ರೋಗನಿರೋಧಕಗಳು, ಆಂಟಿವೈರಲ್‌ಗಳು, ಆಂಟಿಫಂಗಲ್‌ಗಳು ಮತ್ತು ಆಂಟಿಪರಾಸಿಟಿಕ್‌ಗಳನ್ನು ಒಳಗೊಂಡಿರುವ 'ಆಂಟಿಮೈಕ್ರೊಬಿಯಲ್'ಗಳನ್ನು ಮಾನವರು, ಪ್ರಾಣಿಗಳು ಮತ್ತು ಸಸ್ಯಗಳಲ್ಲಿನ ಸೋಂಕನ್ನು ಹೊಡೆದೋಡಿಸಲು ಹಾಗೂ ಸೋಂಕಿನಂದ ಉಂಟಾಗುವ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳಾಗಿವೆ.
ಆದರೆ, ಅಧ್ಯಯನವೊಂದು ಹೇಳುವ ಪ್ರಕಾರ ರೋಗ ನಿರೋಧಕ ಔಷಧಿಗಳು ತಂದೊಡ್ಡಿದ ಬ್ಯಾಕ್ಟೀರಿಯಾ ಸೋಂಕಿನಿಂದಲೇ 2019ರಲ್ಲಿ ವಿಶ್ವದಾದ್ಯಂತ ಒಂದು ಮಿಲಿಯನ್ಗೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ಮಲೇರಿಯಾ ಅಥವಾ ಏಡ್ಸ್‌ನಿಂದ ವರ್ಷವೊಂದಕ್ಕೆ ಮೃತಡುವ ಜನರ ಸಂಖ್ಯೆಗಿಂತ ಹೆಚ್ಚು.
ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೂ, ಸಾಮಾನ್ಯ ಚಿಕಿತ್ಸೆ ನೀಡಿ ಗುಣಪಡಿಸಹುದಾದ ರೋಗಗಳಿಗೂ ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿ, ಪ್ರತಿರೋಧ ಶಕ್ತಿ ವೃದ್ಧಿಸುವ ಔಷಧಿಗಳನ್ನು ನೀಡಲಾಗುತ್ತಿದೆ. ಆದರೆ, ಇದು ಪ್ರತಿಯೊಬ್ಬರ ಆರೋಗ್ಯವನ್ನು ಹದಗೆಡಿಸುತ್ತಿದೆ. ಇವುಗಳ ಅಡ್ಡ ಪರಿಣಾಮಗಳೂ ಹೆಚ್ಚಿರುವುದರಿಂದ ಬುದ್ಧಿವಂತಿಕೆಯಿಂದ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸುವುದು ಉತ್ತಮ ಎಂಬುದು ಕೆಲ ತಜ್ಞರ ಅಭಿಪ್ರಾಯವಾಗಿದೆ.
'ಗುಪ್ತ ಸಾಂಕ್ರಾಮಿಕ': ಯುನೈಟೆಡ್ ಸ್ಟೇಟ್ಸ್ನ ಆರೋಗ್ಯ ಅಧಿಕಾರಿಗಳು ಇತ್ತೀಚೆಗೆ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಒಂದು 'ಗುಪ್ತ ಸಾಂಕ್ರಾಮಿಕ' ಎಂದು ಎಚ್ಚರಿಸಿದ್ದಾರೆ. ಇದು 21ನೇ ಶತಮಾನದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ. ಇದು ಕೋವಿಡ್-19 ಚಿಕಿತ್ಸೆಯ ರೂಪದಲ್ಲಿ ನಮ್ಮ ದೇಹವನ್ನು ಹೊಕ್ಕುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯು ರೋಗ ನಿವಾರಣೆಗಾಗಿ ತೆಗೆದುಕೊಳ್ಳುವ ಔಷಧಿಗಳೇ ಆತನ ಪ್ರಾಣಕ್ಕೆ ಕುತ್ತಾಗುತ್ತದೆ.
ಈ ಬಗ್ಗೆ ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ನಡೆಸಿದ ಅಧ್ಯಯನದ ವರದಿ 'ಲ್ಯಾನ್ಸೆಟ್' ಜರ್ನಲ್ನಲ್ಲಿ ಪ್ರಕಟವಾಗಿದೆ. 2019ರಲ್ಲಿ ವಿಶ್ವದಾದ್ಯಂತ ಪ್ರತಿರೋಧಕ ಔಷಧಿಗಳು ತಂದೊಡ್ಡಿದ ಬ್ಯಾಕ್ಟೀರಿಯಾ ಸೋಂಕಿನಿಂದ 1.2 ದಶಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ 4.95 ದಶಲಕ್ಷ ಸಾವುಗಳೂ ಕೂಡ ಇದಕ್ಕೆ ಸಂಬಂಧಿಸಿವೆ. ಇದಕ್ಕೂ ಮುನ್ನ ವರ್ಷಕ್ಕೆ 7 ಲಕ್ಷ ಜನರು ಮಾತ್ರ ಈ ರೀತಿಯ ಸೋಂಕಿನಿಂದ ಬಲಿಯಾಗುತ್ತಿದ್ದರು ಎಂದು ಅಧ್ಯಯನವು ತಿಳಿಸಿದೆ.
ಬಡ ರಾಷ್ಟ್ರಗಳಲ್ಲೇ ಹೆಚ್ಚ ಮಂದಿ ಬಲಿ : ಈ ರೀತಿಯ ಸಾವುಗಳು ಎಲ್ಲೆಡೆ ಹಾಗೂ ಪ್ರತಿಯೊಬ್ಬರಲ್ಲಿಯೂ ಸಂಭವಿಸಬಹುದಾದರೂ ಕೂಡ ಪಶ್ಚಿಮ ಮತ್ತು ಪೂರ್ವ ಆಫ್ರಿಕಾ, ದಕ್ಷಿಣ ಏಷ್ಯಾದ ಬಡ ರಾಷ್ಟ್ರಗಳಲ್ಲೇ ಹೆಚ್ಚಾಗಿದೆ ಎಂದು ಅಧ್ಯಯನದ ವರದಿ ಹೇಳಿದೆ. ಏಕೆಂದರೆ, ಈ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಹೆಚ್ಚು ದುಬಾರಿ ಔಷಧಗಳ ಬದಲು ಪ್ರತಿ ರೋಗಗಳಿಗೂ ಆ್ಯಂಟಿಬಯೋಟಿಕ್ಸ್ ಅನ್ನು ಹೆಚ್ಚು ನೀಡಲಾಗುತ್ತದೆ. ಅಲ್ಲದೇ ಒಳ್ಳೆಯ ಔಷಧಿಗಳ ಅಸಮರ್ಪಕ ಪೂರೈಕೆ, ಕಳಪೆ ನೈರ್ಮಲ್ಯ, ನಕಲಿ ಔಷಧಿಗಳ ಚಲಾವಣೆ ಕೂಡ ಸಾವಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಳ್ಳಲು ಪ್ಲ್ಯಾನ್ ಮಾಡ್ತಿದ್ದೀರಾ? ಈ ಕೆಳಗಿನ ಅಂಶಗಳನ್ನು ನೆನಪಿಟ್ಟುಕೊಳ್ಳಿ...
ಪ್ರಮುಖ ಮಾನವನ ಆರೋಗ್ಯಕ್ಕೆ ಇರುವ ಬೆದರಿಕೆಗಳ ತಿಳುವಳಿಕೆಯನ್ನು ಸುಧಾರಿಸಲು ಸೂಕ್ಷ್ಮ ಜೀವವಿಜ್ಞಾನ ಪ್ರಯೋಗಾಲಯ ಸಾಮರ್ಥ್ಯ ಮತ್ತು ಡೇಟಾ ಸಂಗ್ರಹಣಾ ವ್ಯವಸ್ಥೆಗಳನ್ನು ವಿಸ್ತರಿಸುವ ಅಗತ್ಯವನ್ನು ಸಂಶೋಧಕರು ಒತ್ತಿ ಹೇಳಿದ್ದಾರೆ. ವರ್ಧಿತ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಬ್ಯಾಕ್ಟೀರಿಯಾದ ನ್ಯುಮೋನಿಯಾ ಸೇರಿದಂತೆ ಹೆಚ್ಚಿನ ವ್ಯಾಕ್ಸಿನೇಷನ್, ವೈರಸ್‌ಗಳಿಗೆ ಚಿಕಿತ್ಸೆ ನೀಡಲು ಮಾನವರಲ್ಲಿ ಅನವಶ್ಯಕ ಪ್ರರಿತೋಧಕಗಳ ಬಳಕೆಯನ್ನು ಕಡಿತಗೊಳಿಸುವುದು ಮತ್ತು ಹೊಸ ಬದಲಿ ಔಷಧಿಗಳನ್ನು ಅಭಿವೃದ್ಧಿಪಡಿಸಲು ಸಂಶೋಧಕರು ಕರೆ ನೀಡಿದ್ದಾರೆ.
ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ತಡೆಯುವ ವಿಧಾನಗಳು :
- ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ನೀವೇ ಔಷಧಿಗಳನ್ನು ತೆಗೆದುಕೊಳ್ಳಬೇಡಿ.
- ವೈದ್ಯರು ಸೂಚಿಸಿದಾಗ ಮಾತ್ರ ಆಂಟಿಮೈಕ್ರೊಬಿಯಲ್ಗಳನ್ನು ತೆಗೆದುಕೊಳ್ಳಿ.
- ವೈದ್ಯರು ಹೇಳಿದಂತೆಯೇ ಔಷಧಿಯ ಸಂಪೂರ್ಣ ಕೋರ್ಸ್ ಅನ್ನು ಪೂರ್ಣಗೊಳಿಸಿ
- ಚಿಕಿತ್ಸೆಗಿಂತ ಕಾಯಿಲೆಯನ್ನು ತಡೆಗಟ್ಟುವುದು ಉತ್ತಮವಾಗಿರುವುದರಿಂದ ಕೈಗಳನ್ನು ತೊಳೆಯುವುದು ಸೇರಿದಂತೆ ನೈರ್ಮಲ್ಯ ಕಾಪಾಡಿಕೊಳ್ಳಿ.
- ಲಸಿಕೆಯನ್ನು ಪಡೆಯುವುದು ಮತ್ತು ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡುವ ಮೂಲಕ ಸೋಂಕನ್ನು ತಡೆಯಿರಿ
- ನಿಮಗೆ ಗೊತ್ತಿರುವವರು ಹಾಗೂ ನೀವು ಇಬ್ಬರೂ ಒಂದೇ ಬಗೆಯ ರೋಗ ಅಥವಾ ಸೋಂಕಿನಿಂದ ಬಳಲುತ್ತಿದ್ದರೂ ಕೂಡ ಅವರಿಗೆ ನೀಡಿದ ಔಷಧ ನೀವು ಬಳಸಬೇಡಿ
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ