ETV Bharat / sukhibhava

ಆರೋಗ್ಯಯುತ ಆಹಾರ ಆಯ್ಕೆ ಜೊತೆಗೆ ಅದನ್ನು ಸರಿಯಾದ ವಿಧಾನದಲ್ಲಿ ಬೇಯಿಸುವುದು ಅವಶ್ಯ - ಸಾಮಾನ್ಯ ನೀರಿನ ಬಳಕೆ

ಆರೋಗ್ಯಯುತ ಡಯಟ್​ ಆಹಾರಗಳ ಮೊರೆ ಹೋಗುವುದರ ಜೊತೆಗೆ ಆ ಆಹಾರಗಳನ್ನು ಯಾವ ರೀತಿ ಬೇಯಿಸಿ ತಿನ್ನಬೇಕು ಎಂಬುದರ ಕುರಿತು ಗಮನ ನೀಡಬೇಕು

It is important to choose healthy food along with cooking it in the right way

author img

By

Published : Mar 14, 2023, 4:05 PM IST

ನವದೆಹಲಿ: ಡಯಟ್​ ವಿಚಾರದಲ್ಲಿ ಒಬ್ಬಬ್ಬರದ್ದು ಒಂದೊಂದು ನಿಯಮ. ಕೆಲವರು ಚೆನ್ನಾಗಿ ಬೆಂದ ಪೌಷ್ಟಿಕಾಂಶಗಳನ್ನು ಸೇವಿಸಿದರೆ, ಮತ್ತೊಬ್ಬರು ಬಣ್ಣ ಬಣ್ಣದ ತರಕಾರಿ ಮತ್ತು ಹಣ್ಣುಗಳು, ಮಿಲೆಟ್​ ಸೇರಿದಂತೆ ಅನೇಕ ಧಾನ್ಯಗಳಿಂದ ಕೂಡಿದ ಆಹಾರ, ಕಡಿಮೆ ಬೊಜ್ಜಿನ ಡೈರಿ ಐಟಂಗಳ ಜೊತೆಗೆ ಮೀನು ಮತ್ತು ಪೌಲ್ಟ್ರಿ ಉತ್ಪನ್ನಗಳನ್ನು ಆಯ್ಕೆ ಮಾಡುತ್ತಾರೆ

ಆರೋಗ್ಯವನ್ನು ಕಾಪಾಡಲು ಪ್ರತಿಯೊಂದು ಅಹಾರವೂ ಪ್ರಮುಖವಾಗಿದೆ. ಆದರೆ, ತಿನ್ನುವ ಪ್ರಮಾಣದಲ್ಲಿ ಕಾಳಜಿ ಇರುವುದು ಅವಶ್ಯ. ಇದೆ ಕಾರಣಕ್ಕೆ ತರಕಾರಿ ಮತ್ತು ಹಣ್ಣುಗಳ ಹೊರತಾಗಿ ಈ ಎಲ್ಲ ಆಹಾರಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಉತ್ತಮ ಎನ್ನಲಾಗುತ್ತದೆ. ಈ ರೀತಿಯ ವಿವಿಧ ಡಯಟ್​ ನಿಯಮಗಳ ಅನುಸಾರ ಐಸಿಎಂಆರ್​-ಎನ್​ಐಎನ್​ 2020 ಭಾರತೀಯರು ಏನನ್ನು ತಿನ್ನುತ್ತಾರೆ ಎಂಬುದರ ಕುರಿತು ವರದಿ ಮಾಡಿದ್ದು, ಹಲವು ಆಸಕ್ತಿಕರ ಸಂಗತಿಗಳನ್ನು ತಿಳಿಸಿದೆ. ಈ ಆರೋಗ್ಯಯುತ ಡಯಟ್​ನಲ್ಲಿ ಕನಿಷ್ಠ ಐದು ಆಹಾರದ ಗುಂಪುಗಳನ್ನು ಕಾಣಬಹುದಾಗಿದೆ. ಇದರ ಹೊರಾತಾಗಿ ಅನೇಕ ಪದಾರ್ಥಗಳು, ಅಡುಗೆ ಪ್ರಕ್ರಿಯೆಗಳು ರುಚಿ, ಬಣ್ಣ, ಜೀರ್ಣಕ್ರಿಯೆ, ಹೀರುಕೊಳ್ಳಿವಿಬೆ ಮತ್ತು ಪೌಷ್ಟಿಕಾಂಶಯುಕ್ತ ಆಹಾರದಲ್ಲೂ ಪ್ರಮುಖ ಪಾತ್ರವಹಿಸುತ್ತದೆ.

ಅಡುಗೆ ಬೇಯಿಸುವ ವಿಧಾನದಲ್ಲಿ ಅನೇಕ ಮಂದಿ ಸ್ಟೂಯಿಂಗ್​ (ಸೂಪ್​ ರೀತಿಯ ಆಹಾರ) ಮತ್ತು ಸ್ಟೀಮಿಂಗ್​ (ಬೇಯಿಸಿದ ಆಹಾರ)ಕ್ಕೆ ಹೆಚ್ಚಿನ ಸ್ಕೋರ್​ ನೀಡಲಾಗಿದೆ. ಇದರ ಹೊರತಾಗಿ ಹುರಿದ (ಸಣ್ಣ ಪ್ರಮಾಣದ ಫ್ಯಾಟ್​ ಹೊಂದಿರುವ ಹುರಿದ ಆಹಾರ) ಆಹಾರ ಕೂಡ ಆರೋಗ್ಯಕರ ಎಂದು ಸ್ವೀಕರಿಸಲಾಗಿದೆ ಎಂದು ಡಯಟೀಶನ್​ ಮತ್ತು ವೆಲ್​ನೆಸ್​ ಸಮಾಲೋಚಕಿ ನೀಲಂಜನ್​ ತಿಳಿಸಿದ್ದಾರೆ. ಪ್ರತಿಯೊಂದು ಅಡುಗೆ ಬೇಯಿಸುವ ವಿಧಾನದಲ್ಲಿ ಕೆಲವು ಪ್ರಯೋಜನ ಮತ್ತು ಗಡುವುಗಳಿರುತ್ತದೆ. ಈ ಮಾರ್ಗದರ್ಶನವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಆರೋಗ್ಯಕ್ಕೆ ಉತ್ತಮವಾಗಿದೆ ಎನ್ನುತ್ತಾರೆ ಅವರು.

ಸಣ್ಣ ಬೇಯಿಸುವ ವಿಧಾನ: ಯಾವುದೇ ಬೇಯಿಸುವ ವಿಧಾನವಿರಲಿ, ಅತಿಯಾಗಿ ಅದನ್ನು ಬೇಯಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು. ಅತಿ ಹೆಚ್ಚು ಬೇಯಿಸುವುದರಿಂದ ಅದರಲ್ಲಿನ ಪೋಷಕಾಂಶಗಳು ಜೊತೆಗೆ ಬಣ್ಣ ಮತ್ತು ಆಹಾರದ ಮೇಲ್ಕೆ ಬದಲಾಗುತ್ತದೆ. ಇದೇ ಕಾರಣಕ್ಕೆ ಕಡಿಮೆ ಸಮಯ ಬೇಯಿಸುವುದಕ್ಕೆ ಆದ್ಯತೆ ನೀಡಬೇಕು. ಇದಕ್ಕೆ ಪ್ರೆಷರ್​ ಕುಕ್ಕಿಂಗ್​ ಮತ್ತು ಮೈಕ್ರೋವೆವಿಂಗ್​ ಉತ್ತಮ ಉದಾಹರಣೆಯಾಗಿದೆ.

ಸಾಮಾನ್ಯ ನೀರಿನ ಬಳಕೆ: ನೀರಿನಲ್ಲಿ ಪದಾರ್ಥಗಳನ್ನು ಬೇಯಿಸುವಾಗ ಅದಕ್ಕೆ ಕೊಂಚ ನೀರು ಹೆಚ್ಚಿರುವಂತೆ ನೋಡಿಕೊಳ್ಳುವುದು ಉತ್ತಮ. ಬೇಯಿಸಿದ ಆಹಾರ ಪದಾರ್ಥಗಳಲ್ಲಿ ನೀರು ಉಳಿದರೆ ಅದನ್ನು ಸಾಸ್​, ಗ್ರೇವಿಯಾಗಿ ಬಳಕೆ ಮಾಡಬಹುದಾಗಿದೆ. ಇದರ ಜೊತೆಗೆ ತರಕಾರಿಯಲ್ಲಿ ಬೇಕಿಂಗ್​ ಸೋಡಗಳನ್ನು ಬಳಸದಂತೆ ತಡೆಯುವುದು ಅವಶ್ಯ. ಅವರು ಬಣ್ಣವನ್ನು ಉಳಿಸಿಕೊಳ್ಳಬಹುದು ಆದರೆ, ವಿಟಮಿನ್ ಸಿ ಅಂಶವು ಕಡಿಮೆಯಾಗುತ್ತದೆ.

ಹೆಚ್ಚಿನ ತಾಪಮಾನ ಬೇಡ: ಡ್ರೈ ಹೀಟ್​ ವಿಧಾನ ಅಂದರೆ, ಗ್ರಿಲಿಂಗ್​, ಬೇಯಿಸುವುದು, ಕುದಿಸುವುದು ಮತ್ತು ಪ್ರೈ ಮಾಡುವ ವೇಳೆ ಅತಿ ಹೆಚ್ಚು ತಾಪಮಾನವನ್ನು ಬಳಕ ಎಮಾಡಲಾಗುವುದು. ಇದು ಕ್ಯಾನ್ಸರ್​, ಡಯಾಬೀಟಿಸ್​ ಮತ್ತು ಹೃದಯ ಸಮಸ್ಯೆಗೆ ಕಾರಣವಾಗುತ್ತದೆ. ಮಾಂಸ, ಪನ್ನಿರ್​, ಆಲೂಗಡ್ಡೆಯನ್ನು ಹೆಚ್ಚಿನ ತಾಪಮಾನದಲ್ಲಿ ಕರಿಯುವುದರಿಂದ ಅವು ರಾಸಾಯನಿಕಗಳಿಗೆ ಪ್ರತಿಕ್ರಿಯಿಸುತ್ತವೆ.

ಬಹು ಮೂಲದ ಅಡುಗೆ ಎಣ್ಣೆ ಬಳಕೆ: ಡಯಟ್​ನಲ್ಲಿ ಅಡುಗೆ ಎಣ್ಣೆಗಳು ಪ್ರಮುಖ ಪಾತ್ರವಹಿಸುತ್ತದೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಬಹು ಮೂಲದ ಎಣ್ಣೆಗಳು ಉತ್ತಮ ಪ್ರಯೋಜನ ಹೊಂದಿರುತ್ತವೆ. ಇದು ಕಡಿಮೆ ಹೀರಿಕೊಳ್ಳುವಿಕೆ ತಂತ್ರಜ್ಞಾನ ಮತ್ತು ಉತ್ತಮ ತಾಪಮಾನದ ಸ್ಥಿರತೆ ಹೊಂದಿದ್ದು, ಇದು ಹೆಚ್ಚಿನ ತಾಪಾಮಾನದ ಅಡುಗೆ ವಿಧಾನದಲ್ಲಿ ಪ್ರಮುಖವಾಗಿರುತ್ತದೆ. ಕರಿದ ಪದಾರ್ಥಗಳು ಸೆಲೆಬ್ರಿಟಿ ಮೆನುಗಳಲ್ಲಿ ಪ್ರಮುಖ ಸ್ಥಾನ ಪಡೆಯುತ್ತವೆ. ಇದನ್ನು ಯಾವುದೇ ರೋಗದ ಅಪಾಯ ಇಲ್ಲದೇ, ಕಡಿಮೆ ಪ್ರಮಾಣದಲ್ಲಿ ಆಸ್ವಾದಿಸಬಹುದಾಗಿದೆ.

ತಡೆಗಟ್ಟಬಹುದಾದ ರೋಗಗಳಲ್ಲಿ ಡಯಟ್​ಗಳು ಪ್ರಮುಖ ಪಾತ್ರವಹಿಸಲಿದೆ. ಬಳಕೆ ಮಾಡುವ ಪದಾರ್ಥಗಳನ್ನು ಕನಿಷ್ಟ ಸಂಸ್ಕರಿಸಿದ ಮತ್ತು ಪೋಷಕಾಂಶ ಯುಕ್ತ ಆಹಾರಗಳಿಗೆ ಹೆಚ್ಚು ಒತ್ತು ನೀಡಲು ಸಾಧ್ಯವಿಲ್ಲ. ಅತಿ ಹೆಚ್ಚಿನ ಉಪ್ಪು, ಸಕ್ಕರೆ ಮತ್ತು ಸ್ಯಾಚುರೇಟೆಡ್​ ಫ್ಯಾಟ್​ಗಳು ಈ ಪಟ್ಟಿಯಿಂದ ಹೊರಗಿಡಲಾಗಿದೆ. ರೂಪಾಂತರಗೊಳ್ಳುವ ಫ್ಯಾಟ್​, ಅಲ್ಟ್ರಾ-ಪ್ರೊಸೆಸ್ಟಡ್​ ಆಹಾರ ಮತ್ತು ಸಂಸ್ಕರಿಸಿದ ಮಾಂಸಗಳು ತಡೆಗಟ್ಟಬಹುದಾದ ಆಹಾರದ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ: ಸಮಸ್ಯೆಯಾಗಿ ಕಾಡುವ ಬೊಜ್ಜಿನ ನಿರ್ವಹಣೆಗೆ ಇಲ್ಲಿದೆ ತಜ್ಞರ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.