ETV Bharat / sukhibhava

Prevent pimples.. ಮುಖದ ಮೊಡವೆಗಳ ತಡೆಗಟ್ಟಲು ಇಲ್ಲಿವೆ 10 ಸಲಹೆ

ಮೊಡವೆಗಳ ಸಮಸ್ಯೆ ಅನೇಕರನ್ನು ಕಾಡುವುದು ಸಹಜ. ಇದಕ್ಕೆ ಕಾರಣ ಹಲವು ಇದ್ದು, ಇದಕ್ಕೆ ಸರಿಯಾದ ಆರೈಕೆ ಅವಶ್ಯಕವಾಗಿದೆ.

author img

By ETV Bharat Karnataka Team

Published : Aug 26, 2023, 3:11 PM IST

Updated : Aug 26, 2023, 3:42 PM IST

ಮುಖದ ಮೊಡವೆಗಳ ತಡೆಗಟ್ಟಲು ಇಲ್ಲಿವೆ 10 ಸಲಹೆ
ಮುಖದ ಮೊಡವೆಗಳ ತಡೆಗಟ್ಟಲು ಇಲ್ಲಿವೆ 10 ಸಲಹೆ

ಜಗತ್ತಿನ ಮುಂದೆ ನಿಮ್ಮನ್ನು ನೀವು ಹೇಗೆ ಪ್ರದರ್ಶಿಸಿಕೊಳ್ಳುತ್ತೀರಾ ಎಂಬುದು ಕೂಡ ಮುಖ್ಯವಾಗುತ್ತದೆ. ಆರೋಗ್ಯಯುತ ಮತ್ತು ಸುಂದರ ತ್ವಚೆ ಎಲ್ಲರ ಆದ್ಯತೆ. ಮೊಡವೆಗಳು ನಿಮ್ಮ ಮುಖದ ಅಂದಕ್ಕೆ ತೊಡಕಾಗುತ್ತದೆ. ಇದಕ್ಕೆ ಪರಿಹಾರ ಮಾರ್ಗ ಇಲ್ಲಿದೆ. ಈ ಸುಲಭ 10 ಉಪಾಯಗಳು ಮುಖದ ಮೊಡವೆ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.

ಮುಖದ ಸ್ವಚ್ಛತೆ: ಪ್ರತಿನಿತ್ಯ ದಿನಕ್ಕೆ ಎರಡು ಬಾರಿ ಮುಖವನ್ನು ಸೌಮ್ಯ ಕ್ಲೆನ್ಸರ್​ ಸಹಾಯದಿಂದ ತೊಳೆಯಬೇಕು. ಇದರಿಂದ ಮುಖದಲ್ಲಿನ ಕೊಳೆ, ಎಣ್ಣೆ ಮತ್ತು ಅಶುದ್ಧತೆ ತೆಗೆದು ಹಾಕಲು ಸಾಧ್ಯ. ಮೊಡವೆಗಳು ಏಳಲು ಮುಖ್ಯ ಕಾರಣವೇ ಮುಖದ ರಂಧ್ರದಲ್ಲಿನ ಅಶುದ್ಧತೆ. ಇದೇ ವೇಳೆ ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಮುಖ ತೊಳೆಯ ಬಾರದು ಎಂಬುದು ನೆನಪಿನಲ್ಲಿರಬೇಕು ಇದು ಕೂಡ ಮುಖದಲ್ಲಿನ ಮೊಡವೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಹೈಡ್ರೇಟ್​ ಆಗಿರಿ: ಮುಖದ ಚರ್ಮ ಒಳಗಿನಂದಲೇ ಹೈಡ್ರೇಟ್​ ಆಗಿರುವುದು ಕೂಡ ಮುಖ್ಯವಾಗಿದೆ. ನಿಮ್ಮ ದೇಹ ನಿರ್ಜಲೀಕರಣಗೊಂಡರೆ, ನಿಮ್ಮ ಚರ್ಮ ಎಣ್ಣೆ ಗ್ರಂಧಿಗಳು ಹೆಚ್ಚಿನ ಎಣ್ಣೆ ಉತ್ಪಾದನೆ ಮೂಲಕ ಇದರ ಸೂಚನೆ ನೀಡುತ್ತದೆ. ತ್ವಚೆಯ ನೈಸರ್ಗಿಕ ಮಾಶ್ಚರೈಸರ್​​ ಸಮದೂಗಿಸಲು ಮತ್ತು ಶುದ್ಧ ತ್ವಚೆ ಹೊಂದಲು ಅಗತ್ಯ ಪ್ರಮಾಣದ ನೀರಿನ ಸೇವನೆ ಕೂಡ ಅವಶ್ಯ ಎಂಬುದನ್ನು ಮರೆಯಬಾರದು.

ಪೋಷಕಾಂಶ ಸಮೃದ್ಧ ಡಯಟ್​​: ಹಣ್ಣು, ತರಕಾರಿ ಮತ್ತು ಕಾಳುಗಳಲ್ಲಿ ವಿಟಮಿನ್​ ಮತ್ತು ಮಿನರಲ್ಸ್​ನಿಂದ ಕೂಡಿದ್ದು, ಚರ್ಮದ ಆರೈಕೆ ಮಾಡುವಲ್ಲಿ ಉತ್ತಮ ಸಮತೋಲಿತ ಆಹಾರ ಇದಾಗಿದೆ. ಇದರ ಜೊತೆಗೆ ಸಕ್ಕರೆ ಮತ್ತು ಗ್ರೀಸಿ ಆಹಾರಗಳ ಸೇವನೆಯನ್ನು ಕೂಡ ಕಡಿಮೆ ಮಾಡುವುದು ಅಗತ್ಯವಾಗಿದೆ.

ಕೈ ಶುದ್ಧತೆ: ಬಹುತೇಕ ಸಮಯ ಮುಖವನ್ನು ಕೈಗಳಿಂದ ಮುಟ್ಟುತ್ತಲೇ ಇರುತ್ತೇವೆ. ಈ ಹಿನ್ನೆಲೆ ಕೈ ಶುದ್ಧತೆ ಕಾಪಾಡುವುದು ಅಗತ್ಯ. ಶುಚಿಗೊಳಿಸದ ಕೈಗಳಿಂದ ಮುಖವನ್ನು ಮುಟ್ಟುವುದರಿಂದ ಬ್ಯಾಕ್ಟೀರಿಯಾಗಳು ಮುಖದಲ್ಲಿ ಬೆಳವಣಿಗೆ ಆಗಿ ಅದು ಮೊಡವೆಗೆ ಕಾರಣವಾಗುತ್ತದೆ.

ಮೇಕ್​ಅಪ್​ ಸಾಧನಗಳ ಶುಚಿತ್ವ: ಮೇಕಪ್​ ಮಾಡಿಕೊಳ್ಳುವ ಬ್ರಶ್​​, ಸ್ಪಾಂಜ್​ಗಳ ಶುದ್ಧತೆ ಕಾಪಾಡುವುದು ಕೂಡ ಅತಿ ಮುಖ್ಯವಾಗಿದೆ. ಅವುಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಗಟ್ಟುವುದರಿಂದ ಕೂಡ ಮೊಡವೆಗಳು ಆಗದಂತೆ ಕಾಪಾಡಿಕೊಳ್ಳಬಹುದು

ನಿಯಮಿತ ವ್ಯಾಯಾಮ: ನಿಯಮಿತ ವ್ಯಾಯಾಮಗಳು ರಕ್ತದ ಪರಿಚಲನೆಗೆ ಸಹಾಯ ಮಾಡುತ್ತದೆ. ಇದು ತ್ವಚೆಯ ಕೋಶಕ್ಕೆ ಆಮ್ಲಜನಕ ಮತ್ತು ಪೋಷಕಾಂಶವನ್ನು ನೀಡುತ್ತದೆ. ಜೊತೆಗೆ ಒತ್ತಡ ಕಡಿಮೆ ಮಾಡಿ, ಮೊಡವೆಗಳು ಏಳದಂತೆ ಮಾಡುತ್ತದೆ.

ಒತ್ತಡ ನಿರ್ವಹಣೆ: ಒತ್ತಡಗಳು ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ. ಅಧಿಕ ಒತ್ತಡ ಮಟ್ಟಗಳು ಹಾರ್ಮೋನ್​ ಅಸಮಾತೋಲನಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆ ಯೋಗ, ಧ್ಯಾನ ಮತ್ತು ದೀರ್ಘ ಉಸಿರಾಟ ಉತ್ತಮ ಕೆಲಸ ಮಾಡಲು ಸಹಾಯಕವಾಗಿದೆ.

ಸೂರ್ಯನಿಂದ ರಕ್ಷಣೆ: ಸೂರ್ಯನ ಹಾನಿಕಾರಕ ಯುವ ಕಿರಣಗಳಿಂದ ರಕ್ಷಿಸಿಕೊಳ್ಳುವುದು ಅಗತ್ಯ. ಇದಕ್ಕಾಗಿ ಕೆಲವು ಛತ್ರಿ, ದೊಡ್ಡ ಟೋಪಿಗಳನ್ನು ಬಳಕೆ ಮಾಡಬಹುದು

ಆಲ್ಕೋಹಾಲ್​ಯೇತರ ಉತ್ಪನ್ನ: ಸ್ಕಿನ್​ಕೇರ್​​ ಮತ್ತು ಮೇಕಪ್​ ಉತ್ಪನ್ನಗಳನ್ನು ಬಳಕೆ ಮಾಡುವಾಗ ಅದರಲ್ಲಿ ನಾನ್​-ಕೊಮೆಡೊಗೆನಿಕ್​ ಎಂದು ಲೇಬಲ್​ ಇದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಮೊಡವೆ ಕೀಳಬೇಡಿ: ಮೊಡವೆಗಳನ್ನು ಕೀಳುವುದು, ಚುಚ್ಚುವುದು ಮಾಡಬೇಡಿ. ಇದರಿಂದ ಅದರಲ್ಲಿ ಊರಿಯೂತ ಹೆಚ್ಚಿ ಸೋಂಕು ಹರಡುತ್ತದೆ. ಕಲೆ ದೀರ್ಘವಾಗಿ ಉಳಿಯುತ್ತದೆ.

ಈ 10 ಸಲಹೆಗಳು ಮೊಡವೆಗಳನ್ನು ಸಮಸ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಈ ಎಲ್ಲಾ ಸಲಹೆಗಳ ಹೊರತಾಗಿ ಚರ್ಮರೋಗ ತಜ್ಞರನ್ನು ಭೇಟಿಯಾಗುವುದು ಉತ್ತಮ ಆಯ್ಕೆಯಾಗಿದೆ ಎಂಬ ಶಿಫಾರಸನ್ನು ನಾವು ಮಾಡುತ್ತೇವೆ. ಪ್ರತಿಯೊಬ್ಬರ ತ್ವಚೆ ವಿಭಿನ್ನವಾಗಿರುತ್ತದೆ ಎಂಬುದನ್ನು ಮರೆಯಬಾರದು.

ಇದನ್ನೂ ಓದಿ: ನೀರಿನಿಂದ ಹರಡುವ ರೋಗದಿಂದ ತಪ್ಪಿಸಿಕೊಳ್ಳಲು ಈ 7 ಸೂತ್ರ ಅನುಸರಿಸಿ

Last Updated : Aug 26, 2023, 3:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.