ಲಂಡನ್: ಇದೇ ಮೊದಲ ಬಾರಿಗೆ ಲಂಡನ್ನಲ್ಲಿ ನಡೆಯುತ್ತಿರುವ ಸೀರೆ ನಡಿಗೆ (saree walkathon)ನಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಲಿದ್ದಾರೆ. ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗದ ದಿನದ ಹಿನ್ನೆಲೆ ಈ ವಿಶೇಷ ವಾಕಥಾನ್ ನಡೆಸಲಾಗಿದ್ದು, ಈ ಮೂಲಕ ಭಾರತೀಯ ಕೈಮಗ್ಗದ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಸೀರೆ ನಡಿಗೆ ಹೊಂದಿದೆ.
ಭಾರತದ ವಿವಿಧ ರಾಜ್ಯಗಳ ಮಹಿಳೆಯರು ಆಯಾ ರಾಜ್ಯಗಳಲ್ಲಿ ಮಾನ್ಯತೆ ಪಡೆದಿರುವ ವಿಶೇಷ ಕೈಮಗ್ಗದ ಸೀರೆಯುಟ್ಟು ಈ ವಾಕಥಾನ್ನಲ್ಲಿ ಭಾಗಿಯಾಗಲಿದ್ದಾರೆ. ವಿಶೇಷವಾದ ಮತ್ತು ಐತಿಹಾಸಿನ ಈ ಸೀರೆ ನಡಿಗೆ ಕಾರ್ಯಕ್ರಮ ಲಂಡನ್ನಲ್ಲಿ ಆಗಸ್ಟ್ 6ರಂದು ನಡೆಯಲಿದೆ ಎಂದು ಲಂಡನ್ ಮೂಲದ ನ್ಯೂಸ್ ವೆಬ್ಸೈಟ್ವೊಂದು ವರದಿ ಮಾಡಿದೆ.
ಈ ಸೀರೆ ನಡಿಗೆ ಟ್ರಾಫಲ್ಗರ್ ಸ್ಕ್ವೇರ್ ನಿಂದ ಆರಂಭವಾಗಲಿದ್ದು, ಇದು ಲಂಡನ್ನ ವೆಸ್ಟ್ಮಿನಿಸ್ಟರ್ನಲ್ಲಿರುವ ಐತಿಹಾಸಿಕ ಪಾರ್ಲಿಮೆಂಟ್ ಸ್ಕ್ವೇರ್ನಲ್ಲಿ ಕೊನೆಯಾಗಲಿದೆ. ಈ ನಡುವೆ ಇದು ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ನೆಲೆಸಿರುವ 10 ಡೌನಿಂಗ್ ಸ್ಟ್ರೀಟ್ ಮೂಲಕ ಸಾಗಲಿದೆ.
ಈ ಕಾರ್ಯಕ್ರಮವನ್ನು ಭಾರತೀಯ ಮಹಿಳೆಯರಿಂದ ಪ್ರಭಾವಿತರಾಗಿರುವ ಬ್ರಿಟಿಷ್ ವುಮೆನ್ ಇನ್ ಸ್ಯಾರಿ ಗ್ರೂಪ್ ಸಂಘಟಿಸಿದ್ದು, ಇದಕ್ಕೆ ಭಾರತೀಯ ಮಹಿಳೆಯರು ಬೆಂಬಲಿಸಿದ್ದಾರೆ.
ಸೀರೆಯ ಮೆರುಗು ಹೆಚ್ಚಿಸಿದ ಭಾರತೀಯ ನಾರಿ: ಇಂದಿನ ಆಧುನಿಕ ಭಾರತೀಯ ಮಹಿಳೆ ತನ್ನ ಗೂಡಿನಿಂದ ಹೊರಗಿನ ಪ್ರಪಂಚವನ್ನು ಪ್ರಯಾಣಿಸುವ ಉದ್ದೇಶದಲ್ಲಿ ನಂಬಿಕೆ ಹೊಂದಿದ್ದಾಳೆ. ಈ ವೇಳೆ ಆಕೆ ತಮ್ಮ ಸಾಂಪ್ರದಾಯಿಕ ಸೀರೆಯ ಉಡುಗೆ ಶೈಲಿಯ ಮೂಲಕ ಅದನ್ನು ಮತ್ತಷ್ಟು ಹೆಚ್ಚಿನದನ್ನಾಗಿ ಮಾಡುತ್ತಾಳೆ ಎಂದು ಬ್ರಿಟಿಷ್ ವುಮೆನ್ ಇನ್ ಸ್ಯಾರಿ ಗ್ರೂಪ್ ಕಾರ್ಯಕ್ರಮ ಸಂಘಟಕಿ ದೀಪ್ತಿ ಜೈನ್ ತಿಳಿಸಿದ್ದಾರೆ.
ಬ್ರಿಟಿಷ್ ವುಮೆನ್ ಇನ್ ಸ್ಯಾರಿ ಗ್ರೂಪ್ ಅನ್ನು ಕೂಡ ಇದೇ ಉದ್ದೇಶದಿಂದ ಮಾಡಲಾಗಿದೆ. ಇದು ಮಹಿಳೆಯರ ಸಬಲೀಕರಣದ ಮತ್ತು ಕೈಮಗ್ಗ ಸೀರೆಯ ಹೆಮ್ಮೆಯನ್ನು ಹೊಂದಿದೆ. ಈ ಮೂಲಕ ಭಾರತ ಸಾಂಸ್ಕೃತಿಕ ವಿಶೇಷ ಸಂಸ್ಕೃತಿಯನ್ನು ಪ್ರದರ್ಶಿಸಲಾಗುವುದು. ಇದು ಲಾಭರಹಿತ ಸಂಘಟನೆಯಾಗಿದ್ದು, ನಮ್ಮ ಪರಂಪರೆಯನ್ನು ಉತ್ತೇಜಿಸುವ ಉದ್ದೇಶದ ಜೊತೆಗೆ ಈ ಬಗ್ಗೆ ಜಗತ್ತಿನ ಜನರಿಗೆ ಕೈಮಗ್ಗ ಮತ್ತು ಕುಸುರಿ ಕಲೆ ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.
ನಮ್ಮ ಬೇರಿಗೆ ಗೌರವ: ಬ್ರಿಟನ್ ವಾಸಿಯಾಗಿ ನಾವು ನಮ್ಮ ಭಾರತದ ಮೂಲ ಬೇರಿಗೆ ಗೌರವ ಸಲ್ಲಿಸಲು ಇದನ್ನು ವೇದಿಕೆಯಾಗಿ ಬಳಕೆ ಮಾಡುತ್ತಿದ್ದೇವೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಇಡೀ ಜಗತ್ತು ನಮ್ಮನ್ನು ಸೀರೆಯ ಮೂಲಕ ಗುರುತಿಸುತ್ತದೆ. ಈ ಮೂಲಕ ಕೈಮಗ್ಗದ ಮತ್ತು ನೇಕಾರರ ದುಃಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ವೇದಿಕೆ ಸಿಗಲಿದೆ. ಅವರಿಗೆ ಬೆಂಬಲ ನೀಡುವ ಮೂಲಕ ಮುಂದಿನ ಪೀಳಿಗೆಗೆ ಇದನ್ನು ಹಸ್ತಾಂತರಿಸಬೇಕಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಈ ವಾಕಥಾನ್ನಿಂದ ಬಂದ ಹಣವನ್ನು ಪಶ್ಚಿಮ ಬಂಗಾಳದ ಕೈಮಗ್ಗ ಸಮುದಾಯಕ್ಕೆ ನೀಡಲಾಗುವುದು ಎಂದು ಅವರು ಇದೆ ವೇಳೆ ತಿಳಿಸಿದರು.
ಇನ್ನು, ಈ ವಾಕಥಾನ್ನಲ್ಲಿ 30 ಜನರ ತಂಡವನ್ನು ಕೇರಳದ ಸೆತ್ತು ಮುಂಡು ಮತ್ತು ಕೈ ಮಗ್ಗದ ಸೀರೆಯನ್ನು ನೇರವಾಗಿ ನೇಕಾರರಿಂದ ಖರೀದಿಸಿ ಅವರಿಗೆ ಬೆಂಬಲ ನೀಡಿ, ಪ್ರದರ್ಶಿಸುತ್ತಿದೆ. ಇದೇ ವೇಳೆ ಈ ತಂಡ ಪಾರ್ಲಿಮೆಂಟ್ ಸ್ಲ್ವೇರ್ನಲ್ಲಿ ಸಾಂಪ್ರದಾಯಿಕ ಕೇರಳ ನೃತ್ಯ ಪ್ರದರ್ಶಿಸುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Ayurvedic Herbs: ಮಧುಮೇಹಿಗಳಿಗೆ ಉಪಯುಕ್ತ ಮಾಹಿತಿ! ರಕ್ತದ ಸಕ್ಕರೆ ಮಟ್ಟ ನಿರ್ವಹಣೆಯಲ್ಲಿ ಈ ಗಿಡಮೂಲಿಕೆಗಳ ಪಾತ್ರ ಗೊತ್ತೇ?