ನವದೆಹಲಿ: ಮದುವೆಗೆ ಮುಂಚೆ ನಡೆಸುವ ಜೋಡಿಗಳ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಇದೀಗ ಸಾಮಾನ್ಯವಾಗಿದ್ದು, ಕಡ್ಡಾಯ ಎಂಬಂತೆ ಆಗಿದೆ. ಮದುವೆಯ ದಿನ ಜೋಡಿಗಳು ಅಂದುಕೊಂಡ ರೀತಿಯಲ್ಲಿ ಫೋಟೋಗಳು ಬರುವುದಿಲ್ಲ. ಜೊತೆಗೆ ಜೋಡಿಗಳು ವಿಶೇಷ ಪರಿಕಲ್ಪನೆಯೊಂದಿಗೆ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಮದುವೆ ದಿನ ಈಡೇರುವುದಿಲ್ಲ. ಇದೇ ಕಾರಣಕ್ಕೆ ಮದುವೆಗೆ ಮುಂಚೆ ಅಂದುಕೊಂಡ ರೀತಿಯಲ್ಲಿ ಪರಿಕಲ್ಪನೆಯಲ್ಲಿ ಫೋಟೋಶೂಟ್ಗಳು ಮಾಡಿಸುವ ಟ್ರೆಂಡ್ ಇದೀಗ ಬಂದಿದೆ. ಇದೇ ಕಾರಣಕ್ಕೆ ವಿಭಿನ್ನವಾದ ಥೀಮ್, ಸ್ಥಳ ಅನ್ವೇಷಣೆ ಕೂಡ ನಡೆಯುತ್ತದೆ.
ಪ್ರೀ ವೆಡ್ಡಿಂಗ್ನಲ್ಲಿ ಪ್ರಮುಖವಾಗುವ ವಿಷಯಗಳಲ್ಲಿ ಮೊದಲನೆಯದು ಸ್ಥಳಗಳು. ಈ ಸ್ಥಳಗಳಿಗೆ ಹಲವು ಕಾಲ ಹುಡುಕಾಟ ನಡೆಯುತ್ತದೆ. ಮನೋಹರ ಸ್ಥಳಗಳ ಎದುರು ತೆಗೆದ ಫೋಟೋಗಳು ಅದ್ಭುತವಾಗಿ ಬರುತ್ತದೆ. ಇದೇ ಕಾರಣಕ್ಕೆ ಇಂದಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಹೊರತಾಗಿ ನವ ಜೋಡಿ, ಫೋಟೋಗ್ರಾಫರ್ ಸಿಬ್ಬಂದಿಗಳನ್ನು ಕಾಣಬಹುದಾಗಿದೆ. ಸಾಮಾನ್ಯ ಫೋಟೋಗಳಿಗಿಂತ ಅದ್ಭುತವಾಗಿ ಫೋಟೋ ಶೂಟ್ ನಡೆಸಬೇಕು ಎಂದರೆ ಭಾರತದಲ್ಲಿ ಅದ್ಭುತ ಸ್ಥಳಗಳಿವೆ. ಅದರ ಮುಂದೆ ಪ್ರಣಯ ಹಕ್ಕಿಗಳಂತೆ ಫೋಟೋ ನೀಡುವುದು ಅನೇಕರ ಇಚ್ಛೆ. ಅದರಂತೆ ಫ್ರಿ ವೆಡ್ಡಿಂಗ್ಗೆ ಖ್ಯಾತಿಗೊಂಡಿರುವ ಸ್ಥಳಗಳು ಇವಾಗಿವೆ.
ಜೈಪುರದ ಪನ್ನಾ ಮೀನಾ ಕಾ ಕುಂಡ್: ಜೈಪುರದ ಐತಿಹಾಸಿಕ ಅರಮನೆಗಳು ಫೋಟೋಶೂಟ್ಗೆ ಅತ್ಯುತ್ತಮ ಸ್ಥಳಗಳಾಗಿವೆ. ಇಲ್ಲಿನ ಐತಿಹಾಸಿಕ ಮೆಟ್ಟಿಲ ಬಾವಿ ಈ ಪನ್ನಾ ಮೀನಾ ಕಾ ಕುಂಡ್ ಆಗಿದೆ. ಫೋಟೋ ಹಿಂಬಂದಿಯ ಬ್ಯಾಗ್ಗ್ರೌಂಡ್ಗೆ ಬೇಕಾಗುವ ಬಣ್ಣಗಳನ್ನು ಈ ಸ್ಥಳಗಳಲ್ಲಿ ಪಡೆಯಬಹುದಾಗಿದೆ.
ತಾಜ್ ಮಹಲ್, ಆಗ್ರಾ: ಪ್ರೀತಿಯ ಸಂಕೇತವಾಗಿರುವ ತಾಜ್ ಮಹಲ್ ಮುಂದೆ ಫೋಟೋಗೆ ಫೋಸ್ ನೀಡಬೇಕು ಎಂಬುದು ಬಹುತೇಕ ಜೋಡಿಗಳ ಕನಸಾಗಿರುತ್ತದೆ. ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾಗಿರುವ ಈ ಪ್ರೀತಿಯ ತಾಣ ಸಾಂಪ್ರದಾಯಿಕ ಜೊತೆಗೆ ರೋಮ್ಯಾಂಟಿಕ್ ಅನುಭವ ನೀಡುತ್ತದೆ.
ಕುಮಾರಕೊಮ್- ಕೇರಳ: ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದ ಕುಮಾರಕೊಮ್ ಪ್ರಕೃತಿ ಅನುಭವ ನೀಡುತ್ತದೆ. ಕುಮಾರಕೊಮ್ ಹಿನ್ನೀರಿನ ಅಲೆಗಳ ನಡುವೆ, ಬೋಟ್ ಹೌಸ್ಗಳು ಅದ್ಬುತ ದೃಶ್ಯವನ್ನು ನೀಡುತ್ತದೆ.
ವಿಶಾಖ ಪಟ್ಟಣಂ- ಆಂಧ್ರಪ್ರದೇಶ: ಬೀಚ್ನಲ್ಲಿ ಫ್ರಿ ವೆಡ್ಡಿಂಗ್ ಯೋಜನೆ ರೂಪಿಸಿದ್ದರೆ, ಇದು ನಿಮಗೆ ಅತ್ಯುತ್ತಮ ತಾಣ. ಅಲೆಗಳ ಏರಿಳಿತಗಳ ಸೂರ್ಯಾಸ್ತ ಅಥವಾ ಸೂರ್ಯೋದಯದ ಫೋಟೋಗಳು ಸಖತ್ ಅನುಭವ ನೀಡುವುದು ಸುಳ್ಳಲ್ಲ.
ರಿಷಿಕೇಶ್- ಉತ್ತರಾಖಂಡ: ಅಧ್ಯಾತ್ಮಿಕತೆ ಜೊತೆಗೆ ಮನೋಹರ ಸ್ಥಳಗಳ ತಾಣ ಇದಾಗಿದೆ. ಇಲ್ಲಿನ ಕೆಲವು ಸ್ಥಳಗಳು ಅದ್ಬುತ ಅನುಭವ ನೀಡುವ ಜೊತೆಗೆ ಫೋಟೋಗೆ ಹೇಳಿ ಮಾಡಿಸಿದ ತಾಣವಾಗಿದೆ. ಗಂಗಾ ನದಿಯ ತೀರದಲ್ಲಿ ಇಲ್ಲಿ ನಡೆಸುವ ಫೋಟೋಶೂಟ್ ಮರೆಯಲಾಗದ ಅನುಭವ ನೀಡುತ್ತದೆ.
ಗುಲ್ಮರ್ಗ್- ಜಮ್ಮು ಮತ್ತು ಕಾಶ್ಮೀರ: ಚಳಿಗಾಲದಲ್ಲಿ ಪ್ರೀ ವೆಡ್ಡಿಂಗ್ಗೆ ಹೇಳಿ ಮಾಡಿದ ತಾಣ ಇದಾಗಿದೆ. ಹಿಮಾಲಯ ಶಿಖರಗಳ ಮುಂದೆ, ಕಾಶ್ಮೀರ ಕಣಿವೆಗಳ ಮಧ್ಯೆ ಹಿಮ ಮಳೆಯಲ್ಲಿ ಮಾಡುಸುವ ಫೋಟೋಗಳು ಯಾವುದೇ ಸಿನಿಮಾ ಶೂಟಿಂಗ್ಗೂ ಕಡಿಮೆ ಇರದಂತೆ ಬರುವುದರಲ್ಲಿ ಸಂದೇಹವಿಲ್ಲ.
ಇದನ್ನೂ ಓದಿ: ಕಣ್ಮನ ತಣಿಸುವ ಭಾರತದ ಪುರಾತನ ನಾಟ್ಯ ಪ್ರಕಾರಗಳಿವು..