ETV Bharat / sukhibhava

Rising Alarm: ಕೋವಿಡ್​ ಬಳಿಕ ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ ಪ್ರಕರಣ; ವರದಿ - ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ

ಮಧುಮೇಹದಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರ ಸಂಖ್ಯೆಗೆ ಚಿಕಿತ್ಸೆ ನೀಡಲು ಹೆಚ್ಚುವರಿ ಸಂಪನ್ಮೂಲಗಳ ಅಗತ್ಯವಿದೆ ತಜ್ಞರು ತಿಳಿಸಿದ್ದಾರೆ.

Diabetes cases are increasing in children after covid

author img

By

Published : Jul 4, 2023, 5:07 PM IST

ಟೊರೊಟೊ (ಕೆನಡಾ): ಕೋವಿಡ್​ 19 ಬಳಿಕ ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಟೈಪ್​ 1 ಮಧುಮೇಹ ಪ್ರಕರಣಗಳು ಏರಿಕೆ ಕಂಡಿದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. 19 ವರ್ಷದೊಳಗಿನ ಮಕ್ಕಳು ಮತ್ತು ಹದಿಹರೆಯದ 1,02,984 ಮಂದಿಯ ಅಧ್ಯಯನ ಸೇರಿದಂತೆ 42 ಅಧ್ಯಯನಗಳ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇದು ಯುವಜನತೆ ಈ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ ಎಂದು ಈ ವರದಿ ತಿಳಿಸಿದೆ.

ಟೈಪ್-1 ಮಧುಮೇಹದ ಪ್ರಮಾಣವು ಮೊದಲ ವರ್ಷಕ್ಕಿಂತ 1.14 ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನದ ಫಲಿತಾಂಶವು ಹೇಳಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಆರಂಭದ ನಂತರದ ಎರಡನೇ ವರ್ಷದಲ್ಲಿ ಇದು 1.27 ಪಟ್ಟು ಹೆಚ್ಚಾಗಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಟೈಪ್ 2 ಮಧುಮೇಹ ಪ್ರಕರಣಗಳು ಮತ್ತಷ್ಟು ಹೆಚ್ಚಿವೆ. ಡಯಾಬಿಟಿಕ್ ಕೀಟೋ ಆಸಿಡೋಸಿಸ್​​ನ ಆಗಾಗ್ಗೆ ಪ್ರಕರಣಗಳನ್ನು ಅಧ್ಯಯನವು ಕಂಡುಹಿಡಿದಿದೆ. ಅದರ ಪ್ರಮಾಣವು ಸಾಂಕ್ರಾಮಿಕ ರೋಗಕ್ಕಿಂತ ಮೊದಲು 1.26 ಪಟ್ಟು ಹೆಚ್ಚಾಗಿದೆ. ಮಧುಮೇಹದ ಗಂಭೀರ ಪರಿಣಾಮ ಟೈಪ್​ 1 ಆಗಿದ್ದು, ಇದು ಅಪಾಯಕಾರಿಯಾಗಿದೆ. ಟೈಪ್-1 ಮಧುಮೇಹದಲ್ಲಿ, ಜೀವಕೋಶಗಳಲ್ಲಿ ಸಾಕಷ್ಟು ಇನ್ಸುಲಿನ್ ಇರುವುದರಿಂದ ದೇಹವದ ರಕ್ತದಲ್ಲಿನ ಸಕ್ಕರೆಯನ್ನು ಶಕ್ತಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಮಧುಮೇಹದಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರ ಸಂಖ್ಯೆಗೆ ಚಿಕಿತ್ಸೆ ನೀಡಲು ಹೆಚ್ಚುವರಿ ಸಂಪನ್ಮೂಲಗಳ ಅಗತ್ಯವಿದೆ ಎಂದು ಕೆನಡಾದ ಟೊರೊಂಟೊ ವಿಶ್ವವಿದ್ಯಾನಿಲಯದ ತಜ್ಞರು ತಿಳಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಧುಮೇಹ ಹೆಚ್ಚಿರುವುದು ಕಂಡು ಬಂದಿದೆ. ಈ ವೇಳೆ ತಜ್ಞರುಗಳು ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ಅಂತಹ ಪ್ರಕರಣಗಳ ಹೆಚ್ಚಳಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಕೆಲವು ಸಿದ್ಧಾಂತಗಳ ಪ್ರಕಾರ, ಕೋವಿಡ್​ ಬಳಿಕ ಮಕ್ಕಳಲ್ಲಿ ಮಧುಮೇಹದ ಅಪಾಯವು ಹೆಚ್ಚಾಯಿತು. ಒತ್ತಡ ಮತ್ತು ಮಕ್ಕಳ ಜೀವನಶೈಲಿಯ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣವಾಗಿರಬಹುದು. ಇದು ಇಂತಹ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದು.

ಹೆಚ್ಚಾಗುತ್ತಿರುವ ಮಧುಮೇಹಿಗಳ ಸಂಖ್ಯೆ: ಜಗತ್ತಿನಾದ್ಯಂತ ಅರ್ಧ ಬಿಲಿಯನ್​ಗೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಪ್ರತಿ ದೇಶದಲ್ಲೂ ಪುರುಷರು, ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಎಲ್ಲ ವಯೋಮಿತಿಯ ಜನರು ಈ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ತೊಂದರೆ ಮೂವತ್ತು ವರ್ಷದ ಬಳಿಕ ದುಪ್ಪಟ್ಟಾಗುವ ಸಾಧ್ಯತೆ ಇದ್ದು, 1.3 ಬಿಲಿಯನ್​ ಜನರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಇದರ ಜೊತೆಗೆ ಪ್ರತಿ ದೇಶದಲ್ಲಿಯೂ ಡಯಾಬಿಟೀಸ್ ರೋಗಿಗಳು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ದಿ ಲ್ಯಾನ್ಸೆಟ್​​ ಜರ್ನಲ್​ ವರದಿ ಹೇಳುತ್ತದೆ.

ಮಧುಮೇಹವೊಂದು ಎಚ್ಚರಿಕೆಯ ಗಂಟೆಯಾಗಿದೆ. ಸಂಸ್ಕರಿತ ಆಹಾರ ಮತ್ತು ವ್ಯಾಯಾಮ ಕಡಿಮೆಯಂತಹ ಜಢ ಜೀವನ ಶೈಲಿಯಿಂದಾಗಿ ಮಕ್ಕಳಲ್ಲಿ ಸ್ಥೂಲಕಾಯ ಮತ್ತು ಮಧುಮೇಹದಂತಹ ಅಪಾಯ ಹೆಚ್ಚಾಗುತ್ತಿದೆ. ಈ ಮಧುಮೇಹವೂ ಹೃದ್ರೋಗ ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂಬ ಕಳವಳ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕೋವಿಡ್​ 19 ಸಾವು ಮತ್ತು ಗಂಭೀರತೆಯಿಂದ ಪಾರಾಗಲು ಗರ್ಭಾವಸ್ಥೆಯಲ್ಲಿ ಲಸಿಕೆ ಪಡೆಯುವುದು ಅವಶ್ಯ; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.