ETV Bharat / sukhibhava

ಆನುವಂಶಿಕ ರೋಗಗಳ ತಡೆಯುವಲ್ಲಿ ಸಹಾಯ ಮಾಡುತ್ತದೆಯಾ ವ್ಯಾಯಾಮ?

ಮಧ್ಯಮದಿಂದ ತೀವ್ರವಾದ ದೈಹಿಕ ಚಟುವಟಿಕೆ ಮತ್ತು ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡುವುದನ್ನು ಪತ್ತೆ ಮಾಡಿದ್ದಾರೆ.

Does exercise help prevent genetic diseases?

author img

By

Published : Jun 6, 2023, 11:33 AM IST

ಸಿಡ್ನಿ: ಆನುವಂಶಿಕವಾಗಿ ಟೈಪ್​ 2 ಮಧುಮೇಹದ ಅಪಾಯವನ್ನು ಹೊಂದಿರುವವರು ದೈಹಿಕ ಕ್ರಿಯಾಶೀಲರಾಗಿರುವ ಮೂಲಕ ಇದರ ಅಪಾಯ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಸಿಡ್ನಿ ಯುನಿವರ್ಸಿಟಿ ಈ ಸಂಬಂಧ ಅಧ್ಯಯನ ನಡೆಸಿದೆ. ಮಧ್ಯಮದಿಂದ ತೀವ್ರವಾದ ದೈಹಿಕ ಚಟುವಟಿಕೆ ಮತ್ತು ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡುವುದನ್ನು ಪತ್ತೆ ಮಾಡಿದ್ದಾರೆ. ಈ ಅಧ್ಯಯನವನ್ನು ಬ್ರಿಟಿಷ್​ ಜರ್ನಲ್​ ಆಫ್​ ಸ್ಪೋರ್ಟ್​ ಮೆಡಿಸಿನ್​ನಲ್ಲಿ ಪ್ರಕಟಿಸಲಾಗಿದೆ.

ಟೈಪ್​ 2 ಮಧುಮೇಹ ತಡೆಗಟ್ಟುವಲ್ಲಿ ಉನ್ನತ ಮಟ್ಟದ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸಲಾಗಿದೆ. ಇದು ಲಕ್ಷಾಂತರ ಆಸ್ಟೇಲಿಯನ್ನರ ಮೇಲೆ ಪರಿಣಾಮ ಬೀರಿದೆ ಎಂದು ಸಂಶೋಧಕರು ಅಧ್ಯಯನ ಪ್ರಸ್ತುತ ಪಡಿಸಿದ್ದಾರೆ. ಈ ಅಧ್ಯಯನಕ್ಕಾಗಿ ಯುಕೆ ಬಯೋಬ್ಯಾಂಕ್​ನ ಮೂಲಕ 59,325 ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅವರೆಲ್ಲರೂ ತಮ್ಮ ಮಣಿಕಟ್ಟಿಗೆ ಆಕ್ಸೆಲೆರೊಮೀಟರ್​ ಅನ್ನು ಧರಿಸಿ ದೈಹಿಕ ಚಟುವಟಿಕೆ ಮಾಡಿದ್ದಾರೆ. ಈ ಮೂಲಕ ಅವರ ಆರೋಗ್ಯವನ್ನು ಏಳು ವರ್ಷಗಳ ಕಾಲ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ.

ಯುಕೆ ಬಯೋಬ್ಯಾಂಕ್ ದತ್ತಾಂಶಗಳು ಮತ್ತು ಸಂಶೋಧನೆಗಳಲ್ಲಿ ಅರ್ಧ ಮಿಲಿಯನ್ ಯುಕೆ ಭಾಗಿದಾರರ ಅನಾಮಧೇಯ ಆನುವಂಶಿಕ, ಜೀವನಶೈಲಿ ಮತ್ತು ಆರೋಗ್ಯ ಮಾಹಿತಿಯನ್ನು ಹೊಂದಿರುವ ದೊಡ್ಡ ಪ್ರಮಾಣದ ಮಾಹಿತಿ ಹೊಂದಿದೆ. ಇದು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದ ಆನುವಂಶಿಕ ಗುರುತುಗಳನ್ನು ಒಳಗೊಂಡಿದೆ. ಹೆಚ್ಚಿನ ಆನುವಂಶಿಕ ಅಪಾಯ ಹೊಂದಿರುವವರಲ್ಲಿ ಕಡಿಮೆ ಆನುವಂಶಿಕತೆ ಹೊಂದಿರುವರಿಗಿಂತ 2.4 ಮಟ್ಟದಲ್ಲಿ ಹೆಚ್ಚಿನ ಟೈಪ್​ 2 ಡಯಾಬೀಟಿಸ್​ ಅಭಿವೃದ್ಧಿಯಾಗುವ ಸಾಧ್ಯತೆ ಇದೆ

ಸುಧಾರಿತದಿಂದ ತೀವ್ರತೆಯ ಚುಟುವಟಿಕೆಯು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ 74 ಪ್ರತಿಶತ ಕಡಿಮೆ ಅಪಾಯದೊಂದಿಗೆ ಸಂಬಂಧಿಸಿದೆ. ಆನುವಂಶಿಕ ಅಪಾಯ ಸೇರಿದಂತೆ ಇತರ ಅಂಶಗಳನ್ನು ಅಧ್ಯಯನದ ಗಣನೆಗೆ ತೆಗೆದುಕೊಳ್ಳಲಾಗಿದೆ.

ಭಾಗಿದಾರರು ಆನುವಂಶಿಕ ಅಪಾಯ ಹೊಂದಿರುವವರು ಎಂದು ಅಧ್ಯಯನ ತಿಳಿಸಿದೆ. ಆದರೆ, ಹೆಚ್ಚು ಕ್ರಿಯಾಶೀಲ ವರ್ಗದಲ್ಲಿ ಟೈಪ್​ 2 ಡಯಾಬೀಟಿಸ್​ ಅಭಿವೃದ್ಧಿ ಕಡಿಮೆ ಇದೆ. ಟೈಪ್ 2 ಮಧುಮೇಹದ ದೈಹಿಕ ಚಟುವಟಿಕೆಯ ಪಾತ್ರವು ಹೆಚ್ಚಿದೆ. ಇಲ್ಲಿಯವರೆಗೆ ಹೆಚ್ಚಿನ ದತ್ತಾಂಶಗಳ ಸ್ವಯಂ ವರದಿ ಮಾಡಲಾಗಿದೆ. ದೈಹಿಕ ಚಟುವಟಿಕೆಯಿಂದ ಆನುವಂಶಿಕ ಅಪಾಯವನ್ನು ಎದುರಿಸಬಹುದು ಎಂಬುದಕ್ಕೆ ಕಡಿಮೆ ಪುರಾವೆಗಳಿಲ್ಲ ಎಂದು ಅಧ್ಯಯನಕಾರರು ತೊರಿಸಿದ್ದಾರೆ.

ನಾವು ಕುಟುಂಬದ ಇತಿಹಾಸ ಮತ್ತು ಆನುವಂಶಿಕ ಅಪಾಯ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಆದರೆ, ಫಲಿತಾಂಶಗಳು ಭರವಸೆ ಮತ್ತು ಕ್ರಿಯಾಶೀಲ ಜೀವನಶೈಲಿಯ ಸಕಾರಾತ್ಮಕತೆ ಸುದ್ದಿ ನೀಡುತ್ತದೆ. ಟೈಪ್​ 2 ಮಧುಮೇಹದ ಹೆಚ್ಚಿನ ಅಪಾಯದ ವಿರುದ್ಧ ಹೋರಾಡಬಹುದು ಎಂದು ಅಸೋಸಿಯೇಟ್​ ಪ್ರೊಫೆಸರ್​ ಡಿಂಗ್​ ತಿಳಿಸಿದ್ದಾರೆ. ಸುಧಾರಿತದಿಂದ ತೀವ್ರ ದೈಹಿಕ ಚಟುವಟಿಕೆಗಳಲ್ಲಿ ಚಲನೆಗಳಿಂದ ಬೆವರು ಮತ್ತು ಉಸಿರಾಟದಲ್ಲಿ ಕೊಂಚ ಹೆಚ್ಚಿದೆ. ಬಿರುಸಿನ ನಡಿಗೆಗೆ ಹೆಚ್ಚು ಒತ್ತು ನೀಡಲಾಗಿದೆ. ಓಟ, ಏರೋಬಿಕ್​ ಡ್ಯಾನ್ಸಿಂಗ್, ಸೈಕಲಿಂಗ್​ನಂತಹ ಚಟುವಟಿಕೆಗಳನ್ನು ನಡೆಸಲಾಗಿದೆ.

ಮಧುಮೇಹ ಜಾಗತಿಕ ಕಾಳಜಿ ವಿಷಯವಾಗಿದೆ. 2021ರಲ್ಲಿ ಜಗತ್ತಿನಾದ್ಯಂತ 537 ವಯಸ್ಕರು ಈ ಮಧುಮೇಹದಿಂದ ಬಳಲುತ್ತಿದ್ದಾರೆ. 2020ರಲ್ಲಿ ಸರಿಸುಮಾರು 1.2 ಮಿಲಿಯನ್​ ಆಸ್ಟ್ರೇಲಿಯನ್ನರು ಈ ಟೈಪ್​ 2 ಡಯಾಬೀಟಿಸ್​ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಜಂಕ್​ ಫುಡ್​: ವೈದ್ಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.