ನವದೆಹಲಿ: ಕೇರಳದಲ್ಲಿ ಓಮ್ರಿಕಾನ್ನ ಉಪ ತಳಿಯಾದ ಜೆಎನ್ 1 ಪತ್ತೆಯಾಗಿದೆ. ಇದು ಹೊಸ ಕೋವಿಡ್ ಪ್ರಕರಣಕ್ಕೆ ಕಾರಣವಾಗಲಿದ್ಯಾ ಎಂಬ ಆತಂಕ ಮೂಡಿದೆ. ಆದರೆ, ಈ ಕುರಿತು ಮಾತನಾಡಿರುವ ತಜ್ಞರು ಯಾವುದೇ ಭಯ ಬೇಡ. ಆದರೆ, ಈ ತಳಿ ಬಗ್ಗೆ ನಿರಂತರ ಗಮನ ಇರಲಿ ಎಂದಿದ್ದಾರೆ.
-
COVID-19 | A case of JN.1, a subvariant of COVID19, found in Kerala as part of the ongoing routine surveillance by INSACOG. Mock Drill being held in all health facilities in States as part of the regular exercise of Union Health Ministry to assess their public health and hospital… pic.twitter.com/11rcmsox4M
— ANI (@ANI) December 16, 2023 " class="align-text-top noRightClick twitterSection" data="
">COVID-19 | A case of JN.1, a subvariant of COVID19, found in Kerala as part of the ongoing routine surveillance by INSACOG. Mock Drill being held in all health facilities in States as part of the regular exercise of Union Health Ministry to assess their public health and hospital… pic.twitter.com/11rcmsox4M
— ANI (@ANI) December 16, 2023COVID-19 | A case of JN.1, a subvariant of COVID19, found in Kerala as part of the ongoing routine surveillance by INSACOG. Mock Drill being held in all health facilities in States as part of the regular exercise of Union Health Ministry to assess their public health and hospital… pic.twitter.com/11rcmsox4M
— ANI (@ANI) December 16, 2023
ಭಾರತೀಯ ಸಾರ್ಸ್- ಕೋವ್-2 ಜಿನೋಮಿಕ್ ಕಾನ್ಸೊರ್ಟಿಯಂ (ಐಎನ್ಎಸ್ಸಿಒಜಿ)ಯ ಇತ್ತೀಚಿನ ಹೊಸ ದತ್ತಾಂಶದಲ್ಲಿ ಕೇರಳದ ಮಹಿಳೆಯೊಬ್ಬರಲ್ಲಿ ಕೋವಿಡ್-19 ಉಪತಳಿಯಾದ ಜೆಎನ್.1 ತಳಿ ಇರುವಿಕೆ ದೃಢಪಟ್ಟಿದೆ. ನವೆಂಬರ್ 18 ರಂದು ತಿರುವನಂತಪುರಂನ 79 ವರ್ಷದ ಮಹಿಳೆಯ ಗಂಟಲು ಮಾದರಿಯನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಹೊಸ ಉಪತಳಿಯ ಸೋಂಕಿರುವುದು ಪತ್ತೆಯಾಗಿದೆ. ಅವರಲ್ಲಿ influenza-like illnesses (ILI- ಇನ್ಫ್ಲುಯೆನ್ಝಾ ತರಹದ ಕಾಯಿಲೆ) ಸೌಮ್ಯ ಲಕ್ಷಣ ಕಂಡುಬಂದಿದೆ. ಸದ್ಯ ಕೋವಿಡ್-19 ನಿಂದ ಅವರು ಚೇತರಿಸಿಕೊಂಡಿದ್ದಾರೆ. ರೋಗದ ಲಕ್ಷಣಗಳು ಸೌಮ್ಯವಾಗಿದ್ದು ರೋಗಿಗಳು ಯಾವುದೇ ಚಿಕಿತ್ಸೆ ಇಲ್ಲದೆ ತಮ್ಮ ಮನೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕ ಡಾ ರಾಜೀವ್ ಬಹ್ಲ್ ಹೇಳಿದ್ದಾರೆ.
ಜೆಎನ್1 ಎಂಬುದು ಬಿಎ.2.68 ಓಮ್ರಿಕಾನ್ ತಳಿಯ ವಂಶಾವಳಿಯಾಗಿದ್ದು, ಮೊದಲ ಬಾರಿಗೆ ಆಗಸ್ಟ್ನಲ್ಲಿ ಲಕ್ಸಂಬರ್ಗ್ನಲ್ಲಿ ಕಂಡು ಬಂದಿತು. ಬಿಎ.2.86 ಎಂಬುದನ್ನು ಪಿರೋಲಾ ತಳಿಯಿಂದಲೂ ಪರಿಚಿತವಾಗಿದ್ದು, ಇದು ಮೊದಲಿಗೆ ಜುಲೈನಲ್ಲಿ ಡೆನ್ಮಾರ್ಕ್ನಲ್ಲಿ ಪತ್ತೆಯಾಯಿತು.
ನವೆಂಬರ್ನಲ್ಲಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಯುಎಸ್ಸಿಡಿಸಿ) ಜೆಎನ್ ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿತು. ಜೆಎನ್ ಎಂಬುದು ಬಿಎ.2.86 ವಂಶಾವಳಿ ಆಗಿದ್ದು, ಎಲ್455ಎಸ್ ರೂಪಾಂತರವಾಗಿದೆ. ಇದು ಪ್ರತಿರಕ್ಷಣ ವ್ಯವಸ್ಥೆ ತಪ್ಪಿಸುವ ಗುಣಲಕ್ಷಣ ಹೊಂದಿದೆ.
ಹೊಸ ತಳಿ ಅಲ್ಲ: ಜೆಎನ್ 1 ಎಂಬುದು ಹೊಸ ತಳಿಯಲ್ಲ. ಆದರೆ, ಇದು ಭಾರತಕ್ಕೆ ಹೊಸದಾಗಿದೆ. ಇದು ಈಗಾಗಲೇ ಜಾಗತಿಕವಾಗಿ 38 ದೇಶದಲ್ಲಿ ಅಸ್ತಿತ್ವ ಹೊಂದಿದೆ. ಯುಕೆ. ಪೋರ್ಚುಗಲ್ ಮತ್ತು ಇತರ ದೇಶದಲ್ಲಿ ಇದನ್ನು ಕಾಣಬಹುದಾಗಿದೆ ಎಂದು ಸೋಂಕು ರೋಗ ತಜ್ಞ ಡಾ ಈಶ್ವರ್ ಗಿಲ್ಡ ತಿಳಿಸಿದ್ದಾರೆ.
ಈ ತಳಿಯು ಶ್ವಾಸಕೋಶದ ಮೇಲೆ ಕೆಲವು ಪರಿಣಾಮ ಹೊಂದಿದೆ. ಅಂದರೆ, ಮೂಗು ಸೋರುವಿಕೆ, ಕೆಮ್ಮು, ಚಳಿ ಮತ್ತು ಕೆಲವು ಬಾರಿ ಉಸಿರಾಟದ ಏರಿಳಿತಕ್ಕೆ ಕಾರಣವಾಗಬಹುದು. ಆದರೆ, ಇಲ್ಲಿಯವರೆಗೆ ಇದಕ್ಕೆ ಆಮ್ಲಜನಕದ ಅವಶ್ಯಕತೆ, ಐಸಿಯು ಬೆಡ್, ವೆಂಟಿಲೇಟರ್ ಬೇಕು ಎಂಬ ಪರಿಸ್ಥಿತಿ ಉಂಟಾಗಿಲ್ಲ. ಇದರಿಂದ ಸಾವು ಕೂಡ ಸಂಭವಿಸಿಲ್ಲ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಹೆಚ್ಚಿನ ಆತಂಕ ಬೇಡ ಎಂದಿದ್ದಾರೆ.
ದೇಶದಲ್ಲಿನ ಕೊರೋನಾ ಕುರಿತು ಗುರುವಾರ ಸಂಜೆ ಆರೋಗ್ಯ ಸಚಿವಾಲಯದ ವರದಿಯಂತೆ, ದೇಶದಲ್ಲಿ 1,185 ಹೊಸ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಕೇರಳದಲ್ಲಿ ಅತಿ ಹೆಚ್ಚು 1,039 ಪ್ರಕರಣ ದಾಖಲಾಗಿದೆ. ದಕ್ಷಿಣ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಕಳೆದೊಂದು ತಿಂಗಳ ಹಿಂದೆ ಕೇರಳದಲ್ಲಿ 33 ಇದ್ದ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ.
ಜೆಎನ್ 1 ಲಕ್ಷಣ: ಕೆಮ್ಮು, ಜ್ವರ, ನೆಗಡಿ, ಸುಸ್ತು, ಮೂಗು ಕಟ್ಟುವಿಕೆ, ಮೂಗು ಸೋರುವಿಕೆ, ಅತಿಸಾರ ಮತ್ತು ತಲೆ ನೋವು ಇದರ ಲಕ್ಷಣಗಳಾಗಿವೆ ಎಂದು ಕೊಚ್ಚಿನ ಅಮೃತ ಆಸ್ಪತ್ರೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ ಡಿಪು ತಿಳಿಸಿದ್ದಾರೆ.
ಭಾರತದಲ್ಲಿ ಈ ತಳಿಯ ಬಗ್ಗೆ ಆತಂಕ ಬೇಡ. ಆದರೆ, ವೈಜ್ಞಾನಿಕ ಸಮುದಾಯದಲ್ಲಿ ಇದರ ಮೇಲ್ವಿಚಾರಣೆ ಬೇಕಿದೆ ಹೊರತು ಸಾಮಾನ್ಯ ಸಾರ್ವಜನಿಕರಲ್ಲಿ ಅಲ್ಲ ಎಂದಿದ್ದಾರೆ ಡಾ ಗಿಲ್ಡ್. (ಐಎಎನ್ಎಸ್)
ಇದನ್ನೂ ಓದಿ: ಕೋವಿಡ್ನಿಂದ ಚೇತರಿಕೆ ಕಂಡರೂ 2ವರ್ಷಗಳ ಕಾಲ ಶ್ವಾಸಕೋಶದಲ್ಲೇ ಇರುತ್ತೆ ಸೋಂಕು; ಅಧ್ಯಯನ