ಹೈದರಾಬಾದ್: ಚಿಯಾ ಬೀಜಗಳು (ಕಾಮಕಸ್ತೂರಿ ಬೀಜ, ಆಳವಿ ಬೀಜ) ಪೌಷ್ಟಿಕಾಂಶ ಮತ್ತು ಔಷಧೀಯ ಪ್ರಯೋಜನಗಳಿಂದ ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿವೆ. ಚಿಯಾ ಬೀಜಗಳು ಫೈಬರ್ ಮತ್ತು ಒಮೆಗಾ -3 ಗಳ ಅಂಶಗಳನ್ನು ಹೊಂದಿದೆ. ಇದು ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಜೊತೆಗೆ ಇವು ಆಲ್ಫಾ ಲಿಪೊಯಿಕ್ ಆಮ್ಲ ಅಥವಾ ಎಎಲ್ಎ, ಒಮೆಗಾ -3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿವೆ, ಇದು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ಈ ಸೂಪರ್ ಸೀಡ್ಸ್ನಲ್ಲಿ ಆ್ಯಂಟಿಆಕ್ಸಿಡೆಂಟ್(ಉತ್ಕರ್ಷಣ ನಿರೋಧಕಗಳು) ಸಹ ಅಧಿಕವಾಗಿವೆ.
ಆದ್ದರಿಂದ, ಚಿಯಾ ಬೀಜಗಳ ನಿಯಮಿತ ಸೇವನೆಯು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಈ ಬೀಜಗಳು ವಿವಿಧ ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಈ ಸೂಪರ್ ಬೀಜಗಳನ್ನು ಹೇಗೆ ಬಳಸಬೇಕು ಎಂದು ನಿಮಗೆ ತಿಳಿದಿಲ್ಲದಿದ್ದರೆ, ಈ ವಿಧಾನಗಳನ್ನು ನೋಡಿ
ಇದನ್ನೂ ಓದಿ:ಪ್ರತಿನಿತ್ಯ ಮುಡಿಯಷ್ಟು ಒಣ ಹಣ್ಣು ಸೇವಿಸಿ; ಹೃದಯದ ಸಮಸ್ಯೆ ಕಡಿಮೆಯಾಗುತ್ತೆ
ಚಿಯಾ ಬೀಜಗಳು ಮತ್ತು ಫುಡ್ಡಿಂಗ್: ಚಿಯಾ ಬೀಜಗಳನ್ನು ಸೇರಿಸುವ ಮೂಲಕ ಪುಡಿಂಗ್‌ನಂತಹ ನಿಮ್ಮ ಸಿಹಿತಿಂಡಿಗಳನ್ನು ಆರೋಗ್ಯಕರವಾಗಿಸಬಹುದು. ಇದು ನಿಮ್ಮ ಫುಡ್ಡಿಂಗ್‌ಗೆ ದಪ್ಪವಾದ ವಿನ್ಯಾಸವನ್ನು ನೀಡುತ್ತದೆ. ನೀವು ಬೀಜಗಳನ್ನು ಇಷ್ಟಪಡದಿದ್ದರೆ, ಇತರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ಬ್ಲೆಂಡ್ ಮಾಡಬಹುದು.
ಚಿಯಾ ಬೀಜಗಳು ಮತ್ತು ಓಟ್ ಮೀಲ್: ಪೌಷ್ಟಿಕ ಉಪಹಾರಕ್ಕಾಗಿ ಹಾಲು ಅಥವಾ ತೆಂಗಿನ ಹಾಲಿನೊಂದಿಗೆ ಓಟ್ಸ್ ಹಾಕಿ ಅದಕ್ಕೆ ಸ್ವಲ್ಪ ಚಿಯಾ ಬೀಜಗಳನ್ನು ಸೇರಿಸಬಹುದು.
ಚಿಯಾ ಬೀಜಗಳು ಮತ್ತು ಮೊಸರು: ಚಿಯಾ ಬೀಜಗಳು ಉತ್ತಮ ಪೌಷ್ಟಿಕಾಂಶದ ಗುಣದ ಜೊತೆ ಇತರೆ ಪ್ರಯೋಜಗಳನ್ನು ಹೊಂದಿದೆ. ನಿಮ್ಮ ಮೊಸರಿನ ಜೊತೆಗೆ ಎರಡು ಟೀ ಚಮಚ ನೆನೆಸಿದ ಚಿಯಾ ಬೀಜಗಳನ್ನು ಸೇರಿಸಿ ಸ್ವಲ್ಪ ಸಮಯ ಬಿಟ್ಟರೆ ಅದು ಪರಿಮಳವನ್ನು ನೀಡುತ್ತದೆ.
ಇದನ್ನೂ ಓದಿ:ಖರ್ಜೂರ ಪ್ರೋಟಿನ್ಗಳ ಆಗರ.. ತಿಂದ್ರೆ ಆರೋಗ್ಯಕ್ಕೆ ಹಲವು ಲಾಭ..
ಚಿಯಾ ಬೀಜಗಳು ಮತ್ತು ನಿಂಬೆ ಪಾನಕ: ನಿಂಬೆ ಪಾನಕಕ್ಕೆ ಉತ್ತಮವಾದ ವಿನ್ಯಾಸವನ್ನು ನೀಡಲು ಈ ಸೂಪರ್ ಸೀಡ್ಸ್ಅನ್ನು ಬಳಸಬಹುದು. ನೆನೆಸಿದ ಬೀಜಗಳನ್ನು ನಿಂಬೆ ಪಾನಕಕ್ಕೆ ಸೇರಿಸಬಹುದು.
ಚಿಯಾ ಬೀಜಗಳು ಮತ್ತು ಪ್ಯಾನ್ ಕೇಕ್: ಪ್ಯಾನ್ ಕೇಕ್ ಮಿಶ್ರಣವನ್ನು ಹೆಚ್ಚು ಪೌಷ್ಟಿಕಾಂಶಭರಿತವಾಗಿ ಮತ್ತು ಮೃದುವಾಗಿಸಲು ನೀವು ಚಿಯಾ ಬೀಜಗಳನ್ನು ಸೇರಿಸಬಹುದು.
ಚಿಯಾ ಬೀಜಗಳು ಮತ್ತು ಸ್ಮೂಥಿಗಳು: ಪೌಷ್ಟಿಕಾಂಶವನ್ನು ಹೆಚ್ಚಿಸಲು ಚಿಯಾ ಬೀಜಗಳನ್ನು ಸ್ಮೂಥಿಗಳಿಗೆ ಸೇರಿಸಬಹುದು. ಸೇಬು, ಬಾಳೆಹಣ್ಣು ಅಥವಾ ಮಾವಿನ ಸ್ಮೂಥಿ ಯಾವುದೇ ಸ್ಮೂಥಿಗೆ ನೀವು ಒಂದು ಚಮಚ ಚಿಯಾ ಬೀಜಗಳನ್ನು ಸೇರಿಸಬಹುದು.
ಇದನ್ನೂ ಓದಿ:ಬೇಸಿಗೆಯ ದಾಹ ತಣಿಸುತ್ತವೆ ಈ ಸ್ಮೂಥಿಗಳು: ಒಮ್ಮೆ ಟ್ರೈ ಮಾಡಿ