ETV Bharat / sukhibhava

ಇವರಲ್ಲಿ ದೀರ್ಘ ಕೋವಿಡ್​ ಅಪಾಯ ಮೂರು ಪಟ್ಟು ಹೆಚ್ಚು ಎನ್ನುತ್ತದೆ ಅಧ್ಯಯನ

ದೀರ್ಘ ಕೋವಿಡ್ ಲಕ್ಷಣವೂ ಆಯಾಸ ಅಥವಾ ಬಳಲಿಕೆ, ಉಸಿರಾಟದ ಸಮಸ್ಯೆ, ನಿದ್ದೆ ಸಮಸ್ಯೆ ಅಥವಾ ಬ್ರೈನ್​ ಫಾಗ್​​ ನಂತಹ ಏಕಾಗ್ರತೆ ಕೊರತೆಯಿಂದಾಗಿ ಆಲೋಚನೆ ಸಮಸ್ಯೆಯನ್ನು ಹೊಂದಿರುತ್ತಾರೆ.

Long Covid Risk high in Poor sleep people

author img

By ETV Bharat Karnataka Team

Published : Oct 5, 2023, 4:31 PM IST

ಟೊರೊಂಟೊ: ಈಗಾಗಲೇ ವೈದ್ಯಕೀಯ ಪರಿಸ್ಥಿತಿ ಹೊಂದಿರುವವರಲ್ಲಿ ಮತ್ತು ರಾತ್ರಿ ಸಮಯ ಆರು ಗಂಟೆಗಿಂತ ಕಡಿಮೆ ನಿದ್ದೆ ಮಾಡುವವರಲ್ಲಿ ದೀರ್ಘ ಕೋವಿಡ್​ ಅಪಾಯ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಅಧ್ಯಯನ ತಿಳಿಸಿದೆ.

ಮೊದಲೇ ಆರೋಗ್ಯ ಪರಿಸ್ಥಿತಿಗಳಿರುವ ಜನರಲ್ಲಿ ರಾತ್ರಿಯ ನಿದ್ರೆಯ ಅವಧಿಯನ್ನು ಹೊಂದಿರುವ ಜನರಲ್ಲಿ ದೀರ್ಘ ಕೋವಿಡ್ ಅಪಾಯವು ಸರಾಸರಿ1.8 ಪಟ್ಟು ಹೆಚ್ಚಾಗಿದೆ. ಈ ವಿಶ್ಲೇಷಣೆಯನ್ನು ಲಿಂಗ, ವಯಸ್ಸು, ಬಾಡಿ ಮಾಸ್​ ಇಂಡೆಕ್ಸ್​(ಬಿಎಂಐ), ಲಸಿಕೆ ಸ್ಥಿತಿ ಮತ್ತು ಜನಾಂಗೀಯತೆಯನ್ನು ಒಳಗೊಂಡಿದೆ.

ಈಗಾಗಲೇ ಹಲವು ಆರೋಗ್ಯ ಸಮಸ್ಯೆ ಹೊಂದಿದ್ದು, ರಾತ್ರಿ ಸಮಯದಲ್ಲಿ ಕಡಿಮೆ ನಿದ್ದೆ ಅವಧಿ ಅಭ್ಯಾಸ ಹೊಂದಿರುವವಲ್ಲಿ ದೀರ್ಘ ಕೋವಿಡ್​​​ ಅಪಾಯ ಹೆಚ್ಚಿದೆ ಎಂದು ಟೊರೊಂಟೊ ವಿಶ್ವವಿದ್ಯಾಲಯದ ಅನೆಸ್ತೆಸಿಲೊಜಿ ಮತ್ತು ಪೈನ್​ ಮೆಡಿಸಿನ್​ ಪ್ರೋಫೆಸರ್​ ಫ್ರಾನ್ಸ್​ ಚುಂಗ್​ ತಿಳಿಸಿದ್ದಾರೆ.

ರೋಗನಿರೋಧಕ ಶಕ್ತಿಯಲ್ಲಿ ಅದರ ಸಾಬೀತಾದ ಸಹಾಯಕ ಪಾತ್ರವನ್ನು ಆಧರಿಸಿ, ನಿದ್ರೆಯ ಅಭ್ಯಾಸದ ಅವಧಿಯು ದೀರ್ಘ ಕೋವಿಡ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಬದಲಾಯಿಸಬಹುದು.

ದೀರ್ಘ ಕೋವಿಡ್​ ನಿಶ್ಚಿತವಾಗಿ ಕೋವಿಡ್​ 19 ಸೋಂಕಿನ ಇತಿಹಾಸವನ್ನು ಹೊಂದಿರುತ್ತದೆ. ಈ ಸೋಂಕಿತರಲ್ಲಿ ಕನಿಷ್ಟ ಮೂರು ತಿಂಗಳಲ್ಲಿ ಒಮ್ಮೆ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನಿಸಿದೆ.

ದೀರ್ಘ ಕೋವಿಡ್ ಲಕ್ಷಣವೂ ಆಯಾಸ ಅಥವಾ ಬಳಲಿಕೆ, ಉಸಿರಾಟದ ಸಮಸ್ಯೆ, ನಿದ್ದೆ ಸಮಸ್ಯೆ ಅಥವಾ ಬ್ರೈನ್​ ಫಾಗ್​ ನಂತಹ ಏಕಾಗ್ರತೆ ಕೊರತೆಯಿಂದಾಗಿ ಆಲೋಚನೆ ಸಮಸ್ಯೆಯನ್ನು ಹೊಂದಿರುತ್ತಾರೆ.

ಈ ಅಧ್ಯಯನವನ್ನು ಜರ್ನಲ್​​ ಆಫ್​ ಕ್ಲಿನಿಕಲ್​ ಸ್ಲೀಪ್​ ಮೆಡಿಸಿನ್​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನಕ್ಕಾಗಿ 16 ದೇಶಗಳ 13,416 ವಯಸ್ಕರನ್ನು ಆನ್​ಲೈನ್​ ಸಮೀಕ್ಷೆಗೆ ಒಳಪಡಿಸಲಾಗಿದೆ. ಭಾಗಿದಾರರಲ್ಲಿ ಕೋವಿಡ್​ ಪ್ರಕರಣವನ್ನು ವರ್ಗಿಕರಿಸಲಾಗಿದೆ. ಅವರು ಸೂಚಿಸಿದಾಗ ಪರೀಕ್ಷೆ ನಡೆಸಿದಾಗ ಕೋವಿಡ್​ ಪಾಸಿಟಿವ್​ ಬಂದಿದೆ. ಭಾಗಿದಾರರು ರಾತ್ರಿ ಸರಾಸರಿ ಎಷ್ಟು ಸಮಯ ನಿದ್ರೆಗೆ ಜಾರುತ್ತಾರೆ ಎಂಬ ವರದಿ ಪಡೆಯಲಾಗಿದೆ.

ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ 2,508 ಮಂದಿಗೆ ಕೋವಿಡ್​ ಸೋಂಕು ವರದಿಯಾಗಿದ್ದು, ಶೇ 20 ಮಂದಿ ಕಡೆ ಪಕ್ಷ ಒಮ್ಮೆಯಾದರೂ ದೀರ್ಘ ಕೋವಿಡ್​ ಲಕ್ಷಣವನ್ನು ಹೊಂದಿದ್ದಾರೆ.

1,505 ಭಾಗಿದಾರರರಲ್ಲಿ ದೀರ್ಘ ಕೋವಿಡ್​ ಜೊತೆಗೆ ನಿದ್ರೆ ಮತ್ತು ಪೂರ್ವ ಅಸ್ತಿತ್ವದ ಸ್ಥಿತಿಯನ್ನು ಹೊಂದಿದ್ದಾರೆ. 945 ಮಂದಿ ಪೂರ್ವ ಅಸ್ತಿತ್ವದ ಸ್ಥಿತಿಯನ್ನು ಹೊಂದಿದ್ದು, 560 ಮಂದಿಯಲ್ಲಿ ಯಾವುದೇ ಲಕ್ಷಣಗಳಿಲ್ಲ. 121 ಮಂದಿ ಕಡಿಮೆ ನಿದ್ದೆ ಹೊಂದಿದ್ದು, 1,257 ಮಂದಿ ಸರಾಸರಿ ನಿದ್ದೆ ಅವಧಿ ಹೊಂದಿದ್ದಾರೆ, 127 ಮಂದಿ ದೀರ್ಘ ನಿದ್ದೆ ಅವಧಿ ಹೊಂದಿದ್ದಾರೆ.

ಚುಂಗ್​ ಪ್ರಕಾರ, ನಿದ್ದೆಯ ಅವಧಿಯ ಮಧ್ಯಸ್ಥಿಕೆಯ ಗುರಿಯೂ ದೀರ್ಘ ಕೋವಿಡ್​ ಅಪಾಯವನ್ನು ಕಡಿಮೆ ಮಾಡಿದೆ. ಅಕಾಲಿಕ ಎಚ್ಚರಗೊಳ್ಳುವ ನಿದ್ದೆಯ ನಡುವಳಿಕೆಗಳನ್ನು ಸರಿಪಡಿಸಿ ಸರಾಸರಿ ಅವಧಿ ನಿದ್ದೆ ಮಾಡಿದಾಗ ದೀರ್ಘ ಕೋವಿಡ್​ ರೋಗಿಗಳಲ್ಲಿನ ಅಪಾಯ ಕಡಿಮೆ ಮಾಡಿದೆ. ಇದೇ ವೇಳೆ ತಂಡವೂ ದೀರ್ಘ ಕೋವಿಡ್​ನ ರೋಗವನ್ನು ಅರ್ಥೈಸಿಕೊಳ್ಳಲು ಮತ್ತಷ್ಟು ಸಂಶೋಧನೆ ಅವಶ್ಯಕತೆ ಇದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೋವಿಡ್ ಅಥವಾ ಲಸಿಕೆ ಮೈಗ್ರೇನ್‌ ಹೆಚ್ಚಿಸಿತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.