ETV Bharat / sukhibhava

Health Tips : ನೀವು ಸಕ್ಕರೆ ಪ್ರಿಯರೇ?.. ಅತಿ ಬಳಕೆಗೂ ಮೊದಲು ಕೊಂಚ ಯೋಚಿಸೋದು ಒಳ್ಳೇದು..

ವಿಶ್ವ ಆರೋಗ್ಯ ಸಂಸ್ಥೆಯ(WHO) ಪ್ರಕಾರ, ದಿನಕ್ಕೆ 2 ಚಮಚದಷ್ಟು ಸರಿದೂಗುವ ಸಕ್ಕರೆಯುಕ್ತ ಆಹಾರವನ್ನು ಮಾತ್ರ ನಾವು ಸೇವಿಸಬೇಕು. ಅಂದ್ರೆ 10 ಗ್ರಾಂನಷ್ಟು. ಅತಿಯಾದ ಸಕ್ಕರೆ ಸೇವನೆ (sugar consumption) ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು..

sugar
ಸಕ್ಕರೆ
author img

By

Published : Nov 15, 2021, 8:30 PM IST

ಬೆಂಗಳೂರು : ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಅತಿ ಕೆಟ್ಟ ಅಭ್ಯಾಸ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ (World Health Organization-WHO) ಹೇಳುತ್ತದೆ. ಸಕ್ಕರೆ ಸೇವನೆ ಒಂದು ರೀತಿಯ ಸ್ಲೋ ಪಾಯಿಸನ್ (ನಿಧಾನಗತಿಯ ವಿಷ).

ಇದರ ಸೇವನೆಯಿಂದ ಅತಿ ಹೆಚ್ಚು ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗೆ ಸಕ್ಕರೆಯೇ ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಹಾಗಿದ್ದರೆ, ಸಕ್ಕರೆ ಸೇವನೆ ಮಾಡಬಾರದೇ?. ಖಂಡಿತ ಮಾಡಬಹುದು. ಎಷ್ಟು ಪ್ರಮಾಣದಲ್ಲಿ ಮಾಡಬೇಕು, ಯಾವ ಸಮಯದಲ್ಲಿ ಸಕ್ಕರೆಯುಕ್ತ ಪದಾರ್ಥಗಳ ಸೇವನೆ ಒಳ್ಳೆಯದು ಎಂಬುದರ ಬಗ್ಗೆ ಫೊರ್ಟಿಸ್ ಆಸ್ಪತ್ರೆ ಎಂಡೋಕ್ರೈನಾಲಜಿ ಕನ್ಸಲ್ಟೆಂಟ್ ಡಾ. ಶ್ರೀನಿವಾಸ್ ಪಿ. ಮುನಿಗೋಟಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವನೆ ಒಳ್ಳೆಯದು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದಿನಕ್ಕೆ 2 ಚಮಚದಷ್ಟು ಸರಿದೂಗುವ ಸಕ್ಕರೆಯುಕ್ತ ಆಹಾರವನ್ನು ಮಾತ್ರ ನಾವು ಸೇವಿಸಬೇಕು. ಅಂದ್ರೆ 10 ಗ್ರಾಂನಷ್ಟು. ಅತಿಯಾದ ಸಕ್ಕರೆ ಸೇವನೆ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಸಕ್ಕರೆ ಎಂದಾಕ್ಷಣ ಜೇನುತುಪ್ಪ, ಬೆಲ್ಲ, ಸಿಹಿ ಇರುವ ಹಣ್ಣು,ಸಿಹಿಯನ್ನು ಒಳಗೊಂಡ ಆಹಾರ ಪದಾರ್ಥಗಳನ್ನು ಪರಿಗಣಿಸಲಾಗುತ್ತದೆ. ಇದು ನಾವು ದೈನಂದಿನ ಜೀವನದಲ್ಲಿ ಸೇವಿಸುವ ಕ್ಯಾಲೋರಿಗಳಲ್ಲಿ ಶೇ.5ರಷ್ಟು ಮೀರಿರಬಾರದು.

ವಯಸ್ಕರು ಪ್ರತಿದಿನ 30 ರಿಂದ 35 ಗ್ರಾಂ ಗಿಂತ ಹೆಚ್ಚು ಸಕ್ಕರೆಯುಕ್ತ ಆಹಾರ ಸೇವಿಸಬಾರದು. 4 ರಿಂದ 6 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 19 ಗ್ರಾಂ ಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು. 7 ರಿಂದ 10 ವರ್ಷ ವಯಸ್ಸಿನ ಮಕ್ಕಳು 24 ಗ್ರಾಂಗಿಂತ ಸಕ್ಕರೆ ಪ್ರಮಾಣ ಹೆಚ್ಚಾಗಿ ತೆಗೆದುಕೊಳ್ಳಬಾರದು.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (ಹೆಚ್‌ಎ) ಪ್ರಕಾರ, ಪುರುಷರು ದಿನಕ್ಕೆ 9 ಟೀ ಚಮಚದಷ್ಟು (36 ಗ್ರಾಂ ಅಥವಾ 150 ಕ್ಯಾಲೋರೀಸ್) ಮಾತ್ರ ಸಕ್ಕರೆ ಪ್ರಮಾಣದ ಆಹಾರ ಸೇವಿಸಬೇಕು. ಮಹಿಳೆಯರು 6 ಟೀ ಚಮಚ ಅಂದರೆ, 25 ಗ್ರಾಂ ಅಥವಾ 100 ಕ್ಯಾಲೋರಿಗಳಷ್ಟು ಮಾತ್ರ ಸಕ್ಕರೆಯುಕ್ತ ಆಹಾರ ಸೇವಿಸಬಹುದು ಎಂದು ಶಿಫಾರಸು ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಸಂಸ್ಕರಿಸಿದ ಆಹಾರದಲ್ಲಿ ಸಕ್ಕರೆ ಪ್ರಮಾಣ ಇರಲಿದೆಯೇ? ಎನ್ನುವ ನಮ್ಮ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಿಸರ್ವೇಟಿವ್ ಆಹಾರಗಳಲ್ಲಿ ಹೆಚ್ಚು ಸಕ್ಕರೆ ಪ್ರಮಾಣ ಇರಲಿದೆ. ಹೀಗಾಗಿ, ಇಂಥ ಆಹಾರಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು ಎಂದಿದ್ದಾರೆ.

ಮೊದಲು ನಿಮ್ಮ ದೇಹದ ತೂಕ ಹಾಗೂ ಎತ್ತರಕ್ಕೆ ಅನುಗುಣವಾಗಿ ಎಷ್ಟು ಕ್ಯಾಲೋರಿಸ್ ಸೇವಿಸಬೇಕು ಎಂದು ತಿಳಿದುಕೊಳ್ಳಿ. ನಂತರ ಖರೀದಿಸುವ ಪ್ರಿಸರ್ವೇಟಿವ್ ಆಹಾರದ ಪ್ಯಾಕೇಟ್ ಮೇಲೆ ಜೇನುತುಪ್ಪ, ಸಾವಯವ ಕಬ್ಬಿನ ಸಕ್ಕರೆ ಕಾಣಿಸಿಕೊಂಡರೆ ಎಷ್ಟು ಪ್ರಮಾಣದಲ್ಲಿ ಹಾಕಲಾಗಿದೆ ಎಂದು ಮಾಹಿತಿ ಪಡೆಯಿರಿ ಎಂದು ಜನರಿಗೆ ಸಲಹೆ ನೀಡಿದ್ದಾರೆ.

ಸಕ್ಕರೆ ಯಾಕೆ ಆರೋಗ್ಯಕ್ಕೆ ಹಾನಿಕಾರಕ?

ಸಕ್ಕರೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಹೀಗಾಗಿ, ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಮುಖ್ಯವಾಗಿ ಡಾ. ಶ್ರೀನಿವಾಸ್ ಹೇಳುವಂತೆ ;

* ಹಲ್ಲು ಹುಳುಕಾಗುವುದು.
* ಯಕೃತ್ ಹೆಚ್ಚು ಕೆಲಸ ಮಾಡಲು ಒತ್ತಡ ಹಾಕುವುದು.
* ಯಕೃತ್‌ನಲ್ಲಿ ಫ್ರಕ್ಟೋಸ್ ಓವರ್‌ಲೋಡ್ ಆಗುವುದರಿಂದ ಪಿತ್ತ ಜನಕಾಂಗದ ಕಾಯಿಲೆ ಬರಬಹುದು.
* ಸಕ್ಕರೆ ಇನ್ಸುಲಿನ್ ಮೆಟಬಾಲಿಕ್ ಸಿಂಡ್ರೋಮ್ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು.
* ಸಂಭಾವ್ಯ ಕ್ಯಾನ್ಸರ್‌ಗೆ ತುತ್ತಾಗಬಹುದು.
* ಮೆದುಳಿನ ಮೇಲೆ ಭಾರಿ ಪ್ರಮಾಣದ ಡೋಪಮೈನ್ ಬಿಡುಗಡೆಗೆ ಕಾರಣವಾಗಿ ಸಕ್ಕರೆ ಸೇವನೆಗೆ ವ್ಯಸನಿಗಳಾಗಬಹುದು.
* ಕೊಲೆಸ್ಟ್ರಾಲ್ ಹಾಗೂ ಮಕ್ಕಳಲ್ಲಿ, ವಯಸ್ಕರಲ್ಲಿ ಓಬೆಸಿಟಿಗೆ ಕಾರಣವಾಗಬಹುದು.
* ಹೃದಯ ಕಾಯಿಲೆಗೆ ಕಾರಣವಾಗಬಹುದು.

ಸಕ್ಕರೆ ಮತ್ತು ತೂಕ

ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವೇ ಸಕ್ಕರೆ. ಹೆಚ್ಚು ಕ್ಯಾಲೋರಿಗಳನ್ನು ನೀಡುವುದರಿಂದ ಎಲ್ಲಾ ವಯಸ್ಕರು ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಧಿಕ ತೂಕ ಹೊಂದಿರುವವರು ಹೃದ್ರೋಗ, ಕ್ಯಾನ್ಸರ್ ಮತ್ತು ಟೈಪ್-2ನಂಥ ಆರೋಗ್ಯ ಸಮಸ್ಯೆಗೆ ಬೇಗ ತುತ್ತಾಗುತ್ತಾರೆ.

ಹೀಗಾಗಿ, ಹೆಚ್ಚು ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಸೇವಿಸಿ, ಕಡಿಮೆ ಸಕ್ಕರೆ ಪ್ರಮಾಣ ಇರುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುವುದು ಒಳ್ಳೆಯದು. ಆದಷ್ಟು ಸಕ್ಕರೆ ಮಿಶ್ರಣವಿಲ್ಲದ ಆಹಾರಗಳನ್ನು ಸೇವಿಸಲು ಆದ್ಯತೆ ನೀಡಿ ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕ್ರಿಯೆ ನಡುವೆ ಅಂತರ.. ನಿಮ್ಮ ಸಂಬಂಧದಲ್ಲಿ ಪ್ರಣಯ, ತಾಜಾತನ ಮರಳಿ ತರಬಹುದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.