ನವದೆಹಲಿ: ಸಾಂಕ್ರಾಮಿಕತೆಯ ಈ ಕಾಲಘಟ್ಟದಲ್ಲಿ ಕೈ ಸ್ವಚ್ಛಗೊಳಿಸುವುದು ಪ್ರಮುಖ ಮುನ್ನೆಚ್ಚರಿಕೆಯಾಗಿದೆ. ಈ ಹಿನ್ನೆಲೆ ತಪ್ಪದೇ ಕೈ ತೊಳೆಯುವುದಕ್ಕೆ ಆದ್ಯತೆ ನೀಡಬೇಕು ಎಂದು ಸರ್ಕಾರ ಮತ್ತು ಆರೋಗ್ಯಕಾಳಜಿ ಅಧಿಕಾರಿಗಳು ಜನರಲ್ಲಿ ಕೇಳಿಕೊಂಡಿದ್ದಾರೆ. ಆದಾಗ್ಯೂ, ಜಗತ್ತಿನ ಅನೇಕ ದೇಶಗಳು ನೈರ್ಮಲ್ಯತೆಯಿಂದ ದೂರ ಉಳಿದಿದೆ. ಇದರಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ ವಾಶ್ (ನೀರಿ ಶುಚಿತ್ವ ಮತ್ತು ನೈರ್ಮಲ್ಯ) ಮಾನವ ಹಕ್ಕು ಆಗಬೇಕಿದೆ.
ಭಾರತದಲ್ಲಿ, ಈ ವಾಶ್ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೂ, ಇದರ ಅಭಿವೃದ್ಧಿಯ ಬೆಳವಣಿಗೆ ಮತ್ತು ಜಾಗೃತಿ ಹೆಚ್ಚಾಗಬೇಕಿದೆ. 2010-2013ರ ಅವಧಿಯಲ್ಲಿ ಭಾರತದಲ್ಲಿ ಡಯೇರಿಯಾ, ಮಲೇರಿಯಾ ಮತ್ತು ಇನ್ನಿತರ ಸಾಂಕ್ರಾಮಿಕ ಸೋಂಕಿನಿಂದಾಗಿ ಎಲ್ಲ ವಯೋಮಾನದ ಶೇ 7.5ರಷ್ಟು ಮಂದಿ ಸಾವನ್ನಪ್ಪಿದ್ದಾರೆ. 2019ರಲ್ಲಿ 1.32 ಕೋಟಿ ಡಯರಿಯಾ ಪ್ರಕರಣಗಳು ವರದಿಯಾಗಿದೆ. ಈ ದತ್ತಾಂಶಗಳು ನೈರ್ಮಲ್ಯಕ್ಕೆ ಮಹತ್ವ ನೀಡುವುದರ ಜೊತೆಗೆ ಕೈ ತೊಳೆಯುವ ಅಭ್ಯಾಸ ನಡೆವುದು ಸುರಕ್ಷಿತ ಮುನ್ನೆಚ್ಚರಿಕೆ ಕ್ರಮವಾಗಿದೆ
ಡಯೇರಿಯಾಕ್ಕೆ ಕಾರಣ: ಪ್ರತಿಯೊಂದು ಚಟುವಟಿಕೆಗೆ ನಿತ್ಯ ನಾವು ಕೈಗಳನ್ನು ಬಳಕೆ ಮಾಡುತ್ತೇವೆ. ಇದೇ ಕಾರಣದಿಂದ ಪದೇ ಪದೆ ಕೈ ತೊಳೆಯಬೇಕು. ನೈರ್ಮಲ್ಯ ಎಂದಿಗೂ ಅಪಾಯ ತರುವುದಿಲ್ಲ. ಗೊತ್ತಿದ್ದು, ಗೊತ್ತಿಲ್ಲದೇ ಅನೇಕ ಕೀಟಾಣುಗಳಿಗೆ ನಾವು ಒಡ್ಡಿಕೊಳ್ಳುತ್ತೇವೆ. ಇದರಿಂದ ಡಯೇರಿಯಾದಂತಹ ಸೋಂಕು ಕಾಣಿಸಿಕೊಳ್ಳುತ್ತದೆ. ಜೊತೆಗೆ ನ್ಯೂಮೋನಿಯಾದಂತಹ ಸಮಸ್ಯೆ ತಡೆಗೆ ಕೈ ತೊಳೆಯುವ ಅಭ್ಯಾಸ ಇರಬೇಕು.
ಸಾಂಕ್ರಾಮಿಕತೆ ಬಳಿಕ ಕೈ ತೊಳೆಯುವ ಅಭ್ಯಾಸ ಹೆಚ್ಚುತ್ತಿದೆ. ಆದರೆ, ಇದನ್ನು ಗಂಭೀರವಾಗಿ ನಾವು ಪರಿಗಣಿಸಿದ್ದೇವಾ ಎಂಬುದು ಚಿಂತಿಸಬೆಕು. ಯುನಿಸೆಫ್ ಪ್ರಕಾರ, ಪುರಷರು ನೈರ್ಮಲ್ಯದಲ್ಲಿ ಹೆಚ್ಚಿನ ಕಡೆಗಣನೆ ವಹಿಸುತ್ತಾರೆ ಎಂದಿದ್ದಾರೆ.
ಸಲ್ಮೊನೆಲಾ, ನೊರೊವೈರಸ್ ಮತ್ತು ಇ ಸೇರಿದಂತಹ ವೈರಸ್ಗಳು ಡಯೇರಿಯಾಗೆ ಕಾರಣ. ಇರದ ಮೂ ಮಾನವನ ಮಲ ಅಥವಾ ಪ್ರಾಣಿಗಳ ಮಲ ಆಗಿದೆ. ಕೈ-ಬಾಯಿ ರೋಗ ಮತ್ತು ಅಡೆನೊವೈರಸ್ ಸೋಂಕಿನಿಂದ ಶ್ವಾಸಕೋಶದ ಸೋಂಕು ಹರಡುತ್ತದೆ. ಶೌಚಾಲಯ ಅಥವಾ ಇನ್ನಿತರ ಚಟುವಟಿಕೆಯಿಂದ ಅನೇಕರ ಕೈಯಲ್ಲಿ ಕೀಟಾಣುಗಳು ಹರಡುತ್ತದೆ.
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಪ್ರಕಾರ, ಸಮುದಾಯದಲ್ಲಿನ ಕೈತೊಳೆಯುವ ಶಿಕ್ಷಣದಿಂದ ದುರ್ಬಲ ರೋಗ ನಿರೋಧಕ ವ್ಯವಸ್ಥೆ ಹೊಂದಿರುವವರು ಡಯಾರಿಯಾ ಸಮಸ್ಯೆಗೆ ತುತ್ತಾಗುವುದನ್ನು ತಡೆಯಬಹುದು. ಡಯೇರಿಯಾ ಮತ್ತು ನ್ಯೂಮೋನಿಯಾದಿಂದಾಗಿ ಐದು ವರ್ಷದ ಒಳಗಿನ 1.8 ಮಿಲಿಯನ್ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಇದು ಕೂಡ ಮಕ್ಕಳ ಸಾವಿಗೆ ಜಗತ್ತಿನಾದ್ಯಂತ ಪ್ರಮುಖ ಕಾರಣ ವಿಷಯವಾಗಿದೆ.
ಸತ್ಯ ಹೇಳುವುದೇನು: ಸಂಶೋಧನೆ ತಿಳಿಸುವಂತೆ 2.3 ಮಿಲಿಯನ್ ಮಂದಿ ತಮ್ಮ ಮನೆಯಲ್ಲಿ ಕೈ ಶುಚಿಯ ವಸ್ತುಗಳಾದ ಸೋಪ್ ಮತ್ತು ನೀರನ್ನೇ ಹೊಂದಿಲ್ಲ. ಇಂತಹ ಪರಿಸ್ಥಿತಿ ಮಕ್ಕಳಲ್ಲಿ ಸಮಸ್ಯೆಗೆ ಕಾರಣಬಾಗುತ್ತದೆ. ಅರ್ಧ ಶಾಲೆಗಳಲ್ಲೂ ಕೂಡ ಈ ಕೊರತೆ ಮಾಡುತ್ತದೆ. ಇದು ಸರಿ ಸುಮಾರು 802 ಮಿಲಿಯನ್ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
ನೈರ್ಮಲ್ಯ ಸೌಲಭ್ಯ ಕೊರತೆಗಳನ್ನು ಆಸ್ಪತ್ರೆಗಳಲ್ಲೂ ಕಾಣಬಹುದು. ವಿಶೇಷವಾಗಿ ಸೋಪ್, ನೀರಿನ ವಿಚಾರದಲ್ಲಿ. ಇದರಿಂದ ಹೆಚ್ಚಿನ ಬ್ಯಾಕ್ಟೀರಿಯಾಗಳು ಹರಡುವ ಸಾಧ್ಯತೆ ಇದೆ. ಇಲ್ಲಿ ಸರಿಯಾದ ಶುಚಿತ್ವ ನಿರ್ವಹಣೆ ಮಾಡದೆ ಇದ್ದರೆ, ಗಂಭೀರ ಸಮಸ್ಯೆ ಎದುರಿಸಬೇಕಾಗಬಹುದು.
ನೈರ್ಮಲ್ಯ ನಿವಾರಣೆ: ಕೈ ತೊಳೆಯುವ ಅವಧಿ ಮತ್ತು ಸಮಯದ ಕುರಿತು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕಿದೆ. ಈ ಸಂಬಂಧ ಮನೆ ಮತ್ತು ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ, ಸಂದೇಶ ಸಾರಬೇಕಿದೆ. ಕುಗ್ರಾಮ ಪ್ರದೇಶಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈತೊಳೆಯುವ ಸಾಮಗ್ರಿಗಳನ್ನು ಉತ್ತೇಜಿಸಬೇಕಿದೆ.
ಸರ್ಕಾರ ಮತ್ತು ಆರೋಗ್ಯಾಧಿಕಾರಿಗಳು ಕೈತೊಳೆಯುವ ನಿಯಮವನ್ನು ಅಭಿವೃದ್ಧಿಪಡಿಸಬೇಕಿದೆ. ಇದಕ್ಕಾಗಿ ಕಾರ್ಯತಂತ್ರ ಮತ್ತು ಯೋಜನೆ ರೂಪಿಸಬೇಕಿದೆ. ಭಾರತ ಜನಸಂಖ್ಯೆಯಲ್ಲಿ ಮುನ್ನಡೆಯುತ್ತಿದ್ದು, ಈ ಸಂಬಂಧ ದೇಶದ ಮೂಲೆ ಮೂಲೆಯಲ್ಲಿ ಅರಿವು ಮೂಡಿಸಬೇಕಿದೆ. ಸದ್ಯ ಡಿಜಿಟಲೀಕರಣ ಜಗತ್ತನ್ನು ಒಂದು ಮಾಡಿದ್ದು, ಸರ್ಕಾರಗಳು ಇದರ ಬಳಕೆ ಮಾಡಿ, ಈ ಕುರಿತು ಕಾರ್ಯಕ್ರಮ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಗುರಿಗಳು ತಲುಪಲು ಸಾಧ್ಯವಾಗಲಿದೆ.
ಇದನ್ನೂ ಓದಿ: ವಿಶ್ವ ಕೈ ಶುಚಿತ್ವ ದಿನ: ಗಂಟೆಗೊಮ್ಮೆ ಕೈ ತೊಳೆಯಿರಿ, ಹಲವು ರೋಗಗಳಿಂದ ಮುಕ್ತಿ ಪಡೆಯಿರಿ