ಗ್ರೀನ್ ಟೀ ಇಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿರುವ ಚಹಾ. ಇದನ್ನು ತೂಕ ಇಳಿಸಲು, ದೇಹದ ಆರೋಗ್ಯ ಕಾಪಾಡಲು ಹೀಗೆ ಪ್ರತಿಯೊಬ್ಬರು ಇಂದಿನ ದಿನಗಳಲ್ಲಿ ಬಳಕೆ ಮಾಡುವರು. ನಾವು ಒತ್ತಡದಲ್ಲಿದ್ದಾಗ, ದಣಿವಾದಾಗ, ಗೊಂದಲ ಅಥವಾ ಆತಂಕದಲ್ಲಿದ್ದಾಗ, ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಒಂದು ಕಪ್ ಚಹಾ ಕುಡಿಯೋಣಾ ಎನ್ನುವುದು.
ಇದೊಂದು ಮಾಂತ್ರಿಕ ಪಾನೀಯವಾಗಿದ್ದು, ನಾವು ದಣಿದಿರುವಾಗ ಇದನ್ನು ಕುಡಿದ್ರೆ, ನಮ್ಮಲ್ಲಿ ಉತ್ಸಾಹ - ಹುಮ್ಮಸ್ಸು ಬರುತ್ತದೆ. ಕ್ಯಾಮೆಲಿಯಾ ಸಿನೆನ್ಸಿಸ್ ಎಂಬ ಸಸ್ಯದಿಂದ ಬ್ಲಾಕ್ ಅಥವಾ ಗ್ರೀನ್ ಚಹಾವನ್ನು ತಯಾರಿಸಲಾಗುತ್ತದೆ ಎಂಬ ಸತ್ಯ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇವೆರಡೂ ಒಂದೇ ಸಸ್ಯದಿಂದ ಬಂದಿದ್ದರೂ, ಅವು ಗಮನಾರ್ಹವಾಗಿ ಭಿನ್ನವಾಗಿವೆ. ಸಂಶೋಧನೆಯ ಪ್ರಕಾರ, ಪ್ರತಿಯೊಂದು ಚಹಾವು ಒಂದೇ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಕ್ಯಾನ್ಸರ್ಗೆ ರಾಮಬಾಣವೇ?: ಗ್ರೀನ್ ಚಹಾದ ಎಲೆಗಳು ಹುದುಗುವುದಿಲ್ಲ ಮತ್ತು ಬ್ಲಾಕ್ ಟೀ ಮಾಡುವ ಆಕ್ಸಿಡೀಕರಣ ಪ್ರಕ್ರಿಯೆಯನ್ನು ಇದು ಮಾಡುವುದಿಲ್ಲ. ಬ್ಲಾಕ್ ಟೀನಲ್ಲಿ ವಿಶೇಷವಾಗಿ EGCG ಅತ್ಯಂತ ಹೇರಳವಾಗಿದೆ. ರೋಗ ನಿರೋಧಕ ಗುಣಲಕ್ಷಣ ಹೊಂದಿರುವುದರಿಂದ ಕ್ಯಾನ್ಸರ್, ಹೃದಯರಕ್ತನಾಳದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಗ್ರೀನ್ ಟೀ ಕಾಫಿಯ ಕಾಲು ಭಾಗದಷ್ಟು ಕೆಫೀನ್ ಅಂಶವನ್ನು ಹೊಂದಿದೆ. ಇದು ನಮ್ಮನ್ನು ಆರೋಗ್ಯಕರವಾಗಿಸುತ್ತದೆ. ಇದರ ತಯಾರಿಕೆಯಲ್ಲಿ ಯಾವುದೇ ಆಕ್ಸಿಡೀಕರಣವಿಲ್ಲದ ಕಾರಣ, EGCG ಅನ್ನು ಇತರ ರೂಪಗಳಾಗಿ ಪರಿವರ್ತಿಸಲಾಗುವುದಿಲ್ಲ ಮತ್ತು ಉಳಿಸಿಕೊಳ್ಳಲಾಗುತ್ತದೆ. ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
ಸಂಜೆ ಧ್ಯಾನಕ್ಕೆ ಗ್ರೀನ್ ಟೀ: ಮಧ್ಯಾಹ್ನದ ವಿರಾಮದ ವೇಳೆ ಮತ್ತು ಸಂಜೆ ಧ್ಯಾನಕ್ಕೆ ಗ್ರೀನ್ ಟೀ ಉತ್ತಮವಾಗಿದೆ. ಇದು ಕಡಿಮೆ ಆಮ್ಲೀಯವನ್ನು ಹೊಂದಿದ್ದು, ಆಮ್ಲೀಯ ತ್ಯಾಜ್ಯವನ್ನು ಹೊರಹಾಕುತ್ತದೆ. ಇದನ್ನು ಕುಡಿಯುವುದರಿಂದ ಪ್ರಕಾಶಮಾನವಾದ ಚರ್ಮ, ವೇಗವಾದ ಚಯಾಪಚಯ ಕ್ರಿಯೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಗ್ರೀನ್ ಟೀ ತನ್ನದೇ ಆದ ಅನುಕೂಲಗಳನ್ನು ಹೊಂದಿದೆ. ತಂಪು ಪಾನೀಯಕ್ಕಿಂತ ಒಂದು ಕಪ್ ಬಿಸಿಯಾದ ಕಪ್ ಗ್ರೀನ್ ಟೀ ಕುಡಿಯುವುದು ಉತ್ತಮ. ಇದು ನಮ್ಮ ದೇಹವನ್ನು ತಂಪಾಗಿಡುತ್ತದೆ.
ಇದನ್ನೂ ಓದಿ: ವಿಟಮಿನ್ ಡಿಯುಕ್ತ ಆಹಾರ ಸೇವೆ ಟೈಪ್ 2 ಡಯಾಬಿಟಿಸ್ ತಡೆಯೋದಿಲ್ಲ: ಅಧ್ಯಯನ
ಬ್ಲಾಕ್ ಟೀನಲ್ಲಿನ EGCG ಅನ್ನು ಥೀಫ್ಲಾವಿನ್ ಮತ್ತು ಥಿಯಾರುಬಿಜೆನ್ಸ್ ಆಗಿ ಪರಿವರ್ತಿಸಲಾಗುತ್ತದೆ. ಇದರ ಪರಿಣಾಮ ಗ್ರೀನ್ ಟೀ ಕ್ಯಾಟೆಚಿನ್ಗಳ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಕಪ್ಪು ಚಹಾವನ್ನು ಮೀರಿಸುತ್ತದೆ. ಆದರೆ ಬ್ಲ್ಯಾಕ್ ಟೀ ಕೂಡ ಆಂಟಿ ಆಕ್ಸಿಡೆಂಟ್‌ಗಳಲ್ಲಿ ಹೇರಳವಾಗಿರುವ ಕಾರಣ ಆರೋಗ್ಯಕರವಾಗಿದೆ. ಇದು ಕಾಫಿಯಲ್ಲಿ ಕಂಡುಬರುವ ಮೂರನೇ ಒಂದು ಭಾಗದಷ್ಟು ಕೆಫಿನ್ ಒಳಗೊಂಡಿರುತ್ತದೆ.
ಏಕಾಗ್ರತೆ ಹೆಚ್ಚಿಸುತ್ತೆ: ಬ್ಲಾಕ್ ಟೀ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಕೆಫಿನ್ ಅಂಶವು ದೇಹದ ನರ ವ್ಯವಸ್ಥೆಯನ್ನು ಉತ್ತೇಜಿಸುವುದು. ಇದರಿಂದ ದೇಹಕ್ಕೆ ತಾಜಾತನ ಮತ್ತು ಉಲ್ಲಾಸ ಬರುವುದು. ಇದರಿಂದಾಗಿ ಬ್ಲ್ಯಾಕ್ ಟೀ ಬೇಗನೆ ಪ್ರತಿಕ್ರಿಯಿಸುವುದು ಮತ್ತು ಉಲ್ಲಾಸ ನೀಡುವುದು.ಪಾಲಿಫೆನಾಲ್ ಸಂಯೋಜನೆ ಬಿಟ್ಟರೆ, ಹೆಚ್ಚು ಕಡಿಮೆ ಎರಡರಲ್ಲೂ ಒಂದೇ ರೀತಿಯ ಲಾಭಗಳು ಇವೆ.
ಇದನ್ನು ತಯಾರಿಸುವುದು ಹೇಗೆ?: ಬ್ಲ್ಯಾಕ್ ಟೀ ಕೆಫಿನ್ ಬೇಕೆಂದು ಸೇವನೆ ಮಾಡುವವರಿಗೆ ಒಳ್ಳೆಯದು. ಕೆಫಿನ್ ಸೂಕ್ಷ್ಮತೆ ಇದ್ದರೆ ಆಗ ನೀವು ಗ್ರೀನ್ ಟೀ ಸೇವನೆ ಮಾಡಿ. ಇದು ನೈಸರ್ಗಿಕವಾಗಿ ಶಮನ ನೀಡುವುದು ಮತ್ತು ಬ್ಲ್ಯಾಕ್ ಟೀಗೆ ಹೋಲಿಕೆ ಮಾಡಿದರೆ ಕಡಿಮೆ ಕೆಫಿನ್ ಇದೆ. ಈ ಚಹಾದಲ್ಲಿರುವ ಕೆಫೀನ್ ಅಂಶ ಬೇಸಿಗೆಯಲ್ಲಿ ನಿಮ್ಮನ್ನು ಹೈಡ್ರೀಕರಿಸುತ್ತದೆಯೇ. ಈ ಚಹಾವನ್ನು ಸುಲಭವಾಗಿ ತಯಾರಿಸಬಹುದಾಗಿದೆ.
ಬಿಸಿ ನೀರನ್ನು ಕಾಯಿಸಿ ಅದಕ್ಕೆ ಎಲೆಗಳನ್ನು ಹಾಕಿದ್ರೆ ಚಹಾ ರೆಡಿಯಾಗುತ್ತದೆ. ಇದು ನೀರಿಗೆ ಸುವಾಸನೆ ಮತ್ತು ಪರಿಮಳವನ್ನು ನೀಡುತ್ತದೆ. ಇದರರ್ಥ ನೀವು ಬಿಸಿ ಚಹಾವನ್ನು ಹೀರುತ್ತಾ ನೀರನ್ನು ಕುಡಿಯುತ್ತಿದ್ದೀರಿ ಎಂದರ್ಥ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಪ್ಪು ಚಹಾ ಮತ್ತು ಹಸಿರು ಚಹಾ ಎರಡನ್ನೂ ಕ್ಯಾಮೆಲಿಯಾ ಸಿನೆನ್ಸಿಸ್ ಎಲೆಗಳಿಂದ ತಯಾರಿಸಲಾಗುತ್ತದೆ. ಅವುಗಳ ಸಂಸ್ಕರಣಾ ವಿಧಾನಗಳಲ್ಲಿ ಮಾತ್ರ ವ್ಯತ್ಯಾಸವಿದೆ. ಆದ್ದರಿಂದ, ಬ್ಲಾಕ್ ಮತ್ತು ಗ್ರೀನ್ ಚಹಾ ಎರಡೂ ಅತ್ಯುತ್ತಮ ಪಾನೀಯ ಆಯ್ಕೆಗಳಾಗಿವೆ. ಮಿತವಾಗಿ ಸೇವಿಸಿದರೆ ಎರಡೂ ನಿಮ್ಮ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತವೆ.