ಕ್ಯಾಲಿಫೋರ್ನಿಯಾ: ಅಧಿಕವಾಗಿ ಸೋಯಾಬೀನ್ ಎಣ್ಣೆ ಬಳಕೆಯೂ ಸ್ಥೂಲಕಾಯ ಮತ್ತು ಮಧುಮೇಹ ಜೊತೆಗೆ ಆಟಿಸಂ, ಅಲ್ಝಮೈರ್, ಒತ್ತಡ ಮತ್ತು ಖಿನ್ನತೆಯೊಂದಿಗೆ ಸಂಬಂಧ ಹೊಂದಿದೆ. ದೊಡ್ಡ ಕರುಳಿನ ದೀರ್ಘಕಾಲದ ಉರಿಯೂತದಿಂದ ಗುಣಲಕ್ಷಣಗಳನ್ನು ಹೊಂದಿರುವ ಒಂದು ರೀತಿಯ ಉರಿಯೂತದ ಕರುಳಿನ ಕಾಯಿಲೆ ಅಲ್ಸರೇಟಿವ್ ಕೊಲೈಟಿಸ್ ಅನ್ನು ಬೆಳೆಯುತ್ತಿರುವ ಪಟ್ಟಿಯಲ್ಲೂ ಕೂಡ ಇದೆ.
ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ಸಂಶೋಧಕರು, ಇಲಿಯನ್ನು 24 ವಾರಗಳ ಕಾಲ ಸೋಯಾಬೀನ್ ಎಣ್ಣೆಯ ಡಯಟ್ಗೆ ಪ್ರಯೋಗಾಲಯದಲ್ಲಿ ಒಳಪಡಿಸಿ ಕರುಳಿನ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಪ್ರಯೋಜನಾತ್ಮಕ ಬ್ಯಾಕ್ಟೀರಿಯಾಗಳು ಕಡಿಮೆಯಾಗಿದ್ದು, ಹಾನಿಕಾರಕ ಬ್ಯಾಕ್ಟೀರಿಯಾಗಳು ಹೆಚ್ಚಾಗಿವೆ.
ಭಾರತ, ಬ್ರೆಜಿಲ್, ಚೀನಾದಂತಹ ಬೇರೆ ದೇಶಗಳಿಗೆ ಹೋಲಿಕೆ ಮಾಡಿದಾಗ ಅಮೆರಿಕದಲ್ಲಿ ಸಾಮಾನ್ಯವಾಗಿ ಹೆಚ್ಚು ಸೋಯಾಬೀನ್ ಎಣ್ಣೆಯನ್ನು ಬಳಕೆ ಮಾಡಲಾಗುತ್ತದೆ. ಅಮೆರಿಕದಲ್ಲಿ ಸೋಯಾಬಿನ್ ಅನ್ನು 1970ರಲ್ಲಿ ಪ್ರಾಣಿಗಳ ಬಳಕೆಗೆ ಬಂದಿತು. ಇದರ ಇದರ ಉತ್ಪನ್ನಗಳ ಹೆಚ್ಚಾಗಿ, ಸೋಯಾಬೀನ್ ಎಣ್ಣೆ ಬೆಳವಣಿಗೆ ಆಯಿತು. ಸೋಯಾ ಬೀನ್ ಎಣ್ಣೆ ಪ್ರೋಟಿನ್ ಸಮೃದ್ಧವಾಗಿದ್ದು, ಇದು ಸುಲಭ ಮತ್ತು ಹಗ್ಗದಲ್ಲಿ ಬೆಳೆಯಬಹುದಾಗಿದೆ.
ಪಾಲಿಯೋಡೈಟ್ ಆಧಾರಿಸಿ ನಮ್ಮ ದೇಹಕ್ಕೆ ದಿನಕ್ಕೆ 1-2 ರಷ್ಟು ಲಿನೋಲಿಕ್ ಆಮ್ಲ ಬೇಕಾಗುತ್ತದೆ. ಅಮೆರಿಕನ್ನರು ಇಂದು ದಿನಕ್ಕೆ 8-10ರಷ್ಟು ಶಕ್ತಿಯಲ್ಲಿ ಲಿನೋಲಿನ್ ಆಮ್ಲದಿಂದ ಪಡೆಯುತ್ತಿದ್ದಾರೆ. ಇದರಲ್ಲಿ ಬಹುತೇಕ ಸೋಯಾಬೀನ್ ಎಣ್ಣೆಯಿಂದ ಆಗಿದೆ. ಅಧಿಕ ಲಿನೋಲಿಕ್ ಆಮ್ಲ ಕರುಳಿನ ಸೂಕ್ಷ್ಮಜೀವಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯದ ಲೇಖಕರಾದ ಪೂನಮ್ಜೊತ್ ಡಿಯೊಲ್ ತಿಳಿಸಿದ್ದಾರೆ. ಈ ಸಂಶೋಧನೆಯನ್ನು ಗಟ್ಟ ಮೈಕ್ರೊಬ್ಸ್ನಲ್ಲಿ ಜುಲೈ 3ರಂದು ಪ್ರಕಟಿಸಲಾಗಿದೆ.
ಅಧಿಕ ಸೋಯಾಬೀನ್ ಎಣ್ಣೆ ಕರುಳಿನಲ್ಲಿ ಅಂಟಿಕೊಂಡಿರುವ ಆಕ್ರಮಣಕಾರಿ ಇ ಕೊಲಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ. ಈ ಬ್ಯಾಕ್ಟೀರಿಯಂ ತನ್ನ ಪೌಷ್ಟಿಕಾಂಶದ ಬೇಡಿಕೆಗಳನ್ನು ಪೂರೈಸಲು ಇಂಗಾಲದ ಮೂಲವಾಗಿ ಲಿನೋಲಿಯಿಕ್ ಆಮ್ಲವನ್ನು ಬಳಸುತ್ತದೆ. ಇದಲ್ಲದೆ, ಕರುಳಿನಲ್ಲಿರುವ ಹಲವಾರು ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳು ಲಿನೋಲಿಕ್ ಆಮ್ಲವನ್ನು ತಡೆದುಕೊಳ್ಳಲು ಸಾಧ್ಯವಾಗುವುದೇ ಸಾಯುತ್ತವೆ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗುತ್ತದೆ. ಮಾನವರಲ್ಲಿ ಐಬಿಡಿ ಆಗಲು ಪ್ರಮುಖ ಕಾರಣ ಈ ಕೊಲಿ ಆಗಿದೆ. ಇದು ಆರೋಗ್ಯಕರ ಬ್ಯಾಕ್ಟೀರಿಯಾ ಸಾವಿಗೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಊರಿಯೂತದ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಪರ್ಯಾಪ್ತ ಕೊಬ್ಬು ಅನಾರೋಗ್ಯಕವಾಗಿದೆ. ಎಲ್ಲಾ ಅಪರ್ಯಾಪ್ತ ಕೊಬ್ಬುಗಳು ಆರೋಗ್ಯಕರವಾಗಿದೆ. ಅಪರ್ಯಾಪ್ತ ಕೊಬ್ಬಿನಲ್ಲಿ ಹಲವು ವಿಧ ಇದ್ದು, ಅವು ಆರೋಗ್ಯಯುತವಾಗಿದೆ. ಅಪರ್ಯಾಪ್ತ ಕೊಬ್ಬಿನ ಮೀನಿನ ಎಣ್ಣೆ ಹಲವು ಆರೋಗ್ಯಕರ ಪರಿಣಾಮ ಹೊಂದಿದೆ. ಇದೇ ಹಿನ್ನೆಲೆ ಜನರು ಇತರೆ ಎಣ್ಣೆಗಳಿಗಿಂತ ಸೋಯಾಬೀನ್ ಕೂಡ ಸುರಕ್ಷಿತ ಮತ್ತು ಆರೋಗ್ಯಕರ ಎಂದು ನಂಬಿದ್ದಾರೆ.
ಲಿನೋಲಿಕ್ ಆಮ್ಲ ಅಗತ್ಯವಾದ ಕೊಬ್ಬಿನ ಆಮ್ಲವಾಗಿದೆ. ಸೋಯಾಬೀನ್ ಎಣ್ಣೆಯಲ್ಲಿ ಶೇ 19ರಷ್ಟು ಲಿನೋಲಿಕ್ ಆಮ್ಲ ಇದೆ. ಅಮೆರಿಕ ಹಾರ್ಟ್ ಅಸೋಸಿಯೇಷನ್ ಶಿಫಾರಸು ಮಾಡುವಂತೆ ಪ್ರತಿನಿತ್ಯ ಶೇ 5-10ರಷ್ಟು ಕ್ಯಾಲೋರಿಗಳು ಸಾಕು. ಇವು ಒಮೆಗಾ-6, ಲಿನೋಲಿಕ್ ಆಮ್ಲದಂತಹ ಪಾಲಿ ಅಪರ್ಯಾಪ್ತ ಕೊಬ್ಬಿನ ಆಮ್ಲವಾಗಿದೆ. ಇದರಿಂದ ಹೃದಯ ಆರೋಗ್ಯಕರವಾಗಿದೆ. ಅನೇಕ ಸೂರ್ಯಕಾಂತಿಯಂತಹ ಅನೇಕ ಬೀಜದ ಎಣ್ಣೆಗಳು ಲಿನೋಲಿಕ್ ಆಮ್ಲದಿಂದ ಸಮೃದ್ಧವಾಗಿದ್ದು, ಪ್ರಾಣಿಗಳ ಕೊಬ್ಬುಗಳು ಕೂಡ ಇದರಿಂದ ಸಮೃದ್ಧವಾಗಿದೆ.
ಡಿಯೋಲ್ ಪ್ರಕಾರ, ಆಲಿವ್ ಎಣ್ಣೆ ಕೂಡ ಕಡಿಮೆ ಮೌಲ್ಯದ ಲಿನೋಲಿಕ್ ಆಮ್ಲವನ್ನು ಹೊಂದಿದ್ದು, ಇದು ಸೇವನೆಗೆ ಆರೋಗ್ಯಯುತವಾಗಿದೆ. ಆಲಿವ್ ಎಣ್ಣೆ ಮೆಡಿಟೇರಿಯನ್ ಡಯಟ್ನ ಮೂಲವಾಗಿದೆ. ಇದು ಆರೋಗ್ಯಕರವಾಗಿದ್ದು, ಕಡಿಮೆ ಸ್ಥೂಲಕಾಯ ಉತ್ಪಾದನೆ ಮಾಡುತ್ತದೆ. ಇದು ಸೋಯಾಬೀನ್ ಎಣ್ಣೆಯಂತೆ ಅನಾರೋಗ್ಯರ ಬ್ಯಾಕ್ಟೀರಿಯಾ ಉತ್ಪಾದನೆ ಮಾಡುವುದಿಲ್ಲ.
ಇದನ್ನೂ ಓದಿ: ಅತಿಯಾದ ಆ್ಯಂಟಿಬಯೋಟಿಕ್ ಬಳಕೆಯಿಂದ ಗಂಭೀರ ಅಡ್ಡ ಪರಿಣಾಮ!