೆಯಿಂದ ಮಕ್ಕಳಲ್ಲಿ ಹಲವು ಸಮಸ್ಯೆ