ETV Bharat / sukhibhava

ದೇಹದಲ್ಲಿ ಮೂಡುವ ನೋವುರಹಿತ ಈ ಗಡ್ಡೆಗಳ ಬಗ್ಗೆ ಬೇಡ ನಿರ್ಲಕ್ಷ್ಯ! ಏಕೆ ಗೊತ್ತೇ?

ಈ ಗಡ್ಡೆಗಳು ನೋವುದಾಯಕವಲ್ಲ ಎಂದು ನಿರ್ಲಕ್ಷ್ಯಿಸಿದರೆ, ಕ್ಯಾನ್ಸರ್​​ಗೆ ಕಾರಣವಾಗಬಹುದು ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ.

Dont neglect the lumps appears in Body
Dont neglect the lumps appears in Body
author img

By ETV Bharat Karnataka Team

Published : Sep 15, 2023, 4:53 PM IST

ಲಕ್ನೋ: ಅರಿವಿಗೆ ಬಾರದಂತೆ ಕುತ್ತಿಗೆ, ತೊಡೆಸಂಧಿ ಸೇರಿದಂತೆ ದೇಹದ ಹಲವೆಡೆ ಕಾಣುವ ನೋವುರಹಿತ ಗಡ್ಡೆಗಳು ಲಿಂಫಾಟಿಕ್​ ಕ್ಯಾನ್ಸರ್​​ಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಕಿಂಗ್​ ಜಾರ್ಜ್​ ಮೆಡಿಕಲ್​ ಯುನಿವರ್ಸಿಟಿ (ಕೆಜಿಎಂಯು) ವೈದ್ಯಕೀಯ ತಜ್ಞರು ಈ ಕುರಿತು ಮಾಹಿತಿ ನೀಡಿದ್ದು, ಪರ್ಯಾಯ ಚಿಕಿತ್ಸೆಯ ಮೊರೆ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ.

ಲಿಂಫಾಟಿಕ್​​ ವ್ಯವಸ್ಥೆ ನಾಳಗಳ ಜಾಲವಾಗಿದ್ದು, ಸೋಂಕು ಮತ್ತು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಲಿಂಫಾ ಗಡ್ಡೆಗಳು ಸಣ್ಣದಾಗಿದ್ದು, ದೇಹದೆಲ್ಲೆಡೆ ಬೀನ್ ಆಕೃತಿಯ ಗಡ್ಡೆಯ ಟಿಶ್ಯೂಗಳನ್ನು ಕಾಣಬಹುದು. ದೇಹ ಸೋಂಕಿನ ವಿರುದ್ಧ ಹೋರಾಡುವಾಗ ಈ ಲಿಂಫಾಗಳು ಊದಿಕೊಳ್ಳುತ್ತವೆ. ಆದಾಗ್ಯೂ ಲಿಂಫಾ ನೋಡ್​ಗಳು ಊತಗೊಂಡು ನೋವಿನ ಲಕ್ಷಣ ತೋರದಿದ್ದರೆ ಅದು ಕ್ಯಾನ್ಸರ್​ ಅಪಾಯದ ಚಿಹ್ನೆ.

ಕೆಜಿಎಂಯುನ ಹೆಮಟೋಲಾಜಿ ವಿಭಾಗ ಮಾಜಿ ಮುಖ್ಯಸ್ಥ ಪ್ರೊ.ಎ.ಕೆ.ತ್ರಿಪಾಠಿ ತಿಳಿಸುವಂತೆ, ಈ ಸಮಸ್ಯೆ ಹೊಂದಿರುವ ಶೇ 90ರಷ್ಟು ಮಂದಿಯಲ್ಲಿ 20ರಿಂದ 25 ಮಂದಿ ಈ ಪರಿಸ್ಥಿತಿ ಅಭಿವೃದ್ಧಿ ಕಂಡ ಬಳಿಕ ಆಸ್ಪತ್ರೆಗೆ ಭೇಟಿ ನೀಡುವುದೇ ಹೆಚ್ಚು. ಅದರಲ್ಲೂ ಇವರು ಐದರಿಂದ ಆರು ತಿಂಗಳ ಕಾಲ ಪರ್ಯಾಯ ಚಿಕಿತ್ಸೆ ಮುಗಿಸಿ ಬರುತ್ತಾರೆ ಎಂದರು. ಈ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ ಉಸಿರಾಟ ಸಮಸ್ಯೆ ಮತ್ತು ದಿಢೀರ್​ ತೂಕ ನಷ್ಟ ಉಂಟಾಗುತ್ತದೆ. ಇಂತಹ ರೋಗಿಗಳ ನಿರ್ವಹಣೆ ಸವಾಲಿನ ಕೆಲಸ ಎಂದು ಅವರು ಹೇಳಿದರು.

ಸಂಜಯ್​ ಗಾಂಧಿ ಇನ್ಸುಟಿಟ್ಯೂಟ್​​ ಆಫ್​ ಮೆಡಿಕಲ್​ ಸೈನ್ಸ್​​ (ಎಸ್​ಜಿಪಿಜಿಐಎಂಎಸ್​) ಉಪನ್ಯಾಸಕ ಪ್ರೊ.ಸಂಜೀವ್​​ ವಿವರಿಸುವಂತೆ, ಬಹುತೇಕ ರೋಗಿಗಳು ಟ್ಯೂಬರ್ಕ್ಯೂಲೊಸಿಸ್​​ ಚಿಕಿತ್ಸೆ ಪಡೆದು ಇದರಿಂದ ಪರಿಹಾರ ಕಾಣದಿದ್ದಾಗ ಬರುತ್ತದೆ. ಒಂದು ವೇಳೆ ಇದು ಸುಧಾರಣೆ ಕಂಡುಬಂದಿಲ್ಲ ಎಂದರೆ ವೈದ್ಯರಿಂದ ಎರಡನೇ ಅಭಿಪ್ರಾಯ ಪಡೆಯಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಇದೇ ವೇಳೆ ಹೊಸ ಚಿಕಿತ್ಸೆಯೂ ಜೀನ್​ ಎಡಿಟಿಂಗ್​​, ಆ್ಯಂಟಿಬೊಡಾ ಡ್ರಗ್​ ಕಂಜುಗೇಟ್​ (ಎಡಿಸಿ) ಮತ್ತು ಇಮ್ಯೂನು ಚೆಕ್​ಪಾಯಿಂಟ್​​ ಇನ್ಹಿಬಿಟರ್​ (ಐಸಿಐ) ಚಿಕಿತ್ಸೆಗಳು ಸಮಸ್ಯೆ ನಿವಾರಿಸುವಲ್ಲಿ ಸಹಾಯಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎಡಿಸಿ ಚಿಕಿತ್ಸೆಯನ್ನು ಕ್ಯಾನ್ಸರ್​​ ಕೋಶಗಳನ್ನು ಗುರಿಯಾಗಿಸಿಕೊಂಡು ನಿರ್ದಿಷ್ಟ ಚಿಕಿತ್ಸೆ ವಿನ್ಯಾಸ ಮಾಡಲಾಗಿದೆ. ಐಸಿಎಸ್​ ಕ್ಯಾನ್ಸರ್ ಕೋಶಗಳನ್ನು ಗುರುತಿಸುವ ಮತ್ತು ದಾಳಿ ಮಾಡುವ ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ತಡೆಯುವ ತಡೆಯನ್ನು ತೆಗೆದು ಹಾಕಲು ಕಾರ್ಯ ನಿರ್ವಹಿಸುತ್ತದೆ. ಜೀನ್​ ಎಡಿಟಿಂಗ್​ ಕೂಡ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು, ಉತ್ತಮ ಫಲಿತಾಂಶ ಹೊಂದಿದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೇರಳದಲ್ಲಿ ಮತ್ತೊಂದು ನಿಫಾ ಪ್ರಕರಣ.. ಸೋಂಕು ಪತ್ತೆಗೆ ಮೊಬೈಲ್​​ ವೈರಾಲಾಜಿ ಘಟಕಕ್ಕೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.