ಸಿಡ್ನಿ: ಆರೋಗ್ಯಕರ ಜೀವನ ನಿರ್ವಹಣೆಯಲ್ಲಿ ದೈಹಿಕ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿರ್ದಿಷ್ಟ ವ್ಯಾಯಾಮದಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಇದ್ದವರು, ದಿನದಲ್ಲಿ ಕೇವಲ 4.5 ನಿಮಿಷದ ಹುರುಪಿನ ದೈನಂದಿನ ಸಾಮಾಜಿಕ ಚಟುವಟಿಕೆ ನಡೆಸಿದರೆ ಸಾಕು. ಇದು ಕೂಡ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ಶೇ 32ರಷ್ಟು ಕ್ಯಾನ್ಸರ್ ಸಾಧ್ಯತೆ ತಡೆಯುತ್ತದೆ ಎಂದು ಅಧ್ಯಯನವೊಂದು ಭರವಸೆ ನೀಡಿದೆ.
ದೈನಂದಿನ ಮನೆಗೆಲಸವೂ ಸಹಾಯಕ: ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರ ತಂದ ಹುರುಪಿನ ಮಧ್ಯಂತರ ಜೀವನಶೈಲಿಯ ದೈಹಿಕ ಚಟುವಟಿಕೆ (ವಿಐಎಲ್ಪಿಎ) ಕುರಿತು ವ್ಯಾಖ್ಯಾನಿಸಿದ್ದಾರೆ. ಮನೆಗೆಲಸ, ಶಾಪಿಂಗ್ ವೇಳೆ ಭಾರದ ಬ್ಯಾಗ್ ಸಾಗಾಟ, ಹಣ್ಣು, ತರಕಾರಿ ಕೊಳ್ಳಲು ನಡೆಸುವ ಓಡಾಟ, ಮಕ್ಕಳ ಜೊತೆಗಿನ ಹೆಚ್ಚಿನ ಶ್ರಮಾದಾಯಕ ಆಟಗಳಂತಹ ಒಂದು ನಿಮಿಷದ ಸಣ್ಣ ಹುರುಪಿನ ಚಟುವಟಿಕೆಗಳು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತದೆ.
ವಿಐಎಲ್ಪಿಎ ಎಂಬುದು ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿ ತತ್ತ್ವವನ್ನು ನಿಮ್ಮ ನಿತ್ಯ ಜೀವನದಲ್ಲಿ ಹೊಂದಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಪ್ರೊ ಎಮ್ಯಾನುಯಲ್ ಸ್ಟಮತಕಿಸ್ ತಿಳಿಸಿದ್ದಾರೆ.
ಈ ಅಧ್ಯಯನವನ್ನು ಜಾಮಾ ಒನ್ಕಾಲಾಜಿ ಯಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕೆ ದಂತವೂ ಧರಿಸಬಹುದಾದ ಸಾಧನಗಳಿಂದ ದತ್ತಾಂಶವನ್ನು ಸಂಗ್ರಹಿಸಿದೆ. 22,000 ವ್ಯಾಯಾಮ ಮಾಡದ ದೈನಂದಿನ ಚಟುವಟಿಕೆಯಲ್ಲಿ ತೊಡಗಿದವರನ್ನು ಏಳು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. 13 ಕ್ಯಾನ್ಸರ್ ಸೈಟ್ಗಳು ಇದರ ಮೇಲ್ವಿಚಾರಣೆ ನಡೆಸಿದೆ.
ಈ ಕ್ಯಾನ್ಸರ್ ತಡೆಯುವ ಸಾಧ್ಯತೆ: ಇದರಲ್ಲಿ ಯಕೃತ್, ಶ್ವಾಸಕೋಶ, ಕಿಡ್ನಿ, ಗ್ಯಾಸ್ಟ್ರಿಕ್ ಕಾರ್ಡಿಯಾ, ಎಂಡೊಮೆಟಿರಿಯಲ್, ಮೈಲೊಮಾ ಕೊಲೆರೆಕ್ಟಲ್, ಹೆಡ್ ಅಂಡ್ ನೆಕ್, ಬ್ಲಾಡರ್, ಸ್ತನ ಮತ್ತಿತ್ತರ ಕ್ಯಾನ್ಸರ್ ಸೇರಿದೆ. ಪ್ರತಿನಿತ್ಯದ ಚಟುವಟಿಕೆಗಳನ್ನು ನಾಲ್ಕರಿಂದ ಐದು ನಿಮಿಷದವರೆ ತೀವ್ರತೆಯಲ್ಲಿ ಮಾಡುವುದರಿಂದ ಇದರಲ್ಲಿ ಕೊಂಚ ಗಮನಾರ್ಹ ಬದಲಾವಣೆ ಕಂಡು ಬಂದಿದೆ. ಇವರಲ್ಲಿ ಕ್ಯಾನ್ಸರ್ ಅಪಾಯವೂ 18ರಷ್ಟು ಕಡಿಮೆ ಆಗುವ ಸಾಧ್ಯತೆ ತೋರಿಸಿದೆ. ಕ್ಯಾನ್ಸರ್ ಅಪಾಯದಲ್ಲಿ ಶೇ 32ರಷ್ಟು ಪ್ರತಿಶತನವೂ ದೈಹಿಕ ಚಟುವಟಿಕೆ ಅವಲಂಭಿಸಿದೆ.
ಅಧ್ಯಯನವೂ ನೇರವಾಗಿ ಕಾರಣ ಮತ್ತು ಪರಿಣಾಮವನ್ನು ತಿಳಿಯುವಲ್ಲಿ ವಿನ್ಯಾಸ ಮಾಡಿಲ್ಲ. ಆದಾಗ್ಯೂ ಸಂಶೋಧಕರು ಹಿಂದಿನ ಆರಂಭದ ಹಂತದಲ್ಲಿ ಮಧ್ಯಂತರ ಹುರುಪಿನ ದೈಹಿಕ ಚಟುವಟಿಕೆಗಳು ಬಲವಾದ ಸಂಬಂಧವನ್ನು ಹೊಂದಿದ್ದು, ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.
ಇತರೆ ಅಂಶಗಳು ಕೂಡ ದೈಹಿಕ ಚಟುವಟಿಕೆ ಪಾತ್ರದಲ್ಲಿ ಕೊಡುಗೆ ಹೊಂದಿದ್ದು, ಅದು ಇನ್ಸುಲಿನ್ ಸೆನ್ಸಿಟಿವಿಟಿ ಮತ್ತು ದೀರ್ಘ ಊರಿಯುತ ಸುಧಾರಣೆ ತೋರಿಸಿದೆ. ಈ ಕುರಿತು ಪ್ರಯೋಗಕ್ಕೆ ಹೆಚ್ಚುನ ತನಿಖೆ ಅವಶ್ಯಕತೆ ಇದೆ,. ಆದರೆ. ವಿಐಎಲ್ಪಿಎ ಭರವಸೆದಾಯಕವಾಗಿದ್ದು, ವ್ಯಾಯಾಮ ಮಾಡುವುದು ಕಷ್ಟ ಎನ್ನುವವರಲ್ಲಿ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದಿದ್ದಾರೆ. ದೈನಂದಿನ ದೈಹಿಕ ಚಟುವಟಿಕೆಗಳು ಕೂಡ ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖವಾಗಿದೆ.
ಇದನ್ನೂ ಓದಿ: ವ್ಯಾಯಾಮ ಮಾಡಲು ಜಿಮ್ಗೆ ಹೋಗಬೇಕು ಎಂದೇನಿಲ್ಲ; ಮನೆಯಲ್ಲೇ ಸೆಟ್ ಮಾಡಿ ಅದೇ ರೀತಿಯ ವಾತಾವರಣ