ನ್ಯೂಯಾರ್ಕ್: ಪ್ರತಿಯೊಬ್ಬರ ಕೈ ಬೆರಳಿನ ಅಚ್ಚು ವಿಶಿಷ್ಟ, ಅನನ್ಯತೆಯಿಂದ ಕೂಡಿದೆ ಎಂಬ ನಂಬಿಕೆಯನ್ನು ಸಂಶೋಧನೆಯೊಂದು ಸುಳ್ಳು ಮಾಡಿದೆ. ಈ ಕುರಿತು ಸಂಶೋಧನೆ ನಡೆಸಿರುವ ಕೊಲಂಬಿಯಾ ವಿಶ್ವವಿದ್ಯಾಲಯದ ಇಂಜಿನಿಯರ್ಗಳು ಇದಕ್ಕಾಗಿ ಹೊಸ ಎಐ ನಿರ್ಮಿಸಿದ್ದಾರೆ. ಈ ಕುರಿತು ಅಧ್ಯಯನ ನಡೆಸಿರುವ ತಂಡ ಪ್ರತಿಯೊಬ್ಬರ ಕೈ ಬೆರಳಿನ ಅಚ್ಚು ವಿಭಿನ್ನವಾಗಿಲ್ಲ. ಅವು ಒಂದೊಕ್ಕೊಂದು ಹೋಲುತ್ತದೆ. ನಾವು ಈ ಹಿಂದೆ ತಪ್ಪಾಗಿ ಕೈ ಬೆರಳಿನ ಅಚ್ಚು ಹೋಲಿಕೆ ಮಾಡಿದರಿಂದ ಈ ರೀತಿ ತಪ್ಪು ಕಲ್ಪನೆಯನ್ನು ಹೊಂದಿದ್ದೇವೆ ಎಂದಿದ್ದಾರೆ.
ಇನ್ನು ಈ ಕೈ ಬೆರಳಚ್ಚುಗಳು ಒಬ್ಬರಂತೆ ಮತ್ತೊಬ್ಬರದಿಲ್ಲ. ಪ್ರತಿಯೊಬ್ಬರು ವಿಶಿಷ್ಟವಾದ ಫಿಂಗರ್ಪ್ರಿಂಟ್ ಹೊಂದಿದ್ದು, ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂಬುದು ಫೋರೆನ್ಸಿನ್ ಸಮುದಾಯದಲ್ಲಿ ಹೆಚ್ಚು ಸ್ವೀಕಾರಾರ್ಹ ಸತ್ಯವಾಗಿದೆ. ಈ ಕುರಿತು ಕೊಲಂಬಿಯಾ ಇಂಜಿನಿಯರಿಂಗ್ ಪದವಿಪೂರ್ವ ಗಾಬೆ ಗುವೊ ನೇತೃತ್ವದ ತಂಡ ಈ ಒಪ್ಪಿತ ಸತ್ಯದ ಕುರಿತು ಪ್ರಶ್ನಿಸಿತು.
ಫೋರೆನ್ಸಿಕ್ ಕುರಿತು ಗುವೊ ಅಮೆರಿಕದ ಸಾರ್ವಜನಿಕ ಸರ್ಕಾರದ ಡಾಟಾಬೇಸ್ನಿಂದ 60 ಸಾವಿರ ಫಿಂಗರ್ಪ್ರಿಂಟ್ ಅನ್ನು ಪತ್ತೆ ಮಾಡಿ, ಅವುಗಳನ್ನು ಆಳ ಕಾಂಟ್ರಾಸ್ಟಿವ್ ನೆಟ್ವರ್ಕ್ ಎಂಬ ಕೃತಕ ಬುದ್ಧಿಮತ್ತೆ ವ್ಯವಸ್ಥೆಗೆ ಜೋಡಿಸಿದರು. ಈ ವೇಳೆ ಕೆಲವು ಬೆರಳಚ್ಚುಗಳು ಹೋಲಿಕೆಯಾಗಿದ್ದು, ಇವು ಬೇರೆ ಬೇರೆ ಜನರಿಗೆ ಸೇರಿದವು ಆಗಿದೆ. ಅದಕ್ಕಾಗಿ ತಂಡವೂ ಅತ್ಯಾಧುನಿಕ ಚೌಕಟ್ಟನ್ನು ಮಾರ್ಪಡಿಸಿದೆ. ಈ ವೇಳೆ ಈ ವಿಶಿಷ್ಟ ಬೆರಳಚ್ಚಿನ ಗುರುತುಗಳು ಒಂದೇ ವ್ಯಕ್ತಿಗೆ ಸೇರಿವೆ.
ಈ ಬೆರಳಚ್ಚುಗಳ ನಿಖರತೆ ಶೇ77ರಷ್ಟಿದೆ. ಯಾವಾಗ ಬಹು ಹೋಲಿಕೆಗಳು ಕಂಡುಬಂದರೂ ನಿಖರತೆ ಹೆಚ್ಚಿದ್ದು, ಫೋರೆನ್ಸಿಕ್ ದಕ್ಷತೆ ಹತ್ತು ಪಟ್ಟು ಹೆಚ್ಚಿಸಿದೆ.
ಅಧ್ಯಯನಕ್ಕೆ ಎಐ ಮಿನಿಟಿಯೇ ಅನ್ನು ಬಳಕೆ ಮಾಡಿಲ್ಲ. ಇದು ಸಾಂಪ್ರದಾಯಿಕ ಫಿಂಗರ್ಪ್ರಿಂಟ್ ಮಾದರಿಯನ್ನು ಬಳಕೆ ಮಾಡಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯವನ್ನು ಗುವೊ 2021ರಲ್ಲಿ ಕೊಲಂಬಿಯಾ ಇಂಜಿನಿಯರಿಂಗ್ನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಾಗ ಆರಂಭಿಸಿದ್ದ. ಈ ಅಧ್ಯಯನವನ್ನು ಸೈನ್ಸ್ ಅಡ್ವಾನ್ಸ್ನಲ್ಲಿ ಪ್ರಕಟಿಸಲಾಗಿದೆ.
ಬೆರಳಚ್ಚಿನ ಕುರಿತು ಅಧಿಕೃತ ನಿರ್ಧಾರ ಮಾಡುವಲ್ಲಿ ಎಐ ವ್ಯವಸ್ಥೆಯ ನಿಖರತೆ ಸ್ಪಷ್ಟವಾಗಿ ಸಾಕಾಗುವುದಿಲ್ಲ. ಇದು ಲೀಡ್ಗಳಿಗೆ ಆದ್ಯತೆ ನೀಡಲು ಸಹಾಯ ಮಾಡುತ್ತದೆ. ಎಐನಿಂದ ಮತ್ತಷ್ಟು ಅಚ್ಚರಿ ವಿಷಯಗಳು ಹೊರ ಬರಲು ಇದೊಂದು ಉದಾಹರಣೆಯಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಎಐ ಚಾಲಿತ ಸುಳ್ಳು ಮಾಹಿತಿ ವಿಶ್ವಕ್ಕೆ ಅತಿದೊಡ್ಡ ಅಪಾಯ: ವಿಶ್ವ ಆರ್ಥಿಕ ವೇದಿಕೆ ವರದಿ