ETV Bharat / sukhibhava

ಕಡುವರ್ಣದ ಹಣ್ಣು-ತರಕಾರಿ ಸೇವನೆಯಿಂದ ಮಹಿಳೆಯರಿಗೆ ದೀರ್ಘಾಯುಷ್ಯ: ಅಧ್ಯಯನ - ಆರೋಗ್ಯ ಭಾಗ್ಯ

ಪುರುಷರಿಗೆ ಮಾರಣಾಂತಿಕ ಕಾಯಿಲೆಗಳು ಬರುವುದು ಜಾಸ್ತಿ. ಆದರೆ, ಮಹಿಳೆಯರಿಗೆ ಇಂಥ ರೋಗಗಳ ಕಾಟ ಕಡಿಮೆ ಅಥವಾ ವಯಸ್ಸಾದ ನಂತರ ಕಂಡು ಬರುತ್ತವೆ. ಆದಾಗ್ಯೂ ಮಹಿಳೆಯರಿಗೆ ಪದೇ ಪದೆ ಕಾಣಿಸುವ ಅನಾರೋಗ್ಯಗಳು ಅವರನ್ನು ದುರ್ಬಲಗೊಳಿಸುತ್ತವೆ.

Eating bright-coloured fruits helps women live longer: Study

author img

By

Published : Jul 16, 2022, 1:39 PM IST

ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸರಾಸರಿ ಜೀವಿತಾವಧಿ ಹೆಚ್ಚಾಗಿರುತ್ತದೆ. ಆದರೆ, ಅವರು ತಮ್ಮ ಜೀವಿತಾವಧಿಯಲ್ಲಿ ರೋಗಗಳಿಗೆ ತುತ್ತಾಗುವುದು ಸಹ ಜಾಸ್ತಿ. ಆದಾಗ್ಯೂ ಪಿಗ್ಮೆಂಟೆಡ್ ಕ್ಯಾರೊಟಿನಾಯ್ಡಗಳು ಸಮೃದ್ಧವಾಗಿರುವ ಗೆಣಸು, ಕೇಲ್, ಪಾಲಕ, ಕಲ್ಲಂಗಡಿ, ಬೆಲ್ ಪೆಪರ್, ಟೊಮೇಟೊ, ಕಿತ್ತಳೆ ಮತ್ತು ಕ್ಯಾರೆಟ್ ಇವೇ ಮುಂತಾದ ಆರೋಗ್ಯಕರ ಪದಾರ್ಥಗಳ ಸೇವನೆಯಿಂದ ಮಹಿಳೆಯರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದನ್ನು ಕಡಿಮೆ ಮಾಡಬಹುದು ಎಂಬುದು ತಿಳಿದು ಬಂದಿದೆ.

ಜಾರ್ಜಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಗಾಢ ವರ್ಣದ ಉತ್ಪನ್ನಗಳ ಸೇವನೆಯಿಂದ ಅರಿವು ಮತ್ತು ದೃಷ್ಟಿಗೋಚರಗಳು ಕಡಿಮೆಯಾಗುವುದರಿಂದ ತಡೆಗಟ್ಟಬಹುದು.

ಪುರುಷರಿಗೆ ಮಾರಣಾಂತಿಕ ಕಾಯಿಲೆಗಳು ಬರುವುದು ಜಾಸ್ತಿ. ಆದರೆ, ಮಹಿಳೆಯರಿಗೆ ಇಂಥ ರೋಗಗಳ ಕಾಟ ಕಡಿಮೆ ಅಥವಾ ವಯಸ್ಸಾದ ನಂತರ ಕಂಡು ಬರುತ್ತವೆ. ಆದಾಗ್ಯೂ ಮಹಿಳೆಯರಿಗೆ ಪದೇ ಪದೆ ಕಾಣಿಸುವ ಅನಾರೋಗ್ಯಗಳು ಅವರನ್ನು ದುರ್ಬಲಗೊಳಿಸುತ್ತವೆ. ಉದಾಹರಣೆಗೆ ನೋಡುವುದಾದರೆ,

ಇಂದು ಪ್ರಪಂಚದ ಎಲ್ಲ ಮ್ಯಾಕ್ಯುಲರ್ ಡಿಜೆನರೇಶನ್ ಎಂಬ ಕಣ್ಣಿಗೆ ಸಂಬಂಧಿಸಿದ ರೋಗ ಮತ್ತು ಬುದ್ಧಿಮಾಂದ್ಯತೆಯ ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಮಹಿಳೆಯರಿದ್ದಾರೆ. ಮಹಿಳೆಯರು ದೀರ್ಘಾವಧಿಯವರೆಗೆ ಬಳಲುವ ಈ ಕಾಯಿಲೆಗಳನ್ನು ಜೀವನಶೈಲಿಯ ಬದಲಾವಣೆಯಿಂದ ತಡೆಯಬಹುದು ಎನ್ನುತ್ತಾರೆ ಬಿಲ್ಲಿ ಆರ್. ಹ್ಯಾಮಂಡ್.

ಹ್ಯಾಮಂಡ್ ಇವರು ಯುಜಿಎ ಫ್ರಾಂಕ್ಲಿನ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ನ ಮನೋವೈಜ್ಞಾನಿಕ ವರ್ತನೆ ಮತ್ತು ಮೆದುಳಿನ ವಿಜ್ಞಾನಗಳ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ ಹಾಗೂ ಈ ಸಂಶೋಧನಾ ಪ್ರಬಂಧದ ಸಹ-ಲೇಖಕರೂ ಆಗಿದ್ದಾರೆ.

ಬುದ್ದಿಮಾಂದ್ಯತೆ ಕಾಯಿಲೆ: ಮಹಿಳೆಯರ ದೀರ್ಘಾಯುಷ್ಯವನ್ನು ಲೆಕ್ಕಕ್ಕೆ ತೆಗೆದುಕೊಂಡರೂ, ಮಹಿಳೆಯರು ಪುರುಷರಿಗಿಂತ ಗಮನಾರ್ಹವಾಗಿ ಹೆಚ್ಚಿನ ದರದಲ್ಲಿ ಹಲವಾರು ಕ್ಷೀಣಗೊಳ್ಳುವ ಅಸ್ವಸ್ಥತೆಗಳನ್ನು ಮತ್ತು ಸ್ವಯಂ ನಿರೋಧಕ ಕಾಯಿಲೆಗಳು ಹಾಗೂ ಬುದ್ಧಿಮಾಂದ್ಯತೆ ಕಾಯಿಲೆಗಳನ್ನು ಅನುಭವಿಸುತ್ತಾರೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ. ಎಲ್ಲ ಸ್ವಯಂ ನಿರೋಧಕ ಕಾಯಿಲೆಗಳನ್ನು ಸೇರಿಸಿದರೆ, ಇದರಲ್ಲಿ ಶೇ 80ರಷ್ಟು ಮಹಿಳೆಯರೇ ಇರುತ್ತಾರೆ ಎನ್ನುತ್ತಾರೆ ಹ್ಯಾಮಂಡ್.

ಮಹಿಳೆಯರು ತಮ್ಮ ದೇಹದಲ್ಲಿ ಜೀವಸತ್ವಗಳು ಮತ್ತು ಖನಿಜಗಳನ್ನು ಉಳಿಸಿಕೊಳ್ಳುವ ವಿಧಾನವು ಈ ಸೂಕ್ಷ್ಮತೆಗೆ ಕೊಡುಗೆ ನೀಡುವ ಅಂಶಗಳಲ್ಲಿ ಒಂದಾಗಿದೆ. ಹ್ಯಾಮಂಡ್ ಪ್ರಕಾರ, ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಹೆಚ್ಚು ದೇಹದ ಕೊಬ್ಬನ್ನು ಹೊಂದಿರುತ್ತಾರೆ. ಅನೇಕ ಆಹಾರದ ಜೀವಸತ್ವಗಳು ಮತ್ತು ಖನಿಜಗಳು ದೇಹದ ಕೊಬ್ಬಿನಿಂದ ಗಮನಾರ್ಹವಾಗಿ ಹೀರಲ್ಪಡುತ್ತವೆ.

ಇದು ಗರ್ಭಿಣಿ ಮಹಿಳೆಯರಿಗೆ ಅಗತ್ಯವಾದ ಶಕ್ತಿಯನ್ನು ಮೀಸಲಿಡಲು ಸಹಾಯಕವಾಗಿರುತ್ತದೆ. ಆದರೆ, ರೆಟಿನಾ ಮತ್ತು ಮೆದುಳಿಗೆ ಕಡಿಮೆ ಜೀವಸತ್ವ ಲಭ್ಯವಿರುವುದರಿಂದ, ಮಹಿಳೆಯರು ಕ್ಷೀಣಗೊಳ್ಳುವ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಯಿರುತ್ತದೆ ಎಂದು ಹ್ಯಾಮಂಡ್ ಹೇಳುತ್ತಾರೆ.

ಇದನ್ನು ಓದಿ: ತುಂಬಾನೇ ಆರೋಗ್ಯಕಾರಿ ಈ 'ಮಖಾನ' ಬೀಜಗಳು: ದೈನಂದಿನ ಆಹಾರ ಕ್ರಮದಲ್ಲಿ ನೀವೂ ಬಳಸಬಹುದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.