ವಾಷಿಂಗ್ಟನ್: ಪ್ರತಿದಿನ ಸೇವಿಸುವ ಆಹಾರದ ನಿರ್ವಹಣೆ ಮಾಡುವುದು ಮತ್ತು ಅದನ್ನು ಸಮಯದೊಂದಿಗೆ ಟ್ರಾಕ್ ಮಾಡುವುದು ಬಲು ಕಷ್ಟ. ಆದರೆ, ಹೊಸ ಅಧ್ಯಯನ ಪ್ರಕಾರ ಸರಿಯಾದ ಟ್ರಾಕಿಂಗ್ ತೂಕ ನಷ್ಟಕ್ಕೆ ಅತ್ಯಗತ್ಯವಾಗಿದೆ ಎಂದು ತೋರಿಸಿದೆ.
ಈ ಅಧ್ಯಯನವನ್ನು ಎನ್ ಒಬೆಸಿಟಿಯಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನೆಯಲ್ಲಿ ಗಮನಾರ್ಹ ತೂಕ ನಷ್ಟಕ್ಕೆ ಪರಿಪೂರ್ಣ ಟ್ರಾಕಿಂಗ್ ಮಾಡುವುದು ಅತ್ಯಗತ್ಯ ಅಲ್ಲ ಎಂದು ತಿಳಿಸಲಾಗಿದೆ. ಸ್ವಯಂ ವರದಿಯ ಕಮರ್ಷಿಯಲ್ ಡಿಜಿಟಲ್ ತೂಕ ನಷ್ಟ ಕಾರ್ಯಕ್ರಮದ ಬಳಕೆದಾರರು ಆರು ತಿಂಗಳ ಕಾಲ ಸೇವಿಸುವ ಆಹಾರವನ್ನು ಫ್ಲೋರಿಡಾ ಯುನಿವರ್ಸಿಟಿಯ ಯುಕೊನ್ ಮತ್ತು ಪೆನ್ಸಿಲ್ವೇನಿಯಾ ಯುನಿವರ್ಸಿಟಿಯಿಂದ ಮಾಡಲಾಗಿದೆ. ಈ ಅಧ್ಯಯನದ ಗುರಿ ಆರು ತಿಂಗಳ ನಂತರ ಶೇ 3ರಷ್ಟು, ಶೇ 5ರಷ್ಟು ಮತ್ತು ಶೇ 10ರಷ್ಟು ತೂಕ ಕಡಿತವನ್ನು ಊಹಿಸಲು ಸೂಕ್ತವಾದ ಆಹಾರ ಟ್ರ್ಯಾಕಿಂಗ್ ಮಟ್ಟವನ್ನು ನಿರ್ಧರಿಸುವುದಾಗಿದೆ.
ವೈಟ್ವಾಚರ್ಸ್ ಸಹಭಾಗಿತ್ವದಿಂದ ಈ ಯೋಜನೆಯನ್ನು ವಿನ್ಯಾಸ ಮಾಡಲಾಗಿದೆ. ಇದನ್ನು ಹೊಸ ಪರ್ಸನಲ್ ಪಾಯಿಂಟ್ಸ್ ಪ್ರೊಗ್ರಾಂಗೆ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಕ್ಲಿನಿಕಲ್ ಟ್ರಯಲ್ ಮೂಲಕ ಅವರು ದತ್ತಾಂಶವನ್ನು ಪಡೆದಿದ್ದಾರೆ. ಪ್ರತಿಯೊಂದಕ್ಕೂ ಕ್ಯಾಲೊರಿಗಳನ್ನು ಲೆಕ್ಕಾಚಾರ ಮಾಡುವ ಅಗತ್ಯವನ್ನು ತೊಡೆದುಹಾಕಲು ಶೂನ್ಯ-ಪಾಯಿಂಟ್ ಆಹಾರಗಳ ಪಟ್ಟಿಯನ್ನು ಒಳಗೊಂಡಂತೆ ಅಂಕಗಳನ್ನು ನಿಯೋಜಿಸಲು ಹೊಸ ಪ್ರೋಗ್ರಾಂ ವೈಯಕ್ತಿಕಗೊಳಿಸಿದ ವಿಧಾನವನ್ನು ಅಧ್ಯಯನಕ್ಕೆ ಅನುಸರಿಸಲಾಗಿದೆ ಎಂದು ಅಧ್ಯಯನದ ಸಹ ಲೇಖಕ ಪ್ರೊ ಶೆರ್ರಿ ಪಗೊಟೊ ತಿಳಿಸಿದ್ದಾರೆ.
ತೂಕ ನಷ್ಟದಲ್ಲಿ ಹಸ್ತಕ್ಷೇಪದಲ್ಲಿ ಡಯಟರಿ ಟ್ರಾಕಿಂಗ್ ಪ್ರಮುಖವಾಗಿದೆ. ಇದು ದೊಡ್ಡ ಪ್ರಮಾಣದ ಆಲೋಚನೆ ಹೊರ ತರಲು ಸಹಾಯಕವಾಗಿದೆ. ಅವರ ಪ್ರೋಗ್ರಾಂ ಶೂನ್ಯ-ಪಾಯಿಂಟ್ ಆಹಾರಗಳನ್ನು ಅನುಮತಿಸುವ ಮೂಲಕ ಆ ಕಾರ್ಯದ ಹೊರೆಯನ್ನು ಕಡಿಮೆ ಮಾಡುತ್ತದೆ, ಅದನ್ನು ಟ್ರ್ಯಾಕ್ ಮಾಡಬೇಕಾಗಿಲ್ಲ.
ಸಂಶೋಧಕರು ಮತ್ತು ಡೆವಲಪರ್ಸ್ ಕಡಿಮೆ ಹೊರೆಯಲ್ಲಿ ಈ ಟ್ರಾಕಿಂಗ್ ಪ್ರಕ್ರಿಯೆಯ ವಿಧಾನವನ್ನು ಕೇಳಿದ್ದಾರೆ. ಕಾರಣ, ಸಾಕಷ್ಟು ಕ್ಯಾಲೋರಿಯನ್ನು ಬಳಕೆದಾರರು ಏಣಿಕೆ ಮಾಡಬೇಕಾಗಿರುತ್ತದೆ. ಇದು ಸುಸ್ಥಿರವಲ್ಲ. ಬಳಕೆದಾರರು ಪ್ರತಿಯೊಂದನ್ನು ಪ್ರತಿ ದಿನವೂ ಟ್ರಾಕ್ ಮಾಡುವ ಅವಶ್ಯಕತೆ ಇದೆಯಾ ಎಂದಿದ್ದಾರೆ.
ಅಲೈಡ್ ಹೆಲ್ತ್ ಸೈನ್ಸ್ ಪಿಎಚ್ಡಿ ವಿದ್ಯಾರ್ಥಿ ರಿಚರ್ಡ್ ಬನ್ನೊರ್ ವಿಶ್ಲೇಷಿಸುವಂತೆ, ರಿಸಿವರ್ ಆಪರೇಟಿಂಗ್ ಗುಣಲಕ್ಷಣಗಳನ್ನು ಕರ್ವ್ ಬಳಸಿಕೊಂಡು ತೂಕ ನಷ್ಟಕ್ಕೆ ಎಷ್ಟು ದಿನಗಳು ಬೇಕಾಗುವುದು ತಮ್ಮ ಆಹಾರವನ್ನು ಎಷ್ಟು ದಿನದವರೆಗೆ ಟ್ರಾಕ್ ಮಾಡಲು ಸಾಧ್ಯ ಎಂಬುದನ್ನು ಕಂಡು ಕೊಂಡಿದ್ದಾರೆ ಎಂದಿದ್ದಾರೆ.
ನೀವು ಶೇ 100ರಷ್ಟನ್ನು ಪ್ರತಿನಿತ್ಯ ಟ್ರಾಕ್ ಮಾಡಿ ಯಶಸ್ವಿಯಾಗಲು ಸಾಧ್ಯವಿಲ್ಲ. ಈ ಅಧ್ಯಯನದಲ್ಲಿ ಜನರು ಪ್ರತಿನಿತ್ಯ ಕೇವಲ ಶೇ 30ರಷ್ಟು ಟ್ರಾಕ್ ಮಾಡಿದರೆ, ಶೇ 3ರಷ್ಟು ತೂಕ ಕಳೆದುಕೊಳ್ಳಬಹುದು. ಶೇ 40ರಷ್ಟು ಪತ್ತೆ ಮಾಡಿದರೆ ಶೇ 5ರಷ್ಟು ತೂಕ ನಷ್ಟ ಅಥವಾ ದಿನದಲ್ಲಿ ಶೇ 70ರಷ್ಟು ಗಮನಿಸಿದರೆ ಶೇ 10ರಷ್ಟು ತೂಕ ನಷ್ಟ ಹೊಂದಬಹುದು ಎಂದಿದ್ದಾರೆ. ಇದರಲ್ಲಿನ ಪ್ರಮುಖ ಅಂಶ ಎಂದರೆ, ಪ್ರಾಯೋಗಿಕವಾಗಿ ಗಮನಾರ್ಹ ಪ್ರಮಾಣದ ತೂಕ ನಷ್ಟಕ್ಕೆ ನೀವು ಪ್ರತಿನಿತ್ಯ ಇದನ್ನು ಟ್ರಾಕ್ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದು ಭರವಸೆದಾಯಕವಾಗಿದ್ದು, ನಮ್ಮ ಆರು ತಿಂಗಳು ತೂಕ ನಷ್ಟದ ಕಾರ್ಯಕ್ರಮದ ಗುರಿ ಸಾಧನೆಗೆ ಶೇ 5ರಿಂದ 10ರಷ್ಟು ಪ್ರಯೋಜನ ನೀಡುತ್ತದೆ ಎಂದು ಪಗೊಟೊ ತಿಳಿಸಿದ್ದಾರೆ.
ಅನೇಕ ಬಾರಿ ಜನರು ಆರೋಗ್ಯಯುತವಾಗಲೂ 50 ಪೌಂಡ್ ತೂಕ ಕಳೆದುಕೊಳ್ಳಬೇಕು ಎಂದು ಕೊಳ್ಳುತ್ತಾರೆ. ಆದರೆ, ಜನರು ಶೇ 5 ರಿಂದು 10ರಷ್ಟು ತೂಕ ಕಳೆದುಕೊಂಡಾಗ ನಾವು ರಕ್ತದೊತ್ತಡ, ಲಿಪಿಡ್ಸ್, ಹೃದ್ರೋಗ ಸಮಸ್ಯೆ ಅಪಾಯ ಮತ್ತು ಮಧುಮೇಹದಂತಹ ಅಪಾಯ ಕಾಣುತ್ತಿದ್ದೇವೆ. ವಾರದಲ್ಲಿ ಒಂದು ಅಥವಾ ಎರಡು ಪೌಂಡ್ ತೂಲಕ ಕಳಿದುಕೊಂಡಾಗ ಇದನ್ನು ಕಾಣುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: Blood Sugar Control Tips.. ಮಧುಮೇಹ ನಿಯಂತ್ರಣಕ್ಕೆ ಬೇಳೆ ಕಾಳುಗಳ ಪಾತ್ರ ಪ್ರಮುಖ