ETV Bharat / sukhibhava

ಬೇಸಿಗೆಯಲ್ಲಿ ಪುರುಷರ ಅಂದ ಕಾಪಾಡಲು ಇಲ್ಲಿದೆ ಸಲಹೆ - ಚರ್ಮದ ಕಾಳಜಿಯೂ ಹೆಚ್ಚಾಗುತ್ತದೆ

ಬೇಸಿಗೆಯಲ್ಲಿ ಹೆಚ್ಚಾಗಿ ಸೂರ್ಯನ ಕಿರಣಕ್ಕೆ ಒಡ್ಡಿಕೊಳ್ಳುವ ಪುರಷರು ಕೆಲವು ಮುಂಜಾಗ್ರತೆ ವಹಿಸುವುದು ಅಗತ್ಯವಾಗುತ್ತದೆ.

Here is a tip to maintain male beauty in summer

author img

By

Published : Apr 28, 2023, 2:49 PM IST

ಬೆಂಗಳೂರು: ಬೇಸಿಗೆಯಲ್ಲಿ ಸಮಯ ಬಂತೆಂದರೆ ಸಾಕು ಜನರಲ್ಲಿ ಆರೋಗ್ಯದ ಕಾಳಜಿ ಜೊತೆಗೆ ಚರ್ಮದ ಕಾಳಜಿಯೂ ಹೆಚ್ಚಾಗುತ್ತದೆ. ಇದರಿಂದ ಪುರಷರು ಹೊರತಲ್ಲ. ಸುಡುವ ಬಿಸಿಲು, ಬೆವರಿನಿಂದ ಚರ್ಮ ಬಲು ಬೇಗ ಬಾಡಿ ಹೋಗುತ್ತದೆ. ಜೊತೆಗೆ ಸನ್​ಬರ್ನ್​ಗಳಿಂದಾಗಿ ಚರ್ಮದ ಆರೈಕೆ ಬೇಡುತ್ತದೆ. ಆದ ಕಾರಣಕ್ಕೆ ಈ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೇ ಕೆಲವು ಕಾಳಜಿ ವಹಿಸುವುದು ಅಗತ್ಯ.

ಬೇಸಿಗೆಯಲ್ಲಿ ಹೆಚ್ಚಾಗಿ ಸೂರ್ಯನ ಕಿರಣಕ್ಕೆ ಒಡ್ಡಿಕೊಳ್ಳುವ ಪುರಷರು ಕೆಲವು ಮುಂಜಾಗ್ರತೆ ವಹಿಸುವುದು ಅಗತ್ಯವಾಗುತ್ತದೆ. ಧೂಳು, ಬಿಸಿಲಿನಿಂದ ದೇಹ ಬಳಲದಂತೆ ಕಾಪಾಡಿ, ಚರ್ಮದ ಯೌವನ ಮತ್ತು ಹೊಳಪು ಕಾಪಾಡಿಕೊಳ್ಳಬೇಕಾಗುತ್ತದೆ.

ಕ್ಲೆನ್ಸಿಂಗ್​​: ಬಿಸಿಲಿನಿಂದ ತ್ವಚೆಯನ್ನು ಕಾಪಾಡಿಕೊಳ್ಳುವ ಮೊದಲ ಕ್ರಮ ಎಂದರೆ ಕ್ಲೆನ್ಸಿಂಗ್​​. ಮುಖವನ್ನು ನೀರಿನಿಂದ ಸ್ವಚ್ಛವಾಗಿ ತೊಳೆಯುವುದು ಅವಶ್ಯ. ಇದರಿಂದ ಮುಖದ ಆರೋಗ್ಯ ಕೂಡ ಹೆಚ್ಚುತ್ತದೆ. ಬಿಸಿಲಿನಿಂದ ಮನೆಗೆ ಹೋದಾಕ್ಷಣ ಚೆನ್ನಾಗಿ ಮುಖ ತೊಳೆಯುವುದು ಬಹಳ ಅವಶ್ಯಕವಾಗಿದೆ. ಇದಕ್ಕಾಗಿ ಉತ್ತಮ ಫೇಸ್​ ವಾಕ್​ ಆಯ್ಕೆ ಮಾಡಬಹುದು. ಅಥವಾ ಪದೇ ಪದೇ ಮುಖವನ್ನು ನೀರಿನಿಂದ ತೊಳೆಯುವುದು ಉಚಿತ. ಇದರರಿಂದ ಮುಖದಲ್ಲಿ ಅನಗತ್ಯವಾಗಿ ಕಾಣುವ ಮೊಡವೆ ಮತ್ತು ದದ್ದುಗಳನ್ನು ಕಡಿಮೆ ಮಾಡಬಹುದು.

ಜಂಕ್​ ಫುಡ್​ ತಪ್ಪಿಸಿ: ಜಂಕ್​ಫುಡ್​ಗಳು ಬಾಯಿಗೆ ರುಚಿಯನ್ನು ನೀಡಿದರೂ ಚರ್ಮ ಸೇರಿದಂತೆ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಇದನ್ನು ಪ್ರತಿಯೊಬ್ಬರು ಗಮನದಲ್ಲಿಟ್ಟುಕೊಂಡರೆ ಆರೋಗ್ಯಕ್ಕೆ ಉತ್ತಮ. ಬೇಸಿಗೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸುವ ಮೂಲಕ ನಿಮ್ಮ ಆಹಾರ ಪದ್ಧತಿಯ ಸಮತೋಲನ ಕಾಯ್ದುಕೊಳ್ಳಬೇಕಿದೆ. ಇದರಿಂದ ಮುಖದ ಕಾಂತಿ ಆಂತರಿಕವಾಗಿಯೇ ಹೊರ ಹೊಮ್ಮುತ್ತದೆ.

ಉತ್ತಮ ಸನ್​ಸ್ಕ್ರೀನ್​ ಬಳಕೆ: ಬಿಸಿಲಿನ ನೇರಳಾತೀತ ಕಿರಣದಿಂದ ಚರ್ಮವನ್ನು ಕಾಪಾಡಲು ಸನ್​ ಸ್ರ್ಕೀನ್​ ಬಳಕೆ ಅವಶ್ಯಕ ಎನಿಸುತ್ತದೆ. ಈ ಋತುಮಾನದಲ್ಲಿ ಹೆಚ್ಚಿನ ಚಿಂತನೆ ಮಾಡದೇ, ಸನ್​ಸ್ಕ್ರೀನ್​ ಅನ್ನು ಬಳಕೆ ಮಾಡಲು ಮುಂದಾಗಬಹುದು, ಇದು ನಿಮ್ಮ ತ್ವಚೆಯನ್ನು ಹೆಚ್ಚಿಸಲು ನೆರವಾಗಬಹುದು . ಅದರಲ್ಲೂ ಪುರುಷರ ಮುಗ ಹೆಚ್ಚು ಬಿರುಸು ಮತ್ತು ಒರಟಾಗಿರುವ ಹಿನ್ನೆಲೆಯಲ್ಲಿ ಎಸ್​ಪಿಎಫ್​ 30 ಸನ್​ಸ್ಕ್ರೀನ್​ ಬಳಕೆ ಉತ್ತಮ ಪರಿಣಾಮ ಬೀರಬಲ್ಲದು.

ಸುಗಂಧ ಬೀರಿ: ಬೇಸಿಗೆಯಲ್ಲಿ ಬೆವರು ಪ್ರತಿಯೊಬ್ಬರನ್ನು ಕಾಡುವ ಅತಿ ದೊಡ್ಡ ಸಮಸ್ಯೆ. ಇದರಿಂದ ಬಲು ಬೇಗ ದೇಹ ದುರ್ಗಂಧಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕಾಲ ತಾಜಾತನ ಮತ್ತು ಉತ್ತಮ ವಾಸನೆ ಭರಿತ ಫರ್ಮ್ಯೂಮ್​ಗಳ ಬಳಕೆ ಮಾಡುವುದು ಉತ್ತಮ.

ಶೇವ್​ ಮಾಡಿ: ಮುಖದ ಅಂದ ಕಾಂತಿ ಹೆಚ್ಚುವುದು ಮುಖದ ಗಡ್ಡವನ್ನು ಯಾವ ಮಟ್ಟಕ್ಕೆ ತೆಗೆದು ಹ್ಯಾಂಡ್​ಸಮ್​ ಲುಕ್​ ಕಾಪಾಡಿಕೊಳ್ಳುತ್ತಿರಾ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಈ ಹಿನ್ನೆಲೆ ಸರಿಯಾದ ರೇಜರ್​ ಬಳಕೆ ಮಾಡಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಹೀಗೆ ಅಗತ್ಯ ಎನಿಸಿದ ಮುನ್ನೆಚ್ಚರಿಕೆ ವಹಿಸಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರ ಅಗತ್ಯವೂ ಆಗಿದೆ.

ಇದನ್ನೂ ಓದಿ: ನಿತ್ಯ ಹಿಡಿಯಷ್ಟು ವಾಲ್ನಟ್​ ಸೇವನೆಯಿಂದ ಹದಿಹರೆಯದವರಲ್ಲಿ ಏಕಾಗ್ರತೆ ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.