ETV Bharat / sukhibhava

ನೀವು ನಿತ್ಯ ಮದ್ಯ ಸೇವನೆ ಮಾಡ್ತೀರಾ.. ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಇರುತ್ತೆ.. ಇರಲಿ ಜಾಗ್ರತೆ!

ಆಲ್ಕೋಹಾಲ್ ಸೇವಿಸದವರಿಗೆ ಹೋಲಿಸಿದರೆ ಕಡಿಮೆ ಮಟ್ಟದ ಆಲ್ಕೋಹಾಲ್ ಸೇವಿಸಿದ ವಯಸ್ಕರಲ್ಲಿ ಯಾವುದೇ ಪ್ರಯೋಜನಕಾರಿ ಪರಿಣಾಮ ಕಂಡು ಬಂದಿಲ್ಲ ಎಂಬುದನ್ನು ಅಧ್ಯಯನವೊಂದು ಬಹಿರಂಗ ಮಾಡಿದೆ.

author img

By

Published : Aug 2, 2023, 10:52 AM IST

drinking-alcohol-can-increase-blood-pressure

ನ್ಯೂಯಾರ್ಕ್​: ಪ್ರತಿನಿತ್ಯ​​ ಆಲ್ಕೋಹಾಲ್​ ಸೇವನೆ ಮಾಡುವುದರಿಂದ ಕೂಡ ರಕ್ತದೊತ್ತಡದ ಮಟ್ಟ ಹೆಚ್ಚಲಿದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ಸೆವೆನ್​ ಇಂಟರ್​ನ್ಯಾಷನಲ್​ ರಿಸರ್ಚ್​​ ಅಧ್ಯಯನ ಪ್ರಕಟಿಸಿದೆ. ಅಧಿಕ ರಕ್ತದೊತ್ತಡ ಹೊಂದಿರದ ವಯಸ್ಕರಲ್ಲೂ ವಯಸ್ಕರು ನಿತ್ಯ ಮದ್ಯ ಸೇವನೆ ವರ್ಷಗಳು ಉರುಳಿದಂತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ತೋರಿಸಿವೆ.

ಕಡಿಮೆ ಮದ್ಯ ಸೇವನೆಯಿಂದ ಕಡಿಮೆ ಅಪಾಯ: ಕಡಿಮೆ ಮತ್ತು ಹೆಚ್ಚಿನ ಆಲ್ಕೋಹಾಲ್ ಸೇವನೆಯೊಂದಿಗೆ ಭಾಗವಹಿಸುವವರಲ್ಲಿ ರಕ್ತದೊತ್ತಡದ ಅಳತೆಗಳಲ್ಲಿ ನಿರಂತರ ಹೆಚ್ಚಳವನ್ನು ಮೊದಲ ಬಾರಿಗೆ ವಿಶ್ಲೇಷಣೆ ಖಚಿತಪಡಿಸಿದೆ. ಕಡಿಮೆ ಮಟ್ಟದ ಆಲ್ಕೋಹಾಲ್​ ಸೇವನೆ ಕೂಡ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುವುದು ಪತ್ತೆಯಾಗಿದೆ. ಇದು ಕೂಡ ಹೃದಯ ರಕ್ತನಾಳದ ಅಪಾಯವನ್ನು ಹೆಚ್ಚಾಗುವಂತೆ ಮಾಡುತ್ತದೆ.

ಆಲ್ಕೋಹಾಲ್ ಸೇವಿಸದವರಿಗೆ ಹೋಲಿಸಿದರೆ ಕಡಿಮೆ ಮಟ್ಟದ ಆಲ್ಕೋಹಾಲ್ ಸೇವಿಸಿದ ವಯಸ್ಕರಲ್ಲಿ ಯಾವುದೇ ಪ್ರಯೋಜನಕಾರಿ ಪರಿಣಾಮ ಕಂಡು ಬಂದಿಲ್ಲ ಎಂದು ಅಧ್ಯಯನಕಾರರು ಮ್ಯಾಕ್ರೋ ವಿನಸೆಟಿ ತಿಳಿಸಿದ್ದಾರೆ. ಅಚ್ಚರಿ ಅಂಶ ಎಂದರೆ ಕಡಿಮೆ ಮಟ್ಟದ ಆಲ್ಕೋಹಾಲ್​ ಸೇವನೆ ಮಾಡುವವರಲ್ಲೂ ಕೂಡ ಕಾಲಾನಂತರದಲ್ಲಿ ಅಧಿಕ ರಕ್ತದೊತ್ತಡದ ಬದಲಾವಣೆ ಕಂಡು ಬಂದಿದೆ. ಅಧಿಕ ಮಟ್ಟದ ಆಲ್ಕೋಹಾಲ್​ ಸೇವನೆ ಮಾಡುವರಲ್ಲಿ ಅಧಿಕ ಮಟ್ಟದ ರಕ್ತದೊತ್ತಡ ಕಂಡು ಬಂದಿದೆ ಎಂದು ವಿನ್ಸೆಟಿ ತಿಳಿಸಿದ್ದಾರೆ.

ಆಲ್ಕೋಹಾಲ್​ ಸೇವನೆಗೆ ಸುರಕ್ಷಿತ ಮಟ್ಟ ಇಲ್ಲ: ಈ ವರ್ಷದ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಷ್ಟು ಪ್ರಮಾಣದ ಆಲ್ಕೋಹಾಲ್​ ಸೇವನೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇದಕ್ಕೆ ಸುರಕ್ಷಿತ ಪ್ರಮಾಣ ಇಲ್ಲ ಎಂದು ತಿಳಿಸಿತ್ತು.

ಆಲ್ಕೋಹಾಲ್​ ಸೇವನೆ ಸುರಕ್ಷಿತ ಮಟ್ಟವನ್ನು ನಾವು ಮಾತನಾಡಲು ಸಾಧ್ಯವಿಲ್ಲ. ಎಷ್ಟು ಪ್ರಮಾಣದ ಆಲ್ಕೋಹಾಲ್​ ಸೇವನೆ ಮಾಡುತ್ತೀರಾ ಎಂಬುದು ಪ್ರಮುಖವಾಗುವುದಿಲ್ಲ. ಇದರ ಅಪಾಯದ ಮಟ್ಟ ಒಂದು ಹನಿ ಆಲ್ಕೋಹಾಲ್​ ಸೇವನೆಯಿಂದಲೂ ಆಗಬಹುದು. ಹೆಚ್ಚು ಕುಡಿದಷ್ಟು ಹೆಚ್ಚು ಹಾನಿಯಾಗುತ್ತದೆ ಎಂದು ಹೇಳಬಹುದು ಅಷ್ಟೇ. ಕಡಿಮೆ ಕುಡಿತ ಕಡಿಮೆ ಅಪಾಯ ತರುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಅಧ್ಯಯನ ಕುರಿತು ವಿವರಣೆ ನೀಡಿದ ಸಹ ಲೇಖಕ, ಥಾಮಸೊ ಫಿಲಿಪ್ಪಿನಿ, ಅಧ್ಯಯನದಲ್ಲಿ ಆಲ್ಕೋಹಾನ್​ಗಳನ್ನು ಗ್ರಾಂಗಳ ಆಧಾರದ ಮೇಲೆ ವಿಶ್ಲೇಷಣೆ ನಡೆಸಲಾಗಿದೆ. ಈ ಅಧ್ಯಯನಲ್ಲಾಗಿ 1997ರಿಂದ 2021ರವರೆಗೆ 19,548 ವಯಸ್ಕರನ್ನು ಒಳಗೊಳ್ಳಲಾಗಿದೆ. ದೈನಂದಿನ ಕುಡಿಯುವವರನ್ನು ಮಧ್ಯ ಸೇವನೆ ಮಾಡದವರನ್ನು ಹೋಲಿಕೆ ಮಾಡಲಾಗಿದೆ.

ಫಲಿತಾಂಶದಲ್ಲಿ ಪ್ರತಿನಿತ್ಯ 12 ಗ್ರಾಂ ಮದ್ಯ ಸೇವಿಸುವವರಲ್ಲಿ 1.25 ಮಿಲಿಮಿಟರ್​ ರಕ್ತದೊತ್ತಡ ಹಚ್ಚಿದೆ. ರಕ್ತದೊತ್ತಡ ಹೆಚ್ಚಲು ಕೇವಲ ಮದ್ಯವೊಂದೇ ಕಾರಣವಲ್ಲ. ಆದಾಗ್ಯೂ ನಮ್ಮ ಫಲಿತಾಂಶ ಇದನ್ನು ಅರ್ಥಪೂರ್ಣ ದಾರಿಯಲ್ಲಿ ಇದನ್ನು ಸ್ಪಷ್ಟಪಡಿಸಿದೆ. ಮದ್ಯ ಸೇವನೆ ಮಿತಿಯಲ್ಲಿ ಇರಬೇಕು., ಸಾಧ್ಯವಾದಲ್ಲಿ ಇದನ್ನು ಬಿಡುವುದು ಉತ್ತಮ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಇದನ್ನೂ ಓದಿ: Lung cancer: ಬೆಂಗಳೂರಿನ ಮಹಿಳೆಯರಲ್ಲಿ ಹೆಚ್ಚುತ್ತಿದೆ ಶ್ವಾಸಕೋಶದ ಕ್ಯಾನ್ಸರ್​​.. ವೈದ್ಯರು ಏನಂತಾರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.