ETV Bharat / sukhibhava

ಚಳಿಗಾಲದಲ್ಲಿ ತ್ವಚೆ ಆರೈಕೆ; ಮುಖದ ಹೊಳಪಿಗೆ ಇಲ್ಲಿವೆ ಉಪಯುಕ್ತ ಸಲಹೆಗಳು - ಮುಖದ ಹೊಳಪಿಗೆ ಆರೈಕೆ

ತ್ವಚೆ ಆರೈಕೆ ಸಂಬಂಧ ಡಿಕನ್‌ಸ್ಟ್ರಕ್ಟ್‌ನ ಸಂಸ್ಥಾಪಕರಾದ ಮಾಲಿನಿ ಅಡಪುರೆಡ್ಡಿ, ಚಳಿಗಾಲದ ನಿಮ್ಮ ತ್ವಚೆಯ ಆರೈಕೆ ಹೇಗೆ ಎಂಬ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ.

ಚಳಿಗಾಲದ ತ್ವಚೆ ಆರೈಕೆ; ಮುಖದ ಹೊಳಪಿಗೆ ಬೇಕು ಈ ಸಲಹೆಗಳು
Dont forget skin care in winter; These tips are essential for a glowing face
author img

By

Published : Nov 24, 2022, 2:16 PM IST

ನವದೆಹಲಿ: ಚಳಿಗಾಲದಲ್ಲಿ ತಮ್ಮ ದೇಹ ಬೆಚ್ಚಗಿನ ಉಡುಪು ಬೇಡುವಂತೆ ತ್ವಚೆ ಕೂಡ ಆರೈಕೆಯನ್ನು ಕೇಳುತ್ತದೆ. ಚಳಿಗಾಲದಲ್ಲಿ ಶುಷ್ಕತೆ ಮತ್ತು ತೇವಾಂಶದಿಂದಾಗಿ ತ್ವಚೆ ಅಂದಗೆಡುವ ಸಾಧ್ಯತೆ ಇರುತ್ತದೆ ಈ ಹಿನ್ನೆಲೆ ಚಳಿಗಾಲದಲ್ಲಿ ಚರ್ಮದ ಆರೈಕೆಗೆ ವಿಶೇಷ ಕಾಳಜಿ ತೋರಬೇಕು. ಈ ಸಂಬಂಧ ಡಿಕನ್‌ಸ್ಟ್ರಕ್ಟ್‌ನ ಸಂಸ್ಥಾಪಕರಾದ ಮಾಲಿನಿ ಅಡಪುರೆಡ್ಡಿ, ಚಳಿಗಾಲದ ನಿಮ್ಮ ತ್ವಚೆಯ ಆರೈಕೆ ಹೇಗೆ ಎಂಬ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ.

ನಿಮ್ಮ ಮಾಶ್ಚರೈಸರ್​ನಲ್ಲಿರಲಿ ಹೈಲುರೊನಿಕ್​ ಆಸಿಡ್​: ಸೆರಂ, ಮಾಶ್ಚರೈಸರ್ ಈ ಹೈಲುರೊನಿಕ್​ ಆಸಿಡ್​​ ಪ್ರಮುಖವಾಗಿ ಇರುತ್ತದೆ. ಇದು ನಿಮ್ಮ ತ್ವಚೆಯನ್ನು ಸಾಫ್ಟ್​ ಮಾಡುತ್ತದೆ. ಇದು ಅನೇಕ ಸ್ಕಿನ್​ ಕೇರ್​ ಉತ್ಪನ್ನಗಳಲ್ಲೂ ಇರುತ್ತದೆ. ಹೈಲುರೊನಿಕ್​ ಮತ್ತು ಹೈಡ್ರೆಡ್​​ ಪ್ರಮುಖ ಅಂಶವನ್ನು ನಿಮ್ಮ ತ್ವಚೆಗೆ ನೀಡುತ್ತದೆ. ಇದು ಚರ್ಮದಲ್ಲಿನ ತೇವಾಂಶವನ್ನು ಹಿಡಿದಿಡುವ ಜೊತೆಗೆ ಒಣಗದಂತೆ ನೋಡಿಕೊಳ್ಳುತ್ತದೆ.

ಟಿಪ್ಸ್​​: ಚಳಿಗಾಲದಲ್ಲಿ ಸ್ನಾನವಾದ ಕೂಡಲೇ ಈ ಹೈಲುರೊನಿಕ್​ ಆಸಿಡ್​ ಹಚ್ಚಬೇಕು

ವಿಟಿಮಿಸ್​ ಸಿಗೆ ಒತ್ತು ನೀಡಿ.. ಚಳಿಗಾಲದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ವಿಟಮಿನ್​ ಸಿ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ಸಾಕಷ್ಟು ಆರೋಗ್ಯ ಪ್ರಯೋಜನಕಾರಿ ಗುಣ ಹೊಂದಿರುವ ವಿಟಮಿನ್​ ಸಿ ನಿಮ್ಮ ರಕ್ತ ಪರಿಚಲನೆ ಹೆಚ್ಚಿಸಿ ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಈ ಮೂಲಕ ಚಳಿಗಾಲ ನಿಮ್ಮ ತ್ವಚೆ ಮತ್ತು ಅಂದದ ಮೇಲೆ ಪರಿಣಾಮ ಬೀರದಂತೆ ತಡೆಯುತ್ತದೆ. ಡಲ್​, ಡ್ರೈ ಅಥವಾ ಒಣ ಚರ್ಮ ನಿಮ್ಮದಾಗಿದ್ದರೆ, ಇದು ನಿಮಗೆ ಉಪಯುಕ್ತವಾಗಲಿದೆ.

ಟಿಪ್ಸ್​: ವಿಟಮಿನ್​ ಸಿ ಮತ್ತು ಫೆರುಲಿಕ್​ ಆಸಿಡ್​ ಇರುವ ಡಿಕನ್ಸ್​​ಟ್ರಾಕ್ಟ್​​ ವಿಟಮಿನ್​ ಸಿ ಸೆರಂ -10%, ವಿಟಿಸಿ ಸಿ + 0.5 ನಷ್ಟು ಫೆರುಲಿಕ್​ ಆಸಿಡ್​ ಇರುವ ಕ್ರೀಂಗಳು ಚಳಿಗಾಲದಲ್ಲಿ ಉತ್ತಮವಾಗಿ ನಿಮ್ಮ ತ್ವಚೆಯನ್ನು ಆರೈಕೆ ಮಾಡುತ್ತವೆ.

ಸೆರಾಮಿಡ್ಸ್​ ಕೂಡ ಬಳಸಿ.. ಸೆರಾಮಿಡ್ಸ್​ ಕೂಡ ನಿಮ್ಮ ತ್ವಚೆಯನ್ನು ಧೂಳು ಮತ್ತು ಪ್ರದೂಷಣೆಯಿಂದ ಕಾಪಾಡುತ್ತದೆ. ಚಳಿಗಾಲದಲ್ಲಿ ಚರ್ಮ ಬಿರಿಯದಂತೆ ಕಾಪಾಡುವುದು ನಿಮಗೆ ಮೊದಲ ಆಯ್ಕೆಯಾಗಿದೆ. ದಿನಕ್ಕೆ ಇದನ್ನು ಎರಡು ಬಾರಿ ಹಚ್ಚಿದರೆ ಉತ್ತಮ ಪರಿಣಾಮ ಕಾಣಬಹುದು. ಇದನ್ನು ಕೂಡ ಸೆರಂ, ಮಾಶ್ಚರೈಸರ್, ಬಾಡಿ ವಾಶ್​ ಮತ್ತು ಸ್ಕ್ರಬ್​ಗಳಲ್ಲಿ ಕಾಣಬಹುದಾಗಿದೆ.

ಟಿಪ್ಸ್​: ಸೆರಾಮಿಡ್​ ಆಧಾರಿತ ಮಾಶ್ಚರೈಸರ್ ಬಳಕೆ ಮಾಡುವುದರಿಂದ ನಿಮ್ಮ ತ್ವಚೆಯಲ್ಲಿ ತೇವಾಂಶ ಕಾಪಾಡಬಹುದಾಗಿದೆ.

ಎಎಚ್​ಎ ಬಳಕೆ.. ಆಲ್ಪಾ ಹೈಡ್ರೊಕ್ಸಿ ಆಸಿಡ್​ (ಎಎಚ್​ಎ) ಮಾಶ್ಚರೈಸರ್ ಅಲ್ಲದಿದ್ದರೂ ಚಳಿಗಾಲದಲ್ಲಿ ವಿಭಿನ್ನವಾಗಿ ನಿಮ್ಮ ತ್ವಚೆ ಆರೈಕೆ ಮಾಡುತ್ತದೆ. ನಿಮ್ಮ ತ್ವಚೆಯಲ್ಲಿನ ಡೆಡ್​ಸ್ಕಿನ್​ ಸೆಲ್​ ಅನ್ನು ತೆಗೆಯುವಲ್ಲಿ ಇದು ಪ್ರಮುಖವಾಗಿದ್ದು, ನಿಮ್ಮ ಹೊಳಪನ್ನು ಹೆಚ್ಚಿಸುತ್ತದೆ. ಜೊತೆಗೆ ಚರ್ಮ ಕೀಳುವುದು ಸೇರಿದಂತೆ ಇನ್ನಿತರ ಹಾನಿಯನ್ನು ತಡೆಯುತ್ತದೆ.

ಟಿಪ್ಸ್​: ಲ್ಯಾಕ್ಟಿಕ್​ ಅಥವಾ ಗ್ಲೈಕೋಲಿಕ್​ ಎಕ್ಸ್​ಫೊಲಿಟಿಂಗ್​ ಸೆರಂ ಮತ್ತು ಬಾಡಿ ಕ್ರಿಂ ಅನ್ನು ದಿನಕ್ಕೆ ಎರಡು ಬಾರಿ ಹಚ್ಚಬೇಕು.

ಇದನ್ನೂ ಓದಿ: ಪದೇ ಪದೇ ಆಹಾರ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.