ಬೆಂಗಳೂರು: ಬೇಸಿಗೆ ಈಗಾಗಲೇ ಆರಂಭವಾಗಿದೆ. ಸೂರ್ಯ ಬೆಳ್ಳಂ ಬೆಳ್ಳಗೆಯ ನೆತ್ತಿ ಸುಡುತ್ತಿದ್ದು, ಮಧ್ಯಾಹ್ನದ ಹೊತ್ತಿಗೆಲ್ಲ ಕೆಂಡ ಉಗುಳುತ್ತಿರುವ ಅನುಭವ ಆಗುತ್ತಿದೆ. ಈ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯುವುದು ಅತ್ಯವಶ್ಯಕವಾಗುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ಮತ್ತು ಶಾಖದಿಂದ ನಿಮ್ಮನ್ನು ನೀವು ತಪ್ಪಿಸಿಕೊಳ್ಳಲು ಬೇಸಿಗೆಯಲ್ಲಿ ಈ ವಸ್ತುಗಳನ್ನು ಸದಾ ನಿಮ್ಮ ಬ್ಯಾಗ್ನಲ್ಲಿ ಇರುವಂತೆ ನೋಡಿಕೊಳ್ಳುವುದು ಅವಶ್ಯ.
ಸನ್ ಗ್ಲಾಸ್: ಸೌಂದರ್ಯ ಹೆಚ್ಚುಸುವ ಜೊತೆಗೆ ಸಿಂಪಲ್ ಫ್ಯಾಷನ್ ಲುಕ್ ನೀಡುವ ಉತ್ತಮ ಸ್ಟೈಲಿಶ್ ಸನ್ಗ್ಲಾಸ್ಗಳು ನಿಮ್ಮ ಕಣ್ಣಿನ ರಕ್ಷಣೆಯನ್ನು ಮಾಡುತ್ತದೆ. ಕಣ್ಣಿನ ಮೇಲೆ ಬೀಳುವ ಬಿಸಿಲಿನ ಪ್ರಖರತೆ ಜೊತೆಗೆ ಕಣ್ಣಿನ ಸುತ್ತಲೂ ಯುವಿ ಕಿರಣಗಳು ಪರಿಣಾಮ ಬೀರದಂತೆ ಇದು ಕಾಪಾಡುತ್ತದೆ. ಕಣ್ಣಿನ ನೆರಿಗೆ ತಡೆಯಲು ಸಹಾಯ ಮಾಡುತ್ತದೆ. ಬಿಸಿಲಿನ ತಾಪದಿಂದ ಕಣ್ಣುನ್ನು ತಂಪಾಗಿಸಲು ಸಹಾಯವಾಗುತ್ತದೆ.
ಹ್ಯಾಂಡ್ ಫ್ಯಾನ್: ಬೇಸಿಗೆ ಬಿಸಿಯಲ್ಲಿ ಬೆಳ್ಳಂಬೆಳಗ್ಗೆ ಸೆಕೆಯಿಂದ ಬಳಲುತ್ತಿರುತ್ತೇವೆ. ಇದರಿಂದ ಬೆವರು, ದುರ್ಗಂಧ ಉಂಟಾಗುತ್ತದೆ. ಇದನ್ನು ತಪ್ಪಿಸಿಕೊಳ್ಳಲು ಕೈಯಲ್ಲಿ ಒಂದು ಸಣ್ಣ ಫ್ಯಾನ್ ಹಿಡಿದುಕೊಳ್ಳುವುದು ಉತ್ತಮ. ಪರಿಸರ ಸ್ನೇಹಿಯಾಗಿರುವ ಈ ಉತ್ಪನ್ನಗಳು ಕೈಗುಟುಕುವ ದರ ಜೊತೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಸುಲಭವಾಗಿ ಎಲ್ಲಿಯಾದರೂ ಕೊಂಡೊಯ್ಯಬಹುದಾದ ಸಿಕ್ಕಾಪಟ್ಟೆ ಹ್ಯಾಂಡಿ ಆಗಿರುವಂತಹ ಅನೇಕ ಹ್ಯಾಂಡ್ ಫ್ಯಾನ್ಗಳು ಮಾರುಕಟ್ಟೆಯಲ್ಲಿದೆ.
ನೀರಿನ ಬಾಟಲ್: ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಗೊಳ್ಳದಂತೆ ಕಾಪಾಡಿಕೊಳ್ಳಲು ನೀರು ಅತ್ಯವಶ್ಯಕ. ಇದೇ ಕಾರಣಕ್ಕೆ ನೀರಿನ ಬಾಟೆಲ್ ಅನ್ನು ಸದಾ ಜೊತೆಯಲ್ಲಿರುವಂತೆ ನೋಡಿಕೊಳ್ಳಿ. ಏಕ ಬಳಕೆಯ ನೀರಿನ ಬಾಟೆಲ್ ಬದಲಾಗಿ ಸದಾ ಬ್ಯಾಗ್ನಲ್ಲಿಟ್ಟುಕೊಳ್ಳುವ ಬಾಟೆಲ್ ಉತ್ತಮ. ಬಾಯಾರಿದಾಗ ನೀರು ಕುಟುಕಿಸಬಹುದು ಇದರಿಂದ ದೇಹ ನೀರು ಬಳಲದಂತೆ ಕಾಪಾಡುತ್ತದೆ.
ವೆಟ್ ವೈಪ್ಸ್: ಬೇಸಿಗೆಯಲ್ಲಿ ಬೆವರಿನಿಂದಾಗಿ ಮುಖ, ದೇಹ ಬೇಗ ಕೊಳಕಾಗುತ್ತದೆ. ಜೊತೆಗೆ ಮುಖ ಎಣ್ಣೆಯುಕ್ತವಾಗುತ್ತದೆ. ಜೊತೆಗೆ ಮಾಲಿನ್ಯ ಮುಖದ ಅಂದವನ್ನು ಕೆಡಿಸುತ್ತದೆ. ಈ ಹಿನ್ನಲೆ ಈ ಎಲ್ಲಾ ಸಮಸ್ಯೆಗಳ ನಿವಾರಣೆ ಜೊತೆಗೆ ಚರ್ಮವನ್ನು ಹೈಡ್ರೇಟ್ ಮಾಡಲು ವೆಟ್ ವೈಪ್ಸ್ಮೂಲಕ ಪದೇ ಪದೇ ಮುಖ ಒರೆಸಿಕೊಳ್ಳುವುದು ಅವಶ್ಯ.
ಫೆಶಿಯಲ್ ಮಿಸ್ಟ್: ಮುಖಕ್ಕೆ ಪದೇ ಪದೇ ಫೆಶಿಯಲ್ ಮಿಸ್ಟ್ ಸಿಂಪಡಿಸಿಕೊಳ್ಳುವ ಮೂಲಕ ಚರ್ಮವನ್ನು ಪುನರ್ಜೀವನ ಮಾಡಲಬಹುದು. ಮುಖದ ಮೇಲೆ ಸಿಂಪಡಿಸುವ ಈ ಮಿಸ್ಟ್ ತಾಜಾತನ ಜೊತೆಗೆ ಶಾಖದ ಆತಂಕ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ತಕ್ಷಣಕ್ಕೆ ಚರ್ಮ ಮತ್ತು ಮನಸಿಗೆ ಉಲ್ಲಾಸ ನೀಡುತ್ತದೆ. ನೈಸರ್ಗಿಕವಾಗಿ ಲಭ್ಯವಾಗುವ ಅನೇಕ ಫೆಶಿಯಲ್ ಮಿಸ್ಟ್ ಉತ್ಪನ್ನಗಳು ಮುಖದ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ.
ಚರ್ಮದ ಕಾಳಜಿ: ಬೇಸಿಗೆ ಕಾಲದ ಉರಿ ಜನರನ್ನು ಕಾಡಲಾರಂಭಿಸಿದೆ. ಬೇಸಿಗೆ ಪ್ರಾರಂಭವಾಯಿತೆಂದರೆ ಆರೋಗ್ಯದ ಸಮಸ್ಯೆಗಳು ಅದರಲ್ಲೂ ಚರ್ಮಕ್ಕೆ ಸಂಬಂಂಧಿಸಿದ ಸಮಸ್ಯೆಗಳು ಬಾದಿಸುತ್ತದೆ. ಅವುಗಳಲ್ಲೂ ಬೆವರುಸಾಲೆ ಬೇಸಿಗೆಯಲ್ಲಿ ತುಂಬಾ ಸಾಮಾನ್ಯವಾದ ಚರ್ಮದ ಸಮಸ್ಯೆ. ಬೆವರುಸಾಲೆ ಆಗದಂತೆ ತಡೆಯಲು ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಉತ್ತಮ.
ಇದನ್ನೂ ಓದಿ: ಬೇಸಿಗೆ ದಾಹ ತೀರಿಸಲು ಎಳನೀರು ಬೆಸ್ಟ್; ದೇಹ ನಿರ್ಜಲೀಕರಣದಿಂದ ಪಾರು ಮಾಡುತ್ತೆ ಈ ಪಾನೀಯ