ETV Bharat / sukhibhava

30ರ ಬಳಿಕ ತಾಯಿಯಾಗುವ ಸಾಧ್ಯತೆ ಹೆಚ್ಚಿಸಿಕೊಳ್ಳಬೇಕೇ?: ಇಲ್ಲಿದೆ ಸಲಹೆ.. - ಅಂಡಾಣುಗಳು ಉತ್ಪತ್ತಿ

30ರ ಬಳಿಕ ತಾಯ್ತನ ಸುಲಭವಲ್ಲ. ಜೀವನ ಶೈಲಿ ಇನ್ನಿತರ ಕಾರಣದಿಂದ ಫಲವತ್ತತೆ ಕುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ವಯಸ್ಸಿನ ಬಳಿಕ ಆರೋಗ್ಯಯುತ ಗರ್ಭಧಾರಣೆಗೆ ಕೆಲವು ಜಾಗ್ರತೆ ಮುಖ್ಯ.

30ರ ಬಳಿಕವೂ ತಾಯಿಯಾಗುವ ಸಾಧ್ಯತೆಯನ್ನು ಹೆಚ್ಚಿಸಿ; ಇಲ್ಲಿದೆ ಕೆಲವು ಸಲಹೆ
increase-the-chances-of-becoming-a-mother-even-after-30-here-are-some-tips
author img

By

Published : Jan 10, 2023, 1:08 PM IST

ವಯಸ್ಸಾದಂತೆ ಮಹಿಳೆಯರಲ್ಲಿನ ಫಲವತ್ತತೆಯ ಪ್ರಮಾಣ ಕಡಿಮೆ ಆಗುತ್ತದೆ. ಮಹಿಳೆಯರಲ್ಲಿ ಸೀಮಿತ ಪ್ರಮಾಣದಲ್ಲಿ ಅಂಡಾಣುಗಳು ಉತ್ಪತ್ತಿಯಾಗುವುದರೊಂದಿಗೆ ಅದರ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಆದರೂ ವಯಸ್ಸು 30 ದಾಟಿದ ಬಳಿಕ ಮಗು ಮಾಡಿಕೊಳ್ಳಲು ನಿರ್ಧರಿಸುವ ಮಹಿಳೆಯರ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯಯುತ ಮಗು ಪಡೆಯಬಹುದು.

ಮಗುವಿನ ವಿಚಾರದಲ್ಲಿ ತಾಯಿಯ ಫಲವತ್ತತೆಯಂತೆಯೇ ಪುರುಷರಲ್ಲಿನ ಕಡಿಮೆ ವೀರ್ಯಾಣು ಚಲನಶೀಲತೆ ಕೂಡ ಪರಿಣಾಮ ಬೀರುತ್ತದೆ. ನಲ್ವತ್ತು ವರ್ಷದ ಹಿಂದೆ ಪುರುಷರೊಬ್ಬರಲ್ಲಿದ್ದ ವೀರ್ಯಾಣು ಸಂಖ್ಯೆಯ ಅರ್ಧದಷ್ಟನ್ನು ಇಂದು ವ್ಯಕ್ತಿ ಹೊಂದಿದ್ದು, ಈ ವೀರ್ಯವು ಸ್ವಾಭಾವಿಕವಾಗಿ ಸ್ತ್ರೀ ಸಂತಾನೋತ್ಪತ್ತಿಗೆ ಬರುವುದಿಲ್ಲ ಎಂದು ನವದೆಹಲಿಯ ವೈದ್ಯಕೀಯ ನಿರ್ದೇಶಕ ಮತ್ತು ಬಂಜೆತನ ತಜ್ಞೆ ಡಾ.ಶೋಭಾ ಗುಪ್ತಾ ತಿಳಿಸಿದ್ದಾರೆ.

ಯಾವುದೇ ದೈಹಿಕ ಸಮಸ್ಯೆಗಳು ಇಲ್ಲದಿದ್ದರೆ, ಜೀವನ ಶೈಲಿಯಲ್ಲಿ ಅಂಶಗಳು ಕೂಡ ಪರಿಣಾಮ ಬೀರುತ್ತವೆ. ಇದಕ್ಕೆ ತೂಕದ ಸಮಸ್ಯೆ ಮತ್ತು ಮದ್ಯಸೇವನೆ ಕೂಡ ಕಾರಣವಾಗುತ್ತದೆ. ಫಲವತ್ತತೆ ಹೆಚ್ಚಿಸಲು ಡಾ.ಶೋಭಾ ಕೆಲವು ಸಲಹೆಗಳನ್ನು ನೀಡಿದ್ದು, ಇದರಲ್ಲಿ ಲೈಂಗಿಕ ಜೀವನ ಮತ್ತು ಎಷ್ಟು ಪ್ರಮಾಣದ ಜಂಕ್​ ಫುಡ್‌ ಸೇವನೆ ಮಾಡಬೇಕು ಎಂಬುದನ್ನು ತಿಳಿಯಬೇಕಿದೆ.

ಆರೋಗ್ಯಯುತ ಆಹಾರ ಸೇವಿಸಿ: ಜಂಕ್ ಫುಡ್‌​ ಸೇವನೆ ಕಡಿಮೆ ಮಾಡುವುದು ಉತ್ತಮ ಅಭ್ಯಾಸ. ನಿಮ್ಮ ದೇಹವನ್ನು ಸುಸ್ಥಿತಿಯಲ್ಲಿಡಲು ಪೋಷಕಾಂಶ ಸೇವಸಿ. ಹಣ್ಣು ಮತ್ತು ತರಕಾರಿ, ಕಾರ್ಬೋಹೈಡ್ರೆಟ್​, ಪ್ರೋಟಿನ್​ ಮತ್ತು ಉತ್ತಮ ಕೊಬ್ಬುಗಳನ್ನು ಹೊಂದುವುದು ಅಗತ್ಯವಾಗಿದೆ. ಗರ್ಭಾವಸ್ಥೆಯಲ್ಲಿ ರಕ್ತಹೀನತೆ ತೊಡೆದು ಮಹಿಳೆಯರು ಕ್ಯಾರೆಟ್​ ಸೇವನೆ ಮಾಡುವುದೊಳಿತು. ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಜಿಂಕ್​ ಕೂಡ ಪ್ರಮುಖವಾಗಿದೆ.

ಕಡಿಮೆ ಒತ್ತಡ: ಒತ್ತಡವೂ ನೀವು ತಾಯಿಯಾಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒತ್ತಡ ಅನೇಕ ಅನಾರೋಗ್ಯ ಮತ್ತು ಅನಾನುಕೂಲತೆಗೆ ಕಾರಣವಾಗುತ್ತದೆ. ನಿಮ್ಮ ಮಿದುಳಿನ ಹೈಪೋಥಲಮಸ್​ ಹಾರ್ಮೋನ್​ ಮತ್ತು ಋತುಚಕ್ರವನ್ನು ನಿಯಂತ್ರಿಸುತ್ತದೆ. ಇದು ಒತ್ತಡದಿಂದ ಪರಿಣಾಮಕ್ಕೆ ಒಳಗಾಗುತ್ತದೆ. ಇದು ಅಂಡಾಂಶ ಉತ್ಪಾದನೆ ಫಲಿತಾಂಶವನ್ನು ವಿಳಂಬಿಸಬಹುದು ಇಲ್ಲವೇ ಮಾಡದೇ ಇರಬಹುದು. ಈ ಹಿನ್ನೆಲೆಯಲ್ಲಿ ಒತ್ತಡರಹಿತವಾಹಿರುವುದು ಅವಶ್ಯವಾಗಿದೆ. ನೈಸರ್ಗಿಕ ಒತ್ತಡದಿಂದ ತಪ್ಪಿಸಿಕೊಳ್ಳಲು ಯೋಗ ಅಥವಾ ಧ್ಯಾನ ಒಳ್ಳೆಯ ಜೀವನ ವಿಧಾನ.

ಚಟಗಳ ಬಗ್ಗೆ ಗಮನವಿರಲಿ: ತಂಬಾಕು, ಆಲ್ಕೋಹಾಲ್​ ಅತಿ ಹೆಚ್ಚು ಮಾಂಸಾಹಾರ ಸೇವನೆಯಿಂದ ಗರ್ಭಿಣಿಯರು ದೂರವಿರಬೇಕು. ಗರ್ಭಿಣಿ ಆಗುವ ಆಲೋಚನೆಗೆ ಮುನ್ನವೇ ಇವುಗಳ ಸೇವನೆಯಿಂದ ದೂರವಿರುವುದು ಅವಶ್ಯಕವಾಗಿದೆ. ಮದ್ಯ ಈಸ್ಟ್ರೋಜೆನ್​ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಅಂಡಾಗುಗಳ ಸಂಖ್ಯೆಯನ್ನೂ ಕುಗ್ಗಿಸುತ್ತದೆ. ಅತಿಹೆಚ್ಚು ಕಾಫಿ, ಟಿಯಿಂದ ದೂರವಿರಿ. ಅತಿ ಹೆಚ್ಚಿನ ಕೆಫೆನ್ ಮಟ್ಟ ಆಸ್ಟ್ರೋಜೆನ್​ ಮಟ್ಟವನ್ನು ಕಡಿಮೆ ಮಾಡಿ, ಅಂಡಾಣುಗಳ ಬಿಡುಗಡೆಯನ್ನು ತಡೆಹಿಡಿಯುವುದರಿಂದ ಬೇಗ ಗರ್ಭಿಣಿಯಾಗುವುದನ್ನು ತಡೆಯುತ್ತದೆ.

ಸಾಮಾನ್ಯ ಲೈಂಗಿಕ ಕ್ರಿಯೆ: ಮಗು ಹೊಂದಬೇಕು ಎಂಬ ಇಚ್ಛೆ ಹೊಂದಿರುವ ದಂಪತಿಗಳು ಕನಿಷ್ಠ ಪಕ್ಷ ದಿನಬಿಟ್ಟು ದಿನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಕ್ರಿಯೆಯನ್ನು ನೋವಿನಂತೆ ಭಾವಿಸದೆ ಸಂತಸ ಪಡಬೇಕು. ಅದರಲ್ಲಿ ಮಹಿಳೆಯರ ಋತುಚಕ್ರದ ಸಮಯದ ಅವಧಿ ಪ್ರಮುಖವಾಗಿದ್ದು, ಅಂಡಾಣು ಉತ್ಪತ್ತಿಯಾಗುವ ಸಮಯದಲ್ಲಿ ಈ ಕ್ರಿಯೆ ನಡೆಸುವುದರಿಂದ ಗರ್ಭವತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಮಯ ಮೀರುವವರೆಗೆ ಕಾಯಬೇಡಿ: 30 ವರ್ಷಕ್ಕೆ ಮುನ್ನವೇ ಗರ್ಭವತಿ ಆಗುವಂತೆ ತಯಾರಿ ನಡೆಸಬೇಕು. ಗರ್ಭಪಾತ, ಅಂಡಾಣುಗಳ ಗುಣಮಟ್ಟ ಮತ್ತು ಉತ್ಪಾದನೆಯಲ್ಲಿ ಕುಗ್ಗುವಿಕೆ ಆಗುವ ಮುನ್ನವೇ ತಾಯ್ತನದ ಆಲೋಚನೆ ನಡೆಸಬೇಕು. 30 ದಾಟಿದ ಮಹಿಳೆಯರಲ್ಲಿ ಕುಟುಂಬದ ಒತ್ತಡ, ಮಾಸಿಕ ಒತ್ತಡಗಳೂ ಸೇರಿದಂತೆ ಅನೇಕ ಸಮಸ್ಯೆಗಳು ತಾಯ್ತನ ವಿಳಂಬಕ್ಕೆ ಕಾರಣವಾಗುವಂತೆ ಮಾಡುತ್ತದೆ.

ವೈದ್ಯರನ್ನು ಭೇಟಿಯಾಗಿ: ತಾಯ್ತನ ವಿಳಂಬಕ್ಕೆ ಅನೇಕ ಬಾರಿ ದೈಹಿಕ ಸಮಸ್ಯೆಗಳು ಕೂಡ ಕಾರಣವಾಗುತ್ತವೆ. ಪಿಸಿಒಎಸ್​, ಹಾರ್ಮೋನ್​, ಮೆನೋಪನಸ್​​, ಪಾಲೊಪೈನ್​ ಟ್ಯೂಬ್​ ಅಬ್​​ಸ್ಟ್ರಾಕ್​ನಂತಹ ಅನೇಕ ಸಮಸ್ಯೆಗಳು ಕಾರಣವಾಗುತ್ತದೆ. ನಿಮ್ಮ ಸಂಗಾತಿಯಲ್ಲಿನ ನ್ಯೂನತೆಗಳು ಕೂಡ ಕೆಲವೊಮ್ಮೆ ನಿಮ್ಮ ತಾಯ್ತನಕ್ಕೆ ವಿಳಂಬವಾಗಬಹುದು. ವೀರ್ಯಾಣು ಕೊರತೆ, ವೀರ್ಯಾಣು ನ್ಯೂನತೆಗಳು. ಟ್ರಾಮಾ, ಕ್ಯಾನ್ಸರ್​​, ಸರ್ಜರಿ, ಸೋಂಕುಗಳು ಕೂಡ ವೀರ್ಯಾಣು ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಪುರುಷರು ಅಗತ್ಯದಷ್ಟು ವೀರ್ಯಾಣುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರ ಭೇಟಿ ಅವಶ್ಯಕವಾಗಿರುತ್ತದೆ. ​

ಇದನ್ನೂ ಓದಿ: ಚಳಿಗಾಲದಲ್ಲಿ ಗರ್ಭಿಣಿಯರು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಉತ್ತಮ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.