ETV Bharat / sukhibhava

ವರ್ಚುಯಲ್​ ರಿಯಾಲಿಟಿ ಸಮಸ್ಯೆಗಳಿಗೆ ಸಂತೋಷದಾಯಕ ಸಂಗೀತವೇ ಮದ್ದು - ಅತಿಯಾದ ಡಿಜಿಟಲ್​ ಮಾಧ್ಯಮ

ಡಿಜಿಟಲ್​ ಬಳಕೆದಾರರಲ್ಲಿ ಈ ವರ್ಚುಯಲ್​ ರಿಯಾಲಿಟಿ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದರಿಂದ ತಲೆ ನೋವು, ತಲೆ ಸುತ್ತುವಿಕೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

Joyful music is the cure for virtual reality headaches

author img

By

Published : May 3, 2023, 11:51 AM IST

ವಾಷಿಂಗ್ಟನ್​: ವರ್ಚುಯಲ್​ ಜಗತ್ತಿನಲ್ಲಿ ನಾವು ಇಂದು ಕಳೆದು ಹೋಗಿದ್ದೇವೆ. ಅತಿಯಾದ ಡಿಜಿಟಲ್​ ಮಾಧ್ಯಮಗಳ ಬಳಕೆ ಗಂಭೀರ ಸಮಸ್ಯೆಗೂ ಕಾರಣ. ಇಂತಹ ವರ್ಚುಯಲ್​ ಸಮಸ್ಯೆಗಳಿಗೆ ಆಹ್ಲಾದಕರ ಸಂಗೀತವೇ ಮದ್ದು ಎಂದು ಅಧ್ಯಯನ ತಿಳಿಸಿದೆ. ಅಧ್ಯಯನ ಅನುಸಾರ, ಡಿಜಿಟಲ್​ ಗ್ಯಾಜೆಟ್​ಗಳ ಬಳಕೆ ಮಾಡಿದ ಬಳಿಕ ವರ್ಚುಯಲ್​ ರಿಯಾಲಿಟಿ ಬಳಕೆದಾರರು ತಲೆಸುತ್ತು, ವಾಕರಿಕೆ ಮತ್ತು ತಲೆ ನೋವು ಸಮಸ್ಯೆಗೆ ಒಳಗಾಗುತ್ತಾರೆ. ಇಂತಹ ವೇಳೆ ಸಂಗೀತ ಅವರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದೆ.

ಸೈಬರ್​ ಸಿಕ್​ನೆಸ್​ಗೆ ಮದ್ದು: ಕಂಪ್ಯೂಟರ್​ ಆಟಗಳಂತರ ವರ್ಚುಯಲ್​ ರಿಯಾಲಿಟಿ ಅನುಭವಗಳಿಂದ ಉಂಟಾಗುವ ಸಮಸ್ಯೆಗಳನ್ನು ಸೈಬರ್​ ಸಿಕ್​ನೆಸ್​​ ಎನ್ನಲಾಗುವುದು. ಇದು ಇಂದು ಅನೇಕರನ್ನು ಕಾಡುತ್ತಿದೆ. ಸಂತೋಷದಾಯಕ ಸಂಗೀತದಲ್ಲಿ ಕೇಳುವಿಕೆಯಿಂದ ಉಂಟಾಗುವ ಆಹ್ಲಾದ ಅನುಭವದಿಂದ ಈ ಸಮಸ್ಯೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಮನಸನ್ನು ಇದು ಶಾಂತಗೊಳಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

ಈ ಸಂಬಂಧ ಎಡಿನ್​ ಬರ್ಗ್​​ ವಿಶ್ವವಿದ್ಯಾಲಯ 22ರಿಂದ 36 ವರ್ಷದ ವಯೋಮಾನದ 39 ಜನರ ಮೇಲೆ ಅಧ್ಯಯನ ನಡೆಸಿದೆ. ವರ್ಚುಯಲ್​ ರಿಯಾಲಿಟಿ ಪರಿಸರದಲ್ಲಿ ಇರುವ ಅವರ ಮೇಲೆ ಸಂಗೀತದ ಪರಿಣಾಮದ ಕುರಿತು ವಿಶ್ಲೇಷಣೆ ನಡೆಸಲಾಗಿದೆ. ಇದಕ್ಕಾಗಿ ಅನೇಕ ಪರೀಕ್ಷೆಗಳನ್ನು ನಡೆಸಲಾಗಿದೆ. ಸೈಬರ್​ ಸಿಕ್​ನೆಸ್​ಗೆ ಗುರಿಯಾಗುವವರ ಸ್ಮರಣೆ ಮತ್ತು ಕೌಶಲ್ಯಗಳ ವೇಗ ಮತ್ತು ಪ್ರತಿಕ್ರಿಯೆ ಮೇಲೆ ಪರಿಣಾಮ ನಿರ್ಣಯಿಸಲಾಗಿದೆ.

ರೋಲರ್​ ಕೋಸ್ಟರ್​ ಅಧ್ಯಯನ: ಭಾಗಿದಾರರು ವರ್ಚುಯಲ್​ ರಿಯಾಲಿಟಿ ಪರಿಸರದಲ್ಲಿ ಮುಳುಗಿದ್ದು, ಸೈಬರ್​ ಸಿಕ್​ನೆಸ್​ ಸೇರಿದಂತೆ ಮೂರು ರೋಲರ್​ ಕೋಸ್ಟರ್​ ಗುರಿಗಳನ್ನು ನೀಡಲಾಗಿತ್ತು. ಇದರಲ್ಲಿ ಎರಡು ರೈಡ್​ಗಳಲ್ಲಿ ಸಾಹಿತ್ಯ ಇರದ ಎಲೆಕ್ಟ್ರಾನಿಕ್​ ಸಂಗೀತ ಕೇಳಿಸಲಾಗಿದೆ. ಇದನ್ನು ಅವರನ್ನು ಶಾಂತಗೊಳಿಸುವ ಜೊತೆಗೆ ಉಲ್ಲಾಸಗೊಳಿಸಿದೆ. ಮತ್ತೊಂದು ರೈಡ್​ ನಿಶಬ್ಧತೆ ಕಾಯ್ದುಕೊಳ್ಳಲಾಗಿದೆ.

ಪ್ರತಿ ರೈಡ್​ ಆದ ಬಳಿಕ ಅವರ ಸೈಬರ್​ ಸಿಕ್​ನೆಸ್​ ಲಕ್ಷಣ ಮತ್ತು ಸ್ಮರಣಾ ಮತ್ತ ಪ್ರತಿಕ್ರಿಯೆ ಸಮಯದ ಪರೀಕ್ಷೆಯ ಪ್ರದರ್ಶನ ಗುರುತಿಸಲಾಗಿದೆ. ಈ ವೇಳೆ, ಸಂತೋಷದ ಸಂಗೀತವೂ ಅವರ ಸೈಬರ್​ ಸಿಕ್​ನೆಸ್​ ತೀವ್ರತೆ ಮೇಲೆ ಪರಿಣಾಮ ಬೀರುವುದನ್ನು ಕಂಡುಕೊಳ್ಳಲಾಗಿದೆ. ಸಂತೋಷ ಮತ್ತು ಶಾಂತಗೊಳಿಸುವ ಸಂಗೀತ ಅವರ ವಾಕರಿಕೆಯಂತಹ ಲಕ್ಷಣವನ್ನು ಕಡಿಮೆ ಮಾಡಿರುವುದು ಅಧ್ಯಯನದಿಂದ ತಿಳಿದು ಬಂದಿದೆ.

ಸಂಗೀತವೇ ಮದ್ದು: ಹೆಚ್ಚಿನ ಮಟ್ಟದ ಗೇಮಿಂಗ್ ಅನುಭವವು ಕಡಿಮೆ ಸೈಬರ್‌ ಸಿಕ್‌ನೆಸ್‌ಗೆ ಸಂಬಂಧಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಭಾಗವಗಹಿಸಿದ ಸ್ತ್ರೀ ಮತ್ತು ಪುರುಷ ನಡುವಿನ ಸೈಬರ್‌ ಸಿಕ್‌ನೆಸ್‌ನ ತೀವ್ರತೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಸೈಬರ್‌ಸಿಕ್‌ನೆಸ್ ಕಡಿಮೆ ಮಾಡುವಲ್ಲಿ ಸಂಗೀತದ ಸಾಮರ್ಥ್ಯದ ಪರಿಣಾಮ ತೋರಿಸುತ್ತವೆ. ಸೈಬರ್‌ಸಿಕ್‌ನೆಸ್ ಮಟ್ಟಗಳಿಗೆ ಗೇಮಿಂಗ್ ಅನುಭವವು ಹೇಗೆ ಸಂಬಂಧಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತದೆ. ಹಾಗೇ ಸೈಬರ್‌ಸಿಕ್‌ನೆಸ್‌ನ ಆಲೋಚನಾ ಕೌಶಲ್ಯ, ಪ್ರತಿಕ್ರಿಯೆ ಸಮಯ, ಓದುವ ಸಾಮರ್ಥ್ಯ ಮತ್ತು ವಿದ್ಯಾರ್ಥಿಗಳ ಗಾತ್ರದ ಮೇಲೆ ಸೈಬರ್‌ಸಿಕ್‌ನೆಸ್‌ನ ಗಮನಾರ್ಹ ಪರಿಣಾಮಗಳನ್ನು ತೋರಿಸುತ್ತದೆ ಎಂದು ವಿಶ್ವವಿದ್ಯಾಲಯದ ಡಾ ಸಾರಾ ಇ ಮ್ಯಾಕ್‌ಫರ್ಸನ್ ಹೇಳಿದ್ದಾರೆ.

ಇದನ್ನೂ ಓದಿ: ಧೂಮಪಾನಕ್ಕಿಂತಲೂ ಹೆಚ್ಚು ಅಪಾಯಕಾರಿ ಒಂಟಿತನ; ಸಂವಹನವೇ ದಿವ್ಯೌಷಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.