ETV Bharat / sukhibhava

ಹವಾಮಾನ ಬದಲಾವಣೆ ಮನುಷ್ಯರ ಮೆದುಳಿನ ಮೇಲೂ ಬೀರುತ್ತೆ ಪರಿಣಾಮ! - ಹವಾಮಾನ ಬದಲಾವಣೆಯ ಹೊಸ ಅಧ್ಯಯನ

Climate change impact: ಈ ಹವಾಮಾನ ಬದಲಾವಣೆ ಭವಿಷ್ಯದಲ್ಲಿ ಜಾಗತಿಕ ಬೆದರಿಕೆವೊಡ್ಡುವ ವಿಷಯವಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Global warming may impact our brain function in the future

author img

By ETV Bharat Karnataka Team

Published : Nov 27, 2023, 1:09 PM IST

ಲಂಡನ್​: ಶಾಖದ ಅಲೆ, ಬರ ಮತ್ತು ಚಂಡ ಮಾರುತಗಳು​ ಮತ್ತು ಕಾಡ್ಗಿಚ್ಚು ಪ್ರವಾಹದಂತಹ ಜಾಗತಿಕ ತಾಪಮಾನ ಬದಲಾವಣೆಯಂತಹ ಗಂಭೀರ ಘಟನೆಗಳು ಭವಿಷ್ಯದಲ್ಲಿ ಮನುಷ್ಯರ ಮೆದುಳಿನ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಲಿವೆ ಎಂದು ಅಧ್ಯಯನಗಳು ಎಚ್ಚರಿಸಿವೆ.

ಜೀನಿವಾ, ನ್ಯೂಯಾರ್ಕ್​, ಶಿಕಾಗೋ, ವಾಷಿಂಗ್ಟನ್​​, ಸ್ಟಾನ್​​ಫೋರ್ಡ್​, ಯುಕೆಯಲ್ಲಿನ ಎಕ್ಸಿಟರ್​ ತಂಡಗಳು ನಡೆಸಿದ ಹೊಸ ಅಧ್ಯಯನದ ಅನುಸಾರ, ಹವಾಮಾನ ಬದಲಾವಣೆ ಘಟನೆಗಳು ಒಟ್ಟಾರೆ ಆರೋಗ್ಯ ಮತ್ತು ಮೆದುಳಿನ ವಿನ್ಯಾಸವನ್ನು ಬದಲಾಯಿಸಬಹುದು ಎಂದಿದ್ದಾರೆ. ಅಲ್ಲದೇ, ಇದು ಹೇಗೆ ಯೋಗಕ್ಷೇಮ ಮತ್ತು ನಡವಳಿಕೆ ಮೇಲೆ ಬದಲಾವಣೆ ಬೀರಲಿದೆ ಎಂದು ಮತ್ತಷ್ಟು ಹೆಚ್ಚಿನ ಮೌಲ್ಯಮಾಪನ ನಡೆಸಬೇಕಿದೆ ಎಂದಿದ್ದಾರೆ.

ಹವಾಮಾನ ಬದಲಾವಣೆಗಗಳು ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬ ಯೋಚಿಸುವ ರೀತಿಯ ಮೇಲೆ ಪ್ರಭಾವ ಬೀರುವ ನರ ವಿಜ್ಞಾನದಲ್ಲಿ ಪಾತ್ರವನ್ನು ಹೊಂದಿರುವ ಕುರಿತು ಕೂಡ ಈ ಅಧ್ಯಯನ ಅನ್ವೇಷಿಸಿದೆ.

ನಮ್ಮ ಪರಿಸರದ ಬದಲಾವಣೆಗಳು ನಮ್ಮ ಮೆದುಳಿನ ಬದಲಾವಣೆಗೆ ಕಾರಣವಾಗುವ ಅಂಶ ಎಂಬುದು ತಿಳಿದ ಅಂಶವಾಗಿದೆ. ಹೇಗೆ ಈ ಹವಾಮಾನ ಬದಲಾವಣೆ ನಮ್ಮ ಸಮಯದಲ್ಲಿ ಜಾಗತಿಕ ಬೆದರಿಕೆ ಆಗಬಹುದು. ಇದು ನಮ್ಮ ಮೆದುಳಿನ ಪ್ರಕ್ರಿಯೆಯನ್ನು ಬದಲಾಯಿಸಬಹುದು ಎಂಬುದರನ್ನು ನೋಡಬೇಕಿದೆ ಎಂದು ಆಸ್ಟ್ರೀಯಾದ ವಿಯೆನ್ನಾ ಯುನಿವರ್ಸಿಟಿಯ ಪ್ರಮುಖ ಅಧ್ಯಯನಕಾರ ಡಾ ಕಿಮ್​ಬರ್ಲಿ ಸಿ ಡೊಯೆಲ್​ ತಿಳಿಸಿದ್ದಾರೆ.

ಆಗಿಂದಾಗ್ಗೆ ಹೆಚ್ಚಾಗುವ ಗಂಭೀರ ಹವಾಮಾನ ಪರಿಣಾಮಗಳನ್ನು ನಾವು ಅನುಭವಿಸಿದ್ದೇವೆ. ಇದರ ಜೊತೆಗೆ ವಾಯು ಮಾಲಿನ್ಯದಂತಹ ಹವಾಮಾನ ಬದಲಾವಣೆಯಿಂದ ಜನರಲ್ಲಿ ಒತ್ತಡ ಮತ್ತು ಆತಂಕದ ಅನುಭವ ಕಾಣುತ್ತಿದ್ದೇವೆ. ಇದು ನಮ್ಮ ಮೆದುಳಿನ ಮೇಲೆ ಬೀರುವ ಪ್ರಭಾವವನ್ನು ಅರ್ಥ ಮಾಡಿಕೊಳ್ಳುವುದು ನಿರ್ಣಾಯಕವಾಗಿದೆ. ಆಗ ಮಾತ್ರ ನಾವು ಈ ಬದಲಾವಣೆಗಳನ್ನು ತಗ್ಗಿಸಬಹುದು ಎಂದಿದ್ದಾರೆ.

1940ರಿಂದ ವಿಜ್ಞಾನಿಗಳು ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಹವಾಮಾನದ ಅಂಶಗಳು ಮೆದುಳಿನ ಅಭಿವೃದ್ಧಿ ಮತ್ತು ಪ್ಲಾಸ್ಟಿಸಿಟಿ ಬದಲಾವಣೆಯನ್ನು ಗಮನಿಸಿದ್ದಾರೆ. ಇದೇ ಪರಿಣಾಮವನ್ನು ಮಾನವರ ಮೇಲೆ ಕಾಣಬಹುದಾಗಿದೆ. ಇದು ಬಡತನ ಬೆಳವಣಿಗೆ ಪರಿಣಾಮದ ದೃಷ್ಟಿಯಿಂದ ಕಾಣಬಹುದಾಗಿದೆ. ಇದು ಅರಿವಿನ ಉತ್ತೇಜನ ಕೊರತೆ, ಕಳಪೆ ಪೋಷಕಾಂಶ, ಬಾಲ್ಯದ ಒತ್ತಡದಂತಹ ಮೆದುಳಿನ ವ್ಯವಸ್ಥೆಗೆ ಅಡ್ಡಿಪಡಿಸುವುದನ್ನು ಕಾಣಬಹುದಾಗಿದೆ.

ನೇಚರ್​ ಕ್ಲೈಮೆಟ್​ ಚೇಂಜ್​ನಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನದಲ್ಲಿ ಸಂಪೂರ್ಣ ಅಚ್ಚರಿ ಅಂಶಗಳಿಲ್ಲ, ಇದು ಒಂದು ಮೆದುಳಿನ ಮೇಲಿನ ಪರಿಣಾಮವನ್ನು ಹೈಲೈಟ್​ ಮಾಡಿದೆ.

ಮೆದುಳಿನ ಕಾರ್ಯಾಚರಣೆ ಮತ್ತು ಹವಾಮಾನ ಬದಲಾವಣೆ ಎಂಬ ಎರಡು ವಿಷಯವು ಸಂಕೀರ್ಣವಾಗಿದೆ. ಇದನ್ನು ನಾವು ಪರಸ್ಪರ ಸಂಬಂಧದಲ್ಲಿ ನೋಡಬೇಕಿದೆ. ಭವಿಷ್ಯದ ಹವಾಮಾನ ಬದಲಾವಣೆ ಘಟನೆಗಳಿಂದ ನಮ್ಮ ಮೆದುಳನ್ನು ರಕ್ಷಣೆ ಮಾಡುವ ಕಾರ್ಯವನ್ನು ನಾವು ತೆಗೆದುಕೊಳ್ಳಬೇಕಿದೆ. ಈಗಾಗಲೇ ಏನಾಗುತ್ತಿದೆ ಎಂಬುದನ್ನು ನಿಭಾಯಿಸಲು ಮತ್ತು ಕೆಟ್ಟ ಸನ್ನಿವೇಶಗಳನ್ನು ತಡೆಯಲು ನಮ್ಮ ಮೆದುಳನ್ನು ಉತ್ತಮವಾಗಿ ಬಳಸಲು ಪ್ರಾರಂಭಿಸಬೇಕಿದೆ ಎಂದು ಎಕ್ಸಿಟರ್​ ಮತ್ತು ವಿಯೆನ್ನಾ ಯುನಿವರ್ಸಿಟಿಯ ಡಾ ಮ್ಯಾಥ್ಯೂ ವೈಟ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ವಾಯು ಮಾಲಿನ್ಯ: ಉಸಿರಾಟದ ತೊಂದರೆ ಮಾತ್ರವಲ್ಲ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣ - ತಜ್ಞರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.