ETV Bharat / sukhibhava

ತೊಳೆಯದೇ ಹೊಸ ಬಟ್ಟೆ ಧರಿಸುತ್ತೀರಾ.. ಹುಷಾರ್​​​​!: ಚರ್ಮದ ಮೇಲಾಗುತ್ತಿದೆ ರಾಸಾಯನಿಕ ದಾಳಿ - ಸ್ವೀಡನ್‌ನ ಸ್ಟಾಕ್‌ಹೋಮ್ ವಿಶ್ವವಿದ್ಯಾಲಯ

ಸ್ವೀಡನ್‌ನ ಸ್ಟಾಕ್‌ಹೋಮ್ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ 31 ಮಾದರಿಗಳ ಹೊಸ ಬಟ್ಟೆಗಳ ಪೈಕಿ 29ರಲ್ಲಿ ‘ಕ್ವಿನೋಲಿನ್’ ಅಂಶ ಕಂಡುಬಂದಿದೆ. ಪಾಲಿಯೆಸ್ಟರ್ ಬಟ್ಟೆಯಲ್ಲಿ ಈ ಅಂಶ ಹೆಚ್ಚಾಗಿರಲಿದೆ. ಕ್ವಿನೋಲಿನ್ ಅನ್ನು ಯುಎಸ್ ಪರಿಸರ ಸಂರಕ್ಷಣಾ ಸಂಸ್ಥೆ 'ಸಂಭವನೀಯ ಮಾನವ ಕ್ಯಾನ್ಸರ್' ಎಂದು ವರ್ಗೀಕರಿಸಿದೆ.

dont-wear-new-clothes-before-washing
ತೊಳೆಯದೆ ಹೊಸ ಬಟ್ಟೆ ಧರಿಸುತ್ತೀರಾ.
author img

By

Published : Apr 23, 2021, 10:46 PM IST

ನಮ್ಮಲ್ಲಿ ಹೆಚ್ಚಿನವರು ಸಿಂಥೆಟಿಕ್ ಫೈಬರ್ನಿಂದ ಮಾಡಿದ ಬಟ್ಟೆಗಳನ್ನು ಧರಿಸುತ್ತಾರೆ. ಏಕೆಂದರೆ ಅದನ್ನು ನಿರ್ವಹಿಸಲು ಬಹಳ ಸುಲಭ ಹಾಗೂ ಆಯಾಸವೂ ಆಗಲ್ಲ, ಇತರರು ಹತ್ತಿ ಅಥವಾ ಲಿನಿನ್ ಧರಿಸುತ್ತಾರೆ ಏಕೆಂದರೆ ಅವು ತಂಪಾಗಿರುತ್ತವೆ ಮತ್ತು ಹೆಚ್ಚು ಮಂದಿ ಇಷ್ಟಪಡುತ್ತಾರೆ. ಆದರೆ ಬಹಳಷ್ಟು ಬಾರಿ ನಾವು ಹೊಸ ಬಟ್ಟೆಯನ್ನು ಕೊಂಡು ತಂದ ಬಳಿಕ ತೊಳೆಯದೆಯೇ ಅದನ್ನು ಧರಿಸುತ್ತೇವೆ, ಇದು ಚರ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸವಲ್ಲ. ಅಲ್ಲದೇ ಇದರಿಂದ ಹಲವು ಸಮಸ್ಯೆಗೂ ಒಳಗಾಗುತ್ತಿದ್ದೇವೆ.

ಪಾಲಿಸ್ಟರ್ ಫೈಬರ್ ಡೈಯಿಂಗ್‌ನಲ್ಲಿ ‘ಚದುರಿಸುವ ಬಣ್ಣಗಳ’ ಬಳಸಲಾಗುತ್ತದೆ. ನಾವು ಶೇ.100ರಷ್ಟು ಹತ್ತಿ ಉಡುಗೆಗಳನ್ನು ಖರೀದಿಸಿದರೂ, ಡೈನಲ್ಲಿ ಯಾವ ರಾಸಾಯನಿಕಗಳನ್ನು ಬಳಸಲಾಗುತ್ತದೆ ಎಂದು ನಮಗೆ ತಿಳಿಯುವುದಿಲ್ಲ.

ಬಣ್ಣ ಹೋಗುವ ಡೈಸ್​​​ಗಳನ್ನು ಬಳಸಿದಾಗ ಸಾಮಾನ್ಯವಾಗಿ ಚರ್ಮದ ಮೇಲೆ ಅಲರ್ಜಿಯಂತಹ ಮತ್ತು ಚರ್ಮ ಸಂಬಂಧಿ ಕೆಲ ಊರಿಯೂತಕ್ಕೂ ಕಾರಣವಾಗಬಹುದು. ಹಾಗೆಂದ ಮಾತ್ರಕ್ಕೆ ಹೊಸ ಬಟ್ಟೆ ಧರಿಸಿದ ತಕ್ಷಣವೇ ಈ ಲಕ್ಷಣ ಕಂಡು ಬರಬೇಕು ಅಂದೇನಿಲ್ಲ. ಈ ಬಟ್ಟೆ ಧರಿಸಿ 2-3ದಿನಗಳ ನಂತರವೂ ಇಂತಹ ಲಕ್ಷಣ ಕಂಡು ಬರಬಹುದು.

ನಮಗರಿವಿಲ್ಲದೇ ಮೈಮೇಲೆ ಬಿದ್ದಿದೆ ರಾಸಾಯನಿಕ

ಅಲ್ಲದೆ ಮೈ ಮೇಲಿನ ಬೆವರು ಹಾಗೂ ತಿಕ್ಕಾಟವು ಬಣ್ಣಗಳ ಸೋರಿಕೆಗೆ ಕಾರಣವಾಗಿ ನಂತರ ಚರ್ಮ ಸಂಬಂಧಿ ಅಲರ್ಜಿ ಲಕ್ಷಣ ಕಾಣಬಹುದು. ಹೆಚ್ಚಿನದಾಗಿ ಕುತ್ತಿಗೆಯ ಭಾಗ ಹಾಗೂ ಕಂಕುಳ ಭಾಗದಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇದಲ್ಲದೇ ಕೆಲವರು ರೋಗನಿರೋಧಕ ಶಕ್ತಿಯ ಕಡೆ ಹೆಚ್ಚು ಗಮನ ಹರಿಸದೇ ಇದ್ದಾಗಲೂ ಇಂತಹ ಸಮಸ್ಯೆ ಎದುರಾಗುತ್ತದೆ.

ಸ್ವೀಡನ್‌ನ ಸ್ಟಾಕ್‌ಹೋಮ್ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ 31 ಮಾದರಿಗಳ ಹೊಸ ಬಟ್ಟೆಗಳ ಪೈಕಿ 29ರಲ್ಲಿ ‘ಕ್ವಿನೋಲಿನ್’ ಅಂಶ ಕಂಡು ಬಂದಿದೆ. ಪಾಲಿಯೆಸ್ಟರ್ ಬಟ್ಟೆಯಲ್ಲಿ ಈ ಅಂಶ ಹೆಚ್ಚಾಗಿರಲಿದೆ. ಕ್ವಿನೋಲಿನ್ ಅನ್ನು ಯುಎಸ್ ಪರಿಸರ ಸಂರಕ್ಷಣಾ ಸಂಸ್ಥೆ 'ಸಂಭವನೀಯ ಮಾನವ ಕ್ಯಾನ್ಸರ್' ಎಂದು ವರ್ಗೀಕರಿಸಿದೆ.

ನೈಟ್ರೊಅನಿಲೈನ್ಸ್ ಮತ್ತು ಬೆಂಜೊಥಿಯಾಜೋಲ್​​​​​ಗಳು ವರ್ಣಗಳಲ್ಲಿ ಕಂಡುಬರುತ್ತವೆ, ಇದು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ಈ ರಾಸಾಯನಿಕಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ. ಅವು ಗಾಳಿ ಮತ್ತು ನೀರಿನಲ್ಲಿ ಸೇರಿಕೊಂಡು ಮತ್ತಷ್ಟು ಹಾನಿಗೆ ಕಾರಣವಾಗುತ್ತವೆ.

ಇದಿಷ್ಟೇ ಅಲ್ಲ ಜವಳಿ ತಯಾರಿಕೆಯ ವೇಳೆ ಹತ್ತು ಹಲವು ಬಾರಿ ರಾಸಾಯನಿಕ ಮಿಶ್ರಣ ಸೇರಿದರೆ. ಇನ್ನೂ ಹಲವು ಬಾರಿ ಕೊಳಕು, ಮಾಲೀನ್ಯ ಸೇರಿಕೊಳ್ಳುತ್ತದೆ. ಆದ್ದರಿಂದ, ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಬೆಚ್ಚಗಿನ ನೀರಿನಲ್ಲಿ ತೊಳೆಯುವ ಮೂಲಕ ಈ ರಾಸಾಯನಿಕ ಹೊರೆಯನ್ನು ಕಡಿಮೆ ಮಾಡುವುದು ಯಾವಾಗಲೂ ಉತ್ತಮ. ಜವಳಿ ಉದ್ಯಮದಲ್ಲಿ ಬಳಸುವ ವಿವಿಧ ರಾಸಾಯನಿಕಗಳ ಬಗ್ಗೆ ನಮಗೆ ತಿಳಿದಿಲ್ಲವಾದ್ದರಿಂದ ಅವು ನಮ್ಮ ಚರ್ಮದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.