ವಾಷಿಂಗ್ಟನ್ ಡಿಸಿ (ಅಮೆರಿಕ): ಸಂಶೋಧಕರು ಮೈಕ್ರೋಸ್ಕೋಪ್ ಸ್ಕ್ಯಾನಿಂಗ್ ಮತ್ತು ವಿಶ್ಲೇಷಣಾ ವ್ಯವಸ್ಥೆಯು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದನ್ನು ಈಗಾಗಲೇ ಪರೀಕ್ಷಿಸಿ, ಕಾರ್ಯಗತಗೊಳಿಸಲಾಗಿದೆ ಮತ್ತು ಈ ತಂತ್ರಜ್ಞಾನವನ್ನು ವಿಶ್ವಾದ್ಯಂತ ಪರಿಚಯಿಸಲು ಸಂಶೋಧಕರು ಅಣಿಯಾಗಿದ್ದಾರೆ.
ಈ ಬಗ್ಗೆ ಯುಕ್ಯೂ ಪ್ರೊಫೆಸರ್ ಎಐ ಬ್ರಿಯಾನ್ ಲೊವೆಲ್ ಪ್ರತಿಕ್ರಿಯಿಸಿ, ಈ ತಂತ್ರಜ್ಞಾನ ವ್ಯವಸ್ಥೆಯು ವಿವಿಧ ಪರೀಕ್ಷೆಗಳನ್ನು ನಡೆಸಲು ಗುಣಮಟ್ಟ ಮತ್ತು ವೇಗದ ದೃಷ್ಟಿಯಿಂದ ಗಮನಾರ್ಹವಾಗಿದೆ. ಈ ಡಿಜಿಟಲ್ ಪ್ಯಾಥೋಲಜಿ ತಂತ್ರಜ್ಞಾನವು ದಿನಕ್ಕೆ ಸಾವಿರಾರು ಪರೀಕ್ಷೆಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ ಮತ್ತು ನ್ಯಾಷನಲ್ ಅಸೋಸಿಯೇಷನ್ ಆಫ್ ಟೆಸ್ಟಿಂಗ್ ಅಥಾರಿಟೀಸ್ (NATA) ನಿಂದ ಮಾನ್ಯತೆ ಪಡೆದಿದೆ ಎಂದು ಹೇಳಿದರು.
ಈ ವ್ಯವಸ್ಥೆಯು ರೋಗಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳ ಕೆಲಸದ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸುತ್ತದೆ. ಜೊತೆಗೆ ಟೆಲಿಪಥಾಲಜಿ ಮೂಲಕ ಪರೀಕ್ಷೆಯ ಬಗ್ಗೆ ಎರಡನೇ ಅಭಿಪ್ರಾಯ ಪಡೆಯುವ ಸಾಮರ್ಥ್ಯ ಸಹ ಒದಗಿಸುತ್ತದೆ ಮತ್ತು ದಾಖಲೆಗಳ ನಿರ್ವಹಣೆಯನ್ನು ಸುಧಾರಿಸುತ್ತದೆ. ಈ ತಂತ್ರಜ್ಞಾನದಿಂದ ಗಾಜಿನ ಸ್ಲೈಡ್‌ಗಳನ್ನು ವರ್ಷಗಳವರೆಗೆ ಆರ್ಕೈವ್ ಮಾಡುವ ಅಗತ್ಯವಿಲ್ಲ ಎಂದರು.
ಹೆಲ್ತ್ಕೇರ್ ಕ್ಷೇತ್ರದಲ್ಲಿ ಗೇಮ್ ಚೇಂಜರ್: ಎಸ್ಎನ್ಪಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮೈಕೆಲ್ ಹ್ಯಾರಿಸನ್ ಮಾತನಾಡಿ, ಈ ತಂತ್ರಜ್ಞಾನ ಹೆಲ್ತ್ಕೇರ್ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಲಿದೆ. ಬ್ರಿಸ್ಬೇನ್‌ನಲ್ಲಿರುವ ಎಸ್ಎನ್ಪಿ ಪ್ರಯೋಗಾಲಯಗಳು ಈಗಾಗಲೇ ರೋಗನಿರ್ಣಯದ ವೇಗ ಮತ್ತು ನಿಖರತೆಯನ್ನು ತಿಳಿಯಲು ಈ ವ್ಯವಸ್ಥೆ ಬಳಸುತ್ತಿವೆ. ನಮ್ಮ ವಿಜ್ಞಾನಿಗಳು ಈಗ ಅನೇಕ ಗಂಟೆಗಳ ಕಾಲ ಸೂಕ್ಷ್ಮದರ್ಶಕವನ್ನು ಉಪಯೋಗಿಸುವುದರ ಬದಲಾಗಿ ಎಐನೊಂದಿಗೆ ಡಿಜಿಟಲೀಕರಿಸಿದ ಚಿತ್ರವನ್ನು ಬಳಸುತ್ತಾರೆ. ಇದು ವಿಜ್ಞಾನ ಪರೀಕ್ಷೆಗಳ ಕಾರ್ಯಕ್ಷಮತೆಯಲ್ಲಿ ಅತ್ಯಂತ ಮಹತ್ವದ ಬದಲಾವಣೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Lung Health: ಒಮೆಗಾ 3 ಫ್ಯಾಟಿ ಆ್ಯಸಿಡ್ನಿಂದ ಶ್ವಾಸಕೋಶದ ಆರೋಗ್ಯ ವೃದ್ಧಿ: ಅದು ಹೇಗೆ? ಈ ಸ್ಟೋರಿ ನೋಡಿ!!
ಪ್ರೊಫೆಸರ್ ಲೊವೆಲ್, ಈ ಹಿಂದೆ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ತೀಕ್ಷ್ಣವಾದ, ಇನ್-ಫೋಕಸ್ ಚಿತ್ರಗಳನ್ನು ಪಡೆಯುವಲ್ಲಿ ಸಮಸ್ಯೆಗಳಿದ್ದವು. ಡಿಜಿಟಲ್ ಪ್ಯಾಥೋಲಜಿ ಚಿತ್ರಗಳು ಸಾಮಾನ್ಯವಾಗಿ ಡಿಜಿಟಲ್ ಫೋಟೋಗಳಿಗಿಂತ ಸಾವಿರಾರು ಪಟ್ಟು ದೊಡ್ಡದಾಗಿರುತ್ತವೆ. ಇದು ಅಂಗಾಂಶ, ರಕ್ತ ಮತ್ತು ಇತರ ಮಾದರಿಯ ಪ್ರಕಾರಗಳಿಂದ ರೋಗನಿರ್ಣಯ ಮಾಡಲುಮೈಕ್ರೋಸ್ಕೋಪ್ಅನ್ನು ಇಲ್ಲಿಯವರೆಗೆ ಸ್ವಯಂಚಾಲಿತಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಸ್ಕ್ಯಾನರ್ ಇಮೇಜ್ ಅನಾಲಿಸಿಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು ಏನನ್ನು ಮತ್ತು ಎಲ್ಲಿ ಸ್ಕ್ಯಾನ್ ಮಾಡಬೇಕೆಂದು ತಿಳಿದಿದೆ. ಇದು ಚಿತ್ರದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಫೈಲ್ ಗಾತ್ರವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.
ಯುಕ್ಯೂ ಕಂಪನಿಯ ಯುನಿಕ್ವೆಸ್ಟ್ನ ಸಿಇಒ ಡಾ ಡೀನ್ ಮಾಸ್ ಪ್ರತಿಕ್ರಿಯಿಸಿ, ಈ ತಂತ್ರಜ್ಞಾನವು ನವೀನ ಸಂಶೋಧಕರೊಂದಿಗೆ ಉದ್ಯಮದ ಸಹಯೋಗದ ಪ್ರಯೋಜನಗಳನ್ನು ಪ್ರದರ್ಶಿಸಿದೆ. ಉತ್ತಮ ಆರೋಗ್ಯ ಫಲಿತಾಂಶಗಳ ನೀಡಲು ಈ ಹೊಸ ತಂತ್ರಜ್ಞಾನ ಉತ್ತೇಜಕವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ತಾಪಮಾನ ಹೆಚ್ಚಿದಂತೆ ಸೊಳ್ಳೆಗಳ ಸ್ಥಳಾಂತರ: ಮಲೇರಿಯಾ ಪ್ರಕರಣಗಳು ಮತ್ತಷ್ಟು ಏರಿಕೆ