ETV Bharat / sukhibhava

ಮುಖದ ಕಾಂತಿ ಹೆಚ್ಚಿಸುತ್ತೆ ಫೇಸ್‌ ಯೋಗ: ಏನಿದು?

ನಿಮ್ಮ ಮುಖದ ಕಾಂತಿ ಕಳೆಗುಂದಿದೆಯೇ? ಹಾಗಾದರೆ ಅವುಗಳ ನಿವಾರಣೆಗೆ ಇಲ್ಲಿದೆ ಸುಲಭ ಟಿಪ್ಸ್​.

Face Yoga
ಮುಖದ ಯೋಗ
author img

By

Published : Feb 19, 2023, 11:13 AM IST

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ದೇಹ ಸೌಂದರ್ಯದ ಬಗ್ಗೆ ವಿಶೇಷವಾದ ಕಾಳಜಿ ಇದ್ದೇ ಇರುತ್ತದೆ. ದೇಹದ ಫಿಟ್ನೆಸ್​ಗಾಗಿ ಜಿಮ್​ಗೆ ಹೋಗ್ತೇವೆ. ಆದರೆ ದೇಹದ ಮುಖ್ಯ ಭಾಗವಾದ ಮುಖದ ಆರೋಗ್ಯವನ್ನು ಮರೆತು ಬಿಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ನಿಯಮಿತ ವ್ಯಾಯಾಮ ಮತ್ತು ಟೋನಿಂಗ್ ಅಗತ್ಯವಿದೆ. ನಿಮಗೆ ತಿಳಿದಿದೆಯೇ?, ನಮ್ಮ ಮುಖದ ಮೇಲೆ 42 ಪ್ರತ್ಯೇಕ ಸ್ನಾಯುಗಳಿವೆ. ಅವು ಮುಖದ ಅಭಿವ್ಯಕ್ತಿ, ನಗುವ ಮತ್ತು ನೋಡುವ ರೀತಿಗೆ ಕಾರಣ. ಆದ್ದರಿಂದ, ಈ ಎಲ್ಲಾ ಸ್ನಾಯುಗಳನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ನೀವು ಯಾವಾಗಲೂ ಚಿರಯೌವ್ವನಿಗನಾಗಿ ಕಾಣಲು ಕೆಲವು ಟಿಪ್ಸ್‌ ಹೀಗಿದೆ.

ಫೇಶಿಯಲ್ ಯೋಗ ಎನ್ನುವುದು ಇತ್ತೀಚೆಗೆ ಫ್ಯಾಶನ್ ಆಗಿದೆ. ಈ ಯೋಗಾಭ್ಯಾಸ ಮಾಡುವುದು ಮತ್ತು ಬೊಟೊಕ್ಸ್ ಎಂಬ ಚಿಕಿತ್ಸೆಯನ್ನು ನಿಯಮಿತವಾಗಿ ಮತ್ತು ಸರಿಯಾಗಿ ಮಾಡಿದರೆ ಬಹಳ ಒಳ್ಳೆಯದು ಎಂಬುದು ಹಲವರ ಅಭಿಪ್ರಾಯ. ಇನ್ನೂ ಕೆಲವರು, ಮುಖದ ಯೋಗಾಭ್ಯಾಸವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಇದರ ಫಲಿತಾಂಶಗಳು ತ್ವರಿತವಲ್ಲದಿದ್ದರೂ ತುಂಬಾ ಪರಿಣಾಮಕಾರಿ ಮತ್ತು ದೀರ್ಘಕಾಲೀನವಾಗಿರುತ್ತದೆ ಎನ್ನುತ್ತಾರೆ. ಫೇಶಿಯಲ್ ಯೋಗದ ಅತ್ಯುತ್ತಮ ಸಂಗತಿ ಎಂದರೆ, ನೀವಿದನ್ನು ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲೂ ಮಾಡಬಹುದು. ಫಲಿತಾಂಶಗಳಿಂದ ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಧನಾತ್ಮಕ ಪರಿಣಾಮಗಳನ್ನು ಹಂಚಿಕೊಂಡವರೂ ಸಾಕಷ್ಟು ಮಂದಿ ಇದ್ದಾರೆ.

ಕೆಲವು ಸ್ವರಗಳನ್ನು ಪಠಿಸುವುದರಿಂದ ಮುಖದಲ್ಲಿನ ಸ್ನಾಯುಗಳು ಚಲನೆಗೊಳಗಾಗಿ ಅವುಗಳ ಪರಿಣಾಮದಿಂದ ಕಾಂತಿ ಹೆಚ್ಚುತ್ತದೆ. ಇಂಗ್ಲಿಷ್​ನ A, E, I, O, U. ಸ್ವರಗಳೇ ಇವು. ಇವುಗಳನ್ನು ಗಟ್ಟಿಯಾಗಿ ಪಠಿಸುವುದರಿಂದ ಮುಖ ಮತ್ತು ಕುತ್ತಿಗೆಯ ಎಲ್ಲಾ ಸ್ನಾಯುಗಳು ಹಿಗ್ಗಲು ಪ್ರಾರಂಭಿಸುತ್ತವೆ. ಮೊದಲು ನೀವು 5 ಸ್ವರಗಳನ್ನು ದಿನಕ್ಕೆ 10 ಬಾರಿ ಹೇಳಿ, ನಂತರ ಅದನ್ನು ನಿಧಾನವಾಗಿ ದಿನಕ್ಕೆ 20-30 ಬಾರಿ ಹೇಳಲು ಪ್ರಯತ್ನಿಸಬೇಕು. ಇದು ಮುಖಕ್ಕೆ ಸಂಪೂರ್ಣ ವ್ಯಾಯಾಮ ನೀಡುತ್ತದೆ.

ನೀವು ಮಾಡಬಹುದಾದ ಎರಡನೇ ವ್ಯಾಯಾಮವೆಂದರೆ, ನಿಮ್ಮ ಕೈ ಮುಷ್ಟಿಯನ್ನು ಮುಚ್ಚಿ ಮತ್ತು ಅದನ್ನು ನಿಮ್ಮ ಗಲ್ಲದ ಕೆಳಗಿರಿಸಬೇಕು. ಈಗ ಬಾಯಿಯನ್ನು ಮುಚ್ಚಲು ನಿಮ್ಮ ಮುಷ್ಟಿಯನ್ನು ಒತ್ತಿ ತೆರೆಯಲು ಪ್ರಯತ್ನಿಸಿ. ಡಬಲ್ ಚಿನ್ ತೊಡೆದುಹಾಕಲು ಇದು ಉತ್ತಮ ವ್ಯಾಯಾಮ.

ನಿಮ್ಮ ಕಣ್ಣುಗಳ ಕೆಳಗೆ ಮತ್ತು ಹಣೆಯ ಮೇಲೆ ಸುಕ್ಕುಗಳು ಉಂಟಾಗುವುದನ್ನು ತಪ್ಪಿಸಲು ಪರಿಪೂರ್ಣವಾದ ವ್ಯಾಯಾಮವೆಂದರೆ, ಹಣೆಯ ಮೇಲೆ ನಿಮ್ಮ ಎರಡೂ ಕೈಗಳನ್ನು ಇರಿಸಿಕೊಳ್ಳಿ, ಇದರಿಂದ ಯಾವುದೇ ಸ್ನಾಯುಗಳು ಚಲಿಸುವುದಿಲ್ಲ. ಸುಮಾರು 10 ಬಾರಿ ಕಣ್ಣುಗಳನ್ನು ಮಿಟುಕಿಸಿ. ಈ ರೀತಿಯಾಗಿ ಮಿಟುಕಿಸುವುದರಿಂದ ಕಣ್ಣಿನ ಸ್ನಾಯುಗಳು ಬಲಗೊಳ್ಳುತ್ತವೆ.

ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು ನೀವು ಪ್ರಯತ್ನಿಸಬಹುದಾದ ಇನ್ನೊಂದು ವ್ಯಾಯಾಮವೆಂದರೆ, ನಿಮ್ಮ ತೋರು ಬೆರಳು ಮತ್ತು ನಿಮ್ಮ ಮಧ್ಯದ ಬೆರಳನ್ನು ಕಣ್ಣುಗಳ ಎರಡೂ ಬದಿಗಳಲ್ಲಿ ಇರಿಸಿ. ಒಂದನ್ನು ಕಣ್ಣಿನ ಒಳ ಮೂಲೆಯಲ್ಲಿ ಮತ್ತು ಇನ್ನೊಂದನ್ನು ಹೊರ ಮೂಲೆಯಲ್ಲಿ ಇರಿಸಿ ಮತ್ತು ಕಣ್ಣನ್ನು ಮಿಟುಕಿಸಿ. ಇದನ್ನು ದಿನಕ್ಕೆ 10 ಬಾರಿ ಮಾಡಿದರೆ ಸುತ್ತಲಿನ ಸುಕ್ಕುಗಟ್ಟುವಿಕೆ ನಿಧಾನಕೆ ಕಡಿಮೆಯಾಗುತ್ತದೆ.

ನಾವು ನಮ್ಮ ಮುಖದಲ್ಲಿ ಕಾಣಿಸಿಕೊಳ್ಳುವ ನಗುವ ರೇಖೆಗಳ ಬಗ್ಗೆ ಚಿಂತಿಸುತ್ತೇವೆ ಮತ್ತು ನಾವು ಬೆಳೆದಂತೆ ಅವು ಹೆಚ್ಚು ಗೋಚರಿಸುತ್ತವೆ. ನಗುವ ರೇಖೆಗಳನ್ನು ಕಡಿಮೆ ಮಾಡಲು ಪರಿಪೂರ್ಣ ಪರಿಹಾರವೆಂದರೆ ನಿಮ್ಮ ನಗುವಿನ ರೇಖೆಗಳ ಮೇಲೆ ನಿಮ್ಮ ಬೆರಳುಗಳನ್ನು ದೃಢವಾಗಿ ಇರಿಸುವುದು, ಈಗ ಸಾಧ್ಯವಾದಷ್ಟು ವಿಶಾಲವಾಗಿ ಕಿರುನಗೆ ಮಾಡಿ ಮತ್ತು ನಿಮ್ಮ ತುಟಿಗಳನ್ನು ದೂರವಿರಿಸಲು ಮರೆಯದಿರಿ. ಇದನ್ನು 5-10 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ವ್ಯಾಯಾಮವನ್ನು 20-25 ಬಾರಿ ಪುನರಾವರ್ತಿಸಿ. ಇದು ಕೆನ್ನೆಯ ಸುತ್ತಲಿನ ಕ್ರೀಸ್‌ಗಳನ್ನು ತೆಗೆದುಹಾಕಲು ರೇಖೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಮುಖ್ಯವಾಗಿ ನಿಮ್ಮ ದೈನಂದಿನ ಮಾಯಿಶ್ಚರೈಸರ್ ಬಳಸುವಾಗ ನೆನಪಿಡಬೇಕಾದ ಪ್ರಮುಖ ವಿಷಯವೆಂದರೆ, ಯಾವಾಗಲೂ ಮೇಲಕ್ಕೆ ಸ್ನಾಯುಗಳು ಚಲಿಸುವಂತೆ ಮಾಡುವುದು. ವಿಶೇಷವಾಗಿ ಕೆನ್ನೆಯ ಸುತ್ತಲೂ ಮತ್ತು ಕುತ್ತಿಗೆಯ ಮೇಲೆ ಮಾಯಿಶ್ಚರೈಸರ್​ ಅನ್ವಯಿಸುವಾಗ ಕೆಳಗಿನಿಂದ ಮೇಲಕ್ಕೆ ಹಚ್ಚುವ ವಿಧಾನ ರೂಡಿಸಿಕೊಳ್ಳಬೇಕು. ನೀವು ಪ್ರಯತ್ನಿಸಬಹುದಾದ ಇನ್ನೊಂದು ವ್ಯಾಯಾಮವೆಂದರೆ, ಹೆಬ್ಬೆರಳುಗಳನ್ನು ಗಲ್ಲದ ಕೆಳಗಿರಿಸಿ ಮತ್ತು ಬೆರಳುಗಳನ್ನು ಬಳಸಿ ಕೆನ್ನೆಗಳನ್ನು ಮೇಲ್ಮುಖವಾಗಿ ಮಸಾಜ್ ಮಾಡಬೇಕು. ಇದನ್ನು 5 ಬಾರಿ ಮಾಡಿದರೆ ಸ್ಮೈಲ್ ಲೈನ್‌ಗಳನ್ನು ಸುಗಮಗೊಳಿಸಲು ಸಹಾಯಕವಾಗುತ್ತದೆ ಮತ್ತು ಇದು ರಕ್ತದ ಪರಿಚಲನೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: ಮೈಗ್ರೇನ್​​​​​ಗೆ ಕಾರಣ ಏನೆಂದು ಕಂಡು ಹಿಡಿದ ಸಂಶೋಧಕರು.. ಹೊಸ ಔಷಧವೂ ಸಿಕ್ಕಿದೆಯಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.