ETV Bharat / sukhibhava

ಅಧಿಕ ರಕ್ತದೊತ್ತಡ ವಿರುದ್ಧ ಅಕ್ಯುಪಂಕ್ಚರ್ ಕಾರ್ಯ ನಿರ್ವಹಣೆ ಹೇಗೆ?​​

author img

By

Published : May 22, 2023, 11:44 AM IST

ಮನುಷ್ಯನ ದೇಹವು ನೈಸರ್ಗಿಕವಾಗಿ ಇದರಿಂದ ಉಪಶಮನಗೊಳ್ಳುತ್ತದೆ. ಆಧುನಿಕ ಅಕ್ಯುಪಂಕ್ಚರ್​ ತಂತ್ರಜ್ಞಾನವೂ ಎಲೆಕ್ಟ್ರೊ ಅಕ್ಯುಪಂಕ್ಚರ್​ ಅನ್ನು ಸಂಯೋಜಿಸಬಹುದು. ಇದು ಎಲೆಕ್ಟ್ರಿಕ್​​ ವಿದ್ಯುತ್​ ಅನ್ನು ಅಕ್ಯುಪಂಕ್ಚರ್​ ಸೂಜಿಗಳ ಮೂಲಕ ದೇಹಕ್ಕೆ ಪ್ರವಹಿಸುತ್ತದೆ.

How acupuncture works against high blood pressure

ಅಧಿಕ ರಕ್ತದೊತ್ತಡವು ಭಾರತದಲ್ಲಿ ಸಾವು ಮತ್ತು ಅಂಗವೈಕಲ್ಯತೆಯ ಗಮನಾರ್ಹ ಅಪಾಯ ಹೊಂದಿದೆ. ಜೀವನಶೈಲಿಯಲ್ಲಿನ ಬದಲಾವಣೆ, ಚಿಕಿತ್ಸೆಗಳು ಈ ಅಧಿಕ ರಕ್ತದೊತ್ತಡದ ಲಕ್ಷಣಗಳನ್ನು ನಿರ್ವಹಿಸಲು ಶಿಫಾರಸು ಮಾಡುತ್ತವೆ. ಆದಾಗ್ಯೂ ಸಾಂಪ್ರದಾಯಿಕ ಚಿಕಿತ್ಸೆಗಳೊಂದಿಗೆ ಚೀನಿ ಸಾಂಪ್ರದಾಯಿಕ ಚಿಕಿತ್ಸೆಯಾದ ಅಕ್ಯುಪಂಕ್ಚರ್​ ಕೂಡ ಅಧಿಕರ ರಕ್ತದೊತ್ತಡ ನಿರ್ವಹಣೆಯಲ್ಲಿ ಪ್ರಮುಖ ಪ್ರಯೋಜನ ನೀಡಲಿದೆ.

ಸರಾಸರಿ 3,000 ವರ್ಷಗಳ ಇತಿಹಾಸ ಹೊಂದಿರುವ ಅಕ್ಯುಪಂಕ್ಚರ್​​ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಉತ್ತರ ನೀಡಬಲ್ಲದು. ದೇಹದ ನಿರ್ದಿಷ್ಟ ಅಕ್ಯುಂಪಾಯಿಂಟ್​ಗಳಲ್ಲಿ ಅತಿ ತೆಳುವಾದ, ಹೊಂದಿಕೊಳ್ಳುವ ಸೂಜಿಗಳನ್ನು ಒಳವಡಿಸುವ ಮೂಲಕ ಈ ಚಿಕಿತ್ಸೆ ನೀಡಲಾಗುವುದು. ಇದಕ್ಕೆ ದೇಹವು ನೈಸರ್ಗಿಕವಾಗಿ ಇದರಿಂದ ಉಪಶಮನಗೊಳ್ಳುತ್ತದೆ. ಇದರ ಜೊತೆಗೆ ಆಧುನಿಕ ಅಕ್ಯುಪಂಕ್ಚರ್​ ತಂತ್ರಜ್ಞಾನವೂ ಎಲೆಕ್ಟ್ರೊ ಅಕ್ಯುಪಂಕ್ಚರ್​ ಅನ್ನು ಸಂಯೋಜಿಸಬಹುದು. ಇದು ಎಲೆಕ್ಟ್ರಿಕ್​​ ವಿದ್ಯುತ್​ ಅನ್ನು ಅಕ್ಯುಪಂಕ್ಚರ್​ ಸೂಜಿಗಳ ಮೂಲಕ ದೇಹಕ್ಕೆ ಪ್ರವಹಿಸುತ್ತದೆ.

ರಕ್ತದೊತ್ತಡ: ರಕ್ತದೊತ್ತಡ (ಬಿಪಿ) ರಕ್ತ ಪರಿಚಲನೆಯ ವೇಳೆ ಅಪಧಮನಿಗಳ ಗೋಡೆಗಳ ಮೇಲೆ ಬೀರುವ ಬಲವನ್ನು ಸೂಚಿಸುತ್ತದೆ. ಇದು ಹೃದಯ ಸ್ನಾಯುವಿನ ಸಂಯೋಜನೆಯನ್ನು ನಿಯಂತ್ರಿಸುತ್ತದೆ. ಹೃದಯ ಸಂಕೋಚನ ಸಮಯದಲ್ಲಿ ಮತ್ತು ಹೃದಯ ವಿಶ್ರಾಂತಿ ಸಮಯದಲ್ಲಿ ಒತ್ತಡವನ್ನು ಅಳೆಯಲಾಗುತ್ತದೆ.

ಸಂಕೋಚನದ ರಕ್ತದೊತ್ತಡವು ಹೃದಯದಿಂದ ದೇಹದ ಅಪಧಮನಿಗಳಿಗೆ ರಕ್ತವನ್ನು ಪಂಪ್ ಮಾಡುವಾಗ ಹೃದಯ ಬಡಿತದ ಸಮಯದಲ್ಲಿ ಉಂಟಾಗುವ ಗರಿಷ್ಠ ಒತ್ತಡವನ್ನು ಪ್ರತಿನಿಧಿಸುತ್ತದೆ. ಮತ್ತೊಂದೆಡೆ, ಡಯಾಸ್ಟೊಲಿಕ್ ರಕ್ತದೊತ್ತಡವು ಹೃದಯವು ರಕ್ತದಿಂದ ತುಂಬಿದಾಗ ಹೃದಯ ಬಡಿತಗಳ ನಡುವೆ ದಾಖಲಾಗುವ ಕಡಿಮೆ ಒತ್ತಡವಾಗಿದೆ.

ವ್ಯಾಯಾಮ ಅಥವಾ ಒತ್ತಡ ಹೆಚ್ಚಿದಾಗ ಬಿಪಿ ಕೂಡ ಅಧಿಕವಾಗುತ್ತದೆ. ಆದರೆ, ಸದಾ ಇದು ವಿಶ್ರಾಂತಿಯಲ್ಲೂ ಸದಾ ಹೆಚ್ಚಿದ್ದರೆ, ಇದು ಅಪಧಮನಿಗೆ ಹಾನಿಯಾಗುತ್ತದೆ. ಮೊದಲ ಹಂತದ ಅಧಿಕ ರಕ್ತದೊತ್ತಡದಲ್ಲಿ ಸಿಸ್ಟೊಲಿಕ್​ ರೀಡಿಂಗ್​ 130-139 ಅಥವಾ ಡಯಲಿಸ್ಟಿಕ್​ ರೀಡಿಂಗ್​ 80-89 ಇರುತ್ತದೆ. 140/90 ಅಥವಾ ಎರಡನೇ ಹಂತವನ್ನು ಅಧಿಕ ರಕ್ತದೊತ್ತಡ ಎಂದು ವರ್ಗೀಕರಿಸಲಾಗಿದೆ. ಅಧಿಕ ರಕ್ತದೊತ್ತಡದ ಬಿಕ್ಕಟ್ಟು ಸಿಸ್ಟೊಲಿಕ್​ ರೀಡಿಂಗ್​ನ 180ಕ್ಕಿಂತ ಹೆಚ್ಚು ಅಥವಾ ಡಯೊಲಿಸ್ಟಿಕ್​ ದರ 120 ಕ್ಕಿಂತ ಹೆಚ್ಚಿದ್ದರೆ ಆಗುತ್ತದೆ. ಅಧಿಕ ರಕ್ತದೊತ್ತಡ ಹೃದಯ ಸಮಸ್ಯೆ, ಹೃದಯ ಸ್ತಂಬನ, ಸ್ಟ್ರೋಕ್​, ಮೂತ್ರಪಿಂಡ ಹಾನಿ, ದೃಷ್ಟಿ ದೋಷ, ಸ್ಮರಣೆ ಕಳೆದುಕೊಳ್ಳುವುದು ಮತ್ತು ಅರಿವಿನ ಕ್ಷೀಣತೆಯಂತಹ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.

ಅಕ್ಯುಂಪಕ್ಚರ್​ ಹೇಗೆ ಸಹಾಯ ಮಾಡುತ್ತದೆ?: ನಿರ್ದಿಷ್ಟವಾಗಿ ಹೇಗೆ ಅಕ್ಯುಂಪಕ್ಚರ್​ ಕೆಲಸ ಮಾಡುತ್ತದೆ ಎಂಬುದು ಇಂದಿಗೂ ಸಂಪೂರ್ಣವಾಗಿ ಅರ್ಥವಾಗಿಲ್ಲ. ದೇಹದ ನಿರ್ದಿಷ್ಟ ಪಾಯಿಂಟ್​ನಲ್ಲಿ ಉತ್ತೇಜಿಸುವ ಮೂಲಕ ಕೇಂದ್ರ ನರ ವ್ಯವಸ್ಥೆ ಮೇಲೆ ಪರಿಣಾಮ ಬೀರಲಾಗುವುದು. ಇದು ರಕ್ತ ಪರಿಚಲನೆ ಮತ್ತು ಪ್ರಮುಖ ಹಾರ್ಮೋನುಗಳ ಉತ್ಪಾದನೆ ಮೇಲೆ ಪ್ರಭಾವ ಬೀರಲಿದೆ.

ಅಧಿಕ ರಕ್ತದೊತ್ತಡದಲ್ಲಿ ಅಕ್ಯುಪಂಕ್ಚರ್ ರೆನಿನ್-ಆಂಜಿಯೋಟೆನ್ಸಿನ್-ಅಲ್ಡೋಸ್ಟೆರಾನ್ ಸಿಸ್ಟಮ್ (RAAS) ನಲ್ಲಿ ಒಳಗೊಂಡಿರುವ ಹಾರ್ಮೋನುಗಳ ಮೇಲೆ ಪರಿಣಾಮ ಬೀರುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ವ್ಯವಸ್ಥೆಯು ರಕ್ತದೊತ್ತಡದ ಮಟ್ಟ ಮತ್ತು ದ್ರವ-ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿಕೊಳ್ಳಲು ಕಾರಣವಾಗಿದೆ. ಅಕ್ಯುಪಂಕ್ಚರ್​​ ಹಾರ್ಮೋನ್​ ಮತ್ತು ಕಿಣ್ವಗಳ ಉಪಸ್ಥಿತಿಯ ಮೇಲೆ ಪ್ರಭಾವ ಬೀರಬಹುದು.

ಡೋಪಮೈನ್ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ವತಂತ್ರ ರಾಡಿಕಲ್‌ಗಳ ಮಿತಿಮೀರಿದ ಮೂಲಕ ನಿರೂಪಿಸಲ್ಪಟ್ಟಿದೆ. ಇದರಿಂದಾಗಿ ಆರೋಗ್ಯಕರ ರಕ್ತದೊತ್ತಡ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಒತ್ತಡದ ಬದುಕು: ಆಯುರ್ವೇದದಲ್ಲಿದೆ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.