ದೀರ್ಘಕಾಲದ ಆಯಾಸ ಮತ್ತು ನೋವುಗಳು ಸಾಮಾನ್ಯ ವ್ಯಕ್ತಿಗೆ ಹೆಚ್ಚಿನ ತೊಂದರೆ ಉಂಟು ಮಾಡುತ್ತವೆ. ಇಂತಹ ನೋವುಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ತಜ್ಞರು ತಿಳಿಸಿದ್ದಾರೆ. ಭಾರತದಲ್ಲಿ ಲಕ್ಷಾಂತರ ಜನರು ಸಾಮಾನ್ಯವಾಗಿ ಅನುಭವಿಸುತ್ತಿರುವ ಆರೋಗ್ಯ ತೊಂದರೆಗಳಲ್ಲಿ ದೀರ್ಘಾವಧಿ ನೋವು ಮತ್ತು ಆಯಾಸ ಸ್ಥಾನ ಪಡೆದಿದೆ. ಮೂರು ತಿಂಗಳಿಗಿಂತಲೂ ಹೆಚ್ಚು ಕಾಲ ನೋವು ಕಾಡಿದರೆ ಅದು ದೀರ್ಘಾವಧಿಯ ನೋವು ಆಗಿರುತ್ತದೆ. ದೀರ್ಘಾವಧಿಯ ಆಯಾಸವೂ ದೈನಂದಿನ ಚಟುವಟಿಕೆಯಲ್ಲಿನ ದೀರ್ಘಕಾಲದ ಸುಸ್ತು, ಕಡಿಮೆ ಶಕ್ತಿ ಮಟ್ಟದ ಮೇಲೆ ಅವಲಂಬಿತವಾಗಿದೆ.
ಬಹುತೇಕ ಮಂದಿಯಲ್ಲಿ ಈ ಸಮಸ್ಯೆ: ಅಧ್ಯಯನ ತಿಳಿಸುವಂತೆ, ಶೇ 70ರಷ್ಟು ಮಂದಿ ದೀರ್ಘಾವಧಿಯ ಆಯಾಸ ಸಿಂಡ್ರೋಮ್ (ಸಿಎಫ್ಎಸ್) ಜೊತೆಗೆ ದೀರ್ಘಾವಧಿಯ ನೋವಿನಿಂದ ಬಳಲುತ್ತಿರುತ್ತಾರೆ. ಇದರ ಜೊತೆಗೆ ದೀರ್ಘವಾಧಿಯ ನೋವಿನ ವ್ಯಕ್ತಿ ಆಯಾಸ ಮತ್ತು ಇತರೆ ಸಿಎಫ್ಎಸ್ ಲಕ್ಷಣಗಳನ್ನು ಅನುಭವಿಸುತ್ತಿರುತ್ತಾರೆ.
ಸಿಎಫ್ಎಸ್ ಹೊಂದಿರುವ ರೋಗಿ ಸ್ನಾಯು ನೋವು, ಕೀಲು ನೋವು, ತಲೆ ನೋವು, ಕಡಿಮೆ ಸ್ಮರಣಾಶಕ್ತಿ ಮತ್ತು ಏಕಾಗ್ರತೆ ಮತ್ತಿತರ ಅನೇಕ ರೀತಿಯ ಲಕ್ಷಣಗಳನ್ನು ಅನುಭವಿಸುತ್ತಿರುತ್ತಾರೆ. ಸಿಎಫ್ಎಸ್ನಲ್ಲಿ ಸ್ನಾಯು ಮತ್ತು ಕೀಲು ನೋವು ಸಾಮಾನ್ಯ. ಕಾರಣ ದೇಹದಲ್ಲಿನ ಶಕ್ತಿಯ ಕೊರತೆಯಿಂದ ಇದರ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ ಎಂದು ಮೂಳೆ ಮತ್ತು ಕೀಲು ತಜ್ಞ ಡಾ.ವಿವೇಕ್ ಮಹಾಜನ್ ಹೇಳುತ್ತಾರೆ.
ದೀರ್ಘಕಾಲದ ಆಯಾಸಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ಸಂಪೂರ್ಣವಾಗಿ ಅರ್ಥೈಸಿಕೊಂಡಿಲ್ಲ. ಆದರೆ, ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ಅನಿಶ್ಚಿತತೆ ಅಥವಾ ನರ ವ್ಯವಸ್ಥೆಯಲ್ಲಿ ತೊಂದರೆಗಳು ಇದರ ಅಂಶವನ್ನು ಹೆಚ್ಚಿಸಬಹುದು. ಹಾರ್ಮೋನ್ ಅಸಮಾತೋಲನ, ಸ್ಲಿಪ್ ಅಪ್ನಿಯಾದಂತಹ ನಿದ್ರೆ ಸಮಸ್ಯೆ, ಅವಿಶ್ರಾಂತಿ ಕಾಲು ನೋವು, ಸಂಧೀವಾತ, ನಿದ್ರಾಹೀತನೆ, ಖಿನ್ನತೆ ಮತ್ತು ಆತಂಕಗಳು ಇವನ್ನು ಹೆಚ್ಚಿಸಬಹು ಎನ್ನುತ್ತಾರೆ ಡಾ.ಪಂಕಜ್ ಎನ್. ಸುರೆಂಜ್
ಜೀವನಶೈಲಿ ಬದಲಾವಣೆ: ಅಪಘಾತ ಅಥವಾ ಒತ್ತಡ ವಿಶೇಷವಾಗಿ ಬಾಲ್ಯದ ನಿಂದನೆಗಳು ದೀರ್ಘಾವಧಿ ಆಯಾಸ ಮತ್ತು ದೀರ್ಘಕಾಲ ನೋವಿಗೆ ಮುಂದಿನ ಜೀವನದಲ್ಲಿ ಕಾರಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ನೋವಿನ ಸ್ಥಿತಿಗಳು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಗೆ ಕಾಡುತ್ತದೆ. ಇದಕ್ಕೆ ಕಳಪೆ ನಿದ್ದೆ, ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಡಯಟ್ ಸೇರಿದಂತೆ ಅನೇಕ ಪ್ರಮುಖ ಜೀವನಶೈಲಿ ಅಭ್ಯಾಸಗಳು ಕಾರಣವಾಗುತ್ತದೆ. ಇದು ಎರಡು ಪರಿಸ್ಥಿತಿಯ ಅಭಿವೃದ್ಧಿಗೆ ಕಾರಣವಾಗಬಹುದು.
ಈ ಸಮಸ್ಯೆಗಳು ಜೀವನಕ್ಕೆ ಅಪಾಯಕಾರಿಯಲ್ಲ. ಇದು ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ದೈನಂದಿನ ಚಟುವಟಿಕೆಯ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ಈ ಸಿಎಫ್ಎಸ್ ಉಪಶಮನವಾಗುವುದಿಲ್ಲ. ಆದರೆ, ಈ ಪರಿಸ್ಥಿತಿಯನ್ನು ನೋವಿ ನಿವಾರಣೆ ಜೊತೆಗೆ ನಿರ್ವಹಣೆ ಮಾಡಬಹುದು.
ಸಿಎಫ್ಎಸ್ಗೆ ಚಿಕಿತ್ಸೆ ಎಂದರೆ ಜೀವನ ಶೈಲಿಯ ಬದಲಾವಣೆ, ಹೆಚ್ಚಿನ ವಿಶ್ರಾಂತಿ, ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ ಸೇವನೆಯಾಗಿದೆ. ಯೋಗ, ಶವರ್ ಸ್ನಾನ, ಹೀಟಿಂಗ್ ಪ್ಯಾಡ್ನಂತಹ ಹೀಟ್ ಥೆರಪಿಯೂ ಒಳ್ಳೆಯದೇ. ನೋವು ಚಿಕಿತ್ಸೆ, ಪೋಷಕಾಂಶ ಪೂರಕಗಳಾದ ಒಮೆಗಾ 3ಫ್ಯಾಟಿ ಆಸಿಡ್, ಮೆಗ್ನಿಶಿಯಂ ಮತ್ತು ವಿಟಮಿನ್ ಡಿ, ಸಾಕಷ್ಟು ಮಟ್ಟದ ವಿಶ್ರಾಂತಿ ಮತ್ತು ನಿದ್ರೆ ಈ ನೋವು ನಿವಾರಣೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ಉತ್ತಮ ನಿದ್ದೆ ಹೊಂದಲು ಈ ಹವ್ಯಾಸಗಳನ್ನು ರೂಢಿಸಿಕೊಳ್ಳಿ ..