ETV Bharat / sukhibhava

ಕೋವಿಡ್​​​ ಸಾಂಕ್ರಾಮಿಕ ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆಯೇ?

ಕೋವಿಡ್ ಸಾಂಕ್ರಾಮಿಕ ರೋಗವು ಎಲ್ಲಾ ವರ್ಗದ ಜನರನ್ನು ಬಾಧಿಸುತ್ತಿದೆ. ಆದ್ರೆ ಹೆಚ್ಚಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಕೋವಿಡ್​​​-19
ಕೋವಿಡ್​​​-19
author img

By

Published : Jan 14, 2022, 4:54 PM IST

ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯದ ಜೊತೆಗೆ ನ್ಯೂಯಾರ್ಕ್-ಪ್ರೆಸ್ಬಿಟೇರಿಯನ್ ಮೋರ್ಗಾನ್ ಸ್ಟಾನ್ಲಿ ಮಕ್ಕಳ ಆಸ್ಪತ್ರೆಯ ಸಂಶೋಧಕರ ತಂಡವು ಸಾಂಕ್ರಾಮಿಕ ರೋಗ ಬರುವ ಮೊದಲು ಮತ್ತು ರೋಗದ ಸಮಯದಲ್ಲಿ ಜನಿಸಿದ ಮಕ್ಕಳ ನಡುವಿನ ಮೆದುಳಿನಲ್ಲಿ ಯಾವ ರೀತಿ ವ್ಯತ್ಯಾಸಗಳಾಗಿವೆ ಎಂಬುದರ ಬಗ್ಗೆ ವಿಶ್ಲೇಷಿಸಿದ್ದಾರೆ.

ಕೋವಿಡ್​​-19 ಸಮಯದಲ್ಲಿ ಆಸ್ಪತ್ರೆಯಲ್ಲಿ ಜನಿಸಿರುವ ಹೆಚ್ಚಿನ ನವಜಾತ ಶಿಶುಗಳ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಡುಬಂದರೂ, ಸಾಂಕ್ರಾಮಿಕಕ್ಕೂ ಮೊದಲು ಜನಿಸಿದ ಮಕ್ಕಳಿಗೆ ಹೋಲಿಸಿದರೆ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ ಎಂದು ಅಧ್ಯಯನ ವರದಿ ತೋರಿಸಿದೆ.

ಮುಖ್ಯವಾಗಿ, ಮಕ್ಕಳ ಪೋಷಕರು ಸೋಂಕಿಗೆ ತುತ್ತಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ. ಸಾಂಕ್ರಾಮಿಕದ ಕಾರಣದಿಂದ ಪರಿಸರದಲ್ಲಿ ಉಂಟಾಗಿರುವ ಬದಲಾವಣೆಯೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ. ಕೊರೊನಾ ಲಾಕ್‌ಡೌನ್​ನಿಂದಾಗಿ ಮಕ್ಕಳು ಮನೆಯಲ್ಲಿಯೇ ಅಥವಾ ರೂಮಿನೊಳಗೆ ಪ್ರತ್ಯೇಕವಾಗಿ ಇರುವಂತೆ ಆಗಿದೆ. ಮಕ್ಕಳು ಆಟವಾಡುವ ಸಮಯ ಮತ್ತು ಅವರು ಬೇರೆಯವರ ಜೊತೆ ಮಾತನಾಡುವುದನ್ನು ಈ ಕೊರೊನಾ ಕಸಿದುಕೊಂಡಿದೆ. ಇದು ಮಕ್ಕಳ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎಂದು ಸಂಶೋಧನೆ ಹೇಳುತ್ತಿದೆ.

ಬ್ರೌನ್ ವಿಶ್ವವಿದ್ಯಾನಿಲಯದ ಅಡ್ವಾನ್ಸ್ಡ್ ಬೇಬಿ ಇಮೇಜಿಂಗ್ ಲ್ಯಾಬ್‌ನ ಸಂಶೋಧಕರ ನೇತೃತ್ವದಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿ ಸಾಂಕ್ರಾಮಿಕದ ಸಮಯದಲ್ಲಿ ಶಿಶುಗಳ ದೃಶ್ಯ ಮತ್ತು ಭಾಷಾ ಕೌಶಲ್ಯಗಳು ಕುಸಿದಿವೆ ಎಂದು ಕಂಡುಹಿಡಿದಿದೆ. ಕಡಿಮೆ-ಆದಾಯ ಹೊಂದಿರುವ ಕುಟುಂಬಗಳ ಶಿಶುಗಳು ದೊಡ್ಡ ಹಾನಿ ಅನುಭವಿಸುತ್ತಿದ್ದಾರೆ ಎಂಬುದನ್ನು ಈ ತಂಡವು ಕಂಡುಹಿಡಿದಿದೆ. ಹುಡುಗಿಯರಿಗಿಂತ ಹುಡುಗರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಸಾಂಕ್ರಾಮಿಕ ರೋಗವು ಇನ್ನೂ ದೀರ್ಘಕಾಲದವರೆಗೆ ಮುಂದುವರೆದರೆ ಮಕ್ಕಳು ಇನ್ನೂ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಾರೆ.

ಇದನ್ನೂ ಓದಿ: ಮಕರ ಸಂಕ್ರಾಂತಿ: ಹಬ್ಬದ ವಿಶೇಷತೆ ಹೆಚ್ಚಿಸುವ ಆರೋಗ್ಯಕರ ಆಹಾರ ಪದಾರ್ಥಗಳು ಇಲ್ಲಿವೆ

SARS-CoV-2 ಸೋಂಕಿಗೆ ಒಳಗಾದಾಗ ಮಕ್ಕಳು ಸಾಮಾನ್ಯವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಗರ್ಭಾವಸ್ಥೆಯಲ್ಲಿ ಸಾಂಕ್ರಾಮಿಕ-ಸಂಬಂಧಿತ ಒತ್ತಡವು ಕೆಲವು ಮಕ್ಕಳಲ್ಲಿ ಭ್ರೂಣದ ಮೆದುಳಿನ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದು ಪ್ರಾಥಮಿಕ ಸಂಶೋಧನೆ ಸೂಚಿಸುತ್ತದೆ.

ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ತಂಡವು ಸಾಂಕ್ರಾಮಿಕ ಸಮಯದಲ್ಲಿ 8,000 ಕ್ಕೂ ಹೆಚ್ಚು ಗರ್ಭಿಣಿಯರನ್ನು ಸಮೀಕ್ಷೆ ಮಾಡಿದೆ. ಪ್ರಿಪ್ರಿಂಟ್ ಪೋಸ್ಟ್ ಮಾಡಿದ ಅಧ್ಯಯನ ವರದಿ ಪ್ರಕಾರ, ಹೆಚ್ಚು ಆತಂಕ ಅಥವಾ ಖಿನ್ನತೆಯ ಲಕ್ಷಣಗಳನ್ನು ಹೊಂದಿರುವ ತಾಯಂದಿರಿಗೆ ಜನಿಸಿದ ಶಿಶುಗಳ ಮೆದುಳಿನ ಬೆಳವಣಿಗೆಗೆ ತೊಂದರೆಯಾಗಿದೆ ಎಂದು ತಿಳಿದುಬಂದಿದೆ.

ಆದಾಗ್ಯೂ ಕೆಲವು ಸಂಶೋಧಕರು, ಮೆದುಳಿನ ಅಭಿವೃದ್ಧಿ ಕಡಿಮೆ ಇರುವ ಅನೇಕ ಮಕ್ಕಳ ನರಮಂಡಲ ಮುಂದೆ ವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ. "ಸಾಂಕ್ರಾಮಿಕ ರೋಗ ಈ ಪೀಳಿಗೆಯ ಮಕ್ಕಳ ಮೇಲೆ ಇಷ್ಟೊಂದು ಪರಿಣಾಮ ಬೀರಲಿದೆ ಎಂದು ನಾವು ನಿರೀಕ್ಷಿಸಿರಲಿಲ್ಲ" ಎಂದು ನ್ಯೂಯಾರ್ಕ್ ಯೂನಿವರ್ಸಿಟಿ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್‌ನ ಮಕ್ಕಳ ಮತ್ತು ಹದಿಹರೆಯದವರ ಮನಶ್ಶಾಸ್ತ್ರಜ್ಞ ಮೊರಿಯಾ ಥಾಮ್ಸನ್‌ ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.