ETV Bharat / sukhibhava

'ಬಾಲ್ಯದ ಮಧುಮೇಹ' ಟೈಪ್​ 1 ಡಯಾಬಿಟಿಸ್​: ಏನಿದರ ಲಕ್ಷಣ? ಪರಿಹಾರ ಹೇಗೆ? - ಆರೈಕೆ ಮಾಡದೇ ಹೋದರೆ ಇದು ಅತಿ ಹೆಚ್ಚಿನ

ಬಾಲ್ಯದಲ್ಲೇ ಕಾಡುವ ಮಧುಮೇಹವೂ ಆನುವಂಶಿಕವಾಗಿದೆ. ಇದಕ್ಕೆ ಸರಿಯಾದ ಆರೋಗ್ಯ ಕಾಳಜಿ ಮತ್ತು ಚಿಕಿತ್ಸೆಯ ಅಗತ್ಯವಿದೆ.

Juvenile Diabetes reason detection
Juvenile Diabetes reason detection
author img

By ETV Bharat Karnataka Team

Published : Aug 23, 2023, 4:41 PM IST

ಬೆಂಗಳೂರು: ಟೈಪ್​ 1 ಮಧುಮೇಹವನ್ನು 'ಬಾಲ್ಯದ ಮಧುಮೇಹ' ಎಂತಲೂ ಕರೆಯಲಾಗುತ್ತದೆ. ಇದು ಜಗತ್ತಿನಾದ್ಯಂತ ಮಕ್ಕಳಲ್ಲಿ ಎದುರಾಗುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆ. ಇದನ್ನು ಸರಿಯಾಗಿ ಆರೈಕೆ ಮಾಡದೇ ಹೋದಲ್ಲಿ ಅತಿ ಹೆಚ್ಚಿನ ಅಥವಾ ಕಡಿಮೆ ಗಂಭೀರ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಅಲ್ಲದೆ, ಸಾಮಾನ್ಯ ಆರೋಗ್ಯ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನಟ-ಹಾಡುಗಾರ ನಿಕ್​ ಜೋನಸ್​, ಲೇಖಕ ಅನ್​ ರೈಸ್​​, ಖ್ಯಾತ ಭಾರತೀಯ ಸಿನಿಮಾ ನಟ ಕಮಲ್​ ಹಾಸನ್​ ಮತ್ತು ನಟಿ ಸೋನಂ​​ ಕಪೂರ್​, ಪಾಕಿಸ್ತಾನ ಕ್ರಿಕೆಟರ್​ ವಾಸಿಂ ಅಕ್ರಂ ಮತ್ತು ನಟ ಫಹದ್​ ಖಾನ್​ ಸೇರಿದಂತೆ ಜಗತ್ತಿನ ವಿವಿಧ ಭಾಗದ ಬಹುತೇಕ ಮಂದಿ ಟೈಪ್​ 1 ಸಮಸ್ಯೆಯಿಂದ ಬಳಲುತ್ತಿದ್ದಾರೆ. ಟೈಪ್​ 1 ಮಧುಮೇಹ ಎಂಬುದು ಸಾಮಾನ್ಯ ತೊಂದರೆಯಲ್ಲ. ಇದಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಾಗದೇ ಹೋದರೆ ಜೀವಕ್ಕೆ ಕುತ್ತು ತರುತ್ತದೆ. ವ್ಯಕ್ತಿಗೆ 18 ವರ್ಷ ಆಗುವವರೆಗೆ ಯಾವುದೇ ಸಂದರ್ಭದಲ್ಲಿ ಈ ಆಟೋಇಮ್ಯೂನ್​ ರೋಗ ಉಲ್ಬಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಏನಿದು ಬಾಲ್ಯದ ಮಧುಮೇಹ?: ಇಂದೋರ್​ನ ಕೊಕೀಲಾಬೆನ್​ ಆಸ್ಪತ್ರೆಯ ವೈದ್ಯ ಡಾ.ಸಂಜಯ್​ ಜೈನ್​ ಹೇಳುವಂತೆ, ಟೈಪ್​ 1 ಮಧುಮೇಹವನ್ನು ನಿರ್ವಹಣೆ ಮಾಡಬಹುದು. ಸರಿಯಾದ ಚಿಕಿತ್ಸೆ ನಿರ್ವಹಣೆಯಿಂದ ಈ ಸಮಸ್ಯೆ ಹೊಂದಿರುವವರು ಸಾಮಾನ್ಯ ಜೀವನ ನಡೆಸಬಹುದು. ಟೈಪ್​ 1 ಮತ್ತು ಟೈಪ್​ 2 ಮಧುಮೇಹಿಗಳಲ್ಲಿ ಇನ್ಸುಲಿನ್​ ಉತ್ಪಾದನೆ ಕಡಿಮೆಯಾಗುತ್ತದೆ. ಇದು ವ್ಯತ್ಯಾಸದಿಂದ ಕೂಡಿರುತ್ತದೆ. ಟೈಪ್​ 2 ಮಧುಮೇಹಕ್ಕೆ ಕಾರಣ ಕಳಪೆ ಜೀವನಶೈಲಿ, ನಿರ್ದಿಷ್ಟ ಅನಾರೋಗ್ಯ ಅಥವಾ ಔಷಧಿಗಳ ಪರಿಣಾಮ ಕಾರಣ. ಇದೇ ವೇಳೆ ಟೈಪ್​ 1 ಮಧುಮೇಹ ಪೋಷಕರಿಂದ ಬರುವ ಆನುವಂಶಿಕ ಕಾಯಿಲೆಯೂ ಹೌದು.

ಟೈಪ್​ 1 ಮಧುಮೇಹದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಬೀಟಾ ಕೋಶಗಳನ್ನು ಗುರಿಯಾಗಿಟ್ಟುಕೊಂಡು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದು ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆ ಮಾಡಬಹುದು/ ನಿಲ್ಲಿಸಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಗೆ ಕಾರಣವಾಗುತ್ತದೆ.

ಒಬ್ಬ ಪೋಷಕ ಟೈಪ್​ 1 ಮಧುಮೇಹ ಹೊಂದಿದ್ದರೆ ಮಗುವಿಗೆ ಬರುವ ಸಂಭಾವ್ಯ ಶೇ 10ರಷ್ಟು ಇರುತ್ತದೆ. ತಾಯಂದಿರಲ್ಲಿ ಸಮಸ್ಯೆ ಇದ್ದರೆ ಇದು ಶೇ 8 ರಿಂದ 10ರಷ್ಟು ಅಪಾಯ ಹೊಂದಿದೆ. ಪೋಷಕರು ಇಬ್ಬರೂ ಮಧುಮೇಹ ಹೊಂದಿದ್ದರೆ ಮಗುವಿನಲ್ಲಿ ಇದರ ಅಭಿವೃದ್ಧಿ ದರ ಶೇ 30ರಷ್ಟಿದೆ.

ಲಕ್ಷಣ ಮತ್ತು ಪರಿಣಾಮ: ಐದರಿಂದ 10 ವರ್ಷದೊಳಗೆ ಇದರ ಲಕ್ಷಣಗಳು ಕೆಲವೊಮ್ಮೆ ಕಂಡರೂ ಕೆಲವೊಮ್ಮೆ ಇದು 22 ಮತ್ತು 25ವರ್ಷದವರೆಗೂ ವಿಸ್ತರಣೆಯಾಗುತ್ತದೆ ಎಂದು ಡಾ.ಜೈನ್​ ತಿಳಿಸಿದ್ದಾರೆ. ಮಗುವಿನ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ತೂಕ ಹೆಚ್ಚಳ ಇದರ ಬೆಳವಣಿಗೆ ಪ್ರಮುಖ ಅಂಶ. ಪದೇ ಪದೇ ಹಸಿವಾಗುವುದು, ಮೂತ್ರ ಸಮಸ್ಯೆ, ಅಧಿಕ ಬಾಯಾರಿಕೆ, ಆಯಾಸ ಸಾಮಾನ್ಯವಾಗಿರುತ್ತದೆ. ಇದರ ಜೊತೆಗೆ ಗಾಯದ ನಿಧಾನ ಮಾಗುವಿಕೆಯೂ ಕೂಡ ಇದರ ಲಕ್ಷಣವೇ.

ಪತ್ತೆ ಮತ್ತು ಚಿಕಿತ್ಸೆ: ಟೈಪ್​ 1 ಮಧುಮೇಹವು ರಕ್ತ, ಮೂತ್ರ ಮತ್ತು ಇನ್ನಿತರ ಲಕ್ಷಣಗಳ ಮೂಲಕ ಪತ್ತೆ ಮಾಡಬಹುದು. ಈ ಪರಿಸ್ಥಿತಿಗೆ ಇನ್ಸುಲಿನ್​ ಒಂದೇ ಚಿಕಿತ್ಸೆ. ಇನ್ಸುಲಿನ್​ ಉತ್ಪಾದನೆ ಕಡಿಮೆ ಅಥವಾ ಕಣ್ಮರೆಯಾದಾಗ ರಕ್ತದ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ನಡೆಸಬೇಕು. ರೋಗಿಯ ಪರಿಸ್ಥಿತಿಗೆ ಅನುಗುಣವಾಗಿ ಊಟಕ್ಕೆ ಮುನ್ನ ಡೋಸೇಜ್​ ನೀಡಬೇಕು. ಹಾಗೆಯೇ ಪ್ರತಿ ಊಟದ ಬಳಿಕ ಇದರ ನಿರ್ವಹಣೆ ಮಾಡಬೇಕು.

ಅಪಾಯ: ಟೈಪ್​ 1 ಮಧುಮೇಹದಿಂದ ಕೆಟೊ ಅಸಿಡೊಸಿಸ್​, ದೃಷ್ಟಿ ದೋಷ, ಕಿಡ್ನಿ ವೈಫಲ್ಯ ಕಾಡಬಹುದು. ಈ ಪ್ರಯಾಣ ಸವಾಲಿನಿಂದ ಕೂಡಿದ್ದು, ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಸೂಕ್ತ. ಮೆಟಿಕ್ಯೂಲಸ್​ ಚಿಕಿತ್ಸೆ ಮತ್ತು ಆರೋಗ್ಯ ರಕ್ಷಣೆಯಿಂದ ಟೈಪ್​ 1 ಮಧುಮೇಹದಿಂದ ಪಾರಾಗಬಹುದು.

ಇದನ್ನೂ ಓದಿ: Diabetes: ಕೆಲಸದ ಸ್ಥಳದಲ್ಲಿ ಮಧುಮೇಹ ನಿರ್ವಹಣೆಗೆ ಈ ನಿಯಮ ಪಾಲಿಸಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.