ETV Bharat / sukhibhava

ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವಾಗಿರಿ: ಇಲ್ಲಿವೆ ಕೆಲವು ಉಪಯುಕ್ತ ಸಲಹೆ - eat right

ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳುವುದು ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ - ಒತ್ತಡದ ಜೀವನಶೈಲಿಯಿಂದಾಗಿ ಹೆಚ್ಚಿನ ಜನರಿಗೆ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ - ಹೀಗಾಗಿ ಪೌಷ್ಟಿಕ ತಜ್ಞ ರಯಾನ್ ಫರ್ನಾಂಡೋ ನೀಡಿರುವ ಕೆಲವು ಸಲಹೆಗಳು ಇಲ್ಲಿವೆ

ಪೌಷ್ಟಿಕಾಂಶಯುಕ್ತ ಆಹಾರ
ಪೌಷ್ಟಿಕಾಂಶಯುಕ್ತ ಆಹಾರ
author img

By

Published : Jan 2, 2023, 12:37 PM IST

ನವದೆಹಲಿ: ನಾವು ತಿನ್ನುವ ಆಹಾರ ಪೌಷ್ಟಿಕಾಂಶಯುಕ್ತವಾಗಿರುವುದು ತುಂಬಾ ಮುಖ್ಯವಾಗಿದೆ. ನಮ್ಮ ಜೀವನದಲ್ಲಿ ಪೌಷ್ಟಿಕಾಂಶವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ಪೌಷ್ಟಿಕ ಆಹಾರಗಳ ಮೇಲೆ ಕೇಂದ್ರೀಕರಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ.

ಸ್ನ್ಯಾಕ್​​ ಸ್ಮಾರ್ಟ್
ಸ್ನ್ಯಾಕ್​​ ಸ್ಮಾರ್ಟ್

ಪ್ರತಿಯೊಬ್ಬರು ಆರೋಗ್ಯಕರವಾದ ಆಹಾರ ತಿನ್ನುವುದರ ಮೇಲೆ ಗಮನಹರಿಸಬೇಕು ಮತ್ತು ಈ ಮೂಲಕ ಫಿಟ್ ಆಗಿ ಉಳಿಯಬೇಕು. ಆದರೆ ಇದನ್ನು ಎಲ್ಲಿಂದ ಪ್ರಾರಂಭಿಸಬೇಕು?, ಅನಾರೋಗ್ಯಕರ ವಾತಾವರಣದಲ್ಲೀ ಆರೋಗ್ಯವಂತರಾಗುವುದು ಹೇಗೆ? ಎಷ್ಟು ಆರೋಗ್ಯವಂತಾಗಿರುತ್ತೀರಿ ? ಇಂತಹ ಹಲವಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಬಹುದು.

ಇದಕ್ಕೆಲ್ಲ ಉತ್ತರ ನೀಡಲು ಪ್ರಸಿದ್ಧ ಪೌಷ್ಟಿಕತಜ್ಞ, ರಯಾನ್ ಫರ್ನಾಂಡೋ, ನೀವು ಯಾವ ರೀತಿಯ ಪೌಷ್ಟಿಕಾಂಶಯುಕ್ತ ಆಹಾರವನ್ನು ತಿನ್ನಬೇಕು ಎಂದು ಇಲ್ಲಿ ಐದು ಸಲಹೆಗಳನ್ನು ನೀಡಿದ್ದಾರೆ.

ರೀಡ್​ ದೆಟ್​​ ಲೆಬಲ್
ರೀಡ್​ ದೆಟ್​​ ಲೆಬಲ್

ಒಮೆಗಾ-3 ಸೇವಿಸಿ: ಒಮೆಗಾ-3 ಅತ್ಯಗತ್ಯ ಪೋಷಕಾಂಶವಾಗಿದೆ. ಇದನ್ನು ನಾವು ಆಹಾರದಿಂದಲೇ ಪಡೆಯಬೇಕು. ಒಮೆಗಾ -3 ಉತ್ತಮ ಕೊಬ್ಬಿನ ಮೂಲವಾಗಿದೆ ಮತ್ತು ಪೌಷ್ಟಿಕಾಂಶವು ಹಲವಾರು ಸಂಭಾವ್ಯ ಮತ್ತು ಸಾಬೀತಾಗಿರುವ ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧಿಸಿದೆ. ಉದಾಹರಣೆಗೆ, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಜೊತೆಗೆ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಎಷ್ಟು ತಿನ್ನಬೇಕು ಎಂಬುದು ತಿಳಿದಿರಲಿ
ಎಷ್ಟು ತಿನ್ನಬೇಕು ಎಂಬುದು ತಿಳಿದಿರಲಿ

ಪ್ರೋಟೀನ್​ಯುಕ್ತ ಆಹಾರ ಸೇವಿಸಿ: ಒಮೆಗಾ -3 ಜೊತೆಗೆ ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಪಡೆಯುತ್ತಿದ್ದೀರಾ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಆರೋಗ್ಯಕರವಾಗಿರಲು ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಮ್ಯಾಕ್ರೋನ್ಯೂಟ್ರಿಯೆಂಟ್, ಪ್ರೋಟೀನ್ ಅನಗತ್ಯ ಕಡು ಬಯಕೆಗಳನ್ನು ನಿಗ್ರಹಿಸಲು, ತೆಳ್ಳಗಿನ ಸ್ನಾಯುಗಳನ್ನು ನಿರ್ಮಿಸಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಒಮೆಗಾ-3 ಸೇವಿಸಿ
ಒಮೆಗಾ-3 ಸೇವಿಸಿ

ಈ ಪೋಷಕಾಂಶವನ್ನು ನಮ್ಮ ದೇಹವು ಅಂಗಾಂಶಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ಸಹ ಬಳಸಿಕೊಳ್ಳುತ್ತದೆ. ಮೊಟ್ಟೆಗಳು, ಚಿಕನ್, ಡೈರಿ ಉತ್ಪನ್ನಗಳು ಮತ್ತು ವಾಲ್​ನಟ್​​​​ ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಪ್ರೋಟೀನ್​ ಉತ್ತಮ ಮೂಲವಾಗಿದೆ

ಸ್ನ್ಯಾಕ್​​ ಸ್ಮಾರ್ಟ್: ನೀವು ಸ್ನ್ಯಾಕ್ಸ್​​ ತಿನ್ನಬೇಕು ಎಂದುಕೊಂಡಿದ್ದರೆ, ಸಕ್ಕರೆ, ಉಪ್ಪು ಮತ್ತು ಕೊಬ್ಬಿನಾಂಶ ಇರುವ ತಿಂಡಿಗಳನ್ನು ತಪ್ಪಿಸಿ. ಬದಲಿಗೆ ಹಣ್ಣುಗಳು, ತರಕಾರಿಗಳು, ನಟ್ಸ್​​​ ಮತ್ತು ಧಾನ್ಯಯುಕ್ತ ಉಪಾಹಾರವನ್ನ ಸೇವಿಸುವುದು ಉತ್ತಮ ಆರೋಗ್ಯಕ್ಕೆ ಹಿತಕರ. ಒಣದ್ರಾಕ್ಷಿಗಳೊಂದಿಗೆ ಕೈಬೆರಳೆಣಿಕೆಯಷ್ಟು ವಾಲ್​​​ನಟ್ಸ್ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಇನ್ನೂ ಉತ್ತಮ.

ಎಷ್ಟು ತಿನ್ನಬೇಕು ಎಂಬುದು ತಿಳಿದಿರಲಿ: ನೀವು ತಿನ್ನುವುದನ್ನು ಮಾತ್ರ ನೋಡಬೇಡಿ. ಆದರೆ, ನೀವು ಎಷ್ಟು ತಿನ್ನುತ್ತಿದ್ದೀರಿ ಎಂಬುದು ಸಹ ನಿಮಗೆ ತಿಳಿದಿರಲಿ. ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ನೀವು ಅದನ್ನು ತಪ್ಪಿಸಬೇಕು. ಇಲ್ಲದಿದ್ದರೆ, ದೀರ್ಘಾವಧಿಯಲ್ಲಿ ಇದು ಬೊಜ್ಜು ಮತ್ತು ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು. ಸೀಮಿತ ಪ್ರಮಾಣದಲ್ಲಿ ಆಹಾರ ಸೇವಿಸಿ, ಇದರಲ್ಲಿ ಎಷ್ಟು ಕ್ಯಾಲೊರಿ ಇರುತ್ತದೆ ಎಂಬುದನ್ನು ಸಹ ನೀವು ತಿಳಿದಿರಬೇಕು.

ರೀಡ್​ ದೆಟ್​​ ಲೆಬಲ್
ರೀಡ್​ ದೆಟ್​​ ಲೆಬಲ್

ಇದನ್ನೂ ಓದಿ: ತಿನ್ನುವ ಅಸ್ವಸ್ಥತೆಗಳಲ್ಲಿ ಒತ್ತಡ ಸ್ವಯಂ ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗುವುದಿಲ್ಲ

ರೀಡ್​ ದೆಟ್​​ ಲೆಬಲ್​: ನೀವು ಖರೀದಿಸುವ ಎಲ್ಲ ಆಹಾರ ಮತ್ತು ಪಾನೀಯಗಳ ಮೇಲೆ ಪೌಷ್ಟಿಕಾಂಶದ ಲೇಬಲ್ ಇರುತ್ತದೆ. ಅದನ್ನು ಓದುವ ಮೂಲಕ ನೀವು ಆಹಾರದ ಆಯ್ಕೆಗಳನ್ನು ಮಾಡಬೇಕು. ಆರೋಗ್ಯಕರ ಆಹಾರದ ಗುರಿಯು ಕೇವಲ ಕ್ಯಾಲೊರಿಗಳನ್ನು ಸೇವಿಸುವುದು ಅಥವಾ ನಿಯಂತ್ರಿಸುವುದಲ್ಲ. ಇದು ಪದಾರ್ಥಗಳು ಮತ್ತು ಅವುಗಳ ಪೌಷ್ಟಿಕಾಂಶದ ವಿಷಯಕ್ಕೆ ಗಮನ ಕೊಡುವುದನ್ನು ಒಳಗೊಂಡಿರುತ್ತದೆ. ಆಹಾರವು ನಿಮಗೆ ಅಲರ್ಜಿ ಅಥವಾ ಅಸಹಿಷ್ಣುತೆ ಹೊಂದಿರುವ ಪದಾರ್ಥಗಳನ್ನು ಹೊಂದಿದೆಯೇ ಎಂದು ಗುರುತಿಸಲು ಈ ಅಭ್ಯಾಸವು ನಿಮಗೆ ಸಹಾಯ ಮಾಡುತ್ತದೆ.

ಹಸಿವಾದಾಗ ಮಾತ್ರ ಆಹಾರ ಸೇವಿಸಿ. ಆದರೆ, ಅತಿಯಾಗಿ ತಿನ್ನಬೇಡಿ, ಹಸಿವು ತೀರಲು ಎಷ್ಟು ಬೇಕೊ ಅಷ್ಟು ಸತ್ವಯುತ’ ಆಹಾರ ಸೇವಿಸಿ. ನಮ್ಮ ದೇಹಕ್ಕೆ ಹೆಚ್ಚು ಮಾರಕವಾಗಿರುವ ಪದಾರ್ಥಗಳಲ್ಲಿ ಸಕ್ಕರೆ ಕೂಡ ಒಂದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.