ETV Bharat / sukhibhava

ಆನ್​ಲೈನ್​ ಮೂಲಕ ಹರೆಯದ ಮಕ್ಕಳಿಗೆ ಅಪರಿಚಿತರ ಸ್ನೇಹಹಸ್ತ: ಅಪಾಯದ ಅರಿವಿರಲಿ! - ಈಟಿವಿ ಭಾರತ್​ ಕನ್ನಡ

ಹರೆಯದ ಮಕ್ಕಳಿಗೆ ಆನ್​ಲೈನ್​ ಮೂಲಕ ಸ್ನೇಹದ ಕೋರಿಕೆ ಕಳುಹಿಸುವವರ ಸಂಖ್ಯೆ ಹೆಚ್ಚಿದ್ದು, ಇವರು ವೈಯಕ್ತಿಕ ಮಾಹಿತಿ ಪಡೆಯುವುದಲ್ಲದೇ ಅನುಚಿತ ಸಂಭಾಷಣೆಗಳನ್ನೂ ನಡೆಸುತ್ತಾರೆ ಎಂಬುದನ್ನು ಅಧ್ಯಯನದಲ್ಲಿ ಶೇ 33ರಷ್ಟು ಪೋಷಕರು ಒಪ್ಪಿಕೊಂಡಿದ್ದಾರೆ.

ಆನ್​ಲೈನ್​ ಮೂಲಕ ಹರೆಯ ಮಕ್ಕಳಿಗೆ ಅಪರಿಚಿತರಿಂದ ಸ್ನೇಹದ ಬೇಡಿಕೆ; ಅಧ್ಯಯನದಲ್ಲಿ ಬಹಿರಂಗ
friendship-requests-from-strangers-to-teenagers-online-revealed-in-the-study
author img

By

Published : Jan 19, 2023, 10:21 AM IST

ನವದೆಹಲಿ: ಇಂದಿನ ಮಕ್ಕಳಲ್ಲಿ ಆನ್​ಲೈನ್​ ಬಳಕೆ ಸಾಮಾನ್ಯವಾಗಿದೆ. ಇಂತಹ ಆನ್​ಲೈನ್​ ತಾಣಗಳನ್ನು ಬಳಸುವ ಮಕ್ಕಳ ಸ್ನೇಹ ಬಯಸಿ, ಗುರುತು ಪರಿಚಯವಿರದ ವ್ಯಕ್ತಿಗಳು ಸಂಪರ್ಕಿಸುವ ಸಂಖ್ಯೆ ಹೆಚ್ಚಿದೆ. ಇವರು ವೈಯಕ್ತಿಕ ಮತ್ತು ಕುಟುಂಬದ ಮಾಹಿತಿ ಪಡೆಯುವುದರೊಂದಿಗೆ ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಈ ವರದಿ ಅನುಸಾರ, ಸಮೀಕ್ಷೆಯಲ್ಲಿ 424 ಮಂದಿ ಪೋಷಕರು ಭಾಗಿಯಾಗಿದ್ದು, ಶೇ 33ರಷ್ಟು ಪೋಷಕರು ಕೂಡ ತಮ್ಮ ಮಕ್ಕಳನ್ನು ಆನ್​ಲೈನ್​ ಮೂಲಕ ಅಪರಿಚಿತರು ಸಂಪರ್ಕಿಸುತ್ತಿರುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ಸೇರಿ ಹಲವು ರಾಜ್ಯದಲ್ಲಿ ಸಮೀಕ್ಷೆ: 424 ಪೋಷಕರ ಹೊರತಾಗಿ ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶದ 384 ಮಂದಿ ಶಿಕ್ಷಕರು ಸೇರಿದಂತೆ ಮೂರು ರಾಜ್ಯಗಳ 107 ಮಂದಿ ಮಧ್ಯವರ್ತಿಗಳು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಪೋಷಕರ ಮಾಹಿತಿಯಂತೆ ಆನ್​ಲೈನ್​ನಲ್ಲಿ 14-18 ವರ್ಷದ ಶೇ 40ರಷ್ಟು ಹೆಣ್ಣು ಮಕ್ಕಳಿಗೆ ಆನ್​ಲೈನ್​ನಲ್ಲಿ ಸ್ನೇಹ ಮತ್ತು ನಿಂದನೆಗಳು (ಒಸಿಎಸ್​ಇಎ) ಕೇಳಿಬಂದಿದ್ದರೆ, ಇದೇ ವಯೋಮಾನದ ಶೇ 33 ಗಂಡು ಮಕ್ಕಳಿಗೆ ಈ ರೀತಿಯ ಸ್ನೇಹದ ಕೋರಿಕೆಗಳು ಆನ್​ಲೈನ್​ನಲ್ಲಿ ಬರುತ್ತಿದೆ. ಮಕ್ಕಳ ಮೇಲೆ ಆನ್​ಲೈನ್​ನಲ್ಲಿ ಆಗುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ನಿಂದನೆ ಕುರಿತು ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ.

ಮಾಹಿತಿ ಒಪ್ಪಿಕೊಂಡ ಪೋಷಕರು: ಈ ಕುರಿತು ಸಿಆರ್​ವೈ (ಮಕ್ಕಳ ಹಕ್ಕು ಮತ್ತು ನೀವು) ಹಾಗೂ ಪಾಟ್ನಾದ ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಜಂಟಿ ಸಮೀಕ್ಷೆ ನಡೆಸಿದೆ. ಈ ಅಧ್ಯಯನಲ್ಲಿ ಮೂರನೇ ಒಂದು ಭಾಗದಷ್ಟು ಪೋಷಕರು ತಮ್ಮ ಮಕ್ಕಳಿಗೆ ಆನ್​ಲೈನ್​ನಲ್ಲಿ ಅಪರಿಚಿತರು ಸ್ನೇಹದ ಕೋರಿಕೆ ಇಡುತ್ತಿದ್ದಾರೆ. ಅಲ್ಲದೇ ಕುಟುಂಬ ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಜೊತೆಗೆ ಸಂಬಂಧಗಳ ಕುರಿತು ಲೈಂಗಿಕ ಸಲಹೆಯನ್ನೂ ನೀಡುತ್ತಿದ್ದಾರೆ. ಜೊತೆಗೆ, ಅನುಚಿತ ಲೈಂಗಿಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಾನೂನು ಮೊರೆ ಹೋಗುವವರ ಸಂಖ್ಯೆ ಕಡಿಮೆ: ಆನ್​ಲೈನ್​ನಲ್ಲಿ ನಡೆಯುವ ಸ್ನೇಹ ಮತ್ತು ನಿಂದನೆಗಳ ಕುರಿತು ಕೇವಲ 30ರಷ್ಟು ಪೋಷಕರು ಮಾತ್ರ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿ ತಿಳಿಸಿದ್ದು, ಉಳಿದ 70ರಷ್ಟು ಮಂದಿ ಪೊಲೀಸ್​ ಠಾಣೆ ಮೆಟ್ಟಿಲು ಹತ್ತದೇ ಸುಮ್ಮನಾಗುತ್ತಾರೆ ಎಂಬುದನ್ನು ತಿಳಿಸಿದ್ದಾರೆ. ಆನ್​ಲೈನ್​ ಸ್ನೇಹ ಮತ್ತು ನಿಂದನೆಗಳ ಕುರಿತು ಕಾನೂನು ಕುರಿತು ಕೇವಲ ಶೇ 16ರಷ್ಟು ಮಂದಿಗೆ ಮಾತ್ರ ಅರಿವಿದೆ. ಅಲ್ಲದೇ, ಬಹುತೇಕ ಪೋಷಕರಿಗೆ ಕಾನೂನು ಮತ್ತು ಕಾನೂನು ಜಾರಿಯಾಗುವುದರ ಕುರಿತು ನಂಬಿಕೆ ಹೊಂದಿಲ್ಲ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಶಿಕ್ಷಕರ ಪ್ರಕಾರ, ಇಂತಹ ಘಟನೆಗಳ ಬಳಿಕ ಅವರ ನಡುವಳಿಕೆಯ ಬದಲಾವಣೆಯನ್ನು ಗಮನಿಸಲಾಗಿದೆ. ಶೇ 26 ಮಂದಿಯಲ್ಲಿ ಅಬ್ಸೆಂಡ್​ ಮೈಂಡ್​ (ಗಮನ ಎಲ್ಲೋ ಇರುವುದು) ಶಾಲೆಗಳಿಗೆ ಸುಖಾ ಸುಮ್ಮನೆ ತಪ್ಪಿಸಿಕೊಳ್ಳುವುದು ಕಂಡುಬರುತ್ತದೆ. ಇದರ ಜೊತೆಗೆ ಶಾಲೆಯಲ್ಲಿ ಸ್ಮಾರ್ಟ್​ ಫೋನ್​ ಬಳಕೆ ಮಾಡುವವರ ಸಂಖ್ಯೆ ಶೇ 20.9ರಷ್ಟು ಹೆಚ್ಚಿದೆ.

ಭಾರತದಲ್ಲಿ ಮಕ್ಕಳ ಕಳ್ಳಸಾಗಣೆಗೆ ಅಂತರ್ಜಾಲವನ್ನು ಬಳಸಲಾಗುತ್ತಿದೆ. ಅಂತರ್ಜಾಲದ ಬಳಕೆಯೊಂದಿಗೆ ಈಗ ಕಳ್ಳಸಾಗಣೆ ನಡೆಸಲಾಗುತ್ತಿದೆ. ವಿಶೇಷವಾಗಿ ಸಣ್ಣ ಮಕ್ಕಳಲ್ಲಿ ಈ ಪ್ರಮಾಣ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಿಬಂಧನೆಗಳನ್ನು ಮರು-ಮೌಲ್ಯಮಾಪನ ಮಾಡಬೇಕಾಗಬಹುದು ಎಂಬುದನ್ನು ಅಧ್ಯಯನ ತಿಳಿಸಿದೆ ಎಂದು ಸಿಆರ್​ವೈ ಅಭಿವೃದ್ಧಿ ಬೆಂಬಲದ ನಿರ್ದೇಶಕರಾದ ಸೊಹಾ ಮೊಯ್ತ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಕೋಚಿಂಗ್​ ಕೇಂದ್ರಗಳಿಗೆ ಕಳುಹಿಸುವ ಮುನ್ನ ಬೇಕಿದೆ ಸಾಮರ್ಥ್ಯ ಪರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.