ETV Bharat / sukhibhava

ಫಿಸಿಯೋಥೆರಪಿ ಕೋವಿಡ್​ ರೋಗಿಗಳಲ್ಲಿ ಆರಾಮದಾಯಕ ಉಸಿರಾಟಕ್ಕೆ ಸಹಕಾರಿ.. ನೀವೂ ಟ್ರೈ ಮಾಡಿ.. - ಶ್ವಾಸಕೋಶ

ಕೋವಿಡ್​ ರೋಗ ಹಾಗೂ ಉಸಿರಾಟದ ನಡುವೆ ನೇರಾನೇರ ಸಂಬಂಧವಿರುವಾಗ, ಕಡಿಮೆ ರೋಗನಿರೋಧಕ ಶಕ್ತಿ ಅಥವಾ ದುರ್ಬಲ ಉಸಿರಾಟ ಸಮಸ್ಯೆ ಇರುವವರಿಗೆ ಕೋವಿಡ್​ ಮತ್ತಷ್ಟು ಕಾಡಬಹುದು. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಮತ್ತು ಉಸಿರಾಟವನ್ನು ಬಲಪಡಿಸುವುದು ಎಂಬುದರ ಕುರಿತು ನಾವು ಸಾಕಷ್ಟು ಕೇಳುತ್ತೇವೆ. ಈ ಸ್ಥಿತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಮನೆಯಲ್ಲಿ ಅದರ ನಿರ್ವಹಣೆ ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳಲು ಈಟಿವಿ ಭಾರತ್ ಸುಖೀಭವ ತಂಡ ಫಿಸಿಯೋಥೆರಪಿಸ್ಟ್,​ ಪರ್ಯಾಯ ಔಷಧ ಅಭ್ಯಾಸಕಾರರು ಮತ್ತು ಯೋಗ ಶಿಕ್ಷಕಿ ಡಾ. ಜಾಹ್ನವಿ ಕಥ್ರಾನಿ ಅವರೊಂದಿಗೆ ಸಂವಾದ ನಡೆಸಿತು..

breath
breath
author img

By

Published : Jun 19, 2021, 7:05 PM IST

ಫಿಸಿಯೋಥೆರಪಿಯಲ್ಲಿ ಏನಿದೆ, ಅದು ಮುಖ್ಯವಾಗಿ ಕೋವಿಡ್​ ಸಮಯದಲ್ಲಿ ನಮಗೆ ಹೇಗೆ ಮತ್ತು ಏಕೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯೋಣ. ಉಸಿರಾಟದ ಕಾರ್ಯ ಮುಖ್ಯವಾಗಿ ದೇಹದಲ್ಲಿನ ಆಮ್ಲಜನಕದ ಸೇವನೆಯ ನಿರ್ವಹಣೆ ಮತ್ತು ನಾವು ಉಸಿರಾಡುವ ಗಾಳಿಯಲ್ಲಿರುವ ಹಾನಿಕಾರಕ ಹೊರ ಕಣಗಳನ್ನು ಫಿಲ್ಟರ್ ಮಾಡುವ ಮೂಲಕ ದೇಹವನ್ನು ರಕ್ಷಿಸುವುದು ; ಆದ್ದರಿಂದ, ಈ ಎರಡು ಅಂಶಗಳು ಗಮನಹರಿಸಲು ಕೋವಿಡ್​ ರೋಗಿಗಳಲ್ಲಿ ನಿರ್ಣಾಯಕ.

ಫಿಸಿಯೋಥೆರಪಿ ಉಸಿರಾಟದ ಶಕ್ತಿಯನ್ನು ಹೆಚ್ಚಿಸಲು ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನಿಯಂತ್ರಣ ಮತ್ತು ವಿಶ್ರಾಂತಿ : ನಿಮಗೆ ಎಷ್ಟೋ ಸಾಧ್ಯವೋ ಅಷ್ಟು ನಿಧಾನವಾಗಿ ಉಸಿರಾಡಿ. ಉಸಿರನ್ನು ಹಿಡಿದುಕೊಳ್ಳಿ ಮತ್ತು ಮನಸ್ಸಿನಲ್ಲಿ 1,2,3, ಎಂದು…ಎಣಿಸಿ. ನಂತರ, ನಿಧಾನವಾಗಿ ಉಸಿರು ಬಿಡಿ. ಮತ್ತೆ ಉಸಿರು ಹಿಡಿದುಕೊಳ್ಳಿ ಆದರೆ 1,2,3, ಎಂದು…ಎಣಿಸುವಾಗ ಉಸಿರು ತೆಗೆದುಕೊಳ್ಳಬೇಡಿ.

ಲಯಬದ್ಧ ಉಸಿರಾಟ : ಮನಸ್ಸಿನಲ್ಲಿ 123 ಎಂದು ನಿರಂತರವಾಗಿ ಎಣಿಸಿಕೊಳ್ಳುತ್ತಾ ನಿಧಾನವಾಗಿ ಉಸಿರಾಡಿ. ಈ ಸಮಯದಲ್ಲಿ ಉಸಿರು ಹಿಡಿದುಕೊಳ್ಳಬೇಡಿ. ನಿಧಾನವಾಗಿ ಉಸಿರಾಡಿ.

ಕಿಬ್ಬೊಟ್ಟೆಯ ಬಗ್ಗೆ ನಿಗಾ : ಎರಡೂ ಕೈಗಳನ್ನು ಯಾವುದೇ ಒತ್ತಡವಿಲ್ಲದೆ ಕಿಬ್ಬೊಟ್ಟೆಯ ಪ್ರದೇಶದ ಮೇಲೆ ಇರಿಸಿ. ನಂತರ ನಿಧಾನವಾಗಿ ಉಸಿರಾಡಿ. ಕಿಬ್ಬೊಟ್ಟೆಯ ಸ್ನಾಯುಗಳ ಚಲನೆಯನ್ನು ಗಮನಿಸಿ.

ಎದೆಯ ಬಗ್ಗೆ ಜಾಗೃತಿ : ಕೈಗಳನ್ನು ಎದೆಯ ಕೆಳಭಾಗದಲ್ಲಿ ಮತ್ತು ಎದೆಯ ಪಕ್ಕದಲ್ಲಿ ಇರಿಸಿ. ಎದೆಯ ಚಲನೆಯನ್ನು ಗಮನಿಸಿ ಉಸಿರು ತೆಗೆದುಕೊಂಡು ಉಸಿರು ಬಿಡಿ ಮತ್ತು ಪ್ರತಿ ಬಾರಿಯೂ ಎದೆಯನ್ನು ಗರಿಷ್ಠವಾಗಿ ಉಬ್ಬಿಸಲು ಪ್ರಯತ್ನಿಸಿ.

ಭುಜದ ಜಾಗೃತಿ : ಭುಜದ ಬದಿಯಲ್ಲಿ ಕೈಗಳನ್ನು ಇರಿಸಿ ಮತ್ತು ಪ್ರತಿ ಉಚ್ವಾಸ-ನಿಶ್ವಾಸದೊಂದಿಗೆ ಭುಜದ ಸ್ನಾಯುಗಳ ಎತ್ತರ ಮತ್ತು ಚಲನೆಯನ್ನು ಗಮನಿಸಿ. ಉಸಿರಾಟವನ್ನು ಹೆಚ್ಚಿಸಲು ಪ್ರಯತ್ನಿಸಿ.

ಬಲೂನ್ ವ್ಯಾಯಾಮ : ಬಲೂನ್ ಅನ್ನು ನಿಧಾನವಾಗಿ ಊದಲು ಗರಿಷ್ಠವಾಗಿ ಉಸಿರಾಡಿ ಮತ್ತು ಉಸಿರು ಬಿಡಿ ಮತ್ತು ಬಲೂನ್‌ನಲ್ಲಿ ಪ್ರತಿ ಉಸಿರಾಟದ ನಂತರ ಉಸಿರನ್ನು ಹಿಡಿದುಕೊಳ್ಳಿ. ಬಲೂನ್ ಹಿಡಿದು ಮೂಗಿನ ಮೂಲಕ ನಿಧಾನವಾಗಿ ಉಸಿರಾಡಿ.

ತುಟಿಯಲ್ಲಿ ಉಸಿರಾಟ : ಮೂಗಿನ ಮೂಲಕ ಉಸಿರಾಡಿ ಮತ್ತು ಮೀನು ಆಕಾರ ಅಥವಾ ತುಟಿ ಮುಂದೆ ಮಾಡಿ ತುಟಿಗಳಿಂದ ಬಾಯಿಯ ಮೂಲಕ ಉಸಿರು ಬಿಡಿ. ಇದು ಶ್ವಾಸಕೋಶದ ಅಲ್ವಿಯೋಲಿಯ ವಿಸ್ತರಣಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಗಾಳಿಯನ್ನು ಉಸಿರಾಡಲು ಕಾರಣವಾಗಿರುವ ಶ್ವಾಸಕೋಶದ ಕೋಶಗಳಿಗೆ ಮತ್ತಷ್ಟು ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.

ಮೇಲಿನ ಎಲ್ಲಾ ವ್ಯಾಯಾಮಗಳನ್ನು ಪ್ರತಿದಿನ ಆರಂಭದಲ್ಲಿ 2 ಬಾರಿ ಮಾಡಬೇಕು. ನಂತರ 10 ಬಾರಿ ಪುನರಾವರ್ತಿಸಬೇಕು. ಕೋವಿಡ್​​-19ನ ಸೌಮ್ಯ ಪ್ರಕರಣಗಳಿಗೆ ಅಥವಾ ಕೋವಿಡ್ 19 ನಂತರದ ಯಾವುದೇ ಕ್ಲಿನಿಕಲ್ ಫಿಸಿಯೋಥೆರಪಿಸ್ಟ್​​ ಜೊತೆ ‘ಟೆಲಿ ಸಮಾಲೋಚನೆ’ ಅಡಿಯಲ್ಲಿ ಈ 7 ಸುಲಭ ತಂತ್ರಗಳನ್ನು ಮಾಡಬಹುದು.

ಜನರು ತಮ್ಮ ಉಸಿರಾಟದ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಕೋವಿಡ್-19 ಸೋಂಕು ಅಥವಾ ಇನ್ನಾವುದೇ ಜ್ವರವನ್ನು ತಡೆಗಟ್ಟಲು ದೇಹದಲ್ಲಿನ ಆಮ್ಲಜನಕದ ಸ್ಯಾಚುರೇಷನ್​ ಹೆಚ್ಚಿಸಲು ಇದನ್ನು ಮಾಡಬಹುದು.

ನಾವು ಇವುಗಳನ್ನು ಏಕೆ ಮಾಡಬೇಕು?

  • ಶ್ವಾಸಕೋಶದ ಸಾಮರ್ಥ್ಯದ ಮೇಲೆ ಕೆಲಸ ಮಾಡುವ ಮೂಲಕ ಉಸಿರಾಟವನ್ನು ಸುಧಾರಿಸಲು
  • ದೇಹದಲ್ಲಿ ಆಮ್ಲಜನಕದ ಸ್ಯಾಚುರೇಷನ್​ ವೇಗಗೊಳಿಸಲು
  • ಉಸಿರಾಟದ ಸ್ನಾಯುಗಳ ವ್ಯಾಯಾಮವು ಶ್ವಾಸಕೋಶದ ಸ್ನಾಯುಗಳನ್ನು ಬಲಪಡಿಸುತ್ತದೆ.
  • ಅತಿಯಾದ ಉಸಿರಾಟದ ನಿಯಂತ್ರಣ ಹೆಚ್ಚಿಸಲು.
  • ಶ್ವಾಸಕೋಶದಲ್ಲಿ ಮತ್ತು ಸುತ್ತಮುತ್ತ ಸಾಕಷ್ಟು ರಕ್ತ ಪರಿಚಲನೆ ಕಾಪಾಡಿಕೊಳ್ಳಲು
  • ಮಾನಸಿಕ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ನಿಮ್ಮಲ್ಲಿ ಹೆಚ್ಚಿನ ಪ್ರಶ್ನೆಗಳಿದ್ದರೆ jk.swasthya108@gmail.com ನಲ್ಲಿ ಡಾ. ಜಾಹ್ನವಿ ಕಥ್ರಾನಿಯವರನ್ನು ಸಂಪರ್ಕಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.